ಜೀವಕೋಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಪ್ರೋಟೀನ್ ಸಂಯೋಜನೆ: ಲಿಂಕ್‌ಗಳ ತಿದ್ದುಪಡಿ
Fixed typo
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೩ ನೇ ಸಾಲು:
[[file: Structure_of_animal_cell.JPG|thumb|||| ಪ್ರಾಣಿ ಜೀವಕೋಶ ರಚನೆ]]
 
</br>ಜೀವಕೋಶ <ref group=ಟಿಪ್ಪಣಿ>ಈ ಪುಟ Cell (Biology) Wikipedia ಪುಟದ ಭಾಗಶಹ ಅನುವಾದ. https://en.wikipedia.org/wiki/Cell_(biology) </ref><ref group=ಟಿಪ್ಪಣಿ>ಇಲ್ಲಿನ ಹಲವು ತಾಂತ್ರಿಕ ಪದಗಳನ್ನು ನವಕರ್ನಾಟಕ ವಿಜ್ಞಾನ ಪದವಿವರಣ ಕೋಶ, ಪ್ರಧಾನ ಸಂಪಾದಕರು ಜಿ.ಟಿ. ನಾರಾಯಣರಾವ್, 2001 ಮೊದಲನೆಯ ಮುದ್ರಣ ಪುಸ್ತಕದಿಂದ ಎತ್ತಿಕೊಳ್ಳಲಾಗಿದೆ</ref> ಇಂದು ತಿಳಿದ ಎಲ್ಲಾ ಜೀವಿಗಳಿಗೂ ಮೂಲಭೂತ ರಾಚನಿಕ, ಕಾರ್ಯಭಾರದ ಮತ್ತು ಜೈವಿಕ ಘಟಕ. ಜೀವಕೋಶವು ತನ್ನನ್ನು ತಾನೇ ನಕಲು ಮಾಡಿಕೊಳ್ಳಬಲ್ಲ ಜೀವದ ಕನಿಷ್ಠ ಘಟಕ ಮತ್ತು ಅದನ್ನು ಜೀವಿಗಳ “ಕಟ್ಟದ“ಕಟ್ಟಡದ ಸೈಜುಗಲ್ಲು” ಎಂದು ಕರೆಯಲಾಗಿದೆ. ಜೀವಕೋಶಗಳ ಅಧ್ಯಯನವನ್ನು [[ಕೋಶ ಜೀವಶಾಸ್ತ್ರ]] ಎಂದು ಕರೆಯಲಾಗುತ್ತದೆ. ಜೀವಕೋಶ ಪದಕ್ಕೆ ಇಂಗ್ಲೀಶ್‌ನ ಸಂವಾದಿ ಪದ <i>ಸೆಲ್</i> ಲ್ಯಾಟಿನ್‌ನ <i>ಸೆಲ್ಲಾ</i> ಪದದಿಂದ ಬಂದಿದ್ದು ಅದರ ಅರ್ಥ “ಚಿಕ್ಕ ಕೋಣೆ”<ref>"Cell". Online Etymology Dictionary. Retrieved 31 December 2012</ref> ಎಂದು.
</br>ಜೀವಕೋಶದಲ್ಲಿ ಪೊರೆಯೊಳಗೆ ಸುತ್ತುವರಿದ ಜೀವರಸ (ಸೈಟೊಪ್ಲಾಸಂ) ಇರುತ್ತದೆ ಮತ್ತು ಈ ಜೀವರಸದಲ್ಲಿ [[ಪ್ರೋಟೀನ್]] ಮತ್ತು [[ನ್ಯೂಕ್ಲಿಯಿಕ್ ಆಮ್ಲ]]ಗಳಂತಹ ಜೈವಿಕ ಅಣುಗಳು ಇರುತ್ತವೆ.<ref>Cell Movements and the Shaping of the Vertebrate Body in Chapter 21 of Molecular Biology of the Cell fourth edition, edited by Bruce Alberts (2002) published by Garland Science. The Alberts text discusses how the "cellular building blocks" move to shape developing embryos. It is also common to describe small molecules such as amino acids as "molecular building blocks".</ref> ಜೀವಿಗಳನ್ನು ಏಕಕೋಶಿಗಳು ([[ಬ್ಯಾಕ್ಟೀರಿಯ]]ವನ್ನೂ ಒಳಗೊಂಡು ಏಕಕೋಶ ಜೀವಿಗಳು) ಮತ್ತು ಬಹುಕೋಶಿಗಳು (ಸಸ್ಯಗಳು ಮತ್ತು ಪ್ರಾಣಿಗಳನ್ನು ಒಳಗೊಂಡ ಒಂದಕ್ಕಿಂತ ಹೆಚ್ಚು ಜೀವಕೋಶವಿರುವ ಜೀವಿಗಳು) ಎಂದು [[ವರ್ಗೀಕರಣ|ವರ್ಗೀಕರಿಸಬಹುದು]]. ಸಸ್ಯ ಮತ್ತು ಪ್ರಾಣಿಗಳ ಜೀವಕೋಶಗಳು [[ಜೀವಸಂಕುಲ]]ದಿಂದ ಜೀವಸಂಕುಲಕ್ಕೆ ಬೇರೆ ಬೇರೆಯಾಗುತ್ತವೆ. ಮಾನವನಲ್ಲಿ ನೂರು ಲಕ್ಷ ಕೋಟಿಗೂ ಹೆಚ್ಚು ಜೀವಕೋಶಗಳಿವೆ.<ref>Alberts, p. 2.</ref> ಬಹಳಷ್ಟು ಸಸ್ಯ ಮತ್ತು ಪ್ರಾಣಿಗಳ ಜೀವಕೋಶಗಳನ್ನು [[ಸೂಕ್ಷ್ಮದರ್ಶಕ]]ದಲ್ಲಿ ಮಾತ್ರ ನೋಡಲು ಸಾಧ್ಯ, ಅವುಗಳ ಅಳತೆ ೧ ರಿಂದ ೧೦೦ [[ಮೈಕ್ರೋಮೀಟರ್]] ಅಥವಾ [[ಮೈಕ್ರೋಮೀಟರ್ |ಮೈಕ್ರಾನ್]]<ref>Campbell, Neil A.; Brad Williamson; Robin J. Heyden (2006). Biology: Exploring Life. Boston, Massachusetts: Pearson Prentice Hall. ISBN 0-13-250882-6.</ref><ref group=ಟಿಪ್ಪಣಿ>ಮಿಲ್ಲೀಮೀಟರ್‌ನ ಒಂದು ಸಾವಿರ ಭಾಗ</ref> ಇರುತ್ತದೆ.
</br>ಜೀವಕೋಶವನ್ನು ೧೬೬೫ ರಲ್ಲಿ ರಾಬರ್ಟ್ ಹುಕ್ ಕಂಡುಹಿಡಿದ ಮತ್ತು ಈ ಜೈವಿಕ ಘಟಕಗಳು ಕ್ರೈಸ್ತ ಸನ್ಯಾಸಿಗಳ ನಿವಾಸವನ್ನು ಹೋಲುತ್ತಿದ್ದ ಕಾರಣಕ್ಕೆ ಆ ಹೆಸರು ಕೊಟ್ಟ.<ref>Karp, Gerald (19 October 2009). Cell and Molecular Biology: Concepts and Experiments. John Wiley & Sons. p. 2. ISBN 9780470483374. Hooke called the pores cells because they re- minded him of the cells inhabited by monks living in a monastery.</ref><ref>Alan Chong Tero (1990). Achiever's Biology. Allied Publishers. p. 36. ISBN 9788184243697. In 1665, an Englishman, Robert Hooke observed a thin slice of" cork under a simple microscope. (A simple microscope is a microscope with only one biconvex lens, rather like a magnifying glass). He saw many small box like structures. These reminded him of small rooms called "cells" in which Christian monks lived and meditated.</ref> [[ಜೀವಕೋಶ ಸಿದ್ಧಾಂತ]]ವನ್ನು ಮೊದಲು ೧೮೩೯ರಲ್ಲಿ ಮ್ಯಾಥಿಯಾಸ್‌ ಜಾಕೋಬ್ ಸ್ಕಲೆಡೆನ್ ಮತ್ತು ಥಿಯೊಡರ್ ಸ್ಕವಾನ್ನ್ ಮಂಡಿಸಿದರು. ಈ ಸಿದ್ಧಾಂತದ ಪ್ರಕಾರ ಎಲ್ಲಾ ಜೀವಿಗಳು ಒಂದು ಅಥವಾ ಹೆಚ್ಚು ಜೀವಕೋಶಗಳಿಂದ ರಚಿಸಲ್ಪಟ್ಟಿವೆ, ಎಲ್ಲಾ ಜೀವಿಗಳಲ್ಲಿ ಜೀವಕೋಶಗಳು ರಚನೆ ಮತ್ತು ಕಾರ್ಯನಿರ್ವಹಣೆಯ ಪ್ರಾಥಮಿಕ ಘಟಕಗಳು, ಎಲ್ಲಾ ಜೀವಕೋಶಗಳೂ ಇತರ ಈಗಾಗಲೇ ಇರುವ ಜೀವಕೋಶಗಳಿಂದ ಬಂದಿವೆ ಮತ್ತು ಎಲ್ಲಾ ಜೀವಕೋಶಗಳಲ್ಲಿಯೂ ಅದರ ಕಾರ್ಯಗಳನ್ನು ನಿಯಂತ್ರಿಸಲು ಹಾಗೂ ನಂತರದ ಪೀಳಿಗೆಯ ಜೀವಕೋಶಗಳಿಗೆ ಮಾಹಿತಿ ರವಾನಿಸಲು ಅಗತ್ಯವಾದ ಅನುವಂಶಿಕ ಮಾಹಿತಿ ಅಡಕವಾಗಿದೆ.<ref>Maton, Anthea (1997). Cells Building Blocks of Life. New Jersey: Prentice Hall. ISBN 0-13-423476-6.</ref> ಜೀವಕೋಶಗಳು ಕನಿಷ್ಠ 350 ಕೋಟಿ ವರುಷಗಳ ಹಿಂದೆ ಭೂಮಿಯ ಮೇಲೆ ಮೊದಲು ಕಾಣಿಸಿಕೊಂಡವು.<ref>Schopf, JW, Kudryavtsev, AB, Czaja, AD, and Tripathi, AB. (2007). Evidence of Archean life: Stromatolites and microfossils. Precambrian Research 158:141-155.</ref><ref>Schopf, JW (2006). Fossil evidence of Archaean life. Philos Trans R Soc Lond B Biol Sci 29;361(1470):869-85.</ref><ref>Peter Hamilton Raven; George Brooks Johnson (2002). Biology. McGraw-Hill Education. p. 68. ISBN 978-0-07-112261-0. Retrieved 7 July 2013.</ref>
 
==ಅಂಗರಚನಾ ಶಾಸ್ತ್ರ==
</br>ಜೀವಕೋಶಗಳಲ್ಲಿ ಯೂಕ್ಯಾರಿಯೋ‍ಟ್‌‌‌ ಮತ್ತು ಪ್ರೋಕ್ಯಾರಿಯೋಟ್‌ ಎಂದು ಎರಡು ಬಗೆಗಳಿವೆ. [[ಬೀಜಕಣ (ಜೀವಶಾಸ್ತ್ರ)|ಬೀಜಕಣ]] (ನ್ಯೂಕ್ಲಿಯಸ್) ಯೂಕ್ಯಾರಿಯೋ‍ಟ್‌‌‌ ಜೀವಕೋಶಗಳಲ್ಲಿ ಇರುತ್ತದೆ ಮತ್ತು ಪ್ರೊಕ್ಯಾರಿಯಟ್‌ ಜೀವಕೋಶಗಳಲ್ಲಿ ಇರುವುದಿಲ್ಲ. ಪ್ರೊಕ್ಯಾರಿಯಟ್‌ಗಳು ಒಂದೇ ಜೀವಕೋಶಗಳಿರುವ ಜೀವಿಗಳು ಆದರೆ ಯೂಕ್ಯಾರಿಯೋ‍ಟ್‌‌‌ ಜೀವಿಗಳು ಏಕಕೋಶಿಗಳಾಗಿರ ಬಹುದು ಅಥವಾ ಬಹುಕೋಶ ಜೀವಿಗಳೂ ಆಗಿರಬಹುದು.
"https://kn.wikipedia.org/wiki/ಜೀವಕೋಶ" ಇಂದ ಪಡೆಯಲ್ಪಟ್ಟಿದೆ