ಪರಮಹಂಸ ಯೋಗಾನಂದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಜನನ ವಿವರ++
೧೯ ನೇ ಸಾಲು:
 
==ಯುಕ್ತೇಶ್ವರ ಗಿರಿ ಗುರುವಿನೊಡನೆ==
[[File:Sri-Yukteswar-1.jpg|thumb|ಯೋಗಿ ಶ್ರೀ ಯುಕ್ತೇಶ್ವರ ಗಿರಿ1ಗಿರಿ; ಪರಮಹಂಸ ಯೋಗಾನಂದರ ಗುರುಗಳು]]
*ವಾರಾಣಸಿಯಲ್ಲಿ 27 ದಿನ ಇದು ರೈಲಿನಲ್ಲಿ ಸಿರಾಂಪುರಕ್ಕೆ ಹೋಗಿ, ಯುಕ್ತೇಶ್ವರರ ಆಶ್ರಮಕ್ಕೆ ಮುಕುಂದ ಬಂದರು. ಗುರುಗಳು ಕೆಲದಿನಗಳಲ್ಲಿ ಅವರಿಗೆ ಕ್ರಿಯಾಯೋಗದ ದೀಕ್ಷೆ ನೀಡಿದರು. ಅವರ ಆಣತಿಯಂತೆ ಕಲ್ಕತ್ತೆಗೆ ಹಿಂತಿರುಗಿ ಬಂದು ಕಾಲೇಜು ಸೇರಿಕೊಂಡರು. ಬಿಡುವಾದಾಗಲೆಲ್ಲಾ ಯುಕ್ತೇಶ್ವರರ ಆಶ್ರಮಕ್ಕೆ ಹೋಗುತ್ತಿದ್ದರು. ಗುರುಗಳ ಸಾನ್ನಿಧ್ಯ ಎಲ್ಲ ಸಂಶಯಗಳನ್ನು ನೀಗಿಸುತ್ತಿತ್ತು. ಗುರು-ಶಿಷ್ಯರು ಅನೇಕ ರಾತ್ರಿಗಳನ್ನು ಆಧ್ಯಾತ್ಮಿಕ ಚರ್ಚೆಯಲ್ಲಿ ಕಳೆಯುತ್ತಿದ್ದರು. ಗುರುಗಳ ಅಪೂರ್ವ ಆಧ್ಯಾತ್ಮಿಕ ಪ್ರಭಾವವನ್ನು ಮುಕುಂದ ಅನುಭವಿಸುತ್ತಿದ್ದರು. ಯುಕ್ತೇಶ್ವರರು ಯೌಗಿಕ ಸ್ಥಿತಿಯ ನೆಲೆಗಳನ್ನು ಪ್ರಯೋಗದ ಮೂಲಕ ಮುಕುಂದ ಅವರಿಗೆ ಮಾಡಿ ತೋರಿಸುತ್ತಿದ್ದರು. ಸವಿಕಲ್ಪ ಸಮಾಧಿಯಿಂದ ನಿರ್ವಿಕಲ್ಪ ಸಮಾಧಿಯನ್ನು ತಲುಪವವರೆಗೂ ಯೋಗಸಿದ್ಧಯನ್ನೂ ಅದರ ರಹಸ್ಯವನ್ನೂ ಮುಕುಂದ ಅವರಿಂದ ಪಡೆದರು. ಒಮ್ಮೆ ಸ್ವಾಮೀಜಿ ‘ಸೃಷ್ಟಿಯು ನಿಯಮಕ್ಕೆ ಬದ್ಧವಾದುದು. ವಿಜ್ಞಾನಿಗಳು ಹೊರಗಿನ ವಿಶ್ವದಲ್ಲಿ ಕಾರ್ಯಪ್ರವೃತ್ತವಾದ ನಿಯಮಗಳನ್ನು ತಿಳಿಯುತ್ತಾರೆ. ಅವು ಪ್ರಕೃತಿಸಹಜ ನಿಯಮಗಳಾಗಿವೆ. ಆದರೆ, ಜಗತ್ತನ್ನು ಮೀರಿ ಸುಪ್ತವಾದ ಆಧ್ಯಾತ್ಮಿಕ ಸ್ತರಗಳನ್ನು ಮತ್ತು ಪ್ರಜ್ಞೆಯ ಅಂತಃಸಾಮ್ರಾಜ್ಯವನ್ನು ಆಳುವುದಕ್ಕೆ ಸೂಕ್ಷ್ಮವಾದ ನಿಯಮಗಳಿವೆ. ಯೋಗದ ವಿಜ್ಞಾನದ ಮೂಲಕ ಮಾತ್ರಾ ಅವನ್ನು ತಿಳಿಯಲು ಸಾಧ್ಯ ಎಂದರು. ಇದು ಆತ್ಮಸಾಕ್ಷಾತ್ಕಾರ ಪಡೆದ ಯೋಗಿಯಾದ ವಿಜ್ಞಾನಿಗೆ ಮಾತ್ರ ಸಾಧ್ಯ’ವೆಂದು ಯೋಗವಿಜ್ಞಾನದ ರಹಸ್ಯಗಳನ್ನು ಮುಕಂದ ಅವರಿಗೆ ಯುಕ್ತೇಶ್ವರರು ತಿಳಿಸಿಕೊಟ್ಟರು. ಮುಕುಂದ 1915 ರ ಜೂನ್ನಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಅಂಕಗಳೊಂದಿಗೆ ತತ್ತ್ವಶಾಸ್ತ್ರ ಪದವಿಯನ್ನು ಗಳಿಸಿದಾಗ ತಂದೆ ಘೋಷರಿಗೆ ಬಹಳ ಸಂತಸವಾಯಿತು.
 
==ಸಂನ್ಯಾಸ ದೀಕ್ಷೆ==
*ಮುಕುಂದ ಅವರು ಆಧ್ಯಾತ್ಮಿಕ ಸಾದನೆಯಲ್ಲ ನಿರುತರಾಗಿ ಇರುತ್ತಿದ್ದರು. ಪದವಿಯ ನಂತರ ಸಂನ್ಯಾಸದೀಕ್ಷೆಯನ್ನು ಪಡೆಯುವ ಬಯಕೆಯಾಯಿತು. ಅವರು ಯುಕ್ತೇಶ್ವರರಿಗೆ ಆ ದೀಕ್ಷೆಯನ್ನು ಸಕಾಲದಲ್ಲಿ ಕೊಡುತ್ತೇನೆಂದು ಹೇಳಿದ್ದ ಮಾತನ್ನು ನೆನಪಿಸಿದರು. ವಿಶೇಷ ಬಾಹ್ಯಾಚರಣೆಯಿಲ್ಲದೆ, ಯೋಗ ಮಾರ್ಗದಲ್ಲಿ ಮುಕುಂದ ಅವರನ್ನು ಸ್ವಾಮಿಯನ್ನಾಗಿ ಮಾಡಿ, ಅವನ ಅಪೇಕ್ಷೆಯಂತೆ ‘ಯೋಗಾನಂದ’ ಎಂಬ ಹೆಸರಿನ ಅಭಿಧಾನ ಕೊಟ್ಟರು. ‘ಯೋಗದ ಮೂಲಕ ಪರಮಾತ್ಮನನ್ನು ಸೇರುವ ಮೂಲಕ(ಸಾಯುಜ್ಯದಿಂದ) ಆನಂದ’ ಎಂಬುದು ಇದರ ಅರ್ಥವಾಗಿತ್ತ್ತು. ಯೋಗಿ ಯುಕ್ತೇಶ್ವರರು ಮಾಡಿದ ಪರಮಾಶೀರ್ವಾದದಲ್ಲಿ ಯೋಗಾನಂದರಿಗೆ ಕೆಲ ವಿಶಿಷ್ಟವಾದ ಅನುಭವಗಳಾದವು. ಯೋಗಾನಂದರು ಧ್ಯಾನದಲ್ಲಿದ್ದಾಗ ಅಂತರ್ವಾಣಿಯಿಂದ ಅಣ್ಣ ಅನಂತ ಕಾಯಿಲೆಯಿಂದ ಹಾಸಿಗೆ ಹಿಡಿದಿರುವುದು ತಿಳಿಯಿತು. ಅವರು ಮನೆಗೆ ಭೇಟಿಕೊಟ್ಟು ಅಣ್ನನಿಗೆ ಸಾಂತ್ವನ ಹೇಳಿದರು.
"https://kn.wikipedia.org/wiki/ಪರಮಹಂಸ_ಯೋಗಾನಂದ" ಇಂದ ಪಡೆಯಲ್ಪಟ್ಟಿದೆ