ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಕರ್ನಾಟಕದ, ಬಂಟ್ವಾಳತಾಲೂಕಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಊರು ವ...
 
No edit summary
೮ ನೇ ಸಾಲು:
ಐತಿಹ್ಯದ ಪ್ರಕಾರ ಪುರಾತನ ಕಾಲದ ಏಕಚಕ್ರ ವರ್ಗಗಳ ಸಮೀಪದ ಕಳಂಜಿ ಮಲೆ ಕಾಡಿನಲ್ಲಿಯೇ [[ಬಕಾಸುರ]]ನ ಗುಹೆಯಿತ್ತು.[[ಭೀಮ]] ಅವನನ್ನು ಕೊಂದುದು ಅಲ್ಲಿಯೇ.ಅವನನ್ನು ಕೊಂದಾಗ ಹರಿದ ರಕ್ತವು ಬಂದು ತುಂಬಿಕೊಂಡುದರಿಂದ ನೆತ್ತರುಕೆರೆ ಉಂಟಾಯಿತು.(ಕಳಂಜಿಮಲೆ ಹಾಗೂ ನೆತ್ತರುಕೆರೆ [[ವಿಟ್ಲ]]ದ ಆಸುಪಾಸಿನ ಸ್ಥಳಗಳು.)
 
[[ದೇವಸ್ಥಾನ]]ಕ್ಕೆ ಸಂಬಂಧಿಸಿದ ಸ್ಥಳ ಪುರಾಣದ ಪ್ರಕಾರ [[ಪಾಂಡವ]]ರು ತಮ್ಮ ಸುತ್ತಾಟಕಾಲದಲ್ಲಿ ಈ ಪ್ರದೇಶದಲ್ಲಿ ವಾಸಮಾಡಿದ್ದರಂತೆ.ತಮ್ಮ ನೆನಪಿಗಾಗಿ [[ಶಿವ]]ನನ್ನು ಸ್ಥಾಪಿಸಲು ಇಚ್ಛಿಸಿ,[[ಕಾಶಿ]]ಯಿಂದ [[ಲಿಂಗ]]ಗಳನ್ನುಲಿಂಗಗಳನ್ನು ತರಲು,ವಾಯುವೇಗದಲ್ಲಿ ಗಮಿಸಬಲ್ಲ [[ಭೀಮ]]ನನ್ನು ಕಳುಹಿಸಿದರು.[[ಭೀಮ]]ನು [[ಲಿಂಗ]]ಗಳೊಂದಿಗೆಲಿಂಗಗಳೊಂದಿಗೆ ಬರುವಾಗ ತಡವಾದ್ದರಿಂದ ನಿಶ್ಚಿತ ಲಗ್ನದಲ್ಲಿ [[ಲಿಂಗ]]ವೊಂದನ್ನುಲಿಂಗವೊಂದನ್ನು ಪ್ರತಿಷ್ಟಿಸಿ, [[ಪೂಜೆ]] ಮಾಡಿದರಂತೆ.(ಇನ್ನೊಂದು ಪಾಠಾಂತರದ ಪ್ರಕಾರ [[ಭೀಮ]]ನು [[ಕಾಶಿ]]ಗೆ ಹೋದಾಗ ಅವನ ಹಿಂದೆಯೇ [[ಹನುಮಂತ]]ನೂ ಹೋದನಂತೆ. ವೇಗಶಾಲಿಯಾದ [[ಹನುಮಂತ]]ನು ಮೊದಲಿಗೆ ತಂದ [[ಲಿಂಗ]]ವನ್ನುಲಿಂಗವನ್ನು ನಿಶ್ಚಿತ ಲಗ್ನದಲ್ಲಿ ಪ್ರತಿಷ್ಟಾಪಿಸಿದರಂತೆ.) [[ಭೀಮ]]ನು ತಾನು ತಂದ [[ಲಿಂಗ]]ಗಳುಲಿಂಗಗಳು ವ್ಯರ್ಥವಾಗಬಾರದೆಂದು ಅದಾಗಲೇ ಫ್ರತಿಷ್ಠಾಪಿಸಿದ್ದ [[ಲಿಂಗ]]ವನ್ನುಲಿಂಗವನ್ನು ಕಿತ್ತೆಸೆದು ತಾನು ತಂದ [[ಲಿಂಗ]]ಗಳನ್ನುಲಿಂಗಗಳನ್ನು ಪ್ರತಿಷ್ಠಿಸಿದನಂತೆ.[[ನೈವೇದ್ಯ]]ಕ್ಕೆ ಬೇರೇನೂ ಇಲ್ಲದಿದ್ದುದರಿಂದ, ಅದಗಲೇ [[ನೈವೇದ್ಯ]] ಮಾಡಲಾಗಿದ್ದ ಅನ್ನಕ್ಕಿಷ್ಟು ನೀರು ಚಿಮುಕಿಸಿ ಅದನ್ನೊಮ್ಮೆ ಬೆಂಕಿಗಿರಿಸಿ ತೆಗೆದು [[ನೈವೇದ್ಯ]] ಮಾಡಿದನಂತೆ.ಆದುದರಿಂದ ವಿಟ್ಲದ ದೇವರಿಗೆ ತಂಗಳನ್ನ ನೈವೇದ್ಯವೆಂದು ಹೇಳುವುದಿದೆ. (ಈಗಲೂ ಬೇಯಿಸಿ ತಂದಿರಿಸಿದ ಅನ್ನಕ್ಕೆ ನೀರು ಚಿಮುಕಿಸಿ ದೀಪದ ಬೆಂಕಿಗಾದರೂ ತೋರಿಸಿ [[ನೈವೇದ್ಯ]] ಮಾಡುವುದೆಂದು ಹೇಳಲಾಗುತ್ತದೆ.) [[ಭೀಮ]]ನು ಕಿತ್ತೆಸೆದ [[ಲಿಂಗ]]ವನ್ನುಲಿಂಗವನ್ನು [[ದೇವಸ್ಥಾನ]]ದ ಉತ್ತರ ಭಾಗದಲ್ಲಿರುವ ಪುಷ್ಕರಣಿಯ ನಡುವಿನ ಕಲ್ಲಿನ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ.
==ಪಂಚಲಿಂಗೇಶ್ವರ==
ಐದು ಪ್ರಾಕೃತಿಕ ಶಿಲಾಖಂಡಗಳನ್ನು ಏಕಪಾಣಿಪೀಠದ ಮೇಲೆ [[ಲಿಂಗ]]ಗಳಾಗಿಲಿಂಗಗಳಾಗಿ ಸ್ಥಾಪಿಸಿರುವುದರಿಂದ ಪಂಚಲಿಂಗೇಶ್ವರ [[ದೇವಾಲಯ]]ವೆನಿಸಿದೆ. ( [[ಶಿವ]]ನ ಸ್ವರೂಪಗಳಾದ [[ಸದ್ಯೋಜಾತ]], [[ವಾಮದೇವ]],[[ಅಘೋರ]], [[ತತ್ಪುರುಷ]], [[ಈಶಾನ]])
[[File:ಪಂಛಲಿಂಗಗಳು.jpg|thumb|ಮೂಲ ಪಂಚಲಿಂಗಗಳು]]
[[File:ಶ್ರೀ ಪಂಚಲಿಂಗೇಶ್ವರ ದೇವರು.jpg|thumb|ಶ್ರೀ ಪಂಚಲಿಂಗೇಶ್ವರ ದೇವರು]]
೨೨ ನೇ ಸಾಲು:
ಪೂರ್ವಕಾಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟಂತಹ [[ದೇವಾಲಯ]]ಗಳು ಜೀರ್ಣಾವಸ್ಥೆಗೆ ಬಂದಂತಹ ಸಂದರ್ಭದಲ್ಲಿ,ಅಷ್ಟಮಂಗಲಪ್ರಶ್ನೆಯನ್ನಿರಿಸಿ,ದೋಷಗಳಿದ್ದರೆ ಪರಿಹರಿಸಿ,ನಂತರ ಜೀರ್ಣೋಧ್ಧಾರಕ್ಕೆ ಆರಂಭಿಸುವುದು ವಾಡಿಕೆ.ಅಂತೆಯೇ ೨೦೦೧ರಲ್ಲಿ ಅಷ್ಟಮಂಗಲ ಪ್ರಶ್ನೆ ಜರುಗಿತು.ಹೊಸದಾಗಿ ಪುನರಾರಂಭಿಸುವ [[ದೇವಸ್ಥಾನ]]ದ [[ವಾಸ್ತುಶಿಲ್ಪಿ]]ಯನ್ನಾಗಿ ಶ್ರೀ ಮಹೇಶ ಮುನಿಯಂಗಳ ಅವರನ್ನು ಆಯ್ಕೆಮಾಡಲಾಯಿತು. [[ದೇವಸ್ಥಾನ]] ಜೀರ್ಣೋಧ್ಧಾರ ಸಂಚಾಲನಾ ಸಮಿತಿಯೊಂದನ್ನು ರಚಿಸಲಾಯಿತು.ಶ್ರೀ ಎಲ್.ಎನ್.ಕೂಡೂರು ಇವರನ್ನು ಅಧ್ಯಕ್ಷರನ್ನಾಗಿ ಆರಿಸಲಾಯಿತು. ಸಮಿತಿಯಲ್ಲಿ ವಿ.ರಾಮವರ್ಮ-[[ವಿಟ್ಲ]] ಅರಮನೆ, ಎಚ್.ಜಗನ್ನಾಥ ಸಾಲಿಯಾನ್, ಯಶವಂತ-[[ವಿಟ್ಲ]], ಜನಾರ್ದನ ಪೈ, ಬಿ. ಶಾಂತಾರಾಮ ಶೆಟ್ಟಿ, ನಿತ್ಯಾನಂದ ನಾಯಕ್, ಬಾಬು ಕೊಪ್ಪಳ, ದಯಾನಂದ ಆಳ್ವ, ಸೀತಾರಾಮ ಶೆಟ್ಟಿ ಆಯ್ಕೆಯಾದರು. ನಂತರ ೩೦೫ ಜನರ ಜೀರ್ಣೋಧ್ಧಾರ ಸಮಿತಿ ರಚನೆಯಾಯಿತು.
 
ನಿಧಿ ಸಂಚಯನ,ಗಣ್ಯರ- ಆಸ್ತಿಕರ ಕೊಡುಗೆ, [[ಕರ್ನಾಟಕ]] ಸರಕಾರದ ಮುಜರಾಯಿ ಖಾತೆಯಿಂದ ಒಂದು ಕೋಟಿ ರೂಗಳ ಅನುದಾನ, ಕೃಷಿಉತ್ಪನ್ನ ವಸ್ತುಸಂಗ್ರಹ, ಪಿಗ್ಮಿ ಯೋಜನೆ ಹೀಗೆ ಹಲವು ಮೂಲಗಳಿಂದ ಹಣಾ ಸಂಗ್ರಹಿಸಲಾಯಿತು. ಸುಮಾರು ಎರಡೂಕಾಲು ಕೋಟಿಗಳಷ್ಟು ಹಣ ಸಂಗ್ರಹವಾದ ನಂತರ ಪ್ರಾಚೀನ ಗರ್ಭಗುಡಿ ತೆರವುಗೊಳಿಸಲು ತೀರ್ಮಾನಿಸಿ, ಅಧಿಕೃತ ವೈದಿಕ ಕಾರ್ಯಕ್ರಮ ೨೦೦೭ ರಲ್ಲಿ ಆಲಂಪಾಡಿ ಶ್ರೀ ಪದ್ಮನಾಭ ತಂತ್ರಿಗಳ ಹಿರಿತನದಲ್ಲಿ ಜರುಗಿತು. ಪಂಚ[[ಲಿಂಗ]]ಗಳನ್ನುಪಂಚಲಿಂಗಗಳನ್ನು ಸಂಕೋಚಿಸಿ, ಏಕ[[ಲಿಂಗ]]ವನ್ನುಏಕಲಿಂಗವನ್ನು ಹೊಸತಾಗಿ ನಿರ್ಮಿಸಿ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಗರ್ಭಗುಡಿಯ ಮುಗುಳಿಗೆ ಬಿಗಿದಹಗ್ಗವನ್ನು ಬಸವನ ಕೊಂಬಿಗೆ ಕಟ್ಟಿ ಮುಗುಳಿಯನ್ನು ತೆಗೆಯಲಾಯಿತು. ತಂತ್ರಿಯವರು ಗರ್ಭಗುಡಿಯ ತಾಮ್ರದ ತಗಡನ್ನು ತೆಗೆಯುವಮೂಲಕ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
 
[[ದೇವಸ್ಥಾನ]]ದ ಕಲ್ಲಿನಕೆತ್ತನೆಯನ್ನು [[ಕಾರ್ಕಳ]]ದ ಶಿಲಾ[[ಶಿಲ್ಪಿ]] ವಿಶ್ವನಾಥ ಅವರ ಬಳಗ ಮಾಡಿದೆ. ದಾರು [[ಶಿಲ್ಪ]]ವನ್ನು ತ್ರಿಶೂರ‍್ ನ ಇ.ಕೆ. ವಾಸು ಆಚಾರ್ಯರವರ ತಂಡ ಮಾಡಿದೆ. ೬೫ ಅಡಿ ಎತ್ತರದ ಇಳಿಜಾರಾದ ಮೂರು ಅಂತಸ್ತಿನ ಮಾಡಿನ ಗರ್ಭಗುಡಿಯಿದೆ.ಮಾಡಿನ ತುತ್ತತುದಿಯ ದಾರು[[ಶಿಲ್ಪ]]ದ ಜೋಡಣೆ ಸುಂದರವಾಗಿದೆ. ಕಬ್ಬಿಣದ ಮೊಳೆಗಳನ್ನಿಲ್ಲಿ ಉಪಯೋಗಿಸಿಲ್ಲ. ಗರ್ಭಗುಡಿಯೊಳಗೆ ವಿದ್ಯುತ್ ಸಂಪರ್ಕವನ್ನು ಮಾಡಲಿಲ್ಲ. ದೀಪಗಳ ಬೆಳಕೇ ಆಧಾರ. ಗರ್ಭಗುಡಿಯ ಒಳಗಿನ ಎರಡು ಕೆಂಪುಕಲ್ಲಿನ ಗೋಡೆಗಳಿಗೆ ಸಿಮೆಂಟ್ ಬಳಸಲಿಲ್ಲ. ಪ್ರಾಚೀನಕಾಲದಲ್ಲಿ ಬಳಕೆ ಮಾಡುತ್ತಿದ್ದ ಬೆಲ್ಲ ಕುಮ್ಮಾಯಿಯ ಜೊತೆಗೆ ಎರ್ಪೆ ಸೊಪ್ಪು, [[ಆಲ]]ದ ಕುರ್ಮದ ತೊಗಟೆಗಳಿಂದ ತೆಗೆದ ರಸವನ್ನು ಮಿಶ್ರಮಾಡಿ ಇಪ್ಪತ್ತು ದಿನ ನಾದಿಸಿ ತಯಾರಿಸಿದ ಮಿಶ್ರಣದಿಂದ ಕಲ್ಲುಗಳನ್ನು ಜೋಡಿಸಲಾಗಿದೆ.
೩೬ ನೇ ಸಾಲು:
[[ದೇವಾಲಯ]]ಗಳ ಗಾತ್ರಕ್ಕನುಸಾರವಾಗಿ ಅಲ್ಪಪ್ರಾಸಾದ, ಮಧ್ಯಪ್ರಾಸಾದ, ಮಹಾಪ್ರಾಸಾದ, ಜಾತಿ, ವಿಕಲ್ಪ, ಛಂದ ಎಂಬ ಆರು ಹೆಸರುಗಳಿವೆ. [[ವಿಟ್ಲ]]ದ ಶ್ರೀ ಪಂಚಲಿಂಗೇಶ್ವರ [[ದೇವಸ್ಥಾನ]]ವು ಮಹಾಪ್ರಾಸಾದ (ಅತ್ಯಂತ ದೊಡ್ಡ ಗರ್ಭಗುಡಿ) ನಿಯಮದ [[ದೇವಾಲಯ]]ವಾಗಿದೆ.
 
ಪಶಿಮಾಭಿಮುಖವಾಗಿದ್ದು, ಗಜಪೃಷ್ಠಾಕೃತಿಯಲ್ಲಿದೆ. ಪಂಚ[[ಲಿಂಗ]]ಗಳ ಎದುರಿಗೆ ಒಳಾಂಗಣದಲ್ಲಿ ನಂದಿ[[ವಿಗ್ರಹ]], [[ನವರಂಗ]] ಮಂಟಪ, ವಸಂತ ಮಂಟಪವಿದೆ. ೬೬ ೧/೨ ಅಡಿ ಎತ್ತರದ ೫.೫ ಅಡಿ ಸುತ್ತಳತೆಯ ಧ್ವಜ ಸ್ತಂಭವಿದೆ. ಒಳಾಂಗಣದ [[ವಾಯುವ್ಯ]] ದಿಕ್ಕಿನಲ್ಲಿ ಪಶ್ಚಿಮಾಭಿಮುಖವಾಗಿ ಕುಂತೀಶ್ವರ ಗುಡಿಯಿದೆ. (ಎದುರಿಗೆ ಪುಟ್ಟ ನಂದಿ [[ವಿಗ್ರಹ]]). [[ಪಾಂಡವ]]ಪ್ರತಿಷ್ಠೆಯೆಂಬ ಸ್ಥಳಪುರಾಣಕ್ಕೆ ಸಂಬಂಧಿಸಿದಂತೆ [[ಕುಂತಿ]] ಪೂಜಿಸಿದ[[ಲಿಂಗ]]ಪೂಜಿಸಿದಲಿಂಗ ಎಂಬುದನ್ನು ಈ ಕುಂತೀಶ್ವರ[[ಲಿಂಗ]]ಕುಂತೀಶ್ವರಲಿಂಗ ಎಂಬ ಹೆಸರು ನೆನಪಿಸುವಂತಿದೆ. [[ಈಶಾನ್ಯ]]ದಲ್ಲಿ ಧೌಮ್ಯೇಶ್ವರ, [[ಆಗ್ನೇಯ]]ದಲ್ಲಿ ಭೈರವೇಶ್ವರ ಗುಡಿಯಿದೆ. [[ದಕ್ಷಿಣ]]ದಿಕ್ಕಿನಲ್ಲಿ ಪೂರ‍್ವಾಭಿಮುಖವಾಗಿ [[ಗಣಪತಿ]] ಗುಡಿಯಿದೆ. ಇಲ್ಲಿರುವ [[ಗಣಪತಿ]] [[ವಿಗ್ರಹ]]ವು ಸುಮಾರು ಕ್ರಿ.ಶ. ಹನ್ನೊಂದನೆಯ ಶತಮಾನದ್ದೆಂದು ಡಾ.ಪಿ.ಗುರುರಾಜ ಭಟ್ಟರು ಊಹಿಸಿದ್ದಾರೆ. [[ನೈಋತ್ಯ]] ದಿಕ್ಕಿನಲ್ಲಿ ಪಶ್ಚಿಮಾಭಿಮುಖವಾಗಿ ಅಮ್ಮನವರ ಗುಡಿಯಿದೆ. ಒಳಾಂಗಣದ ಈ ಎಲ್ಲಾ ಸ್ಥಾಪನೆಗಳಿಗೂ [[ಪೂಜೆ]] ನಡೆಯುತ್ತದೆ. [[ಉತ್ತರ]]ದಿಕ್ಕಿನಲ್ಲಿ ಬಾವಿ ಹಾಗೂ ಸಣ್ಣ ಕೊಳವಿದೆ. ಸುತ್ತುಪೌಳಿಯ ಸುತ್ತಲೂ ಮರದ ದರಿಯನ್ನು ನಿರ್ಮಿಸಲಾಗಿದೆ. [[ಜಾತ್ರೆ]]ಯ ಸಮಯದಲ್ಲಿ ಇಲ್ಲಿ ದೀಪಗಳನ್ನು ಉರಿಸಲಾಗುತ್ತದೆ. ಒಳಪ್ರಾಕಾರದಲ್ಲಿ ಉಳ್ಳಾಲ್ತಿಭಂಡಾರವನ್ನಿಡುವ ವ್ಯವಸ್ಥೆಯಿದೆ.
 
ಹೊರಾಂಗಣದ [[ನೈಋತ್ಯ]] ದಿಕ್ಕಿನಲ್ಲಿ [[ದಕ್ಷಿಣ]]ಕ್ಕೆ ತೆರೆದಂತೆ [[ದೇವಾಲಯ]]ದ ಆವರಣದ ಪ್ರವೇಶದ್ವಾರವಿದೆ [[ನೈಋತ್ಯ]]ದಿಕ್ಕಿನ ಮೂಲೆಯಲ್ಲಿ ಓಕುಳಿಕುಂಡ, ದೀಪಸ್ತಂಭ ಮತ್ತು ಕಟ್ಟೆಯಿದೆ. ( [[ಜಾತ್ರೆ]]ಯ ಸಮಯದಲ್ಲಿ [[ವಿಟ್ಲ]]ದ [[ಅರಸ]]ರು ಈ ಕಟ್ಟೆಯಲ್ಲಿ ಕುಳಿತುಕೊಳ್ಳುವ ಪಧ್ಧತಿಯಿದೆ). [[ನಾಗ]], ರಕ್ತೇಶ್ವರಿ, [[ಗುಳಿಗ]], ಬ್ರಹ್ಮರಾಕ್ಷಸ ಕಟ್ಟೆಗಳಿವೆ. ಉತ್ತರಭಾಗದಲ್ಲಿ ವಿಸ್ತಾರವಾದ ಪಂಚಲಿಂಗ ಪುಷ್ಕರಣಿಯಿದೆ.