ಸದಸ್ಯ:Revathikainthaje/ನನ್ನ ಪ್ರಯೋಗಪುಟ೧೧: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೯ ನೇ ಸಾಲು:
ನಿಧಿ ಸಂಚಯನ,ಗಣ್ಯರ- ಆಸ್ತಿಕರ ಕೊಡುಗೆ, ಕರ್ನಾಟಕ ಸರಕಾರದ ಮುಜರಾಯಿ ಖಾತೆಯಿಂದ ಒಂದು ಕೋಟಿ ರೂಗಳ ಅನುದಾನ, ಕೃಷಿಉತ್ಪನ್ನ ವಸ್ತುಸಂಗ್ರಹ, ಪಿಗ್ಮಿ ಯೋಜನೆ ಹೀಗೆ ಹಲವು ಮೂಲಗಳಿಂದ ಹಣಾ ಸಂಗ್ರಹಿಸಲಾಯಿತು. ಸುಮಾರು ಎರಡೂಕಾಲು ಕೋಟಿಗಳಷ್ಟು ಹಣ ಸಂಗ್ರಹವಾದ ನಂತರ ಪ್ರಾಚೀನ ಗರ್ಭಗುಡಿ ತೆರವುಗೊಳಿಸಲು ತೀರ್ಮಾನಿಸಿ, ಅಧಿಕೃತ ವೈದಿಕ ಕಾರ್ಯಕ್ರಮ ೨೦೦೭ ರಲ್ಲಿ ಆಲಂಪಾಡಿ ಶ್ರೀ ಪದ್ಮನಾಭ ತಂತ್ರಿಗಳ ಹಿರಿತನದಲ್ಲಿ ಜರುಗಿತು. ಪಂಚಲಿಂಗಗಳನ್ನು ಸಂಕೋಚಿಸಿ, ಏಕಲಿಂಗವನ್ನು ಹೊಸತಾಗಿ ನಿರ್ಮಿಸಿ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಗರ್ಭಗುಡಿಯ ಮುಗುಳಿಗೆ ಬಿಗಿದಹಗ್ಗವನ್ನು ಬಸವನ ಕೊಂಬಿಗೆ ಕಟ್ಟಿ ಮುಗುಳಿಯನ್ನು ತೆಗೆಯಲಾಯಿತು. ತಂತ್ರಿಯವರು ಗರ್ಭಗುಡಿಯ ತಾಮ್ರದ ತಗಡನ್ನು ತೆಗೆಯುವಮೂಲಕ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
 
ದೇವಸ್ಥಾನದ ಕಲ್ಲಿನಕೆತ್ತನೆಯನ್ನು ಕಾರ್ಕಳದ ಶಿಲಾಶಿಲ್ಪಿ ವಿಶ್ವನಾಥ ಅವರ ಬಳಗ ಮಾಡಿದೆ. ದಾರು ಶಿಲ್ಪವನ್ನು ತ್ರಿಶೂರ‍್ ನ ಇ.ಕೆ. ವಾಸು ಆಚಾರ್ಯರವರ ತಂಡ ಮಾಡಿದೆ. ೬೫ ಅಡಿ ಎತ್ತರದ ಇಳಿಜಾರಾದ ಮೂರು ಅಂತಸ್ತಿನ ಮಾಡಿನ ಗರ್ಭಗುಡಿಯಿದೆ.ಮಾಡಿನ ತುತ್ತತುದಿಯ ದಾರುಶಿಲ್ಪದ ಜೋಡಣೆ ಸುಂದರವಾಗಿದೆ. ಕಬ್ಬಿಣದ ಮೊಳೆಗಳನ್ನಿಲ್ಲಿ ಉಪಯೋಗಿಸಿಲ್ಲ. ಗರ್ಭಗುಡಿಯೊಳಗೆ ವಿದ್ಯುತ್ ಸಂಪರ್ಕವನ್ನು ಮಾಡಲಿಲ್ಲ. ದೀಪಗಳ ಬೆಳಕೇ ಆಧಾರ. ಗರ್ಭಗುಡಿಯ ಒಳಗಿನ ಎರಡು ಕೆಂಪುಕಲ್ಲಿನ ಗೋಡೆಗಳಿಗೆ ಸಿಮೆಂಟ್ ಬಳಸಲಿಲ್ಲ. ಪ್ರಾಚೀನಕಾಲದಲ್ಲಿ ಬಳಕೆ ಮಾಡುತ್ತಿದ್ದ ಬೆಲ್ಲ ಕುಮ್ಮಾಯಿಯ ಜೊತೆಗೆ ಎರ್ಪೆ ಸೊಪ್ಪು, ಆಲದ ಕುರ್ಮದ ತೊಗಟೆಗಳಿಂದ ತೆಗೆದ ರಸವನ್ನು ಮಿಶ್ರಮಾಡಿ ಇಪ್ಪತ್ತು ದಿನ ನಾದಿಸಿ ತಯಾರಿಸಿದ ಮಿಶ್ರಣದಿಂದ ಕಲ್ಲುಗಳನ್ನು ಜೋಡಿಸಲಾಗಿದೆ.
 
೪೭೫೦ ಚದರ ಅಡಿ ವಿಸ್ತೀರ್ಣದ ಗಜಪೃಷ್ಠಾಕಾರದ ಗರ್ಭಗುಡಿಯನ್ನು ತೆರವುಗೊಳಿಸಿ ಅದೇ ಆಯ ಮತ್ತು ವಾಸ್ತುವಿನಲ್ಲಿ ಪುನಃ ನಿರ್ಮಿಸಲಾಗಿದೆ. ೪೫೦೦ ಕಿಲೋ ತೂಗುವ ಶಿಲಾಪಾಣಿಪೀಠವನ್ನು ಕೆತ್ತನೆಮಾಡಿ ಕ್ರೇನ್ ಮೂಲಕ ಗರ್ಭಗುಡಿಯಲ್ಲಿ ಸ್ಥಾಪಿಸಲಾಗಿದೆ. ಈ ಪಾಣಿಪೀಠವು ೯ ಅಡಿ ಉದ್ದ, ೬ ಅಡಿ ಅಗಲ, ೪ ಅಡಿ ದಪ್ಪವಿದೆ. ಸುತ್ತು ಪೌಳಿ ೩೪೭ ಕೋಲು ಸುತ್ತಳತೆಯನ್ನು ಹೊಂದಿದೆ. ಐದೂಕಾಲು ಅಡಿ ಎತ್ತರದ ಮೂರು ಚಿನ್ನದ ಲೇಪದ ಮುಗುಳಿಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರಹೆಗ್ಗಡೆಯವರು ಕೊಡುಗೆಯಾಗಿ ನೀಡಿರುತ್ತಾರೆ.
 
ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪೇಜಾವರಮಠ, ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಸುಬ್ರಹ್ಮಣ್ಯಮಠ, ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಶ್ರೀ ರಾಮಚಂದ್ರಾಪುರ ಮಠ, ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ ಇವರ ಮಾರ್ಗದರ್ಶನದೊಂದಿಗೆ, ಸಂಘ-ಸಂಸ್ಥೆಗಳ ನೆರವು, ಊರ-ಪರವೂರ ಜನರ ತನು-ಮನ-ಧನದ ಸಹಕಾರ, ಸಾವಿರಾರು ಜನರ ಶ್ರಮದಾನ ನಿಸ್ಪೃಹ ಸೇವಾಮನೋಭಾವದೊಂದಿಗೆ ಹನ್ನೊಂದು ವರುಷಗಳಲ್ಲಿ ಸುಮಾರು ಹತ್ತು ಕೋಟಿ ರೂಗಳ ವೆಚ್ಚದಲ್ಲಿ ಭವ್ಯವಾಗಿ ದೇವಸ್ಥಾನ ನಿರ್ಮಾಣಗೊಂಡಿದೆ. ಮೂಲರಚನೆ, ಸೌಂದರ್ಯಕ್ಕೆ ಚ್ಯುತಿಬಾರದಂತೆ ಕೆಂಪುಕಲ್ಲು, ತಾಮ್ರ, ಮರಗಳನ್ನು ಬಳಸಿ ವಾಸ್ತುಶಿಲ್ಪವನ್ನೊಳಗೊಂಡು ಹಿಂದಿನಂತೆಯೇ ತನ್ನ ಕಲಾವೈಭವವನ್ನು ಮೆರೆಯುತ್ತಿದೆ.
 
೨೦೧೩ರ ಜನವರಿ ೯ರಿಂದ ೨೧ರ ತನಕ ಪುನಃಫ್ರತಿಷ್ಠಾಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ಜರುಗಿದವು.
==ದೇವಸ್ಥಾನ ಇಂದು==
ದೇವಾಲಯಗಳ ಗಾತ್ರಕ್ಕನುಸಾರವಾಗಿ ಅಲ್ಪಪ್ರಾಸಾದ, ಮಧ್ಯಪ್ರಾಸಾದ, ಮಹಾಪ್ರಾಸಾದ, ಜಾತಿ, ವಿಕಲ್ಪ, ಛಂದ ಎಂಬ ಆರು ಹೆಸರುಗಳಿವೆ. ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ಮಹಾಪ್ರಾಸಾದ (ಅತ್ಯಂತ ದೊಡ್ಡ ಗರ್ಭಗುಡಿ) ನಿಯಮದ ದೇವಾಲಯವಾಗಿದೆ.
 
ಪಶಿಮಾಭಿಮುಖವಾಗಿದ್ದು, ಗಜಪೃಷ್ಠಾಕೃತಿಯಲ್ಲಿದೆ. ಪಂಚಲಿಂಗಗಳ ಎದುರಿಗೆ ಒಳಾಂಗಣದಲ್ಲಿ ನಂದಿ ವಿಗ್ರಹ, ನವರಂಗ ಮಂಟಪ, ವಸಂತ ಮಂಟಪವಿದೆ. ೬೬ ೧/೨ ಅಡಿ ಎತ್ತರದ ೫.೫ ಅಡಿ ಸುತ್ತಳತೆಯ ಧ್ವಜಸ್ಥಂಭವಿದೆ. ಒಳಾಂಗಣದ ವಾಯುವ್ಯ ದಿಕ್ಕಿನಲ್ಲಿ ಪಶ್ಚಿಮಾಭಿಮುಖವಾಗಿ ಕುಂತೀಶ್ವರ ಗುಡಿಯಿದೆ. (ಎದುರಿಗೆ ಪುಟ್ಟ ನಂದಿ ವಿಗ್ರಹ). ಪಾಂಡವಪ್ರತಿಷ್ಠೆಯೆಂಬ ಸ್ಥಳಪುರಾಣಕ್ಕೆ ಸಂಬಂಧಿಸಿದಂತೆ ಕುಂತಿ ಪೂಜಿಸಿದಲಿಂಗ ಎಂಬುದನ್ನು ಈ ""ಕುಂತೀಶ್ವರಲಿಂಗ"" ಎಂಬ ಹೆಸರು ನೆನಪಿಸುವಂತಿದೆ. ಈಶಾನ್ಯದಲ್ಲಿ ಧೌಮ್ಯೇಶ್ವರ, ಆಗ್ನೇಯದಲ್ಲಿ ಭೈರವೇಶ್ವರ ಗುಡಿಯಿದೆ. ದಕ್ಷಿಣದಿಕ್ಕಿನಲ್ಲಿ ಪೂರ‍್ವಾಭಿಮುಖವಾಗಿ ಗಣಪತಿ ಗುಡಿಯಿದೆ. ಇಲ್ಲಿರುವ ಗಣಪತಿ ವಿಗ್ರಹವು ಸುಮಾರು ಕ್ರಿ.ಶ. ಹನ್ನೊಂದನೆಯ ಶತಮಾನದ್ದೆಂದು ಡಾ.ಪಿ.ಗುರುರಾಜ ಭಟ್ಟರು ಊಹಿಸಿದ್ದಾರೆ. ನೈಋತ್ಯ ದಿಕ್ಕಿನಲ್ಲಿ ಪಶ್ಚಿಮಾಭಿಮುಖವಾಗಿ ಅಮ್ಮನವರ ಗುಡಿಯಿದೆ. ಒಳಾಂಗಣದ ಈ ಎಲ್ಲಾ ಸ್ಥಾಪನೆಗಳಿಗೂ ಪೂಜೆ ನಡೆಯುತ್ತದೆ. ಉತ್ತರದಿಕ್ಕಿನಲ್ಲಿ ಬಾವಿ ಹಾಗೂ ಸಣ್ಣ ಕೊಳವಿದೆ. ಸುತ್ತುಪೌಳಿಯ ಸುತ್ತಲೂ ಮರದ ದರಿಯನ್ನು ನಿರ್ಮಿಸಲಾಗಿದೆ. ಜಾತ್ರೆಯ ಸಮಯದಲ್ಲಿ ಇಲ್ಲಿ ದೀಪಗಳನ್ನು ಉರಿಸಲಾಗುತ್ತದೆ. ಒಳಪ್ರಾಕಾರದಲ್ಲಿ ಉಳ್ಳಾಲ್ತಿಭಂಡಾರವನ್ನಿಡುವ ವ್ಯವಸ್ಥೆಯಿದೆ.
 
ಹೊರಾಂಗಣದ ನೈಋತ್ಯ ದಿಕ್ಕಿನಲ್ಲಿ ದಕ್ಷಿಣಕ್ಕೆ ತೆರೆದಂತೆ ದೇವಾಲಯದ ಆವರಣದ ಪ್ರವೇಶದ್ವಾರವಿದೆ ನೈಋತ್ಯದಿಕ್ಕಿನ ಮೂಲೆಯಲ್ಲಿ ಓಕುಳಿಕುಂಡ, ದೀಪಸ್ತಂಭ ಮತ್ತು ಕಟ್ಟೆಯಿದೆ. ( ಜಾತ್ರೆಯ ಸಮಯದಲ್ಲಿ ವಿಟ್ಲದ ಅರಸರು ಈ ಕಟ್ಟೆಯಲ್ಲಿ ಕುಳಿತುಕೊಳ್ಳುವ ಪಧ್ಧತಿಯಿದೆ). ನಾಗ, ರಕ್ತೇಶ್ವರಿ, ಗುಳಿಗ, ಬ್ರಹ್ಮರಾಕ್ಷಸ ಕಟ್ಟೆಗಳಿವೆ. ಉತ್ತರಭಾಗದಲ್ಲಿ ವಿಸ್ತಾರವಾದ ಪುಷ್ಕರಣಿಯಿದೆ.
 
ಸೀಮೆಯ ಮುಖ್ಯ ದೈವಸ್ಥಾನಕೇಪು ಎಂನಲ್ಲಿರುವ ""ಉಳ್ಳಾಲ್ತಿ""ಯದು, ಸೀಮೆಯ ಮುಖ್ಯ ಭೂತ ""ಮಲರಾಯ"" ಎಂದು ಹೇಳಲಾಗಿದೆ.