ಅನಾಮಿಕ ಸದಸ್ಯ
→ಉಲ್ಲೇಖ
No edit summary |
(→ಉಲ್ಲೇಖ) ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit |
||
ಬುದ್ಧನು 'ಬೌದ್ಧ ಧರ್ಮದ ಸ್ಥಾಪಕ' ಎನ್ನುವುದು ಜನಜನಿತವಾಗಿರುವ ಸಂಗತಿಯಾದರೂ ಅವನು ಬೋಧಿಸಿದ್ದು ದುಃಖದಿಂದ ಹೊರಬರುವ ಮಾರ್ಗವನ್ನು ಮಾತ್ರ. ಇದನ್ನೆ ಅವನು [[ಪಾಲಿ ಭಾಷೆ |ಪಾಲಿ ಭಾಷೆಯಲ್ಲಿ]] "[[ಧಮ್ಮ]]" ಎಂದು ಕರೆದನು. ತಾನು ಬೊಧಿಸುತ್ತಿರುವುದರಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡವರಲ್ಲಿ ತಾನು ಮೊದಲನೆಯವನೂ ಅಲ್ಲ, ಕೊನೆಯವನೂ ಅಲ್ಲವೆಂದು ಸಾರಿದನು. ಯಾರು ಬೇಕಾದರೂ ಈ ಮಾರ್ಗವನ್ನು ಅನುಸರಿಸಿ ದುಃಖದಿಂದ [[ಮುಕ್ತ |ಮುಕ್ತರಾಗಬಹುದು]] ಮತ್ತು ತನ್ನಂತೆ [[ಎಚ್ಚರದ ಸ್ಥಿತಿ |ಎಚ್ಚರದ ಸ್ಥಿತಿಯನ್ನು]] ಹೊಂದಬಹುದು. ಆದರೆ ಈ [[ಸಿದ್ಧಿ |ಸಿದ್ಧಿಗೆ]] ಸ್ವಂತ ಪ್ರಯತ್ನ, [[ಸಾಧನೆ]] ಮಾತ್ರ ಕಾರಣ ಎಂದು ಹೇಳಿದ. ಸತತ ಎಚ್ಚರದ ಸ್ಥಿತಿಯನ್ನು ಸಾಧಿಸಿದ ಯಾರನ್ನೂ ಬೇಕಾದರೂ ಬುದ್ಧನೆಂದು ಕರೆಯಬಹುದು. ತಾನು ಅಂತಹ ಅರಿವಿನ ಸ್ಥಿತಿಯಲ್ಲಿರುವುದರಿಂದ ತನ್ನನ್ನು ಬುದ್ಧನೆಂದು ಸಂಬೋಧಿಸಲು ಅವನು ತನ್ನ [[ಶಿಷ್ಯ |ಶಿಷ್ಯರಿಗೆ]] ಸೂಚಿಸಿದ. ಬುದ್ಧನ ಮೊದಲ ಶಿಷ್ಯ ಆನಂದ. ಬುದ್ಧ ಎಂದರೆ [[ನಿದ್ದೆ|ನಿದ್ದೆಯಿಂದ]] ಎದ್ದವನು, ಜಾಗೃತನಾದವ, ಜ್ಞಾನಿ, ವಿಕಸಿತ, ಎಲ್ಲವನ್ನು ತಿಳಿದವನು ಎಂದರ್ಥ. ಅವನು ಎಲ್ಲರಿಗೂ ಸಂಜೀವಿನಿಯಂಥ ಮಾಹಿತಿ ನೀಡಿದ ಮಹಾತ್ಮ. "ಆಸೆಯೇ ದುಃಖಕ್ಕೆ ಮೂಲ" ಎಂಬುದು ಅವನ ಪ್ರಸಿದ್ಧ ತತ್ವ.
|