ಶನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೩೬ ನೇ ಸಾಲು:
*ಶನಿ ದೇವಾಲಯದ ಪ್ರಾಂಗಣದಲ್ಲಿ , [[ಹನುಮಾನ್]] , [[ಜಗದೀಶ್ವರ]] , [[ಸಾಯಿಬಾಬ|ಸಾಯಿಬಾಬಮತ್ತು]] [[ಮಠ]] ದೇವತೆಗಳ ಜೊತೆಗೆ ,[[ನವಗ್ರಹ]] ಮಂಟಪವೂ ಸಹ ಇದೆ. ಪವಿತ್ರ ಗರ್ಭಗುಡಿಯಲ್ಲಿ ಎತ್ತರವಾದ ,ಸುಂದರವಾದ ಶನೀಶ್ವರ ಮೂರ್ತಿಯು ಜ್ಯೇಸ್ಥ ದೇವಿಯ ಜೊತೆ ವಿರಾಜಮಾನನಾಗಿದ್ದಾನೆ. ಅವನ ಎಡಗಡೆಗೆ ಹನುಮಾನ್ ಮತ್ತು ಬಲಗಡೆಗೆ ಜಗದೀಶ್ವರ ಸ್ವಾಮಿಯ ವಿಗ್ರಹಗಳಿವೆ..
*'''[[ಶನಿ ಶಿಂಗನಪುರ]] ''' – ಶನಿ ಮಹಾರಾಜನಿಗೆ ಇನ್ನೊಂದು ಮುಖ್ಯವಾದ ದೇವಸ್ಥಾನ ಶಿಂಗನಪುರದಲ್ಲಿದೆ.ಇದು [[ಭಾರತದ]] [[ಮಹಾರಾಷ್ಟ್ರ|ಮಹಾರಾಷ್ಟ್ರದಲ್ಲಿದೆ]]. ಶಿಂಗನಪುರವು ಶಿರಡಿ ಮತ್ತು ಔರಂಗಾಬಾದ್ ಗಳ ನಡುವೆ ಇದೆ. ಇದು ಉದ್ಭವ ಮೂರ್ತಿ ("ಸ್ವಯಂಭು " )[[ಭೂಮಿ|ಭೂಮಿಯೋಳಗಿನಿಂದ]] ಕಪ್ಪಾದ ,ಆದರೆ ಸುಂದರವಾದ ಒಂದು ಕಲ್ಲಿನ ಉದ್ಭವವಾಗಿದೆ. ಇದರ ಕಾಲಾವಧಿ ಯಾವಾಗೆಂದು ಯಾರಿಗೂ ತಿಳಿದಿಲ್ಲವಾದರೂ, ಸ್ವಯಂಭು ಶನೀಶ್ವರನು ನೆನಪೇ ಇಲ್ಲದಷ್ಟು ಕಾಲದಿಂದ ,ಅಂದರೆ ಅಂದಿನ ಕುರುಬರು ಕಂಡುಹಿಡಿದ ದಿನದಿಂದ ಅಸ್ಥಿತ್ವದಲ್ಲಿದೆ. [[ಕಲಿಯುಗದ]] ಪ್ರಾರಂಭದಿಂದಲೂ ಇದು ಅಸ್ಥಿತ್ವದಲ್ಲಿದೆ ಎಂದು ನಂಬಲಾಗಿದೆ .
*[[ಸ್ವಯಂಭು]] (=ಸಂಸ್ಕೃತದಲ್ಲಿ ತನಗೆ ತಾನೇ ಉದ್ಭವಿಸಿದ )ಕಥೆಯು ಜನರ ಬಾಯಿಂದ ಬಾಯಿಗೆ ಹಲವು ಸಾವಿರ ವರ್ಷಗಳಿಂದ, ತಲೆಮಾರುಗಳಿಂದ ಬಂದ ಬಗೆಯೆಂದರೆ: ಕುರಿಕಾಯುವವರು ಚೂಪಾದ ಕಬ್ಬಿಣದ ಕೋಲಿನಿಂದ ಕಲ್ಲನ್ನು ಮುಟ್ಟಿದಾಗ ,ಕಲ್ಲು ರಕ್ತವನ್ನು ಸುರಿಸಲು ಆರಂಭಸಿತಂತೆ. ಇದರಿಂದ ಕುರಿ ಕಾಯುವವರು ಆಶ್ಚರ್ಯ ಚಕಿತರಾಗಿ, ಇಡೀ ಹಳ್ಳಿಯ ಜನ ಅಲ್ಲಿ ಸೇರಿ ಪವಾಡವನ್ನು ಕಂಡರಂತೆ. ಅಂದು ರಾತ್ರಿಯೂ ದೇವ ಶನೀಶ್ವರನು ಹಲವು ಭಕ್ತರ ಕನಸಿನಲ್ಲಿ ಬಂದನಂತೆ. ಕುರಿ ಕಾಯುವವನಿಗೆ ಕನಸಿನಲ್ಲಿ ಬಂದು, ತಾನು "ಶನೀಶ್ವರ "ಎಂದು ಹೇಳಿಕೊಂಡನಂತೆ. ಹಾಗೆಯೇ ಸುಂದರವಾಗಿ ಒಂದೇ ರೀತಿಯಾಗಿ ಕಾಣುವ ಕರಿ-ಕಲ್ಲು ತನ್ನದೇ ಸ್ವಯಂಭು (ಸ್ವಯಂ-ಉದ್ಭವ) ಅಂತೆ. .ಕುರುಬರು ಪ್ರಾರ್ಥಿಸುತ್ತಾ, ನಿಮ್ಮ ದೇವಸ್ಥಾನ ಕಟ್ಟಿಸಬಹುದಾ ಎಂದು ಕೇಳಿದರಂತೆ. ಇದಕ್ಕೆ ,ಶನಿ ಮಹಾತ್ಮನು ಉತ್ತರಿಸುತ್ತಾ,ತನಗೆ ಯಾವುದೇ ಚಾವಣಿಯು ಬೇಡವೆಂದೂ ,ಇಡೀ ಆಗಸವೇ ತನೆಗೆ ಚಾವಣಿ ಎಂದು, ತಾನು ಹೀಗೆ ಆಗಸದ ಕೆಳಗೇ ಇರುವುದಾಗಿ ಹೇಳಿದನಂತೆ. ಕುರುಬರಿಗೆ ತನಗೆ ಪ್ರತಿನಿತ್ಯವೂ ಪೂಜೆ ಸಲ್ಲಿಸಬೇಕೆಂದು, ಪ್ರತಿ ಶನಿವಾರ ತಪ್ಪದೇ'ತೈಲಾಭಿಷೇಕ' ಮಾಡಬೇಕೆಂದು ಹೇಳುತ್ತಾನಂತೆ. ಹಾಗೆಯೇ ಇಡೀ ಗ್ರಾಮದಲ್ಲಿ ,ಡಕಾಯಿತರು,ಕಳ್ಳರು,ಲೂತಿಕಾರರುಲೂಟಿಕಾರರು ಇಲ್ಲದಂತೆ ನೋಡಿಕೊಳ್ಳುವುದಾಗಿ ಭಾಷೆ ಇತ್ತನಂತೆ. ಹೀಗಾಗಿ ಶನೀಶ್ವರನನ್ನು ಇಂದಿಗೂ ಸಹ ತೆರೆದ ಸ್ಥಳದಲ್ಲಿ ಚಾವಣಿಯಿಲ್ಲದೆ ಇರುವುದನ್ನು ಕಾಣಬಹುದಾಗಿದೆ. ಇಂದಿಗೂ ಈ ಗ್ರಾಮದಲ್ಲಿನ ಯಾವುದೇ ಮನೆ ,ಅಂಗಡಿ,ದೇವಾಲಯಗಳಿಗೆ ಬಾಗಿಲುಗಳು ಇಲ್ಲದೆ ಇರುವುದನ್ನು ಕಾಣಬಹುದಾಗಿದೆ. ಇಲ್ಲಿನ ಅಂಚೆ-ಕಚೇರಿಗೂ ಸಹ ಬಾಗಿಲು ಇಲ್ಲದೆ ಇರುವುದನ್ನು ನೋಡ ಬಹುದಾಗಿದೆ. ಬೀಗ ಹಾಕುವ ಬಗ್ಗೆ ಇಲ್ಲಿ ಯಾರುಯಾರೂ ಮಾತನಾಡುವುದಿಲ್ಲ. ಶನೀಶ್ವರನ ಹೆದರಿಕೆಯಿಂದಾಗಿ , ಇಲ್ಲಿನ ಮನೆ, ಗುಡಿಸಲುಗಳು, ಅಂಗಡಿಗಳು ಮುಂತಾದವುಗಳಿಗೆ ಶನೀಶ್ವರನ ದೇವಾಲಯದಿಂದ ಒಂದು ಕಿಲೋಮೀಟರ್ ಸುತ್ತಳತೆಯೊಳಗೆ ಬಾಗಿಳುಗಲಾಗಲಿಬಾಗಿಲುಗಳಾಗಲಿ, ಬೀಗಗಳಾಗಲಿ, ಇರುವುದಿಲ್ಲ. ಈ [[ಶನಿ ಶಿಂಗನಪುರ|ಶನಿ ಶಿಂಗನಪುರದಲ್ಲಿ]] ಈವರೆವಿಗೂ ಕಳ್ಳತನವಾಗಲೀ, ದರೋಡೆಗಳಾಗಲಿ, ಆಗಿರುವುದಿಲ್ಲ. ಕಳ್ಳತನ ಮಾಡಲು ಪ್ರಯತ್ನಿಸಿದ ಕೆಲವರಿಗೆ ರಕ್ತವಾಂತಿಯಾಗಿದ್ದು, ಕಳ್ಳತನ ಮಾಡಿದ ಕೆಲವೇ ನಿಮಿಷಗಳಲ್ಲಿ , ಸುತ್ತಳತೆಯನ್ನು ಬಿಡುವುದರೊಳಗೆ ಸಾವನ್ನು ಅಪ್ಪಿರುತ್ತಾರೆ. ಇನ್ನು ಹಲವರಿಗೆ ಬೇರೆ ರೀತಿಯ ಶಿಕ್ಷೆಗಳಾದಂತಹ ದೀರ್ಘ ಖಾಯಿಲೆ, ಮಾನಸಿಕ ಅಸ್ಥಿರತೆ ಮುಂತಾದವುಗಳು ಘಟಿಸಿವೆ. ಈ [[ಶನಿ ಶಿಂಗನಪುರ|ಶನಿ ಶಿಂಗನಪುರಕ್ಕೆ]] ಪ್ರತಿದಿನ ಸಾವಿರಾರು ಭಕ್ತರು ಬಂದು ಶನೇಶ್ವರನಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಶನಿವಾರಗಳಂದು ಈ ಸ್ಥಳ ಜನದಟ್ಟಣೆಯಿಂದ ಕೂಡಿರುತ್ತದೆ. ಶನಿ [[ತ್ರಯೋದಶಿ| ತ್ರಯೋದಶಿಯು]] ಈತನಿಗೆ ಸಂಭ್ರಮದ ದಿನವಾಗಿರುತ್ತದೆ. ಹಾಗೆಯೇ ಶನಿವಾರದಂದು ಬೀಳುವ '[[ಅಮಾವಾಸ್ಯೆ]] '( ಸಂಸ್ಕೃತ,ತೆಲುಗು, ಕನ್ನಡ,ಮಲಯಾಳಂನಲ್ಲಿ ನ್ಯೂ ಮೂನ್ ಡೇ ) ಶನೀಶ್ವರನಿಗೆ ಬಹಳ ಪ್ರಿಯವಾದ ದಿನವಾಗಿದೆ. ಸಾವಿರಾರು ಭಕ್ತರು ಇಲ್ಲಿಗೆ ಬಂದು ಪೂಜೆಯನ್ನು ಸಲ್ಲಿಸುತ್ತಾರೆ ಮತ್ತು ಆಶೀರ್ವಾದವನ್ನು ಬೇಡುತ್ತಾರೆ.
 
ಶನಿರಾಯನ ಒಂದು [[ಮಂತ್ರ|ಮಂತ್ರಹೀಗಿದೆ]].
"https://kn.wikipedia.org/wiki/ಶನಿ" ಇಂದ ಪಡೆಯಲ್ಪಟ್ಟಿದೆ