ಲೋಕನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
info and ref added
೮ ನೇ ಸಾಲು:
}}
 
'''ಲೋಕನಾಥ್''' (ಆಗಸ್ಟ್ ೧೪, ೧೯೨೭-ಡಿಸೆಂಬರ್, ೩೧, ೨೦೧೮) ಕನ್ನಡ ಚಿತ್ರರಂಗ ಮತ್ತು ರಂಗಭೂಮಿಯ ಒಬ್ಬ ಹಿರಿಯನಟ. ಕಿರುತೆರೆಯಲ್ಲೂ ಸಾಕಷ್ಟು ಕೆಲಸಮಾಡಿದ್ದಾರೆ. ಚಿತ್ರರಂಗವಲ್ಲದೆ ರಂಗಭೂಮಿಯ ಬಹಳಷ್ಟು ಉತ್ತಮ ಪ್ರಯೋಗಗಳಿಗೂ, ಕಿರುತೆರೆಯ ಉತ್ತಮ ಪಾತ್ರಗಳಿಗೂ ಲೋಕನಾಥರು ಮೆರುಗು ತಂದಿದ್ದಾರೆ. ಸುಮಾರು 650 ಸಿನಿಮಾಗಳು ಮತ್ತು 1 ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. 1970ರಲ್ಲಿ ತೆರೆಕಂಡಿದ್ದ [[ಸಂಸ್ಕಾರ (ಚಲನಚಿತ್ರ)|ಸಂಸ್ಕಾರ]] ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಲೋಕನಾಥ್ ಅವರು ಕೊನೆಯದಾಗಿ ''ಎ.ಕೆ. 56'' ಮತ್ತು ''ಭೀಮಾ ತೀರದಲ್ಲಿ'' ಎಂಬ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.<ref>[https://www.kannadaprabha.com/cinema/news/south-indian-veteran-actor-c-h-loknath-passes-away/331080.html ಖ್ಯಾತ ಹಿರಿಯ ನಟ 'ಅಂಕಲ್' ಲೋಕನಾಥ್ ವಿಧಿವಶ, ವಯೋ ಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಲೋಕನಾಥ್], ಕನ್ನಡಪ್ರಭ, 31 Dec 2018 </ref>
 
==ಜೀವನ==
ಲೋಕನಾಥರು ಜನಿಸಿದ್ದು ಆಗಸ್ಟ್ ೧೪, ೧೯೨೭ರಂದು. ಶಿಸ್ತುಬದ್ಧ ಜೀವನದ, ರಂಗಭೂಮಿ ಮತ್ತು ಚಲನಚಿತ್ರಲೋಕದ ಮೇರು ಕಲಾವಿದರಾದ ಲೋಕನಾಥ್‌ರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಹನುಮಂತಪ್ಪನವರು ಮತ್ತು ತಾಯಿ ಗೌರಮ್ಮನವರು. ಅವರದ್ದು ಜವಳಿ ವಾಣಿಜ್ಯ ವಹಿವಾಟಿನ ಕುಟುಂಬ. ಹೆಣ್ಣು ಮಕ್ಕಳು ಗಂಡು ಮಕ್ಕಳು ಎಂಬ ಭೇದವಿಲ್ಲದೆ ಸಂಜೆಯ ಒಳಗೆ ಮನೆ ಸೇರಬೇಕು ಎಂಬಂತಹ ಕಟ್ಟುಪಾಡಿನ ವಾತಾವರಣವಿದ್ದ ಸುಮಾರು ೪೦ ಜನರಿದ್ದ ಸಂಪ್ರದಾಯಸ್ತ ಅವಿಭಕ್ತ ಕುಟುಂಬ ಅವರದ್ದು. ಮೂಲತ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಲೋಕನಾಥರು ಕುಟುಂಬದ ವ್ಯಾಪಾರಕ್ಕೆ ಆಸರೆಯಾಗಿರಲು ಓದು ಬಿಟ್ಟರು. ಮನೆಯಲ್ಲಿದ್ದ ವೇಳೆಯಲ್ಲಿ ಸಂಗೀತದ ಮೇಲಿನ ಆಸೆಯಿಂದ ಸಂಗೀತವನ್ನು ಸುಮ್ಮನೆ ಗುನುಗುತ್ತಿದ್ದರು. ತಬಲಾ ಕಲಿಯಬೆಕೆಂಬ ಆಸೆಗೆ ತಬಲಾ ತಂದಿಟ್ಟುಕೊಂಡಾಗ ಮನೆಯ ವಾತಾವರಣ ಅದಕ್ಕೆ ಸರಿಹೋಗುವುದಿಲ್ಲ ಎಂದು ಅದನ್ನು ಕೈ ಬಿಟ್ಟರುಕೈಬಿಟ್ಟರು.
 
==ರಂಗಭೂಮಿಯಲ್ಲಿ==
೩೮ ನೇ ಸಾಲು:
 
[[ವರ್ಗ:ಚಲನಚಿತ್ರ ನಟರು]]
[[ವರ್ಗ:ರಂಗಭೂಮಿ ಕಲಾವಿದರು]]
[[ವರ್ಗ:೨೦೧೮ ನಿಧನ]]
[[ವರ್ಗ:೧೯೨೭ ಜನನ]]
[[ವರ್ಗ:ರಂಗಭೂಮಿ ಕಲಾವಿದರು]]
"https://kn.wikipedia.org/wiki/ಲೋಕನಾಥ್" ಇಂದ ಪಡೆಯಲ್ಪಟ್ಟಿದೆ