ವಜ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೫ ನೇ ಸಾಲು:
ಪ್ರತಿವರ್ಷ ಸುಮಾರು ೧೩ ಕೋಟಿ [[ಕ್ಯಾರಟ್]] (೨೬೦೦೦ ಕಿ.ಗ್ರಾಂ) ಗಳಷ್ಟು ವಜ್ರವನ್ನು ಗಣಿಗಳಿಂದ ಪಡೆಯಲಾಗುವುದು. ಇದರ ಒಟ್ಟು ಮೌಲ್ಯ ಸುಮಾರು ೯ [[ಬಿಲಿಯನ್]] ಡಾಲರುಗಳಷ್ಟು. ಇದಲ್ಲದೆ ಸಾಲಿಯಾನ ಸುಮಾರು ೧೦೦,೦೦೦ ಕಿಲೋಗ್ರಾಂ ಗಳಷ್ಟು ಕೃತಕ ವಜ್ರವನ್ನು ಉತ್ಪಾದಿಸಲಾಗುತ್ತದೆ. ಈ ಕೃತಕ ವಜ್ರವು ಹೆಚ್ಚಾಗಿ ಕೈಗಾರಿಕೆಗಳಲ್ಲಿ ಬಳಸಲ್ಪಡುತ್ತದೆ.
ವಜ್ರದ ಆಂಗ್ಲ ಹೆಸರಾದ ಡೈಮಂಡ್ ಪದವು ಅಜೇಯ ಎಂಬ ಅರ್ಥವುಳ್ಳ ಅದಮಾಸ್ ಎಂಬ [[ಗ್ರೀಕ್ ಭಾಷೆ|ಗ್ರೀಕ್]] ಶಬ್ದದಿಂದ ವ್ಯುತ್ಪತ್ತಿಯಾಗಿದೆ.
ವಜ್ರದ ಗುಣಮಟ್ಟವನ್ನು ಅದರ ತೂಕ ([[ಕ್ಯಾರಟ್]]), ಬಣ್ಣ, ಕತ್ತರಿಸಲ್ಪಟ್ಟ ರೀತಿ ಮತ್ತು ಸ್ಪಷ್ಟತೆಗಳಿಂದ ಅಳೆಯಲಾಗುತ್ತದೆ.
ಜಗತ್ತಿನ ಒಟ್ಟು ನೈಸರ್ಗಿಕ ವಜ್ರಗಳಲ್ಲಿ ೪೯% ಪಾಲು [[ಮಧ್ಯ ಆಫ್ರಿಕಾ|ಮಧ್ಯ]] ಮತ್ತು [[ದಕ್ಷಿಣ ಆಫ್ರಿಕಾ (ಪ್ರದೇಶ)|ದಕ್ಷಿಣ ಆಫ್ರಿಕಾ]]ಗಳಲ್ಲಿ ದೊರೆಯುತ್ತದೆ.
== ವಜ್ರದ ಗುಣಗಳು ==
ವಜ್ರವು ಒಂದು ಪಾರದರ್ಶಕ ಹರಳು. ಇದರಲ್ಲಿ ಇಂಗಾಲದ [[ಪರಮಾಣು]] ಒಂದು ವಿಶಿಷ್ಟ ರೀತಿಯಲ್ಲಿ ಸಂಯೋಜಿಸಸಲ್ಪಟ್ಟಿರುತ್ತವೆ. ತನ್ನ ಹಲವು ಅದ್ಭುತ ಭೌತಿಕ ಗುಣಗಳಿಂದಾಗಿ ವಜ್ರವು ಹಲವು ಉಪಯೋಗಗಳನ್ನು ಕಂಡಿದೆ. ವಜ್ರವು ಅತಿ ಕಠಿಣ ವಸ್ತು. ಇದರ ಬೆಳಕು ಚದುರಿಸುವಿಕೆಯ ಸೂಚ್ಯಂಕ ಬಹಳ ಹೆಚ್ಚು. ವಜ್ರವು ಅತುತ್ತಮ [[ಉಷ್ಣವಾಹಕ]] ಕೂಡ. ವಜ್ರವು ೩೫೪೭ ಡಿಗ್ರಿ ಸೆಂಟಿಗ್ರೇಡ್ ತಾಪಮಾನ್ದಲ್ಲಿ ಕರಗುವುದು ಮತ್ತು ೪೮೨೭ ಡಿಗ್ರಿಯಲ್ಲಿ ಕುದಿಯುತ್ತದೆ. ನೈಸರ್ಗಿಕ ವಜ್ರದ [[ಸಾಂದ್ರತೆ]] ಪ್ರತಿ ಘನ ಸೆಂಟಿಮೀಟರಿಗೆ ೩. ೧೫ ರಿಂದ ೩. ೫೩ ಗ್ರಾಂ ಗಳಷ್ಟಿರುವುದು. ಅತಿ ಶುದ್ಧ ವಜ್ರದ ಸಾಂದ್ರತೆ ೩.೫೨ ಗ್ರಾಂ ನಷ್ಟು.
=== ಕಾಠಿಣ್ಯ ===
|