"ಅಂಕೋಲಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಾರಿಗೆ ಸಂಪರ್ಕ
ಚು
(ಸಾರಿಗೆ ಸಂಪರ್ಕ)
== ಆಹಾರ ==
ಸಾಮಾನ್ಯವಾಗಿ ಬೇಯಿಸಿದ ಬಿಳಿ ಅನ್ನ (ಕುಚಿಗೆ/ಬೆಣತಿಗೆ) ಮೀನು, ಮತ್ತು ಬಸಳೆ ಸೂಪ್ಪಿನ ಹುಳಗಾ (ಒಂದು ತರಕಾರಿ ಸಾಂಬಾರ್) ಮತ್ತು ಕೋಳಿ ಸಾರು ಸ್ಥಳೀಯವಾಗಿ ಕೋಳಿ ಆಸಿ (ಚಿಕನ್ ಕರಿ) ಮೀನು ಗಳನ್ನು ಸಾಕಷ್ಟು ಜಾಸ್ತಿ ಪ್ರಮಾಣದಲ್ಲಿ ಸೇವಿಸುತ್ತಾರೆ. ಮತ್ತು ವಿಶೇಷವಾಗಿ ಕೂಟ್ಟಿರೊಟ್ಟಿ ತಯಾರಿಸುತ್ತಾರೆ. ಇದನ್ನು ಹಲಸಿನ ಮರದ ಎಲೆಗಳನ್ನು ಬಿದಿರಿನ ಕಡ್ಡಿಗಳಿಂದ ನೆಣೆದು ಶಂಕುವಿನ ಆಕೃತಿಯ ಒಂದು ಪೂಟ್ಟಣ ತಯಾರು ಮಾಡುತ್ತಾರೆ. ಇದಲ್ಲದೆ ಮೊಗ್ಗೆಕಾಯಿ ಕಡುಬು, ತಯಾರಿಸುತ್ತಾರೆ. ಇಲ್ಲಿನ ವಿಶೇಷ ಸಿಹಿ ತಿಂಡಿ ಕಾಜಮೀಜಿ.
 
 
 
<br />
 
== ಸಾರಿಗೆ ಸಂಪರ್ಕ ==
ಅಂಕೋಲಾದ ರಸ್ತೆ ಸಾರಿಗೆ ವ್ಯವಸ್ಥೆಯನ್ನು NWKRTC (ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ನಿರ್ವಹಿಸುತ್ತದೆ.ರಸ್ತೆ ಸಾರಿಗೆ ಇಲ್ಲಿನ ಪ್ರಮುಖ ಸಂಪರ್ಕ ಸಾಧನವಾಗಿದೆ. ಅಂಕೋಲಾ ಮೊದಲು ರಾಷ್ಟ್ರೀಯ ಹೆದ್ದಾರಿ 17 ಆಗಿತ್ತು, ಆದರೆ ಈಗ ಈ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ 66 ಆಗಿ ಪರಿವರ್ತನೆ ಆಗಿದ್ದು ಅಂಕೋಲಾದ ಸಾರಿಗೆ ಸಂಪರ್ಕ ವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಭರವಸೆಯನ್ನು ವ್ಯಕ್ತಪಡಿಸಿದೆ. ಅಂಕೋಲಾ ರೈಲ್ವೇ ನಿಲ್ದಾಣವು ಅಂಕೋಲಾ ಪಟಣ್ಣದ ಹೊರಭಾಗದಲ್ಲಿ ಸುಮಾರು 3 ಕಿಲೋಮೀಟರ್ ದೂರದಲ್ಲಿದೆ. ಮತ್ತು ಶಿಘ್ರವೆ ಅಂಕೋಲಾದ ಅಲಗೇರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುವ ಭರವಸೆ ಇದೆ.
 
ರಸ್ತೆ ರೈಲ್ವೇ ಸಂಪರ್ಕ
 
ಬಸ್ ಮತ್ತು ರೈಲ್ವೇ ಸಾರಿಗೆಯ ಮೂಲಕ ಮಂಗಳೂರು ಮತ್ತು ಗೋವಾ ದಂತಹ ದೂಡ್ಡ ನಗರಗಳಿಗೆ ಸಂಪರ್ಕವನ್ನು ಹೊಂದಿದೆ.ಇದರಲ್ಲಿ ರೈಲ್ವೇ ಸಂಪರ್ಕ ನಿಯಮಿತವಾಗಿದೆ. ರಾಷ್ಟ್ರೀಯ ಹೆದ್ದಾರಿ66 (ಮೊದಲು ರಾಷ್ಟ್ರೀಯ ಹೆದ್ದಾರಿ17) ಮೂಲಕ ಬೆಂಗಳೂರು ನೊಂದಿಗೆ ಸಂಪರ್ಕ ಹೊಂದಿದ್ದೆ.
 
ಮತ್ತು ರಾಷ್ಟ್ರೀಯ ಹೆದ್ದಾರಿ52 ಲಾ ಮುಖಾಂತರ ಹುಬ್ಬಳ್ಳಿ ಯೊಂದಿಗೆ ಸಂರ್ಪಕ ಹೊಂದಿದೆ. ಪ್ರತಿ ಅರ್ಧ ಗಂಟೆಗೊಂದು ಬಸ್ಸುಗಳು ಅಂಕೋಲಾ ದಿಂದ ಹುಬ್ಬಳ್ಳಿ ಗೆ ಸಾಗುತ್ತಿರುತ್ತವೆ. ಮಂಗಳೂರು.ಬೆಂಗಳೂರಿಗೆ ಹೋಲಿಸಿದ್ದಲಿ ಹುಬ್ಬಳ್ಳಿ ಯೊಡನೆ ಅಂಕೋಲಾ ದ ಸಂರ್ಪಕ ಬಹಳ ನಿಕಟವಾಗಿದೆ. ಇದ್ದಲದೆ ಹುಬ್ಬಳ್ಳಿ ವಾಣಿಜ್ಯ ನಗರಿಯಾಗಿದು, ಅಂಕೋಲಾ ಕ್ಕೆ ಬಹಳ ಸನಿಹದಲ್ಲಿರುವದ್ದರಿಂದ ಇಲ್ಲಿನ ವ್ಯಾಪಾರಿಗಳಿಗೆ ಸರಕು ಸಾಗಾಣಿಕೆ ಮಾಡಲು ಮತ್ತು ಸರಕನ್ನು ಆಮದು ಮಾಡಿಕೊಳ್ಳಳು ಈ ರಸ್ತೆ ಸಾರಿಗೆ ಸಂಪರ್ಕ ಪ್ರಮುಖ ಸಾಧನವಾಗಿದೆ.
 
ಇದ್ದರೆ ಹುಬ್ಬಳ್ಳಿ ಅಂಕೋಲಾ ರೈಲ್ವೇ ಮಾರ್ಗ ದ ಕಾಮಗಾರಿಯನ್ನು ಹಲವು ವರ್ಷಗಳ ಹಿಂದೆಯೆ ಆರಂಭಿಸಿದ್ದರೂ ಪರಿಸರವಾದಿಗಳ ವಿರೋಧದಿಂದಾಗಿ ಕಾಮಗಾರಿ ನನೆಗುದಿಗೆ ಬಿದ್ದಿದ್ದೆ. ಮುಂದಿನ ದಿನಗಳಲ್ಲಿ ಈ ಕಾಮಗಾರಿ ಮುಂದುವರಿದರೆ ಈ ಭಾಗದ ಸಾರಿಗೆ ಸಂಪರ್ಕ ಸುಧಾರಿಸಬಹುದು.
 
ಪೊರ್ವ ದಿಕ್ಕಿನಲ್ಲಿ ರಾಷ್ಟ್ರೀಯ ಹೆದ್ದಾರಿ63 ಲಾ ಮುಖಾಂತರ ಹೈದರಾಬಾದ್ ಗೆ ಸಂರ್ಪಕ ಸಾಧಿಸಲಾಗಿದೆ.
 
ಉತ್ತರ ದಿಕ್ಕಿನಲ್ಲಿ ಕಾರವಾರ, ಗೋವಾ ರಸ್ತೆ ಮತ್ತು ರೈಲ್ವೇ ಸಂಪರ್ಕ.
 
ದಕ್ಷಿಣ ದಿಕ್ಕಿನಲ್ಲಿ ಗೋಕರ್ಣ, ಮುರ್ಡೇಶ್ವರ,ಭಟ್ಕಳ್,ಉಡುಪಿ, ಮಂಗಳೊರಿಗೆ ರಸ್ತೆ ಮತ್ತು ರೈಲ್ವೇ ಮೂಲಕ ಸಂಪರ್ಕಿಸಲಾಗಿದೆ.
 
ಪಶ್ಚಿಮ ದಿಕ್ಕಿನಲ್ಲಿ ಅರಬ್ಬಿ ಸಮುದ್ರ, ಕಡಲತೀರಗಳು, ನದಿಗಳನ್ನ ಮೂಲಕ ಒಳನಾಡು ನೀರಿನ ಸಂಚಾರವಿದೆ.ಇದ್ದಕ್ಕಾಗಿ ಸಾಂಪ್ರದಾಯಿಕ ನಾಡು ದೋಣಿಗಳನ್ನು ಮತ್ತು ಯಾಂತ್ರಿಕೃತ ದೋಣಿಗಳನ್ನು ಬಳಸಿಕೊಳ್ಳಲಾಗಿದೆ.
 
#
೭೭

edits

"https://kn.wikipedia.org/wiki/ವಿಶೇಷ:MobileDiff/882516" ಇಂದ ಪಡೆಯಲ್ಪಟ್ಟಿದೆ