ಪರಮಹಂಸ ಯೋಗಾನಂದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೩ ನೇ ಸಾಲು:
 
==ವಿದ್ಯಾಭ್ಯಾಸ==
*ಮುಕುಂದರ ತಂದೆ ಭಗವತೀ ಚರಣರು ಕಾಯಂ ನೌಕರರಾಗಿ ಕಲ್ಕತ್ತದಲ್ಲಿ ನೆಲೆಸಿದ್ದರು. ಪ್ರೌಢಶಾಲೆಯಲ್ಲಿ ಓದುತ್ತಿದ್ದ ಮುಕುಂದನಿಗೆ ಹಿಮಾಲಯಕ್ಕೆ ಹೋಗಬೇಕೆಂಬ ಬಯಕೆಯಾಯಿತು. ಒಮ್ಮೆ ಕಂಬಳಿ, ಪಾದರಕ್ಷೆ, ಕೌಪೀನ, ಜಪಸರ, ಲಾಹಿರೀ ಮಹಾಶಯರ ಭಾವಚಿತ್ರ ಹಾಗೂ ಗೀತೆಯ ಪುಸ್ತಕಗಳನ್ನು ಬಟ್ಟೆಯಲ್ಲಿ ಗಂಟುಕಟ್ಟಿ ಹೊರಡಲು ಯತ್ನಿಸಿದರು ಅದರೆ ಸಾಧ್ಯವಾಗಲಿಲ್ಲ. ತಂದೆಗೆ ಇದು ತಿಳಿಯಿತು. ಅವರು ಮಗನಿಗೆ ‘ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸು, ನಂತರ ನೋಡೋಣ’ ಎಂದು ಬುದ್ಧಿವಾದ ಹೇಳಿದರು. ಈ ನಡುವೆ ಮುಕುಂದನು ಗಂಧಬಾಬಾ, ಹುಲಿಸ್ವಾಮಿ, ನಾಗೇಂದ್ರನಾಥ ಬಾದುರಿ, ಮಾಸ್ಟರ್ ಮಹಾಶಯ, ವಿಜ್ಞಾನಿ [[ಜಗದೀಶಜಗದೀಶ್ಚಂದ್ರ ಚಂದ್ರಬೋಸ್ಬೋಸ್]] ಇವರನ್ನು ಭೇಟಿಯಾದರು. ಮಾಸ್ಟರ್ ಮಹಾಶಯನ ಜತೆ ಕಾಳಿಘಾಟಿಗೆ ಹೋಗಿ ಕಾಳಿ ಆರಾಧನೆ ಮಾಡಿದ, [[ರಾಮಕೃಷ್ಣ ಪರಮಹಂಸ]]ರ ಬಗೆಗೆ ಕೇಳಿ ಕೆಲಹೊತ್ತು ಧ್ಯಾನಸ್ಥನಾದ. ಈ ನಡುವೆ ಪ್ರೌಢಶಾಲಾ ವ್ಯಾಸಂಗದ ಅಂತಿಮವರ್ಷದ ಪರೀಕ್ಷೆಗೆ ಕುಳಿತರು. ತರುವಾಯದಲ್ಲಿ ಆಧ್ಯಾತ್ಮಿಕ ಶಿಕ್ಷಣಕ್ಕೆಂದು ವಾರಾಣಾಸಿಯ ‘ಶ್ರೀ ಭಾರತಧರ್ಮ ಮಹಾಮಂಡಲ’ಕ್ಕೆ ಸೇರಿದರು. ಅಲ್ಲಿ ಉಪವಾಸ ಮಾಡುತ್ತ, [[ಸ್ವಾಮಿ ದಯಾನಂದ ಸರಸ್ವತಿ]]ಯವರ ಸೂಚನೆಯಂತೆ ಧ್ಯಾನ-ತಪಸ್ಸಿನ ಅಭ್ಯಾಸವನ್ನು ಮುಂದುವರಿಸಿದರು. ಒಮ್ಮೆ ಅವರಿಗೆ ಕಾಷಾಯವಸ್ತ್ರ ಧರಿಸಿದ್ದ ಸಂತರ ದರ್ಶನವಾಯಿತು. ಅವರು ಸೂಜಿಗಲ್ಲಿನಂತೆ ಇವರನ್ನು ಸೆಳೆದರು. ಅವರ ನಿರರ್ಗಳ ವಾಗ್ಝರಿ ಇವರ ಮನಸ್ಸಿಗೆ ನಾಟಿತು. ಅವರು ‘ನನ್ನ ಆಶ್ರಮ ಮತ್ತು ಸರ್ವಸ್ವವನ್ನು ಕೊಡುವೆ ಬಾ’ ಎಂದಿದ್ದಕ್ಕೆ ಮುಕುಂದ ‘ಜ್ಞಾನ ಮತ್ತು ದೈವಸಾಕ್ಷಾತ್ಕಾರ ಪಡೆಯುವುದಕ್ಕೆ ಮಾತ್ರ ಬರುತ್ತೇನೆ’ ಎಂದು ದೃಢವಾಗಿ ಹೇಳಿದ. ಆಗ ಆ ಯೋಗಿಗಳು ‘ನನ್ನ ಹೆಸರು ಸ್ವಾಮಿ ಶ್ರೀಯುಕ್ತೇಶ್ವರ ಗಿರಿ, ನನ್ನ ಆಶ್ರಮ ಕಲ್ಕತ್ತೆಗೆ ಸಮೀಪದ ಸಿರಾಂಪುರದಲ್ಲಿದೆ’ ಎಂದಾಗ ಮುಕುಂದನಿಗೆ ಅವರು ಲಹರಿಮಹಾಶಯರ ಶಿಷ್ಯರೆಂದು ತಿಳಿದು ಅಚ್ಚರಿಯಾಯಿತು.
 
==ಯುಕ್ತೇಶ್ವರ ಗಿರಿ ಗುರುವಿನೊಡನೆ==
"https://kn.wikipedia.org/wiki/ಪರಮಹಂಸ_ಯೋಗಾನಂದ" ಇಂದ ಪಡೆಯಲ್ಪಟ್ಟಿದೆ