ಪರಮಹಂಸ ಯೋಗಾನಂದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
::'''ಅಪಾನೇ ಜುಹ್ವತಿ ಪ್ರಾಣಂ ಪ್ರಾಣಾಪಾನಂ ತಥಾಪರೇ|ಪ್ರಾಣಾಪಾನ ಗತೀ ರುದ್ಧ್ವಾ ಪ್ರಾಣಾಯಾಮ ಪಾರಾಯಣಾಃ||ಅ.೪; ಶ್ಲೋ.೨೯||'''
*ಕ್ರಿಯಾಯೋಗದಲ್ಲಿ ದೈಹಿಕ ಶಿಕ್ಷಣವೂ ಮನೋನಿಯಂತ್ರಣವೂ ಪ್ರಣವದ ಧ್ಯಾನ ಎಲ್ಲವೂ ಸೇರುತ್ತವೆ. ಕ್ರಿಯಾಯೋಗವು ದೇಹ-ಮನಸ್ಸುಗಳ ಮೇಲೆ ಪ್ರಭುತ್ವ ಸಾಧಿಸುವ ಮಾರ್ಗವಾಗಿದೆ. ಅಂತಿಮವಾಗಿ 'ಅದೇ ನಾನು' - 'ಸೋ ಹಂ'ಎಂಬುದು ಅರಿವಾಗುತ್ತದೆ. ಈ ಕ್ರಿಯಾಯೋಗವೇ ನಿಜವಾದ ಅಗ್ನಿಕಾರ್ಯ. ಹಿಂದಿನ ಮತ್ತು ಇಂದಿನ ಬಯಕೆಗಳೆಲ್ಲ ದೈವೀಪ್ರೇಮವೆಂಬ ಅಗ್ನಿಗೆ ಆಹುತಿಯಾಗುತ್ತದೆ. ಕೊಳೆ ಕಳೆದುಕೊಂಡ ಮಾನವ ಪರಿಶುದ್ಧನಾಗುತ್ತಾನೆ. ಯೋಗಾನಂದರು ಕ್ರಿಯಾಯೋಗ ವಿಜ್ಞಾನವನ್ನು ಸರಳವಾಗಿಯೂ ಶಾಸ್ತ್ರಬದ್ಧವಾಗಿಯೂ ವಿಶ್ವಕ್ಕೆ ಸಾರಿದರು. ಮೇಲಿನದೇ <ref>Autobiography of a Yogi</ref> <ref>ಕ್ರಿಯಾಯೋಗದ ಪಾಠಗಳು ಯೋಗದಾ ಆಶ್ರಮ</ref>
==ಕ್ರಿಯಾಯೋದಕ್ರಿಯಾಯೋಗದ ಪ್ರಸಾರ==
* ಕ್ರಿಯಾಯೋಗದ ಸರಿಯಾದ ಶಿಕ್ಷಣವನ್ನು ಯುವಕರಿಗೆ ಕೊಡಬೇಕೆಂಬ ಅಭೀಪ್ಸೆಯಿಂದ ಯೋಗಾನಂದರು ಬಂಗಾಳದ ದಿಹಿಕಾ ಎಂಬ ಹಳ್ಳಿಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ನಂತರ 1918ರಲ್ಲಿ ರಾಂಚಿಯಲ್ಲಿ ‘ಯೋಗದಾ ಸತ್ಸಂಗ ಬ್ರಹ್ಮಚರ್ಯ ವಿದ್ಯಾಲಯ’ ವನ್ನು ಆರಂಭಿದರು. ಅಲ್ಲಿ ನೈತಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನೊಳಗೊಂಡ ಶಿಕ್ಷಣಕ್ರಮವನ್ನು ರೂಪಿಸಿದರು. ಆಧುನಿಕ ಶಿಕ್ಷಣದ ಜತೆಗೆ ಯೋಗ-ಧ್ಯಾನ-ಪ್ರಾಣಾಯಾಮದ ವಿವಿಧ ಹಂತಗಳನ್ನು ಕಲಿಸತೊಡಗಿದರು. ಅದೇಸಮಯದಲ್ಲಿ ರವೀಂದ್ರನಾಥ ಟ್ಯಾಗೋರರು ಶಾಂತಿನಿಕೇತನವನ್ನು ನಡೆಸುತ್ತಿದ್ದರು. ತಮ್ಮ ಆಪ್ತಕಾರ್ಯದರ್ಶಿ ಸಿ.ಎಫ್. ಆಂಡ್ರೂಸ್ ಮೂಲಕ ಟ್ಯಾಗೋರರಿಗೆ ಯೋಗಾನಂದರ ಪರಿಚಯವಾಯಿತು. ಈ ಇಬ್ಬರು ಮಹನೀಯರು ಕಲೆ, ಸಾಹಿತ್ಯ, ತತ್ತ್ವಜ್ಞಾನ, ವಿಜ್ಞಾನಗಳನ್ನು ಕುರಿತು ವಿಚಾರವಿನಿಮಯ ನಡೆಸಿದರು. ಆಗಷ್ಟೇ ಮೊದಲನೇ ವಿಶ್ವಯುದ್ಧ ಮುಗಿದಿತ್ತು. 1920ರ ಆಗಸ್ಟ್‍ನಲ್ಲಿ ‘ದಿ ಸಿಟಿ ಆಫ್ ಸ್ಪಾರ್ಟ್’ ಎಂಬ ಹಡಗಿನಲ್ಲಿ ಯೋಗಾನಂದರು ಅಮೆರಿಕೆಗೆ ಹೊರಟರು. ಬೋಸ್ಟನ್ನಲ್ಲಿನ ಧರ್ಮಸಮ್ಮೇಳನದಲ್ಲಿ ಅವರು ಭಾಗವಹಿಸುವಕಾರ್ಯಕ್ರಮವಿತ್ತು. ಪರಮಹಂಸ ಯೋಗಾನಂದರು 1920ರ ಅಕ್ಟೋಬರ್ 6 ರಂದು ನಡೆದ ಜ್ಞಾನಸಮ್ಮೇಳನದಲ್ಲಿ ‘ಧರ್ಮ ಮತ್ತು ವಿಜ್ಞಾನ’ ಕುರಿತು ಉದ್ಬೋಧಕ ಉಪನ್ಯಾಸ ನೀಡಿದರು. ಅದು ಮರುದಿನ ಪತ್ರಿಕೆಯಲ್ಲಿ ಪ್ರಕಟವಾಗಿ ಅವರ ಹೆಸರು ಅಮೇರಕಾದಲ್ಲ ಹಾಗೂ ವಿಶ್ವದಲ್ಲಿ ಪ್ರಸಿದ್ಧವಾಯಿತು. ನಂತರ 1924ರಲ್ಲಿ ಖಂಡಾಂತರ ಪ್ರವಾಸ ಕೈಗೊಂಡು ಜಗತ್ತಿನ ಅನೇಕಕಡೆ ಉಪನ್ಯಾಸ ನೀಡಿದರು. ಅಧ್ಯಾತ್ಮ ಜಿಜ್ಞಾಸು ವಿದ್ಯಾರ್ಥಿಗಳ ನೆರವಿನಿಂದ 1925 ರ ಅಂತ್ಯದ ವೇಳೆಗೆ ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸಿನ ‘ಮೌಂಟ್ ವಾಷಿಂಗ್ಟನ್ ಎಸ್ಟೇಟ್’ ಬೆಟ್ಟದ ಮೇಲೆ ಅವರು ‘ಯೋಗಕೇಂದ್ರ’ವನ್ನು ಸ್ಥಾಪಿಸಿದರು. ಯೋಗಾನಂದರು ಅಮೆರಿಕದಲ್ಲಿ 15 ವರ್ಷಗಳ ಕಾಲ ಇದ್ದು ಅಲ್ಲಿ ನೂರಾರು ವಿದ್ಯಾರ್ಥಿಗಳನ್ನು ಶಿಷ್ಯರಾಗಿ ಸ್ವೀಕರಿಸಿ ಕ್ರಿಯಾಯೋಗದ ಕ್ರಮವನ್ನು ಬೋಧಿಸಿದರು. ಅಮೇರಿಕಾದಲ್ಲಿ ಒಮ್ಮೆ ಯೋಗಾನಂದರು ಧ್ಯಾನದಲ್ಲಿರುವಾಗ ಯುಕ್ತೇಶ್ವರರ ಧ್ವನಿ ಅವರ ಒಳಮನಸ್ಸಿಗೆ ಕೇಳಿಸಿತು- ‘ಬೆಳಕಿನ ಬೀಡಿಗೆ ಹೋಗುತ್ತಿರುವೆ, ನೀನು ಬಾ’ ಎಂದಂತಾಯಿತು. 1935ರ ಮಾರ್ಚಿನಲ್ಲಿ ಅವರು ಹಿಂದಿರುಗುವಾಗ ಕ್ಯಾಲಿಫೋರ್ನಿಯಾ ಸಂಸ್ಥಾನದ ಕಾನೂನಿನ ಪ್ರಕಾರ ‘ಸೆಲ್ಪ್ರಿಯಲೈಸೇಷನ್ ಫೆಲೋಷಿಪ್’ ಸಂಸ್ಥೆ ತೆರೆದರು. ಆಗಸ್ಟ್ 22ರಂದು ಮುಂಬೈ ತಲುಪಿದರು. ಅಲ್ಲಿಂದ ಕಲ್ಕತ್ತೆಗೆ ಬಂದು ಅಲ್ಲಿಂದ ಸಿರಾಂಪುರದ ಆಶ್ರಮ ತಲುಪಿದಾಗ ಯುಕ್ತೇಶ್ವರರು ಶಿಷ್ಯನಿಗಾಗಿ ಕಾದಿದ್ದರು. ಯೋಗಾನಂದರು ಗುರುವಿನ ಪಾದಗಳಿಗೆ ಮಣಿದರು, ಯುಕ್ತೇಶ್ವರರು ಆಲಿಂಗಿಸಿಕೊಂಡರು.<ref>[ಮೇಲಿನದೇ ಗ್ರಂಥ- Yogananda, p. 395]</ref>
 
==ಕೊನೆಯ ದಿನಗಳು==
*ಯೋಗಾನಂದರು 1935ರ ನವೆಂಬರಿನಲ್ಲಿ ದಕ್ಷಿಣಭಾರತದ ಪ್ರವಾಸ ಕೈಗೊಂಡರು. ಅವರು ಉಸ್ಮಾನಿಯಾ ವಿಶ್ವವಿದ್ಯಾಲಯ, ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್, ಪುಟ್ಟಣ್ಣಚೆಟ್ಟಿ ಪುರಭವನ, ಮೈಸೂರಿನ ಪುರಭವನ, ಮಹಾರಾಜ ಕಾಲೇಜು ಮೊದಲಾದೆಡೆ ಉಪನ್ಯಾಸ ನೀಡಿದರು. ನಂತರ ಮದರಾಸಿಗೆ ಹೋಗಿ ಅಲ್ಲಿ ಅನೇಕ ಕಡೆ ಉಪನ್ಯಾಸ ನೀಡಿದರು. ‘ಸದಾಶಿವಬ್ರಹ್ಮೇಂದ್ರ’ರ ಪವಿತ್ರಸ್ಥಳಕ್ಕೆ ಭೇಟಿ ಕೊಟ್ಟಾಗ ಅವರಿಗೆ ಅನಿರ್ವಚನೀಯ ಅನುಭವವಾಯಿತು ಎಂದಿದ್ದಾರೆ. ನಂತರ ಶ್ರೀರಮಣ ಮಹರ್ಷಿಗಳನ್ನು ಕಾಣಲು ಅರುಣಾಚಲಕ್ಕೆ ತೆರಳಿದರು. ಅಲ್ಲಿ ರಮಣರ ದೈವೀಪ್ರೇಮದ ಅನುಭವ ಪಡೆದರು. ಮತ್ತೆ ಯುಕ್ತೇಶ್ವರರ ಸೆಳೆತ ಪ್ರಾರಂಭವಾದಾಗ, ಆಶ್ರಮಕ್ಕೆ ಹಿಂತಿರುಗಿ ಅವರ ಜತೆ ಕೊನೆಗಾಲವನ್ನು ಕಳೆದರು. 1936ರ ಮಾರ್ಚ್ 9ರಂದು ಯುಕ್ತೇಶ್ವರರು ಮಹಾಸಮಾಧಿ ಪ್ರವೇಶಿಸಿದರು.
"https://kn.wikipedia.org/wiki/ಪರಮಹಂಸ_ಯೋಗಾನಂದ" ಇಂದ ಪಡೆಯಲ್ಪಟ್ಟಿದೆ