ಅಂಬರೀಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ರಾಜಕೀಯ ವೃತ್ತಿಜೀವನ
೩೫ ನೇ ಸಾಲು:
[[ಜೋ ಸೈಮನ್]] ನಿರ್ದೇಶನದಲ್ಲಿ, ೧೯೮೯ರಲ್ಲಿ ಬಿಡುಗಡೆಯಾದ [[ಹಾಂಕಾಂಗ್‍ನಲ್ಲಿ ಏಜೆಂಟ್ ಅಮರ್]] ಇವರ ನೂರನೇ ಚಿತ್ರ. ಇವರು ಇಲ್ಲಿಯವರೆಗೆ ಸುಮಾರು ೨೦೦ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕದ ಪ್ರಖ್ಯಾತ ಪಿಟೀಲುವಾದಕರಾದ [[ಟಿ. ಚೌಡಯ್ಯ|ಟಿ. ಚೌಡಯ್ಯನವರ]] ಮೊಮ್ಮಗನಾದ ಅಂಬರೀಶ್, [[ಮಂಡ್ಯ]] ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಸಂಸತ್ ಸದಸ್ಯರಾಗಿದ್ದರು. ಪ್ರಸ್ತುತ ೨೦೧೩ರಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿರುವ ಅವರು, ಶ್ರೀ ಸಿದ್ಧರಾಮಯ್ಯನವರ ಸಂಪುಟದಲ್ಲಿ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಂಬರೀಶ್ ಅವರ ಪತ್ನಿ ಕನ್ನಡ ಚಿತ್ರನಟಿ [[ಸುಮಲತಾ]]. ಪುತ್ರನ ಹೆಸರು ಅಭಿಷೇಕ್ ಗೌಡ.
ಇವರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಮೊದಲಿಗೆ ಜನತಾದಳದಲ್ಲಿದ್ದರು. ಅನಂತರ ಕಾಂಗ್ರೆಸ್ಪಕ್ಷ ಸೇರಿದರು. ಮಂಡ್ಯ ಕ್ಷೇತ್ರದಿಂದ ಸ್ಪದಿರ್sಸಿ ಲೋಕಸಭೆಗೆ ಆಯ್ಕೆಯಾದರು. ಅನಂತರ ಕಾವೇರಿ ಚಳವಳಿಯ ಹಿನ್ನೆಲೆಯಲ್ಲಿ ಜನತೆಯ ಅಬಿsಪ್ರಾಯಕ್ಕೆ ಮನ್ನಣೆ ನೀಡಿ ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದರು (2002). ಅಂಬರೀಶ್ ತಮ್ಮ ಉದಾರ ಸ್ವಭಾವದಿಂದಾಗಿ ದಾನಶೂರ ಕರ್ಣ ಎಂದೇ ಹೆಸರಾಗಿದ್ದಾರೆ. ಸಮಾಜದ ದುರ್ಬಲ ವರ್ಗದವರ ಬಗ್ಗೆ ಇವರಿಗೆ ವಿಶೇಷ ಕಳಕಳಿ.
 
== ರಾಜಕೀಯ ವೃತ್ತಿಜೀವನ ==
1994 ರಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮುಂದೆ ಅಂಬರೀಶ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಗೆ ಸೇರಿದರು.1996 ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ನಂತರ ಅವರು ಎರಡು ವರ್ಷಗಳ ನಂತರ ಪಕ್ಷವನ್ನು ತ್ಯಜಿಸಿದರು. ಅಂಬರೀಶ್ ತರುವಾಯ ಜನತಾ ದಳಕ್ಕೆ ಸೇರಿಕೊಂಡರು ಮತ್ತು ಮಂಡ್ಯದಿಂದ 1998 ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿದರು . ನಂತರ ಅವರು ಅದೇ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಲು ಕಾಂಗ್ರೆಸ್ ಸೇರಿಕೊಂಡರು.
 
==ನಿಧನ==
"https://kn.wikipedia.org/wiki/ಅಂಬರೀಶ್" ಇಂದ ಪಡೆಯಲ್ಪಟ್ಟಿದೆ