ಬ್ರಹ್ಮಪುತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೧ ನೇ ಸಾಲು:
*ಭಾರತದಲ್ಲಿ ಇದರ ಹೆಸರು ಬ್ರಹ್ಮಪುತ್ರ. ಮುಂದೆ [[ಬಾಂಗ್ಲಾದೇಶ|ಬಾಂಗ್ಲಾದೇಶವನ್ನು]] ಪ್ರವೇಶಿಸುವ ಈ ಮಹಾನದಿ ಅಲ್ಲಿ ಜಮುನಾ ಎಂಬ ಹೆಸರಿನಿಂದ ಗುರುತಿಸಲ್ಪಡುವುದು. ಬಾಂಗ್ಲಾದೇಶದ ಸರಿಸುಮಾರು ಮಧ್ಯಭಾಗದಲ್ಲಿ ಈ ನದಿಯು [[ಗಂಗಾ ನದಿ|ಗಂಗಾ ನದಿಯನ್ನು]] ( ಬಾಂಗ್ಲಾದೇಶದಲ್ಲಿ ಗಂಗಾ ನದಿಗೆ ಪದ್ಮಾ ಎಂಬ ಹೆಸರು) ಕೂಡಿಕೊಳ್ಳುವುದು. ಈ ಸಂಗಮವು ಆ ಪ್ರದೇಶದಲ್ಲಿ ಭಾರೀ ವಿಸ್ತಾರದ [[ಮುಖಜಭೂಮಿ|ಮುಖಜಭೂಮಿಯನ್ನು]] ಸೃಷ್ಟಿಸಿದೆ.
*ಸುಮಾರು ೧೮೦೦ ಮೈಲಿ (೨೯೦೦ ಕಿ.ಮೀ.) ಉದ್ದನಾದ ಈ ನದಿಯು [[ಕೃಷಿ]] ಮತ್ತು [[ಒಳನಾಡ ನೌಕಾಯಾನ|ಒಳನಾಡ ನೌಕಾಯಾನಕ್ಕೆ]] ಮುಖ್ಯ ಆಧಾರ. ೧೮೮೪ ರವರೆಗೆ ಈ ನದಿಯ ಭಾರತದ ಹೊರಗಿನ ಹರಿವಿನ ಪಾತ್ರವು ತಿಳಿದಿರಲಿಲ್ಲ. ಈ ನದಿಯನ್ನು ಟ್ಸಾಂಗ್ಪೋ-ಬ್ರಹ್ಮಪುತ್ರ ಎಂದು ಸಹ ಕರೆಯಲಾಗುತ್ತದೆ. ಭಾರತ ಮತ್ತು ಬಾಂಗ್ಲಾದೇಶದ ಹೆಚ್ಚಿನ ನದಿಗಳಿಗೆ ಸ್ತ್ರೀ ನಾಮಧೇಯಗಳಿದ್ದರೆ ಈ ನದಿಗೆ ಮಾತ್ರ ಪುರುಷ ನಾಮಧೇಯ. [[ಸಂಸ್ಕೃತ]] ಭಾಷೆಯಲ್ಲಿ ಬ್ರಹ್ಮಪುತ್ರ ಎಂದರೆ ಬ್ರಹ್ಮನ ಮಗ.
*ಬ್ರಹ್ಮಪುತ್ರ ನದಿಯ ಹೆಚ್ಚಿನ ಭಾಗದಲ್ಲಿ ನೌಕಾಯಾನ ಸಾಧ್ಯ. ಭಾರತದಲ್ಲಿ ಬ್ರಹ್ಮಪುತ್ರ ಒಂದು [[ಪವಿತ್ರ ನದಿ|ಪವಿತ್ರ ನದಿಯಾಗಿ]] ಮಾನ್ಯತೆ ಪಡೆದಿದೆ. [[ಹಿಮಾಲಯ|ಹಿಮಾಲಯದಲ್ಲಿ]] ಹಿಮ ಕರಗುವ ಕಾಲದಲ್ಲಿ ಬ್ರಹ್ಮಪುತ್ರ ನದಿಯಲ್ಲಿ ಭಾರೀ ಪ್ರಮಾಣದ ಪ್ರವಾಹ ಉಂಟಾಗುತ್ತದೆ. ಈ ವಿದ್ಯಮಾನ ಸಾಮಾನ್ಯ. ಅಲ್ಲದೇ ಕೆಲವೊಮ್ಮೆ ಈ ನದಿಯಲ್ಲಿ ಪ್ರಳಯಸದೃಶ ಅಲೆಗಳು ಸಹ ಏಳುವುದುಂಟು. ವಿಶ್ವದ ಕೆಲವೇ ಮಹಾನದಿಗಳಲ್ಲಿ ಇಂತಹ ವಿದ್ಯಮಾನ ಘಟಿಸುತ್ತದೆ.ಈ ನದಿ ಗೆ ದೇಶದ ಅತ್ಯಂತ ಉದ್ದದ ರೈಲು ಮತ್ತು ರಸ್ತೆಯನ್ನುರಸ್ತೆ ಸೇತುವೆಯನ್ನು ದಿನಾಂಕ 25.12.2018 ರಂದು ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಇದರ ಉದ್ದ 4.9 ಇದರ ವೆಚ್ಚ 5900 ಕೋಟೆ. ಇದನ್ನು 1997 ರಲ್ಲಿ ದೇವೇಗೌಡರು ಪ್ರಧಾನಿ ಆಗಿದ್ದಾಗ ಅಡಿಗಲ್ಲು ಹಾಕಲಾಗಿತ್ತು.
 
==ನದಿಯ ಹರಿವಿನ ಪಾತ್ರ==
"https://kn.wikipedia.org/wiki/ಬ್ರಹ್ಮಪುತ್ರ" ಇಂದ ಪಡೆಯಲ್ಪಟ್ಟಿದೆ