ಸದಸ್ಯ:Revathikainthaje/ನನ್ನ ಪ್ರಯೋಗಪುಟ೧೧: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೫ ನೇ ಸಾಲು:
ಕ್ರಿ.ಶ. ೧೪೩೬,೧೭೨೭,೧೮೯೪ ರಲ್ಲಿ ಜೀರ್ಣೋಧ್ಧಾರವಾದ ದಾಖಲೆಗಳು ದೇಗುಲದಲ್ಲಿರುವ ಶಿಲಾಶಾಸನಗಳಲ್ಲಿವೆ. ೧೮೯೪ ರಲ್ಲಿ ಅರಮನೆಯ ಅರಸಿ ಸುಭದ್ರಮ್ಮ ಯಾನೆ ದೊಡ್ಡಮ್ಮನವರಾಗಿದ್ದಿರಬೇಕು. ಅವರ ನಂತರ ರವಿವರ್ಮ ನರಸಿಂಹ ರಾಜರು, ಆನಂತರ ಅವರ ಪುತ್ರ ರವಿವರ್ಮ ಕೃಷ್ಣರಾಜರು, ತದನಂತರ ಅವರ ತಮ್ಮ ರಾಮವರ್ಮ ರಾಜರು ಅರಸರಾದರು.
==ಪುನಃ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವ==
ಪೂರ್ವಕಾಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟಂತಹ ದೇವಾಲಯಗಳು ಜೀರ್ಣಾವಸ್ಥೆಗೆ ಬಂದಂತಹ ಸಂದರ್ಭದಲ್ಲಿ,ಅಷ್ಟಮಂಗಲ ಪ್ರಶ್ನೆಯನ್ನಿರಿಸಿ,ದೋಷಗಳಿದ್ದರೆ ಪರಿಹರಿಸಿ,ನಂತರ ಜೀರ್ಣೋಧ್ಧರಕ್ಕೆ ಆರಂಭಿಸುವುದು ವಾಡಿಕೆ.ಅಂತೆಯೇ ೨೦೦೧ರಲ್ಲಿ ಅಷ್ಟಮಂಗಲ ಪ್ರಶ್ನೆ ಜರುಗಿತು.ಹೊಸದಾಗಿ ಪುನರಾರಂಭಿಸುವ ದೇವಸ್ಥಾನದ ವಾಸ್ತುಶಿಲ್ಪಿಯನ್ನಾಗಿ ಶ್ರೀ ಮಹೇಶ ಮುನಿಯಂಗಳ ಅವರನ್ನು ಆಯ್ಕೆಮಾಡಲಾಯಿತು. ದೇವಸ್ಥಾನ ಜೀರ್ಣೋಧ್ಧಾರ ಸಂಚಾಲನಾ ಸಮಿತಿಯೊಂದನ್ನು ರಚಿಸಲಾಯಿತು.ಶ್ರೀ ಎಲ್.ಎನ್.ಕೂಡೂರು ಇವರನ್ನು ಅಧ್ಯಕ್ಷರನ್ನಾಗಿ ಆರಿಸಲಾಯಿತು. ಸಮಿತಿಯಲ್ಲಿ ವಿ.ರಾಮವರ್ಮ-ವಿಟ್ಲ ಅರಮನೆ, ಎಚ್.ಜಗನ್ನಾಥ ಸಾಲಿಯಾನ್, ಯಶವಂತ-ವಿಟ್ಲ, ಜನಾರ್ದನ ಪೈ, ಬಿ. ಶಾಂತಾರಾಮ ಶೆಟ್ಟಿ, ನಿತ್ಯಾನಂದ ನಾಯಕ್, ಬಾಬು ಕೊಪ್ಪಳ, ದಯಾನಂದ ಆಳ್ವ, ಸೀತಾರಾಮ ಶೆಟ್ಟಿ ಆಯ್ಕೆಯಾದರು. ನಂತರ ೩೦೫ ಜನರ ಜೀರ್ಣೋಧ್ಧಾರ ಸಮಿತಿ ರಚನೆಯಾಯಿತು.
 
ನಿಧಿ ಸಂಚಯನ,ಗಣ್ಯರ- ಆಸ್ತಿಕರ ಕೊಡುಗೆ, ಕರ್ನಾಟಕ ಸರಕಾರದ ಮುಜರಾಯಿ ಖಾತೆಯಿಂದ ಒಂದು ಕೋಟಿ ರೂಗಳ ಅನುದಾನ, ಕೃಷಿಉತ್ಪನ್ನ ವಸ್ತುಸಂಗ್ರಹ, ಪಿಗ್ಮಿ ಯೋಜನೆ ಹೀಗೆ ಹಲವು ಮೂಲಗಳಿಂದ ಹಣಾ ಸಂಗ್ರಹಿಸಲಾಯಿತು. ಸುಮಾರು ಎರಡೂಕಾಲು ಕೋಟಿಗಳಷ್ಟು ಹಣ ಸಂಗ್ರಹವಾದ ನಂತರ ಪ್ರಾಚೀನ ಗರ್ಭಗುಡಿ ತೆರವುಗೊಳಿಸಲು ತೀರ್ಮಾನಿಸಿ, ಅಧಿಕೃತ ವೈದಿಕ ಕಾರ್ಯಕ್ರಮ ೨೦೦೭ ರಲ್ಲಿ ಆಲಂಪಾಡಿ ಶ್ರೀ ಪದ್ಮನಾಭ ತಂತ್ರಿಗಳ ಹಿರಿತನದಲ್ಲಿ ಜರುಗಿತು. ಪಂಚಲಿಂಗಗಳನ್ನು ಸಂಕೋಚಿಸಿ, ಏಕಲಿಂಗವನ್ನು ಹೊಸತಾಗಿ ನಿರ್ಮಿಸಿ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಗರ್ಭಗುಡಿಯ ಮುಗುಳಿಗೆ ಬಿಗಿದಹಗ್ಗವನ್ನು ಬಸವನ ಕೊಂಬಿಗೆ ಕಟ್ಟಿ ಮುಗುಳಿಯನ್ನು ತೆಗೆಯಲಾಯಿತು. ತಂತ್ರಿಯವರು ಗರ್ಭಗುಡಿಯ ತಾಮ್ರದ ತಗಡನ್ನು ತೆಗೆಯುವಮೂಲಕ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
 
ದೇವಸ್ಥಾನದ ಕಲ್ಲಿನಕೆತ್ತನೆಯನ್ನು ಕಾರ್ಕಳದ ಶಿಲಾಶಿಲ್ಪಿ ವಿಶ್ವನಾಥ ಅವರ ಬಳಗ ಮಾಡಿದೆ. ದಾರು ಶಿಲ್ಪವನ್ನು ತ್ರಿಶೂರ‍್ ನ ಇ.ಕೆ. ವಾಸು ಆಚಾರ್ಯರವರ ತಂಡ ಮಾಡಿದೆ. ೬೫ ಅಡಿ ಎತ್ತರದ ಇಳಿಜಾರಾದ ಮೂರು ಅಂತಸ್ತಿನ ಮಾಡಿನ ಗರ್ಭಗುಡಿಯಿದೆ.ಮಾಡಿನ ತುತ್ತತುದಿಯ ದಾರುಶಿಲ್ಪದ ಜೋಡಣೆ ಸುಂದರವಾಗಿದೆ. ಕಬ್ಬಿಣದ ಮೊಳೆಗಳನ್ನಿಲ್ಲಿ ಉಪಯೋಗಿಸಿಲ್ಲ.