ವಲ್ಲಭ್‌ಭಾಯಿ ಪಟೇಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೪ ನೇ ಸಾಲು:
 
ಇಂಗ್ಲೆಂಡ್‌ಗೆ ತೆರಳಲು ಅವರು ಸಾಕಷ್ಟು ಹಣ ಉಳಿಸಿ, ಪಾಸ್ ಮತ್ತು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದಾಗ, "ವಿ.ಜೆ.ಪಟೇಲ್" ಎಂದು ನಮೂದಿಸಲಾಗಿತ್ತು. ಇವರದೇ ಹೆಸರಿನ ಮೊದಲಕ್ಷರ ಹೊಂದಿದ್ದ ಇವರ ಅಣ್ಣನಾದ ವಿಠಲ್‌ಭಾಯ್ ವಿಳಾಸವು ಸಹ ನಮೂದಾಗಿತ್ತು. ಇಂಗ್ಲೆಂಡ್ನಲ್ಲಿ ಅಧ್ಯಯನ ಮಾಡುವ ಆಶಯವನ್ನು ಹೊಂದಿದ್ದ ವಿಠಲ್‌ಭಾಯ್, ವಲ್ಲಭ್‌ಭಾಯಿ ಮೊದಲು ಹೋದರೆ, ಅಣ್ಣನಾದ ತಾನು ಅವನ ಹಿಂದೆ ಹೋಗಬೇಕಾಗಿ ಬರುತ್ತದೆ ಮತ್ತು ಅದು ತನ್ನ ಗೌರವಕ್ಕೆ ಕುಂದು ತರುವಿದೆಂದು ಅಭಿಪ್ರಾಯಪಟ್ಟರು. ಅವರ ಕುಟುಂಬದ ಗೌರವಾರ್ಥ, ಪಟೇಲ್ ವಿಠಲ್‌ಭಾಯ್ ಅವರನ್ನು ತಮ್ಮ ಜಾಗದಲ್ಲಿ, ತಮ್ಮ ಟಿಕೆಟ್‌ ಉಪಯೋಗಿಸಿಕೊಂಡು ಹೋಗಲು ಅನುಮತಿ ನೀಡಿದರು.{{sfn|Rajmohan Gandhi|1990|p=21}}
 
1909 ರಲ್ಲಿ ಪಟೇಲ್ ಅವರ ಹೆಂಡತಿ ಜಾವೇರ್‌ಬಾ ಬಾಂಬೆ (ಈಗನ ಮುಂಬೈ) ನಲ್ಲಿ, ಕ್ಯಾನ್ಸರ್‌ಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ, ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಆರೋಗ್ಯವು ಹಠಾತ್ತಾಗಿ ಹದಗೆಟ್ಟಿತು ಮತ್ತು ಯಶಸ್ವಿ ತುರ್ತು ಶಸ್ತ್ರಚಿಕಿತ್ಸೆಯ ಹೊರತಾಗಿಯೂ ಅವರು ಆಸ್ಪತ್ರೆಯಲ್ಲಿ ನಿಧನರಾದರು. ನ್ಯಾಯಾಲಯದಲ್ಲಿ ಸಾಕ್ಷಿಯನ್ನು ಅಡ್ಡ-ಪರೀಕ್ಷೆ ಮಾಡುತ್ತಿದ್ದ ಪಟೇಲ್ ಅವರಿಗೆ ಪತ್ನಿಯ ಮರಣದ ಬಗ್ಗೆ ತಿಳಿಸುವ ಒಂದು ಟಿಪ್ಪಣಿಯನ್ನು ನೀಡಲಾಯಿತು. ಸಾಕ್ಷಿಗಳ ಪ್ರಕಾರ, ಪಟೇಲ್ ಈ ಟಿಪ್ಪಣಿಯನ್ನು ಓದಿದರು, ಅದನ್ನು ಕಿಸೆಯಲ್ಲಿಟ್ಟರು ಮತ್ತು ಅವರ ಅಡ್ಡ-ಪರೀಕ್ಷೆಯನ್ನು ಮುಂದುವರೆಸಿದರಲ್ಲದೇ ಪ್ರಕರಣವನ್ನು ಗೆದ್ದರು. ವಿಚಾರಣೆ ಕೊನೆಗೊಂಡ ನಂತರ ಅವರು ಸುದ್ದಿಯನ್ನು ಹೊರಹಾಕಿದರು. ಮತ್ತೆ ಮದುವೆಯಾಗದಿರಲು ಪಟೇಲ್ ನಿರ್ಧರಿಸಿದ್ದರು. ತನ್ನ ಕುಟುಂಬದ ಸಹಾಯದಿಂದ ಅವರು ತಮ್ಮ ಮಕ್ಕಳನ್ನು ಬೆಳೆಸಿದರು ಮತ್ತು ಅವರನ್ನು ಮುಂಬೈಯ ಇಂಗ್ಲಿಷ್-ಭಾಷಾ ಶಾಲೆಗಳಿಗೆ ಕಳುಹಿಸಿದರು. 36 ನೇ ವಯಸ್ಸಿನಲ್ಲಿ ಅವರು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದರು ಮತ್ತು ಲಂಡನ್‌ನ "ಮಿಡಲ್ ಟೆಂಪಲ್ ಇನ್" ನಲ್ಲಿ ಸೇರಿಕೊಂಡರು. ಕೇವಲ 30 ತಿಂಗಳುಗಳಲ್ಲಿ, 36 ತಿಂಗಳ ಕೋರ್ಸ್ ಪೂರ್ಣಗೊಂಡಾಗ, ಯಾವುದೇ ಕಾಲೇಜು ಹಿನ್ನಲೆಯಿಲ್ಲದ ಪಟೇಲ್, ತಮ್ಮ ತರಗತಿಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ಪಾಸಗಿದ್ದರು. <ref>{{citation|title=Education profiles of India's top freedom fighters|date=|url=http://indianexpress.com/photos/education-gallery/education-profiles-of-indias-top-freedom-fighters/3|work=[[The Indian Express]]}}</ref>
 
ಭಾರತಕ್ಕೆ ಹಿಂದಿರುಗಿದ ಪಟೇಲ್ ಅಹಮದಾಬಾದ್‌ನಲ್ಲಿ ನೆಲೆಸಿದರು ಮತ್ತು ನಗರದ ಅತ್ಯಂತ ಯಶಸ್ವಿ ನ್ಯಾಯವಾದಿಗಳ ಪೈಕಿ ಒಬ್ಬರಾದರು. ಯುರೋಪಿಯನ್-ಶೈಲಿಯ ಬಟ್ಟೆಗಳನ್ನು ಧರಿಸುವುದು ಮತ್ತು ಶಿಷ್ಟ (ನಗರೀಕರಣದ) ವರ್ತನೆಗಳನ್ನು ತೋರ್ಪಡಿಸುತ್ತ , ಅವರು ನುರಿತ [[:en:Contract_bridge|ಬ್ರಿಡ್ಜ್]] ಆಟಗಾರರಾದರು. ಪಟೇಲ್ ತಮ್ಮ ವೃತ್ತಿಯಿಂದ, ಬಹಳಷ್ಟು ಹಣಗಳಿಸಿ, ತಮ್ಮ ಮಕ್ಕಳಿಗೆ ಅಧುನಿಕ ಶಿಕ್ಷಣವನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದರು. ಬೊಂಬೆ ಪ್ರೆಸಿಡೆನ್ಸಿಯಿಂದ ರಾಜಕೀಯಕ್ಕೆ ಸೇರಲು ಸಿದ್ಧರಾಗಿದ್ದ ಅಣ್ಣ ವಿಠಲ್‌ಭಾಯ್‌ರವರೊಂದಿಗಿನ ಒಪ್ಪಂದದಂತೆ, ಅಹಮದಾಬಾದ್‌ನಲ್ಲಿಯೇ ಮನೆ ಜವಾಬ್ದಾರಿಯನ್ನು ವಹಿಸಿಕೊಂಡರು.{{sfn|Rajmohan Gandhi|1990|p=33}}<ref name="International Vegetarian Union (IVU) - Patel">{{cite web|url=http://www.ivu.org/people/politics/patel.html|title=International Vegetarian Union (IVU)&nbsp;– Patel|publisher=International Vegetarian Union}}</ref>
 
==ಜೀವನ==