ಶಿಂಜೋ ಅಬೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯ ನೇ ಸಾಲು:
==ರಾಜಕೀಯ ಬದುಕು==
೧೯೮೨ರಲ್ಲಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಸೇರಿದ ಅಬೆ, ಮೊದಲಿಗೆ ವಿದೇಶಾಂಗ ಇಲಾಖೆ, ನಂತರ ಪಕ್ಷದ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯಾಗಿ ೯ ವರ್ಷ ದುಡಿದರು. ಸಂಘಟನೆ ಮತ್ತು ಸರ್ಕಾರದ ಹಲವು ಬಗೆಗಳನ್ನು ಅರಿತ ಅಬೆ, ಈ ಕಾಲದಲ್ಲಿ ರಾಜಕೀಯ ಪಟ್ಟುಗಳನ್ನು ಕಲಿತರು.
[[ಯೋಷಿರೋ ಮೋರಿ]] ಮತ್ತು [[ಜುನಿಚಿರೋ ಕೊಯಿಜುಮಿ]] ರೊಂದಿಗೆ ಮೋರಿ ಪಂಗಡದಲ್ಲಿ ಗುರುತಿಸಿಕೊಂಡ ಅಬೆ,
೧೯೯೩ರಲ್ಲಿ ತಮ್ಮ ತಂದೆಯ ನಿಧನದ ಕಾರಣ, ಯಮಗುಚಿ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಗೆದ್ದರು. ೧೯೯ರ ಹೊತ್ತಿಗೆ ಸಮಾಜ ಕಲ್ಯಾಣ್ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡ ಅಬೆ, ೨೦೦೦ರ ಉತ್ತರ ಕೊರಿಯಾ ಅಪಹರಣದಲ್ಲಿ ಹೆಸರು ಮಾಡಿದರು. ಉತ್ತರ ಕೊರಿಯಾದಲ್ಲಿ ಜಪಾನ್ ನಾಗರೀಕರ ಅಪಹರಣವಾದಾಗ, ಅಬೆ, ಕೊಯಿಜುಮಿರೊಂದಿಗೆ ಉತ್ತರ ಕೊರಿಯಾಕ್ಕೆ ಸಂಧಾನಕ್ಕೆ ತೆರಳಿದರು. ಒತ್ತೆಯಾಳುಗಳನ್ನು ವಾರದ ಮಟ್ಟಿಗೆ ಜಪಾನಿಗೆ ಕರೆತರುವಲ್ಲಿ ಯಶಸ್ವಿಯಾದ ಅಬೆ, ಒತ್ತೆಯಾಳುಗಳನ್ನು ಮತ್ತೆ ಕಳಿಸಲು ನಿರಾಕರಿಸಿದರು. ೨೦೦೩ರಲ್ಲಿ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿಯಾದರು.
ಏಪ್ರಿಲ್ ೨೦೦೬ರಲ್ಲಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಅಬೆ, ತಮ್ಮ ಗುರುಗಳಾದ ಯೋಷಿರೋ ಮೋರಿ ಮತ್ತು ಕೊಯಿಜುಮಿರ ಬೆಂಬಲ ಗಳಿಸಿದರು.
ಜುಲೈ ೨೦೦೬ರಲ್ಲಿ, ೫೨ ವರ್ಷದ ಅಬೆ, ದ್ವಿತೀಯ ಯುದ್ಧಾನಂತರದ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
 
==ಮೊದಲ ಪ್ರಧಾನಿ ಅವಧಿ ೨೦೦೬-೦೭==
ತಮ್ಮ ಮುಂಚಿನ ಪ್ರಧಾನಿ ಕೊಯಿಜುಮಿರ ಆರ್ಥಿಕ ನೀತಿಗಳನ್ನು ಮುಂದುವರಿಸಿಕೊಂಡು ನಡೆದ ಅಬೆ, ತೆರಿಗೆ ಸುಧಾರನೆಗೆ ಒತ್ತು ನೀಡಿದರು. ತೆರಿಗೆಗಳನ್ನು ಹೆಚ್ಚಿಸದೆಯೇ, ಪೋಲುವೆಚ್ಚ್ಚಗಳನ್ನು ನಿಲ್ಲಿಸಿದ ಜಾಣತನದಿಂದ ಅಬೆ, ಜನಪ್ರಿಯರಾದರು.
"https://kn.wikipedia.org/wiki/ಶಿಂಜೋ_ಅಬೆ" ಇಂದ ಪಡೆಯಲ್ಪಟ್ಟಿದೆ