"ವಿಕಿಪೀಡಿಯ:ಚುಟುಕು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(Reverted to revision 121858 by Nayvik; Reverting vandalism. (TW))
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
Boldsky Kannada
'''ಚುಟುಕು ಬರಹ'''
ಬೋಲ್ಡ್‌ಸ್ಕೈ » ಕನ್ನಡ » ಆರೋಗ್ಯಭಾಗ್ಯ » ದೈಹಿಕ ಸ್ವಾಸ್ಥ್ಯ
ಚಿಕೂನ್ ಗುನ್ಯಾ ಜ್ವರ- ಪ್ರತಿಯೊಬ್ಬರೂ ತಿಳಿದಿರಬೇಕಾದ ಸಂಗತಿಗಳು
By Arshad
Updated: Sat, Jul 1, 2017, 14:36 [IST]
 
ಸೊಳ್ಳೆಕಾಟದಿಂದ ಎದುರಾಗುವ ರೋಗಗಳಲ್ಲಿ ಪ್ರಮುಖವಾದವು ಎಂದರೆ ಮಲೇರಿಯಾ, ಡೆಂಗಿ (ಡೆಂಗ್ಯೂ ಎಂಬ ಉಚ್ಛಾರ ತಪ್ಪು ಎಂದು ವೈದ್ಯರು ತಿಳಿಸುತ್ತಾರೆ), ಹಳದಿಜ್ವರ, ಫಿಲೇರಿಯಾಸಿಸ್, ಝಿಕಾ ಜ್ವರ ಮತ್ತು ಚಿಕೂನ್ ಗುನ್ಯಾ . ಇದರಲ್ಲಿ ಮಲೇರಿಯಾ ಬರಲು ಅನಾಫೆಲಿಸ್ ಸೊಳ್ಳೆ ಕಾರಣವಾದರೆ ಈ ಕಾಯಿಲೆ ಬಂದರೆ ಇಪ್ಪತ್ತನಾಲ್ಕು ಗಂಟೆಯಲ್ಲಿ ಸಾವು ಖಚಿತ!
 
 
ಚಿಕೂನ್ ಗುನ್ಯಾ ಬರಲಿಕ್ಕೆ ಏಡಿಸ್ ಈಜಿಪ್ತಿ ಎಂಬ ಪಟ್ಟೆ ಪಟ್ಟೆಯ ಸೊಳ್ಳೆ ಕಾರಣವಾಗಿದೆ. ಒಬ್ಬರಿಂದ ಇನ್ನೊಬ್ಬರಿಗೆ ಸೊಳ್ಳೆ ಕಡಿತದಿಂದ ಹರಡುವ ಈ ರೋಗ ಸೊಳ್ಳೆ ಕಚ್ಚಿದ ಮೂರನೆಯ ದಿನದಿಂದ ಏಳನೆಯ ದಿನದವರೆಗೆ ಉಲ್ಬಣಾವಸ್ಥೆ ಪಡೆಯುತ್ತದೆ. ತೀವ್ರತರದ ಜ್ವರ ಮತ್ತು ಮೊಣಕಾಲಿನಲ್ಲಿ ಅತಿ ಹೆಚ್ಚು ಮತ್ತು ಇತರ ಮೂಳೆಸಂದುಗಳಲ್ಲಿ ಕೊಂಚ ಕಡಿಮೆ ನೋವು ಇದರ ಲಕ್ಷಣಗಳಾಗಿವೆ. ಆದರೆ ಬರೆಯ ಜ್ವರ ಇದ್ದರೆ ಇದು ಚಿಕೂನ್ ಗುನ್ಯಾ ಎಂದೇ ಹೇಳಲಿಕ್ಕೆ ಸಾಧ್ಯವಿಲ್ಲ. ಈ ಜ್ವರದ ಇನ್ನಿತರ ಲಕ್ಷಣಗಳನ್ನು ಮುಂದೆ ಓದಿ....
 
 
ಅತಿಯಾದ ತಲೆನೋವು ಮತ್ತು ಸ್ನಾಯುಸೆಳೆತ
ಚಿಕೂನ್ ಗುನ್ಯ ಜ್ವರಪೀಡಿಯ ವ್ಯಕ್ತಿ ಅತಿ ಹೆಚ್ಚಿನ ತಲೆನೋವು ಮತ್ತು ಸ್ನಾಯುಗಳ ನೋವು ಮತ್ತು ಸೆಳೆತವನ್ನು ಅನುಭವಿಸುತ್ತಾನೆ. ತಲೆನೋವು ಸಾಮಾನ್ಯವಾಗಿ ಮಧ್ಯಭಾಗವನ್ನು ಬಿಟ್ಟು ಬದಿಗಳಲ್ಲಿರುತ್ತದೆ. ಕಾಲುಗಳು ಮತ್ತು ಪಾದಗಳ ಗಂಟುಗಳು ವಿಪರೀತವಾಗಿ ನೋಯುತ್ತವೆ. ಸೊಂಟ ಮತ್ತು ಮೀನಖಂಡದ ಸ್ನಾಯುಗಳೂ ನೋಯುತ್ತವೆ. ಮೊಣಕಾಲ ಗಂಟು ಸಹಾ ವಿಪರೀತ ನೋವು ನೀಡಿ ಸುಮಾರು ವಾರಗಳವರೆಗೆ ಉಳಿಯುತ್ತದೆ. ಮೊಣಕಾಲ ಗಂಟು ಒಂದು ವರ್ಷದವರೆಗೂ ಉಳಿದಿರುವುದು ಕೆಲವು ಸಂದರ್ಭಗಳಲ್ಲಿ ಕಂಡುಬಂದಿದೆ.
 
 
ಅತಿಯಾದ ಜ್ವರ
ಚಿಕೂನ್ ಗುನ್ಯ ಜ್ವರದ ಇನ್ನೊಂದು ಲಕ್ಷಣವೆಂದರೆ ಅತಿಯಾದ ಜ್ವರ. ಸಾಮಾನ್ಯವಾಗಿ 102 ರಿಂದ 104 °F (40 °C) ವರೆಗೆ ದೇಹ ಕಾಯುತ್ತದೆ. ಈ ಜ್ವರ ಸಾಮಾನ್ಯವಾಗಿ ಒಂದು ವಾರದವರೆಗೆ ಇರುತ್ತದೆ.
ವಿಪರೀತ ಸುಸ್ತು, ವಾಕರಿಕೆ
ಚಿಕೂನ್ ಗುನ್ಯ ಪೀಡಿತ ವ್ಯಕ್ತಿಗಳು ವಿಪರೀತ ಸುಸ್ತು ಅನುಭವಿಸುತ್ತಾರೆ ಹಾಗೂ ಇಡಿಯ ದಿನ ವಾಕರಿಕೆಯನ್ನೂ ಅನುಭವಿಸುತ್ತಾರೆ.
 
 
ಚರ್ಮ ಕೆಂಪಗಾಗುತ್ತದೆ
ಚರ್ಮದಲ್ಲಿ ಅಲ್ಲಲ್ಲಿ ಕೊಂಚ ಭಾಗದಲ್ಲಿ ನಾಣ್ಯದಷ್ಟು ಅಗಲದ ವೃತ್ತಾಕಾರದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳೆದ್ದು ತುರಿಕೆ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಹೊಟ್ಟೆ, ಬೆನ್ನು, ತೊಡೆ, ಪಾದ ಮತ್ತು ಕೈಗಳ ಬಳಿ ಚರ್ಮ ಕೆಂಪಗಾಗುವುದು ಕಂಡುಬರುತ್ತದೆ. ಬಳಿಕ ಇದು ಮುಖ, ಹಸ್ತ, ಪಾದಗಳ ಕೆಳಗೂ ವ್ಯಾಪಿಸಬಹುದು.
 
 
ಚಿಕೂನ್ ಗುನ್ಯ ಬರದಂತೆ ಯಾವ ಕ್ರಮ ಕೈಗೊಳ್ಳಬೇಕು?
ರೋಗ ಬಂದ ಬಳಿಕ ಮದ್ದು ತೆಗೆದುಕೊಳ್ಳುವ ಬದಲು ರೋಗ ಬರದಂತೆ ಅಥವಾ ಹರಡದಂತೆ ಮುಂಜಾಕರೂಕತೆ ವಹಿಸುವುದೇ ಜಾಣತನದ ಕ್ರಮ. ನಿಮ್ಮ ಮನೆಯ ಆಸುಪಾಸಿನಲ್ಲಿ ಪಟ್ಟೆಪಟ್ಟೆ ಸೊಳ್ಳೆ ಕಂಡುಬಂದರೆ ತಕ್ಷಣ ಸುತ್ತಮುತ್ತಲಿನವರು ಒಟ್ಟಾಗಿ ಸೊಳ್ಳೆಯನ್ನು ನಿರ್ಮೂಲನೆ ಮಾಡಲು ಶ್ರಮ ವಹಿಸುವ ಮೂಲಕ ಇನ್ನಷ್ಟು ಜ್ವರದ ಪ್ರಕರಣಗಳು ಬರದಂತೆ ತಡೆಯಬಹುದು. ಮನೆಯಲ್ಲಿ ಕೆಳಗಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೋಗವನ್ನು ನಿಯಂತ್ರಿಸಲು ನೆರವಾಗಬಹುದು:
 
 
ಕಿಟಕಿ ಬಾಗಿಲುಗಳನ್ನು ಮುಚ್ಚಿ
ಪಟ್ಟೆಪಟ್ಟೆಯ ಈ ಸೊಳ್ಳೆಗೆ ದಿನ ರಾತ್ರಿ ಎಂಬ ಬೇಧವಿಲ್ಲ. ಇಡಿಯ ದಿನ ಯಾವಾಗ ಬೇಕಾದರೂ ಕಚ್ಚಬಹುದು. ಆದ್ದರಿಂದ ಒಂದೇ ಒಂದು ಪಟ್ಟೆಪಟ್ಟೆಯ ಸೊಳ್ಳೆ ಕಂಡುಬಂದರೂ ತಕ್ಷಣ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ, ತೆರೆದ ಕಿಟಕಿಗಳಿಗೆ ಸೊಳ್ಳೆಪರದೆ, ಮಕ್ಕಳನ್ನು ಸೊಳ್ಳೆ ಪರದೆಯ ಅಡಿಯಲ್ಲಿ ಮಲಗಿಸುವುದು ಮೊದಲಾದ ಕ್ರಮಗಳನ್ನು ಕೈಗೊಳ್ಳಿ
ಆದಷ್ಟು ಮುನ್ನೆಚ್ಚರಿಕೆ ಕ್ರಮವಹಿಸಿ....
ಮನೆಯಿಂದ ಹೊರಹೋಗುವ ಸಂದರ್ಭದಲ್ಲಿ ಸೊಳ್ಳೆಗಳನ್ನು ವಿಕರ್ಷಿಸುವ ಕ್ರೀಮುಗಳನ್ನು ಹಚ್ಚಿ ಹೊರಡಿ.
 
 
ಮನೆಯ ಸುತ್ತ-ಮುತ್ತ ಸ್ವಚ್ಛವಾಗಿಡಿ...
ಮನೆಯ ಸುತ್ತಮುತ್ತ ಇರುವ ನೀರು ನಿಲ್ಲಬಹುದಾದ ವಸ್ತುಗಳನ್ನು ನಿವಾರಿಸಿ ಅಥವಾ ಉಲ್ಟಾವಾಗಿಸಿ ನೀರು ನಿಲ್ಲದಂತೆ ಮಾಡಿ. ಎಷ್ಟೇ ಕ್ಷುಲ್ಲುಕ ವಸ್ತುವೆನಿಸಿದರೂ ಬಿಡದೇ ಪ್ರತಿಯೊಂದನ್ನೂ ಗಮನಿಸಿ. ಬಕೆಟ್ಟು, ಚಿಕ್ಕ ಮಗ್, ಎಳನೀರಿನ ಅರ್ಧ ಭಾಗ, ಎಸೆದ ಟೈರು ಮೊದಲಾದವುಗಳಲ್ಲಿ ನೀರು ನಿಂತಿದ್ದರೆ ಇಲ್ಲಿ ಸೊಳ್ಳೆ ತಕ್ಷಣ ಮೊಟ್ಟೆಯಿಟ್ಟುಬಿಡುತ್ತದೆ.ಮನೆಯಲ್ಲಿಯೇ ಬೆಳೆಸಬಹುದಾದ ಸೊಳ್ಳೆ ನಿವಾರಕ ಸಸ್ಯಗಳು!
 
 
ಸ್ವಯಂಸೇವಕರಾಗಿ....
ನಿಮ್ಮ ನೆರೆಹೊರೆಯ ಮನೆಯಲ್ಲಿಯೂ ಕೊಂಚ ಗಮನಿಸಿ. ಈ ಕೆಲಸ ಮಾಡಲು ಸಾಧ್ಯವಾಗದ ಮನೆಗಳಲ್ಲಿ ಸುತ್ತಮುತ್ತಲ ಮನೆಗಳ ಜನರೇ ಸ್ವಯಂಸೇವಕರಾಗಿ ಬಂದು ಒಟ್ಟಾಗಿ ಈ ಕಾರ್ಯ ನೆರವೇರಿಸಿದರೆ ಇನ್ನೂ ಉತ್ತಮ, ಸಾಮಾಜಿಕ ಬಾಂಧವ್ಯವೂ ಉತ್ತಮಗೊಳ್ಳುತ್ತದೆ.
 
ಚುಟುಕು ಎಂದು ಮಾರ್ಕ್ ಮಾಡಿರುವ ಲೇಖನಗಳು ಸಂಕ್ಷಿಪ್ತವಾಗಿ ಬರೆದ ಅಥವಾ ಚುಟುಕಾಗಿರಿಸಿದ ಬರಹಗಳು.
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/884765" ಇಂದ ಪಡೆಯಲ್ಪಟ್ಟಿದೆ