ಕುರಾನು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಮಹತ್ವ: Clean up ; bad link repair using AWB
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೦ ನೇ ಸಾಲು:
[[File:FirstSurahKoran (fragment).jpg|thumb|230 px|First sura of the Quran, ''[[Al-Fatiha]]'', consisting of seven verses.]]
[[File:Surah95-Tin.png|thumb|230 px|''[[At-Tin]]'' (the fig), 95th sura of the Quran.]]
ಕುರಾನು ಮೂವತ್ತು ಭಾಗಗಳಾಗಿ ವಿಂಗಡಣೆಯಾಗಿದ್ದು 144114 ಸುರಾ (ಅಧ್ಯಾಯ) ಗಳನ್ನೊಳಗೊಂಡಿದೆ. ಕೆಲವು ಅಧ್ಯಾಯಗಳು ಧೀರ್ಘವಾಗಿಯೂ ಉಳಿದವು ಸಂಕ್ಷಿಪ್ತವಾಗಿಯೂ ಇವೆ. ಪ್ರತಿಯೊಂದು ಭಾಗವೂ ನಾಲ್ಕು ಉಪವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ಪೈಗಂಬರನ ನಿರ್ದೇಶನದಲ್ಲಿ ಅಧ್ಯಾಯಗಳು ಜೋಡಣೆಯಾದುವು, ಸಾಕ್ಷಾತ್ಕಾರವಾದ ವಚನಗಳನ್ನು ನಿರ್ದಿಷ್ಟ ಅಧ್ಯಾಯಗಳಲ್ಲಿಯೇ ಸೇರಿಸುವಂತೆ ಆತ ಲಿಪಿಕಾರರಿಗೆ ಸೂಚನೆ ಕೊಡುತ್ತಿದ್ದ. ಹೀಗೆ, ಕುರಾನಿನ ವಿಷಯ ಕಾಲಾನುಕ್ರಮವಿಲ್ಲದೆ ಜೋಡಣೆಯಾಗಿರುವುದು ಪೈಗಂಬರನ ಆದೇಶದಂತೆಯೇ ಹೊರತು ನೋಟತಪ್ಪಿ ಅಲ್ಲ. ಕುರಾನಿನ ವಿಷಯಸಂಗ್ರಹಣ ಕಾರ್ಯವನ್ನು ಅಬುಬಕರನ ಅಪ್ಪಣೆಯಂತೆ ಕೈಗೊಳ್ಳಲಾಯಿತು. ಈ ಉದ್ದೇಶಕ್ಕಾಗಿಯೇ ಗ್ರಂಥದ ಒಂದು ಪ್ರತಿಯನ್ನು ಪೈಗಂಬರನ ವಿಧವೆ ಹಾಪ್ಸಾಳ ವಶಕ್ಕೆ ಕೊಡಲಾಗಿತ್ತು. ಕುರಾನಿನ ಪ್ರಥಮ ಸಂಗ್ರಹಕಾರನಾಗಿದ್ದ ಸಾಬಿತ್ ಎಂಬಾತನ ಮಗ ಜೈಯದ್, ಜಿಬೇರ್ ಎಂಬಾತನ ಮಗ ಅಬ್ದುಲ್ಲಾ. ಆಸ್ ಎಂಬಾತನ ಮಗ ಸೈಯದ್ ಮತ್ತು ಹ್ಯಾರಿಸ್ ಎಂಬಾತನ ಮಗ ಅಬ್ದುಲ್ ರಹಮಾನ್-ಈ ತಜ್ಞರ ಮೇಲ್ವಿಚಾರಣೆಯಲ್ಲಿ ಮೂರನೆಯ ಕಲೀಫ್ ಉಸ್ಮಾನನ ಅನುಜ್ಞೆಯಂತೆ ಕುರಾನಿನ ಪರಿಷ್ಕರಣ ಪ್ರಾರಂಭವಾಯಿತು. ಮೂಲ ಪ್ರತಿಯೊಡನೆ ಸಂಗ್ರಹಿಸಿದ ತುಣುಕುಗಳನ್ನು ಹೋಲಿಸಿ ಇಡೀ ಗ್ರಂಥವನ್ನು ಅಧ್ಯಾಯಗಳಾಗಿ ವಿಂಗಡಿಸಲಾಯಿತು.
ಪರಿಷ್ಕತ ಗ್ರಂಥವನ್ನು ಕಲೀಫನಿಗೆ ಒಪ್ಪಿಸಲಾಯಿತು. ಕಲೀಫ ಗ್ರಂಥದ ಅನೇಕ ಪ್ರತಿಗಳನ್ನು ಮಾಡಿಸಿ ಅವನ್ನು ಇಸ್ಲಾಂ ಧರ್ಮದ ವಿವಿಧ ಕೇಂದ್ರಗಳಿಗೆ ಕಳುಹಿಸಿದ. ಆ ಪ್ರತಿಗಳು ಈ ಪವಿತ್ರ ಗ್ರಂಥದ ತರುವಾಯದ ಪ್ರತಿಗಳಿಗೆ ಆಧಾರವಾದವು. ಹಳೆಯ ಗ್ರಂಥದ ಅವಶಿಷ್ಟಗಳನ್ನು ವಶಪಡಿಸಿಕೊಂಡು ಸುಡಲಾಯಿತು. ಮಸೂದ್ ಎಂಬಾತನ ಮಗ ಅಬ್ದುಲ್ಲಾ, ಸಲೀಂ, ಆಲಿ, ನಾಲ್ಕನೆಯ ಕಲೀಫ್ ಜಬಾಲ್ ಎಂಬಾತನ ಮಗ ಮೌಜ್, ಕಾಬ್ ಎಂಬಾತನ ಮಗ ಉಬಯಜ್, ಉಮರ್ ಎಂಬಾತನ ಮಗ ಅಬ್ದಲ್ಲಾ ಇವರೇ ಮೊದಲಾದ ಪೈಗಂಬರನ ಒಳನಾಡಿಗಳು ಕುರಾನನ್ನು ಪೂರ್ತಿಯಾಗಿ ನೆನಪಿಟ್ಟುಕೊಂಡಿದ್ದುದರಿಂದಲೂ ಮತ್ತೆ ಹಲವರು ಅದರ ಭಾಗಗಳನ್ನು ಕಂಠಪಾಟಮಾಡಿದ್ದರಿಂದಲೂ ತಪ್ಪಿಲ್ಲದಂತೆ ವಿಷಯಗಳನ್ನು ಪಡೆದುಕೊಳ್ಳಲು ಮತ್ತು ಸಂಗ್ರಹಿಸಿದ ವಿಷಯಗಳನ್ನು ಅಗತ್ಯವಿದ್ದಂತೆ ಜೋಡಿಸಲು ತೊಂದರೆಯಾಗಲಿಲ್ಲ. ಪೈಗಂಬರ್ ಸುರಾಗಳಲ್ಲಿನ ವಚನಗಳನ್ನು ಬರೆಯುವಂತೆ ಮತ್ತು ಕಂಠಪಾಠ ಮಾಡುವಂತೆ ತನ್ನ ಒಡನಾಡಿಗಳಿಗೆ ಉತ್ತೇಜನವಿತ್ತ. ಈ ಗ್ರಂಥದ ಬಗ್ಗೆ ಮುಸಲ್ಮಾನರಿಗೆ ಆಸಕ್ತಿ ಅಪಾರವಾದ್ದರಿಂದ, ಅದು ಕಳೆದ ಸಾವಿರದ ನಾನೂರು ವರ್ಷಗಳಿಂದಲೂ ಯಾವ ಬದಲಾವಣೆಯೂ ಇಲ್ಲದೆ ತನ್ನ ಪವಿತ್ರತೆಯನ್ನು ಉಳಿಸಿಕೊಂಡು ಬಂದಿದೆ. ಕುರಾನು ಮಕ್ಕಾ ಭಾಷೆಯಾದ ಕೊರೈಷ್ ದೇಸಿ ನುಡಿಯಲ್ಲಿ ಸಾಕ್ಷಾತ್ಕಾರವಾಯಿತು. ಅದೇ ಪ್ರಾಂತ್ಯ ಭಾಷೆಯಲ್ಲಿ ಜನ ಅದನ್ನು ಓದುವಂತೆ ಮಾಡುವುದೇ ಉಸ್ಮಾನನ ಉದ್ದೇಶವಾಗಿತ್ತು. ಕುರಾನಿನ ಅಧ್ಯಾಯಗಳಿಗೆ ಕೊಟ್ಟಿರುವ ಶಿರೋನಾಮೆಗಳು ಮುಖ್ಯ ಹೆಸರುಗಳಿಗೆ, ದೃಷ್ಟಾಂತ ಕಥೆಗಳಿಗೆ ಅಥವಾ ಅಧ್ಯಾಯಗಳ ಪ್ರಾರಂಭದಲ್ಲಿ ಸೂಚಿಸಿರುವ ವರ್ಣಮಾಲೆಯ ಅಕ್ಷರ ಅಥವಾ ಅಕ್ಷರಗಳಿಗೆ ಸಂಬಂಧಪಟ್ಟಂತಿವೆ. ಉದಾಹರಣೆಗೆ ಅಲ್-ಫತೆ-ಹ ಅಥವಾ ಪ್ರಾರಂಭಿಕ ಅಧ್ಯಾಯ ಎಂದು ಒಂದನೆಯ ಅಧ್ಯಾಯವನ್ನು ಹೆಸರಿಸಿದೆ. ಅದರ ಪ್ರಾರಂಭದ ಪದಗಳು ಅಲ್ ಅಹಮದ್' ಇತ್ಯಾದಿಯಾಗಿರುವುದರಿಂದ ಅದನ್ನು ಅಲ್ ಅಹಮದ್ ಎಂದು ಸಹ ಕರೆಯಲಾಗಿದೆ.
 
==ಸಾಹಿತ್ಯ ಮತ್ತು ಶೈಲಿ==
ಕುರಾನ್ ಪರಮಾತ್ಮನ ಅಮರವಾಣಿ. ಅಪ್ರತಿಮ ಭಾಷಾ ಸೌಂದರ್ಯದಿಂದ ಈ ಅಮರವಾಣಿ ಹೊರಟಿದೆ. ಈ ಗ್ರಂಥದಲ್ಲಿ ಮೂರ್ತವಾಗಿರುವ ತತ್ತ್ವಗಳು ಸತ್ಯದ ಘೋಷಣೆ ಎಂದು ಪ್ರತಿಯೊಬ್ಬ ಮುಸಲ್ಮಾನನೂ ನಂಬುತ್ತಾನೆ. ಮುಸ್ಲಿಮೇತರರು ಹಾಗೂ ಯೂರೋಪಿನ ವಿಮರ್ಶಕರು ಇದರ ಸಾಹಿತ್ಯ ಪ್ರತಿಭೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಶ್ರೋತೃಗಳಿಗೆ ಕುರಾನಿನ ವಚನಗಳು ಎಷ್ಟು ಆಕರ್ಷಣೀಯವಾಗಿದ್ದುವೆಂದರೆ, ಪೈಗಂಬರನ ವಿರೋಧಿಗಳನೇಕರು ಅವು ಮಾಟದ ಇಲ್ಲವೆ ಮಾಯೆಯ ಜಾಲವೆಂದು ತಿಳಿದರು' ಎಂದು ಕುರಾನನ್ನು ಅನುವಾದ ಮಾಡಿ ಪ್ರಸಿದ್ಧರಾದ ಮ್ಹಿಸೇಲ್ ಅವರು ಹೇಳುತ್ತಾರೆ. ಮಕ್ಕಾನಗರದಲ್ಲಿ ಪಂಡಿತರೆಂದೂ ಕೊರೈಷ್ ಪಂಗಡದ ಮುಖಂಡರೆಂದೂ ಗಣ್ಯಸ್ಥಾನ ಪಡೆದಿದ್ದ ಪೈಗಂಬರನ ಉಗ್ರ ವಿರೋಧಿಗಳು ಸಹ ಹೀಗೆ ಟೀಕಿಸಿರುವುದನ್ನು ಕುರಾನು ಸ್ವತಃ ವ್ಯಕ್ತಿಪಡಿಸುತ್ತದೆ. ಈ ವಿರೋಧಿಗಳಲ್ಲಿ ಮುಘೀರನ ಮಗ ವಾಲೀದ್ ಒಬ್ಬ. ಈತ ಖ್ಯಾತಿವೆತ್ತ ಸೇನಾಧಿಪತಿ ಖಲೀದನ ತಂದೆ, ಕುರಾನಿನ ಕೆಲವು ವಚನಗಳನ್ನು ಕೇಳಿದ ವಾಲೀದ್ ಮಾಡಿದ ಕೆಲವು ಟೀಕೆಗಳನ್ನು ಕುರಾನಿನ ಈ ಕೆಳಕಂಡ ಸುರಾದಲ್ಲಿ ಸೊಗಸಾಗಿ ವರ್ಣಿಸಲಾಗಿದೆ.
"https://kn.wikipedia.org/wiki/ಕುರಾನು" ಇಂದ ಪಡೆಯಲ್ಪಟ್ಟಿದೆ