ಸದಸ್ಯ:Revathikainthaje/ನನ್ನ ಪ್ರಯೋಗಪುಟ೧೧: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಕರ್ನಾಟಕದ, ಬಂಟ್ವಾಳ ತಾಲೂಕಿನ ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಊರು ವಿಟ್ಲ....
 
No edit summary
೫ ನೇ ಸಾಲು:
ಐತಿಹ್ಯದ ಪ್ರಕಾರ ಪುರಾತನ ಕಾಲದ ಏಕಚಕ್ರ ವರ್ಗಗಳ ಸಮೀಪದ ಕಳಂಜಿಮಲೆ ಕಾಡಿನಲ್ಲಿಯೇ ಬಕಾಸುರನ ಗುಹೆಯಿತ್ತು.ಭೀಮ ಅವನನ್ನು ಕೊಂದುದು ಅಲ್ಲಿಯೇ.ಅವನನ್ನು ಕೊಂದಾಗ ಹರಿದ ರಕ್ತವು ಬಂದು ತುಂಬಿಕೊಂಡುದರಿಂದ ’ನೆತ್ತರುಕೆರೆ’ ಉಂಟಾಯಿತು.(ಕಳಂಜಿಮಲೆ ಹಾಗೂ ನೆತ್ತರುಕೆರೆ ವಿಟ್ಲದ ಆಸುಪಾಸಿನ ಸ್ಥಳಗಳು.)
 
ದೇವಸ್ಥಾನಕ್ಕೆ ಸಂಬಂಧಿಸಿದ ಸ್ಥಳ ಪುರಾಣದ ಪ್ರಕಾರ ಪಾಂಡವರು ತಮ್ಮ ಸುತ್ತಾಟಕಾಲದಲ್ಲಿ ಈ ಪ್ರದೇಶದಲ್ಲಿ ವಾಸಮಾಡಿದ್ದರಂತೆ.ತಮ್ಮ ನೆನಪಿಗಾಗಿ ಶಿವನನ್ನು ಸ್ಥಾಪಿಸಲು ಇಚ್ಛಿಸಿ,ಕಾಶಿಯಿಂದ ಲಿಂಗಗಳನ್ನು ತರಲು,ವಾಯುವೇಗದಲ್ಲಿ ಗಮಿಸಬಲ್ಲ ಭೀಮನನ್ನು ಕಳುಹಿಸಿದರು.ಭೀಮನು ಲಿಂಗಗಳೊಂದಿಗೆ ಬರುವಾಗ ತಡವಾದ್ದರಿಂದ ನಿಶ್ಚಿತ ಲಗ್ನದಲ್ಲಿ ಲಿಂಗವೊಂದನ್ನು ಪ್ರತಿಷ್ಟಿಸಿ, ಪೂಜೆ ಮಾಡಿದರಂತೆ.(ಇನ್ನೊಂದು ಪಾಠಾಂತರದ ಪ್ರಕಾರ ಭೀಮನು ಕಾಶಿಗೆ ಹೋದಾಗ ಅವನ ಹಿಂದೆಯೇ ಹನುಮಂತನೂ ಹೋದನಂತೆ. ವೇಗಶಾಲಿಯಾದ ಹನುಮಂತನು ಮೊದಲಿಗೆ ತಂದ ಲಿಂಗವನ್ನು ನಿಶ್ಚಿತ ಲಗ್ನದಲ್ಲಿ ಪ್ರತಿಷ್ಟಾಪಿಸಿದರಂತೆ.) ಭೀಮನು ತಾನು ತಂದ ಲಿಂಗಗಳು ವ್ಯರ್ಥವಾಗಬಾರದೆಂದು ಅದಾಗಲೇ ಫ್ರತಿಷ್ಠಾಪಿಸಿದ್ದ ಲಿಂಗವನ್ನು ಕಿತ್ತೆಸೆದು ತಾನು ತಂದ ಲಿಂಗಗಳನ್ನು ಪ್ರತಿಷ್ಠಿಸಿದನಂತೆ.ನೈವೇದ್ಯಕ್ಕೆ ಬೇರೇನೂ ಇಲ್ಲದಿದ್ದುದರಿಂದ, ಅದಗಲೇ ನೈವೇದ್ಯ ಮಾಡಲಾಗಿದ್ದ ಅನ್ನಕ್ಕಿಷ್ಟು ನೀರು ಚಿಮುಕಿಸಿ ಅದನ್ನೊಮ್ಮೆ ಬೆಂಕಿಗಿರಿಸಿ ತೆಗೆದು ನೈವೇದ್ಯ ಮಾಡಿದನಂತೆ.(ಈಗಲೂ ಬೇಯಿಸಿ ತಂದಿರಿಸಿದ ಅನ್ನಕ್ಕೆ ನೀರು ಚಿಮುಕಿಸಿ ದೀಪದ ಬೆಂಕಿಗಾದರೂ ತೋರಿಸಿ ನೈವೇದ್ಯ ಮಾಡುವುದೆಂದು ಹೇಳಲಾಗುತ್ತದೆ.) ಭೀಮನು ಕಿತ್ತೆಸೆದ ಲಿಂಗವು ದೇವಸ್ಥಾನದ ಉತ್ತರ ಭಾಗದಲ್ಲಿರುವ ಕೆರೆಯ ನಡುವಿನ ಕಲ್ಲಿನ ಮಂಟಪದಲ್ಲಿ ಈಗಲೂ ಇದೆಯೆಂದು ಹೇಳಲಾಗುತ್ತಿದೆ.
==ಪಂಚಲಿಂಗೇಶ್ವರ==
ಐದು ಪ್ರಾಕೃತಿಕ ಶಿಲಾಖಂಡಗಳನ್ನು ಏಕಪಾಣಿಪೀಠದ ಮೇಲೆ ಲಿಂಗಗಳಾಗಿ ಸ್ಥಾಪಿಸಿರುವುದರಿಂದ ಪಂಚಲಿಂಗೇಶ್ವರ ದೇವಾಲಯವೆನಿಸಿದೆ. ( ಶಿವನ ಸ್ವರೂಪಗಳಾದ ಸದ್ಯೋಜಾತ, ವಾಮದೇವ,ಅಘೋರ, ತತ್ಪುರುಷ, ಈಶಾನ)