ಆಲಮಟ್ಟಿ ಆಣೆಕಟ್ಟು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯೩ ನೇ ಸಾಲು:
*ಆಂಧ್ರ ಪ್ರದೇಶವು, ಆಂದ್ರ ಮತ್ತು ತೆಲಂಗಾಣಾ ಎಂದು ವಿಭಝಿತವಾದ ಮೇಲೆ ಕೃಷ್ಣಾನದಿನೀರು ಹಂಚಿಕೆ ಸಮಸ್ಯೆ ಎದುರಾಗಿ ಕೃಷ್ಣಾ ನದಿ ನ್ಯಾಯಾಧಿಕರಣದಮುಂದೆ ತೆಂಗಾಣಾ ಆಂದ್ರ ಗಳ ನೀರಿನ ಹಂಚಿಕೆಯ ಅರ್ಜಿ ವಿಚಾರಣೆಗೆ ಬಂದಿತ್ತು. ಕೃಷ್ಣಾನದಿ ನೀರನ್ನು ಮರು ಹಂಚಿಕೆ ಮಾಡಬೇಕು ಎಂದು ತೆಲಂಗಾಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಗಿದಿದ್ದು, ಯೋಜನಾವಾರು ನೀರು ಹಂಚಿಕೆ ಸಾಧ್ಯವಿಲ್ಲ ಎಂದು ಕೃಷ್ಣಾ ನದಿ ನ್ಯಾಯಾಧಿಕರಣ ಮಹತ್ವದ ತೀರ್ಪು ನೀಡಿದೆ. ಕೃಷ್ಣಾ ನದಿ ನೀರನ್ನು ಮರುಹಂಚಿಕೆ ಮಾಡಬೇಕು. ಕೃಷ್ಣಾ ನದಿ ನೀರಿನ ಬಗ್ಗೆ ಮತ್ತೆ ಪ್ರಾರಂಭದಿಂದಲೇ ವಿಚಾರಣೆ ನಡೆಸಬೇಕು ಎಂದು ತೆಲಂಗಾಣ ಸರ್ಕಾರ ಸುಪ್ರೀಂಕೋರ್ಟ್‌ ಹಾಗೂ ನ್ಯಾಯಾಧಿಕರಣದ ಮೊರೆ ಹೋಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬೃಜೇಶ್‌ ಕುಮಾರ್‌ ನೇತೃತ್ವದ ನ್ಯಾಯಾಧಿಕರಣವು ಆಂಧ್ರಪ್ರದೇಶಕ್ಕೆ ನೀಡಲಾಗಿರುವ ನೀರನ್ನೇ ತೆಲಂಗಾಣವು ಹಂಚಿಕೊಳ್ಳಬೇಕು ಎಂದು ತೀರ್ಪು ನೀಡಿದ್ದು ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ಮಾತ್ರ ನೀರು ಹಂಚಿಕೆ ಸಾಧ್ಯ ಎಂದು ಹೇಳಿದೆ.
*ಕೃಷ್ಣಾ ನ್ಯಾಯಾಧಿಕರಣವು 2010ರಲ್ಲಿ ಅಂತಿಮ ಐ ತೀರ್ಪು ಮತ್ತು 2013ರ ಸ್ಪಷ್ಟತಾ ತೀರ್ಪುಗಳ ಮೂಲಕ ಕೃಷ್ಣಾ ಕೊಳ್ಳದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿತ್ತು. ಇದರನ್ವಯ ಮಹಾರಾಷ್ಟ್ರಕ್ಕೆ 666 ಟಿಎಂಸಿ, ಕರ್ನಾಟಕಕ್ಕೆ 907 ಟಿಎಂಸಿ ಮತ್ತು ಆಂಧ್ರಪ್ರದೇಶಕ್ಕೆ 1005 ಟಿಎಂಸಿ ನೀರನ್ನು ಹಂಚಿಕೆಯಾಗಿದೆ. ಆದರೆ ಆಂಧ್ರಪ್ರದೇಶ ಪುನರ್‌ ರಚನೆ ಕಾಯ್ದೆ-2014ರ ಅಡಿಯಲ್ಲಿ ಆಂಧ್ರಪ್ರದೇಶ ವಿಭಜನೆಗೊಂಡು ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ವಿಂಗಡಣೆಯಾದ ಕಾರಣ ಕೃಷ್ಣಾ ನದಿ ನೀರನ್ನು ಮರುಹಂಚಿಕೆ ಮಾಡಬೇಕೆಂದು ತೆಲಂಗಾಣ ಕೋರಿತ್ತು, ಈ ಕೋರಿಕೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ವಿರೋಧ ಸೂಚಿಸಿತ್ತು.<ref>[http://www.prajavani.net/news/article/2016/10/19/446045.html ಆಂಧ್ರಪ್ರದೇಶದ ನೀರನ್ನೇ ತೆಲಂಗಾಣ ಹಂಚಿಕೊಳ್ಳಬೇಕು;19 Oct, 2016]</ref>
==ನಿರಾಶ್ರತರ ಸಮಸ್ಯೆ==
*ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆಯ ಕುಟುಂಬಗಳ ಪೈಕಿ ಐದರಿಂದ ಆರು ಸಾವಿರ ಜನರಿಗೆ ಎಡೆಹಳ್ಳಿಯಲ್ಲಿ ಪುನರ್‌ವಸತಿ ಕಲ್ಪಿಸಲಾಗಿದೆ. ಯೋಜನೆಯ ಮೊದಲ ಹಂತದಲ್ಲಿ ಪರಿಹಾರ ಪಡೆದ ಬೀಳಗಿ ತಾಲ್ಲೂಕಿನ ಈ ಹಳ್ಳಿಯ ಎಷ್ಟೋ ಮಂದಿಗೆ ಈಗಲೂ ಹಕ್ಕುಪತ್ರಸಿಕ್ಕಿಲ್ಲ. ಹದಿನೆಂಟು ವರ್ಷಗಳ ಹಿಂದೆ ಪಡಿತರ ಚೀಟಿಯಲ್ಲಿ ಎಷ್ಟು ಜನರ ಹೆಸರಿತ್ತೋ ಅಷ್ಟೇ ಜನ ಸಂತ್ರಸ್ತರ ಪಟ್ಟಿಯಲ್ಲಿದೆ. ಅವರು ಆಗ ಬಾಲಕರಾಗಿದ್ದವರು ಈಗ ಯುವಕರಾಗಿ, ಸಂಸಾರಗಳನ್ನು ಪಡೆದಿದ್ದಾರೆ. ಅವರ ಸಂಸಾರದಲ್ಲಿ ನಂತರ ಹುಟ್ಟಿದ ಎಷ್ಟೋ ಸದಸ್ಯರ ಹೆಸರು ಪಟ್ಟಿಯಲ್ಲಿ ಇಲ್ಲ. ಹಿಂದೆ ವಿಶಾಲ ಮನೆಗಳಲ್ಲಿ ಇದ್ದವರು ಈಗ ತಗಡಿನ ಪುನರ್ವಸತಿ ಮನೆಗಳಲ್ಲಿ ಇದ್ದಾರೆ.ಆದರೆ, ಮುಳುಗಡೆಯ ಕಷ್ಟ ಅವರಿಗೆಲ್ಲಅ ತಟ್ಟಿದೆ ಎನ್ನುತ್ತಾರೆ ಕೃಷ್ಣಾ ಮೇಲ್ದಂಡೆ ಸಂತ್ರಸ್ತರ ಹೋರಾಟದ ಸಮಿತಿ ಅಧ್ಯಕ್ಷ ಅದೃಶ್ಯಪ್ಪ, <ref>[https://www.prajavani.net/stories/stateregional/olanota-596542.html ನೀರಿಗೆ ಜಾಗ ಬಿಟ್ಟವರಿಗೆ ಕುಡಿವ ನೀರಿಲ್ಲ!;ನೀರಿಗೆ ಜಾಗ ಬಿಟ್ಟವರಿಗೆ ಕುಡಿವ ನೀರಿಲ್ಲ!;ಸದಾಶಿವ ಎಂ.ಎಸ್: 23 ಡಿಸೆಂಬರ್ 2018]</ref><ref>[https://www.prajavani.net/stories/stateregional/life-street-596540.html ಈ ಹೊತ್ತಿಗೂ ಇವರೆಲ್ಲ ಶಾಪಗ್ರಸ್ತರು!: ಬೀದಿಗೆ ಬಿದ್ದ ಬದುಕು...ವಿಶಾಖ ಎನ್‌.: 23 ಡಿಸೆಂಬರ್ 2018,]</ref>
 
==ಆಲಮಟ್ಟಿ ಉದ್ಯಾನವನದ ಚಿತ್ರಗಳು==
"https://kn.wikipedia.org/wiki/ಆಲಮಟ್ಟಿ_ಆಣೆಕಟ್ಟು" ಇಂದ ಪಡೆಯಲ್ಪಟ್ಟಿದೆ