ಸದಸ್ಯ:Revathikainthaje/ನನ್ನ ಪ್ರಯೋಗಪುಟ೧೧: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೪ ನೇ ಸಾಲು:
 
ಸೀಮೆಯ ಮುಖ್ಯ ದೈವಸ್ಥಾನಕೇಪು ಎಂನಲ್ಲಿರುವ ""ಉಳ್ಳಾಲ್ತಿ""ಯದು, ಸೀಮೆಯ ಮುಖ್ಯ ಭೂತ ""ಮಲರಾಯ"" ಎಂದು ಹೇಳಲಾಗಿದೆ.
==ಉತ್ಸವಗಳು==
ವರ್ಷಾವಧಿ ಉತ್ಸವ ವಿಟ್ಲಾಯನವು ಮಕರಸಂಕ್ರಮಣದಂದು ಆರಂಭವಾಗಿ, ಒಂಭತ್ತು ದಿನಗಳ ಕಾಲ ನಡೆಯುತ್ತದೆ. ಸುಮಾರು ಹತ್ತು ದಿನಗಳ ಮೊದಲು ಗೊನೆಕಡಿಯುವ ಮುಹೂರ್ತವಿರುತ್ತದೆ. ಮಕರಸಂಕ್ರಮಣದಂದು ಮಧ್ಯಾಹ್ನ ಅರಮನೆಯ ಅರಸರು, ಗುರಿಕಾರರು, ಊರ- ಪರಊರ ಜನರ ಉಪಸ್ಥಿತಿಯಲ್ಲಿ ಧ್ವಜಾರೋಹಣವಾಗುತ್ತದೆ.
 
ಮೊದಲನೆಯದಿನ "ಲಕ್ಷದೀಪೋತ್ಸವ". ದೇವಸ್ಥಾನದ ಸುತ್ತಲೂ ಹಣತೆದೀಪಗಳನ್ನು ಬೆಳಗಿಸಲಾಗುತ್ತದೆ. ಎರಡು, ಮೂರು, ನಾಲ್ಕನೆಯ ದಿನಗಳಲ್ಲಿ ನಿತ್ಯೋತ್ಸವಗಳು ನಡೆಯುತ್ತವೆ.("ಚಪ್ಪೆ ಆಯನ") ಐದನೆಯದಿನ "ಬಯ್ಯದಬಲಿ." ಅಂದು ರಾತ್ರೆ ಕೇಫುವಿನಿಂದ ಮಲರಾಯ, ಪಿಲಿಚಾಮುಂಡಿ ದೈವಗಳ ಭಂಡಾರ ಬರುತ್ತದೆ. ರಾತ್ರೆ ಉತ್ಸವ ನಡೆಯುತ್ತದೆ. ಆರನೆಯ ದಿನ "ನಡುದೀಪೋತ್ಸವ". ಆ ದಿನ ಬೆಳಗ್ಗೆ ದರ್ಶನ ಬಲಿ ನಡೆಯುತ್ತದೆ. ರಾತ್ರೆ ನಡುದೀಪೋತ್ಸವ ನಡೆಯುತ್ತದೆ. ಏಳನೆಯದಿನ "ಹೂವಿನತೇರು". ಆದಿನ ಬೆಳ್ಳಂಬೆಳಗ್ಗೆ ದರ್ಶನಬಲಿ ಹಾಗೂ ರಾತ್ರೆ ಉತ್ಸವ ನಡೆಯುತ್ತದೆ. ದೇವಸ್ಥಾನದ ಸುತ್ತಲೂ ಹಣತೆಗಳನ್ನು ಬೆಳಗಿಸುವುದು ಈ ಉತ್ಸವದ ವಿಶೇಷತೆ. ರಾತ್ರೆ ಓಕುಳಿಕಟ್ಟೆಪೂಜೆ ನಡೆದಬಳಿಕ ಅಷ್ಟಾವಧಾನ ಕಾರ್ಯಕ್ರಮ ನಡೆಯುತ್ತದೆ. (ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಶ್ಲೋಕಗಳು, ಸಂಗೀತ, ಶಂಖಧ್ವನಿ, ಚೆಂಡೆ, ವಾದ್ಯಘೋಷಗಳ ಸೇವೆ.) ಎಂಟನೆಯದಿನ "ಮಹಾರಥೋತ್ಸವ". ಆದಿನ ಬೆಳಗ್ಗೆ ದರ್ಶನಬಲಿ ನಡೆದು, ರಾತ್ರೆ ದೇವರಬಲಿ ಹೊರಟು ಸಂಕ್ಷಿಪ್ತ ಉತ್ಸವ ನಡೆಯುತ್ತದೆ. ರಾಜಾಂಗಣದಲ್ಲಿ ಭಂಡಾರದೊಂದಿಗೆ ಮೆರವಣಿಗೆಯಾಗಿ, ದೇವಸ್ಥಾನದ ಎದುರಿನ ರಥಗದ್ದೆಯಲ್ಲಿ ಶ್ರೀದೇವರ ಮಹಾರಥೋತ್ಸವ ನಡೆಯುತ್ತದೆ. ಸುಡುಮದ್ದುಗಳ ಪ್ರದರ್ಶನ ನಡೆಯುತ್ತದೆ. ನಂತರ ವಿವಿಧ ಕಟ್ಟೆಪೂಜೆಗಳೊಂದಿಗೆ ಶ್ರೀದೇವರ ಬೀದಿಸವಾರಿ ನಡೆದು, ದೇವಾಲಯಕ್ಕೆ ಆಗಮಿಸುವ ವೇಳೆಗೆ ಆನೆಬಾಗಿಲು ಸಮೀಪ ಶಿವ-ಪರ್ವತಿಯರ ಭೇಟಿಯಾಗುತ್ತದೆ. ಆಬಳಿಕ ಪೆರಿಯ ಭೂತಬಲಿ ಉತ್ಸವ ನಡೆಯುತ್ತದೆ. ಆ ಬಳಿಕ ದೇವರ ಶಯನ. ಶಯನ ಸಂದರ್ಭದಲ್ಲಿ ಎಲ್ಲಾ ಬಲಿಕಲ್ಲುಗಳಿಗೆ ತೈಲವನ್ನು ಲೇಪಿಸಿ, ಯಾವಶಬ್ದವೂ ಕೇಳಿಸದಂತೆ ಗಂಟೆಗಳನ್ನು ಕಟ್ಟಲಾಗುತ್ತದೆ. ಒಂಭತ್ತನೆಯದಿನ "ಅವಭೃತೋತ್ಸವ". ಅಂದು ಮಧ್ಯಾಹ್ನ ಕವಾಟೋದ್ಘಾಟನೆ. ನಗಾರಿ, ಚೆಂಡೆ, ವಾದ್ಯಗಘೋಷಗಳೊಂದಿಗೆ ಬಾಗಿಲು ತೆರೆದು ನಿರ್ಮಾಲ್ಯ ವಿಸರ್ಜನೆ, ಅಭಿಷೇಕ, ಪೂಜೆ, ನೈವೇದ್ಯಗಳು ನಡೆಯುತ್ತವೆ. ಮಧ್ಯಾಹ್ನ ತುಲಾಭಾರ ಸೇವೆ ನಡೆಯುತ್ತದೆ. ವರ್ಷದಲ್ಲಿ ಈದಿನ ಮಾತ್ರ ಈ ಸೇವೆ ನಡೆಯುತ್ತದೆ. ರಾತ್ರೆ ಸಂಕ್ಷಿಪ್ತ ಉತ್ಸವಬಲಿ ಹೊರಟು ಆನೆಬಾಗಿಲಿನ ಹತ್ತಿರ ಬಂದಾಗ ದೈವದ ಭೇಟಿಯಾಗಿ, ಕೊಡುಂಗಾಯಿಗೆ ತೆರಳಿ ಅವಭೃತಸ್ನಾನ ಮುಗಿಸಿ, ಆನೆಬಾಗಿಲಿನ ಬಳಿ ಶಿವ-ಪಾರ್ವತಿಯರ ಭೇಟಿಯಾಗುತ್ತದೆ. ನಂತರ ಶ್ರೀದೇವರು ಒಳಾಂಗಣಕ್ಕೆ ಪ್ರವೇಶಿಸಿದ ನಂತರ ಧ್ವಜಾವರೋಹಣ ಕಾರ್ಯಕ್ರಮ ಜರುಗುತ್ತದೆ.