ಯೂಕ್ಲಿಡ್ ಒಬ್ಬ ಮಹಾನ್ ಗಣಿತಜ್ಞನಾಗಿದ್ದು ಅವರನ್ನು ಜ್ಯಾಮಿತಿಯ [[ಪಿತಾಮಹ]] ಎಂದು ಉಲ್ಲೇಖಿಸಲ್ಪಡಲಾಗುತ್ತದೆ. '[[ರೇಖಾಗಣಿತ|ರೇಖಾಗಣಿತದ]] ತಂದೆ' ಎಂದು ಹೆಸರುವಾಸಿಯಾದ ಯೂಕ್ಲಿಡ್ ರೇಖಾಗಣಿತ ಕಲಿಯಲು ಯಾವುದೇ ರಾಜಮಾರ್ಗವಿಲ್ಲ ಎಂಬುದಾಗಿ ಹೇಳಿದ್ದಾರೆ. 'ಯೂಕ್ಲಿಡ್' ಎನ್ನುವುದು ಗ್ರೀಕ್ ಹೆಸರಿನ ಆಂಗ್ಲೀಕೃತ ಆವೃತ್ತಿಯಾಗಿದ್ದು ಇದರ ಅರ್ಥ ಪ್ರಖ್ಯಾತ ಅಥವಾ ಖ್ಯಾತಿ ಎಂಬುದಾಗಿದೆ.