ಅ.ನ.ಕೃಷ್ಣರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಉಲ್ಲೇಖ ಟ್ಯಾಗ್ ಸೇರಿಸಿದ್ದು
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೨ ನೇ ಸಾಲು:
'''ಅರಕಲಗೂಡು ನರಸಿಂಗರಾಯ ಕೃಷ್ಣರಾಯ''' (ಅ ನ ಕೃ) ([[ಮೇ ೯]], [[೧೯೦೮]] - [[ಜುಲೈ ೮]], [[೧೯೭೧]]) [[ಕನ್ನಡ ಸಾಹಿತ್ಯ|ಕನ್ನಡ ಸಾಹಿತ್ಯಲೋಕದ]] ಪ್ರಮುಖರಲ್ಲೊಬ್ಬರು. ಕರ್ನಾಟಕ, ಕನ್ನಡಪರ ಪ್ರಮುಖ ಹೋರಾಟಗಾರರು. ಇವರು '''ಕಾದಂಬರಿ ಸಾರ್ವಭೌಮ''' ಎಂದೇ ಖ್ಯಾತರಾಗಿದ್ದರು.
===ಜನನ, ಜೀವನ===
*ಅನಕೃ ಹುಟ್ಟಿದ್ದು [[ಕೋಲಾರ ಜಿಲ್ಲೆ]], ಹಾಗು ಕುಟುಂಬದ ಮೂಲ [[ಹಾಸನ]] ಜಿಲ್ಲೆಯ [[ಅರಕಲಗೂಡು]]. ತಂದೆ ನರಸಿಂಗರಾಯರು ಮತ್ತು ತಾಯಿ ಅನ್ನಪೂರ್ಣಮ್ಮನವರು. ಅನಕೃ ಮಹಾನ್ ಕನ್ನಡಾಭಿಮಾನಿಯಾಗಿದ್ದರು. [[ಕರ್ನಾಟಕ|ಕರ್ನಾಟಕದಲ್ಲಿ]] ಎಲ್ಲಾ ಭಾಷೆಯ ಜನರೂ ಇರಲಿ, ಆದರೆ ಅವರು ನಮ್ಮೊಂದಿಗೆ ಹೊಂದಿಕೊಂಡು ಹೋಗಲಿ, ಮಾತೃ ಭಾಷೆಯನ್ನು ಮೆಟ್ಟಿ, ಮುನ್ನುಗ್ಗುವುದು ಸರಿಯಲ್ಲ ಎಂಬುದು ಅವರ ಮೂಲತತ್ವವಾಗಿತ್ತು.
*ತಮ್ಮ ಜೀವಮಾನದುದ್ದಕ್ಕೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಿದರು. ಅದಕ್ಕಾಗಿ ಕರ್ನಾಟಕದಲ್ಲೆಲ್ಲಾ ಸುತ್ತಾಡಿದರು. ತಮ್ಮ ಚಳುವಳಿ, ಭಾಷಣಗಳ ಮೂಲಕ ಕನ್ನಡಿಗರನ್ನು ಹುರಿದುಂಬಿಸಿದರು. ಕನ್ನಡಿಗರಲ್ಲಿ ಸುಪ್ತವಾಗಿದ್ದ ಸ್ವಾಭಿಮಾನವನ್ನು ಜಾಗೃತಗೊಳಿಸಿದರು. ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದಿದ್ದ ಕಾಲದಲ್ಲಿ ಅನಕೃ ಅದಕ್ಕಾಗಿ ಹೋರಾಟ ನಡೆಸಿದರು.
*ಅನಕೃ ಅವರ ಚಳುವಳಿಯಿಂದ [[ಬೆಂಗಳೂರು|ಬೆಂಗಳೂರಿನ]] ಅಲಂಕಾರ್ ಚಿತ್ರಮಂದಿರದಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡ ಚಿತ್ರ ಪ್ರದರ್ಶನಗೊಂಡಿತು. ಹೀಗೆ ಪ್ರದರ್ಶಿತವಾದ ಮೊದಲ ಚಿತ್ರ [[:Category:ವರ್ಷ-೧೯೬೩ ಕನ್ನಡಚಿತ್ರಗಳು|೧೯೬೩ರಲ್ಲಿ]] ತೆರೆಕಂಡ [[ಜಿ.ವಿ.ಅಯ್ಯರ್]] ನಿರ್ದೇಶನದ [[ಬಂಗಾರಿ]]. ವಿಶೇಷವೆಂದರೆ "ತುಂಬಿದ ಕೊಡ" ಚಿತ್ರದಲ್ಲಿ ಸಾಹಿತಿ ಅ.ನ.ಕೃ.[http://www.youtube.com/watch?v=FZXNBoF5ksw ಸಣ್ಣ ಪಾತ್ರವೊಂದರಲ್ಲಿ ] ಅಭಿನಯಿಸಿದ್ದರು.
*ಅಂದು ಸಂಗೀತಕ್ಕೆ ಸಂಬಂಧಪಟ್ಟ ಸಂಘಸಂಸ್ಥೆಗಳು ಕನ್ನಡ ಸಂಗೀತಗಾರರನ್ನು ನಿರ್ಲಕ್ಷಿಸಿ, [[ಚೆನ್ನೈ|ಮದರಾಸಿನಿಂದ]] ಗಾಯಕರನ್ನು ಕರೆಸಿ ಹಾಡಿಸುತ್ತಿದ್ದವು. ಅನಕೃ ಇದನ್ನು ವಿರೋಧಿಸಿದರು. ಒಮ್ಮೆ ಹೀಗೆ ಮದರಾಸಿನಿಂದ [[ಎಂ.ಎಸ್.ಸುಬ್ಬುಲಕ್ಷ್ಮಿ|ಎಮ್ ಎಸ್ ಸುಬ್ಬುಲಕ್ಷ್ಮಿಯವರು]] ಹಾಡಲು ಬಂದಿದ್ದಾಗ ಅನಕೃ ಅವರಿಗೆ ತಮ್ಮ ಚಳುವಳಿಯ ಉದ್ದೇಶವನ್ನು ವಿವರಿಸಿದರು. ಆಗ ಸುಬ್ಬುಲಕ್ಶ್ಮಿಯವರು ಚಳುವಳಿಯ ಉದ್ದೇಶವನ್ನು ಒಪ್ಪಿಕೊಂಡು, ತಮ್ಮ ಸಂಗೀತವನ್ನು ರದ್ದುಮಾಡಿ ಹಿಂತಿರುಗಿದ್ದರು.
*[[ಮಾಸ್ತಿ ವೆಂಕಟೇಶ ಅಯ್ಯಂಗಾರ್]] ಅವರು ಒಂದು ಸಭೆಯಲ್ಲಿ ಅನಕೃ ಕುರಿತು ಹೇಳಿದ ಮಾತಿದು - "ನಾನು [[ತಮಿಳು]] ಕನ್ನಡಿಗ, ಮಿರ್ಜಾ ಇಸ್ಮಾಯಿಲ್ಲರು ಮುಸ್ಲಿಂ ಕನ್ನಡಿಗರು, '''ಅನಕೃ ಅಚ್ಚ ಕನ್ನಡಿಗರು''' ". *'''ನನ್ನಂಥವರು ಕನ್ನಡಕ್ಕೆ ಅನೇಕರಿದ್ದಾರೆ, ಆದರೆ ನನಗಿರುವುದು ಒಂದೇ ಕನ್ನಡ''' - ಈ ಮಾತು ಅನಕೃ ಅವರ ಕನ್ನಡಾಭಿಮಾನಕ್ಕೆ ಸಾಕ್ಷಿಯಾಗಿದೆ.
 
==ಸಂಗೀತದಲ್ಲಿ ಕನ್ನಡಕ್ಕಾಗಿ ಹೋರಾಟ==
*೧೯೪೧ರಲ್ಲೇ ಮೈಸೂರಿ¬ನಲ್ಲಿ ದಸರಾ ಸಂದರ್ಭದಲ್ಲಿ ನಡೆದ ಕನ್ನಡ¬ನಾಡಿನ ವಿದ್ವಾಂಸರ ಸಮ್ಮೇಳನದಲ್ಲಿ ತಮಿಳುನಾಡಿನ ನಿರ್ಣಯವನ್ನು ವಿರೋಧಿಸಿ, ಸಂಗೀತಕ್ಕೆ ಭಾಷೆ ಮುಖ್ಯವಲ್ಲ ಎಂದು ನಿರ್ಣಯ ಕೈಗೊಳ್ಳಲಾಯಿತು ! ಅಲ್ಲಿಗೆ ಕರ್ನಾಟಕ ಸಂಗೀತದಲ್ಲಿ ಕನ್ನಡಕ್ಕೆ ಸ್ವಲ್ಪವಾದರೂ ಸ್ಥಾನಮಾನ ಸಿಗುವ ವಿಚಾರ ಮೂಲೆ ಗುಂಪಾಯಿತು. ಆದರೆ '''ಅನಕೃ''' ಬಿಡಲಿಲ್ಲ.
"https://kn.wikipedia.org/wiki/ಅ.ನ.ಕೃಷ್ಣರಾಯ" ಇಂದ ಪಡೆಯಲ್ಪಟ್ಟಿದೆ