ಕೂಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೂಲಿ
 
template added
೧ ನೇ ಸಾಲು:
{{Wikify}}
'''ಕೂಲಿ''' ಎಂದರೆ ಉತ್ಪಾದನಾಂಗಗಳಲ್ಲಿ ಒಂದಾದ ಶ್ರಮ ಅಥವಾ ದುಡಿಮೆಗೆ ಪಾವತಿ ಮಾಡಲಾಗುವ ಪ್ರತಿಫಲ (ವೇಜಸ್). ಇದನ್ನು ವೇತನ, ಮಜೂರಿ ಎಂದೂ ಹೇಳಲಾಗುತ್ತದೆ. ಕಾರ್ಮಿಕರು ತಮ್ಮ ಕೌಶಲ್ಯ ಮತ್ತು ಶಕ್ತಿಸಾಮಥ್ರ್ಯಗಳನ್ನು ಒಬ್ಬ ಧಣಿಯ ವಶಕ್ಕೆ ಒಪ್ಪಿಸಿದ್ದಕ್ಕಾಗಿ ಕಾರ್ಮಿಕರಿಗೆ ಮಾಡುವ ಪಾವತಿ. ಈ ಕೌಶಲ ಮತ್ತು ಶಕ್ತಿಸಾಮಥ್ರ್ಯಗಳ ಬಳಕೆಯ ವಿಧಾನ ಧಣಿಯ ವಿವೇಚನೆಗೆ ಬಿಟ್ಟಿದ್ದು. ಪಾವತಿಯಾಗುವ ಮೊಬಲಗು ಎಷ್ಟೆಂಬುದು ಸೇವೆಯ ಕರಾರಿನ ವಿಧಿಗಳಿಗೆ ಅನುಗುಣವಾಗಿ ಇರತಕ್ಕದ್ದು. ಈ ಕರಾರು ಒಂದು ಕಾಲಪರಿಮಿತಿಗೆ ಒಳಪಟ್ಟಿರುತ್ತದೆ. ಸಾಧಾರಣವಾಗಿ ಎಲ್ಲ ದೇಶಗಳಲ್ಲೂ ಕೂಲಿ, ಮಜ್ದೂರಿ ಅಥವಾ ವೇತನ ಕೊಡುವುದು ಹಣದ ರೂಪದಲ್ಲಿಯಾದರೂ ದವಸಧಾನ್ಯಗಳನ್ನಾಗಲಿ ಇತರ ಪದಾರ್ಥಗಳನ್ನಾಗಲಿ ವೇತನಕ್ಕಾಗಿ ಕೊಡುವ ವಾಡಿಕೆಯೂ ಉಂಟು. ತಯಾರಾದ ಪದಾರ್ಥಗಳು ಮಾರುಕಟ್ಟೆಯನ್ನು ಸೇರುವ ಮೊದಲೇ ಶ್ರಮದ ಉತ್ಪಾದನ ಸೇವೆಗಾಗಿ ಪಾವತಿಯಾಗುವುದು ಇದರ ಒಂದು ವೈಶಿಷ್ಟ್ಯ. ಕಾರ್ಮಿಕರು ಮಾಡುವ ಕೆಲಸಗಳು ನಾನಾ ತೆರನಾದವು. ವಿದ್ಯೆ, ತರಬೇತು ಮತ್ತು ಪ್ರಾವೀಣ್ಯಗಳಿಂದ ಕೂಡಿ ಅತಿ ದಕ್ಷತೆಯಿಂದ ಮಾಡಬೇಕಾದ ಕೆಲಸಗಳಿಂದ ಹಿಡಿದು, ಸಾಮಾನ್ಯವಾಗಿ ಯಾರು ಬೇಕಾದರೂ ಮಾಡಬಹುದಾದ ಕೆಲಸಗಳ ವರೆಗೆ ಇವುಗಳಲ್ಲಿ ವಿವಿಧ ಬಗೆ. ಈ ವೈವಿಧ್ಯಗಳಿಗನುಗುಣವಾಗಿ ಕಾರ್ಮಿಕರಿಗೆ ಆಯಾ ಕೆಲಸಗಳಿಗೆ ಸಲ್ಲಬೇಕಾದ ವೇತನಗಳೂ ವೇತನದರಗಳೂ ವ್ಯತ್ಯಾಸವಾಗುತ್ತವೆ. ಕಾಲದೇಶಪರಿಸ್ಥಿತಿಗಳಿಗೆ ತಕ್ಕಂತೆ ಇವು ಮಾರ್ಪಾಡಾಗುತ್ತಿರುತ್ತವೆ. ಯಾವುದಾದರೊಂದು ಸಮಯದಲ್ಲಿ ಒಂದು ಪ್ರದೇಶದ ಕಾರ್ಮಿಕರಿಗೆ ಸಿಕ್ಕುವ ವೇತನಗಳನ್ನು ಪರೀಕ್ಷಿಸಿದಲ್ಲಿ ಒಂದು ಮುಖ್ಯಾಂಶ ವ್ಯಕ್ತವಾಗುತ್ತದೆ. ಕುಶಲ, ಅಕುಶಲ, ಅರೆಕುಶಲ ಕಾರ್ಮಿಕರಿಗೂ ಗಂಡಸರು ಹೆಂಗಸರಿಗೂ ವಿವಿಧ ಪ್ರದೇಶಗಳಲ್ಲಿಯ ಕಾರ್ಮಿಕರಿಗೂ ಕೊಡಲಾಗುವ ಕೂಲಿ ದರಗಳು ವಿಭಿನ್ನವಾಗಿರುತ್ತವೆ. ವಿವಿಧ ದರಗಳ ಈ ಸಮೂಹಕ್ಕೆ ವೇತನ ಸಂರಚನೆ, (ವೇಜ್ ಸ್ಟ್ರಕ್ಚರ್) ಎನ್ನುತ್ತಾರೆ. ವಿವಿಧ ಕೈಗಾರಿಕೆ ಮತ್ತು ಕಸಬುಗಳಿಗೆ ಸಂಬಂಧಿಸಿದಂತೆ ಅನೇಕ ಸಂರಚನೆಗಳಿರುವುದುಂಟು. ಈ ಅನೇಕ ಸಂರಚನೆಗಳನ್ನೆಲ್ಲ ವೇತನವ್ಯವಸ್ಥೆ ಒಳಗೊಂಡಿರತಕ್ಕದ್ದು.
 
"https://kn.wikipedia.org/wiki/ಕೂಲಿ" ಇಂದ ಪಡೆಯಲ್ಪಟ್ಟಿದೆ