ಮಂಗಳ (ಗ್ರಹ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
cleanup
೧೮ ನೇ ಸಾಲು:
=== ಭೂವೈಜ್ಞಾನಿಕ ವಿವರಣೆ ===
ಮಂಗಳದಿಂದ ಭೂಮಿಗೆ ಬಂದ ಉಲ್ಕೆಗಳ ಪರಿಶೀಲನೆಯಿಂದ ಹಾಗೂ ಮಂಗಳದ ಪರಿಭ್ರಮಣವನ್ನು ಅಧ್ಯಯನ ಮಾಡಿದ ಆಧಾರದ ಮೇಲೆ, ಮಂಗಳದ ಮೇಲ್ಮೈ ಪದರವು ಮುಖ್ಯವಾಗಿ [[:en:basalt|ಕಪ್ಪುಶಿಲೆ]]ಯಿಂದ ರಚಿತವಾಗಿರುವಂತೆ ಕಂಡುಬರುತ್ತದೆ. ಮಂಗಳದ ಮೇಲ್ಮೈನ ಸ್ವಲ್ಪ ಭಾಗವು ಸಾಮಾನ್ಯ ಕಪ್ಪುಶಿಲೆಗಿಂತ ಹೆಚ್ಚು ಸಿಲಿಕಾ ಸಮೃದ್ಧವಾಗಿದೆ ಎನ್ನುವುದಕ್ಕೆ ಕೆಲವು ಆಧಾರಗಳಿವೆ. ಈ ಭಾಗಗಳು ಭೂಮಿಯ ಮೇಲಿನ [[:en:andesitic|ಆಂಡೆಸೈಟಿಕ್]] ಶಿಲೆಗಳಂತೆ ಕಂಡುಬರುತ್ತವೆ. ಆದರೆ ಇವು ಸಿಲಿಕಾ ಗಾಜಿನಿಂದಲೂ ರಚಿತವಾಗಿರಬಹುದು. ಮೇಲ್ಮೈನ ಬಹುಭಾಗವು ಬಹಳ ನುಣುಪಾದ [[:en:iron(III) oxide|ಕಬ್ಬಿಣದ (೩)ಡೈ-ಆಕ್ಸೈಡ್]] (ತುಕ್ಕು) ಧೂಳಿನ ದಪ್ಪನಾದ ಪದರದಿಂದ ಹೊದಿಸಲ್ಪಟ್ಟಿದೆ.<ref>[http://erc.arc.nasa.gov/MarsVolc/basalt.html ನಾಸಾ ಮಂಗಳ ಪುಟ]</ref>
[[ಚಿತ್ರ:nasa_mars_opportunity_rock_water_150_eng_02mar04.jpg|150px|thumb|leftright|ಹಿಂದಿನ ಕಾಲದಲ್ಲಿ ನೀರಿನ ಅಸ್ಥಿತ್ವವನ್ನು ಸೂಚಿಸುವ ಸೂಕ್ಷ್ಮ ಶಿಲಾರೂಪಗಳು. ಇದು ''[[:en:Opportunity rover|ಆಪರ್ಚುನಿಟಿ ಪರಿಭ್ರಮಕ]]'' ತೆಗೆದ ಛಾಯಾಚಿತ್ರ.]]
ಮಂಗಳದ ಮೇಲೆ [[:en:hematite|ಹೆಮಟೈಟ್]], [[:en:geothite|ಜಿಯೊತೈಟ್]] ಮುಂತಾದ ಖನಿಜಗಳು ಕಂಡುಬಂದಿವೆ. ಸಾಮನ್ಯವಾಗಿ ಈ ಖನಿಜಗಳು ನೀರಿನ ಉಪಸ್ಥಿತಿಯಲ್ಲಿ ಮಾತ್ರ ರೂಪುಗೊಳ್ಳುತ್ತವೆ. ಈ ಮೇಲಿನ ಮತ್ತು ಸಂಬಂಧಪಟ್ಟ ಇತರ ಸಂಶೋಧನೆಗಳ ಕಾರಣದಿಂದಾಗಿ, ಮಂಗಳದ ಮೇಲೆ ಒಂದು ಕಾಲದಲ್ಲಿ ನೀರು ಜಲರೂಪದಲ್ಲಿತ್ತೆಂಬುದಕ್ಕೆ ನಿರ್ಣಾಯಕ ಸಾಕ್ಷ್ಯಾಧಾರಗಳಿವೆ.<ref>[http://www.jpl.nasa.gov/releases/2004/88.cfm Mineral in Mars 'Berries' Adds to Water Story]</ref>
 
"https://kn.wikipedia.org/wiki/ಮಂಗಳ_(ಗ್ರಹ)" ಇಂದ ಪಡೆಯಲ್ಪಟ್ಟಿದೆ