"ಗೀಜ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ವಿಕೀಕರಣ
ಚು (Shreekant.mishrikoti ಗೀಜ಼ ಪುಟವನ್ನು ಗೀಜ ಕ್ಕೆ ಸರಿಸಿದ್ದಾರೆ: ಸರಿಯಾದ ಹೆಸರು)
(ವಿಕೀಕರಣ)
ಟ್ಯಾಗ್: 2017 source edit
ಉತ್ತರ [[ಈಜಿಪ್ಟ್|ಈಜಿಪ್ಟನಲ್ಲಿ]] [[ನೈಲ್]] ನದಿಯ [[ಪಶ್ಚಿಮ]] ದಂಡೆಯ ಮೇಲೆ, [[ಕೈರೋ]] ನಗರಕ್ಕೆ ಇದಿರಾಗಿದ್ದ ಒಂದು ನಗರ. ಗೀಜ಼ ಆಡಳಿತ ವಿಭಾಗದ ಮುಖ್ಯ ಪಟ್ಟಣ. ಕೈರೋದ ಉಪನಗರದಂತಿದೆ. ಕೈರೋಗೂ ಗೀಜ಼ಕ್ಕೂ ನೈಲ್ ನದೀ ದ್ವೀಪಗಳಾದ ರೋಡ ಮತ್ತು ಗೆಜ಼ಿರಗಳ ಮೂಲಕ ಸೇತುವೆಗಳಿವೆ. ಇದು ಕೈರೋ ವಿಶ್ವವಿದ್ಯಾಲಯದ ಕೇಂದ್ರ. ಇಲ್ಲಿ ಪ್ರಾಣಿ ಮತ್ತು ಸಸ್ಯಶಾಸ್ತ್ರಕ ಉದ್ಯಾನಗಳುಂಟು. ಇದು ಈಜಿಪ್ಟಿನ ಚಲನಚಿತ್ರ ಉದ್ಯಮದ ಕೇಂದ್ರ. ಇಲ್ಲಿ ಹತ್ತಿ, ಜವಳಿ, ಪಾದರಕ್ಷೆ, ಬೀರ್, ಇಟ್ಟಿಗೆ ಕೈಗಾರಿಕೆಗಳಿವೆ. ಪ್ರಸಿದ್ಧ ಪಿರಮಿಡ್ಗಳು ಇರುವುದು ಇಲ್ಲಿಂದ ಪಶ್ಚಿಮಕ್ಕೆ, 8 ಕಿಮೀ ದೂರದಲ್ಲಿ.
 
ನೈಲ್ ನದಿಯ ಆಚೀಚೆ, ಉತ್ತರದಲ್ಲಿರುವ ನೈಲ್ನದಿ ಶಾಖೆಯಾದ ರೊಸೆಟ್ಟದಿಂದ ಹಿಡಿದು ದಕ್ಷಿಣದ ಬನಿಸುವೇಫ್ ಆಡಳಿತ ವಿಭಾಗದವರೆಗೆ, ಇರುವ ಕಿರಿದಾದ ಪ್ರದೇಶ ಗೀಜ಼ ಆಡಳಿತ ವಿಭಾಗವಾಗಿದೆ. ಇದರ ವಿಸ್ತೀರ್ಣ 867.5 ಚ.ಕಿಮೀ ಸ್ಪಿಂಕ್ಸ್ ಮತ್ತು ಹಲವು ಪ್ರಸಿದ್ಧ ಪಿರಮಿಡ್ಗಳು ಇರುವುದು ಈ ಪ್ರದೇಶದಲ್ಲಿ. ಕಟ್ಟಡಗಳಿಗೆ ಉಪಯುಕ್ತವಾದ ಸುಣ್ಣದ ಕಲ್ಲುಗಳನ್ನು ತೆಗೆಯುತ್ತಿದ್ದ ಸ್ಥಳ ಟುರಾ. ಈಗಲೂ ಸಿಮೆಂಟ್ ಕೈಗಾರಿಕೆಗಳಿಗೆ ಇಲ್ಲಿಂದ ಸುಣ್ಣಕಲ್ಲುಗಳನ್ನು ಸಾಗಿಸಲಾಗುತ್ತಿದೆ. ಈ ಪ್ರದೇಶದ ಮುಖ್ಯ ಕಸಬು ಬೇಸಾಯ. ಉದ್ಯೋಗನಿರತರಾದ ಜನರಲ್ಲಿ ಶೇ.55 ಮಂದಿ ಬೇಸಾಯದಲ್ಲಿ ತೊಡಗಿದವರು. ನೀರಾವರಿ ಸೌಲಭ್ಯವಿದೆ. ಮುಸುಕಿನ ಜೋಳ, ಹತ್ತಿ, ಗೋದಿ ಮುಖ್ಯವಾದ ಬೆಳೆಗಳು. ಟುರಾಗೆ ದಕ್ಷಿಣದಲ್ಲಿ ಸಕ್ಕರೆ ಕಾರ್ಖಾನೆ ಇದೆ. ಮದ್ಯ ಇಲ್ಲಿಯ ಒಂದು ಉಪೋತ್ಪನ್ನ.
 
ಹಳೆಯ [[ಈಜಿಪ್ಟ್]] ರಾಜ್ಯವನ್ನು ಆಳಿದ ಮೂರನೆಯ ವಂಶದ ರಾಜರ (ಪ್ರ.ಶ.ಪು. 2649-2620) ಕಾಲದಿಂದ ಕಲ್ಲಿನ ಪಿರಮಿಡ್ಡುಗಳನ್ನು ಕಟ್ಟುವ ಪದ್ಧತಿ ಆರಂಭವಾಯಿತು. ಈ ವಾಸ್ತುಶಿಲ್ಪ ಕುಶಲತೆ ಬಹುಬೇಗ ನಾಲ್ಕನೆಯ ವಂಶದ ರಾಜರ ಕಾಲದಲ್ಲಿ (ಪ್ರ.ಶ.ಪು. 2600-2500) ಅತ್ಯಂತ ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿತು. ಇವರು ಗೀಜ಼ದಲ್ಲಿ ಕಟ್ಟಿಸಿದ 2 ಪಿರಮಿಡ್ಗಳಲ್ಲಿ ಈ ವಾಸ್ತುಶಿಲ್ಪದ ಶ್ರೇಷ್ಟಮಟ್ಟವನ್ನು ನೋಡಬಹುದು. ಗೀಜ಼ದಲ್ಲಿ ಪಿರಮಿಡ್ಗಳಲ್ಲದೆ, ಒಂದು ಸಿಂಹದ ದೇಹ ಮತ್ತು ಮನುಷ್ಯನ ತಲೆಯುಳ್ಳ ಸ್ಫಿಂಕ್ಸ್, ಭೂಮಿಯಲ್ಲಿ ಸುಮಾರು 25 ಮೀ ಕೆಳಗೆ ಕೊರೆದು ಮಾಡಿದ ಸುರಂಗಮಾರ್ಗವುಳ್ಳ ಅನೇಕ ಕೋಣೆ ಗೋರಿಗಳು ಇವೆ.
 
== ಗೀಜದಲ್ಲಿನ ಪಿರಮಿಡ್ಡುಗಳು ==
 
ಗೀಜ಼ದಲ್ಲಿ 10 ಪಿರಮಿಡುಗಳಿವೆ. ಇವುಗಳಲ್ಲಿ 3 ದೊಡ್ಡ ಪಿರಮಿಡುಗಳು. ಇವುಗಳನ್ನು ಈಜಿಪ್ಟ್‌ನ ನಾಲ್ಕನೆಯ ರಾಜವಂಶದ (ಪ್ರ.ಶ.ಪು 2720-2560) ಖುಫು (ಚಿಯೋಸ್ಸ್), ಖಾಫ್ರೆ (ಖೆಫ್ರೆನ್) ಮತ್ತು ಮೆಂಕುರೆ (ಮೈಸಿರಿನಸ್) ರಾಜರುಗಳು ಕಟ್ಟಿಸಿದರು. ಇವುಗಳು ಪ್ರ.ಶ.ಪು 2600 ರಿಂದ 2500ರಲ್ಲಿ ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿತು. ಇವರು ಗೀಜ಼ದಲ್ಲಿ ನಿರ್ಮಿಸಿದ 2 ಪಿರಮಿಡುಗಳಲ್ಲಿ ಈ ವಾಸ್ತು ಶಿಲ್ಪದ ಶ್ರೇಷ್ಠಮಟ್ಟವನ್ನು ಕಾಣಬಹುದು. ಹಿರೋಡಾಟಸ್ ಇವನ್ನು ಪ್ರಪಂಚದ ಏಳು ಪ್ರಾಚೀನ ಅದ್ಭುತಗಳಲ್ಲಿ ಸೇರಿಸಿದ್ದಾನೆ.
 
 
ಇವುಗಳಲ್ಲಿ ಅತ್ಯಂತ ದೊಡ್ಡದೂ ಪುರಾತನವೂ ಆದ ಖುಫುವಿನ ಪಿರಮಿಡು ಸು. 232 ಮೀ ಉದ್ದಗಲದ 5 ಹೆಕ್ಟೇರು ವಿಸ್ತೀರ್ಣದ ಮತ್ತು ಸು. 147 ಮೀ ಎತ್ತರದ ಬೃಹತ್ ನಿರ್ಮಾಣ. ಇದರ ಪಾಶರ್್ವಗಳು 51°-52’ ಕೋನದಲ್ಲಿದೆ ಮತ್ತು ಪ್ರತಿ ಮೂಲೆಯೂ ದಿಕ್ಕುಗಳಿಗೆ ಸರಿಯಾಗಿವೆ. ಪಿರಮಿಡಿನ ಒಳಭಾಗವನ್ನು ಹಳದಿ ಬಣ್ಣದ ಸುಣ್ಣಕಲ್ಲಿನ ದಿಮ್ಮಿಗಳಿಂದ ನಿರ್ಮಿಸಲಾಗಿದೆ. ಒಳಗಿನ ಮೊಗಸಾಲೆಗಳಿಗೆ ಜಬಾಲ್ ಟುರಾ ಪ್ರಾಂತ್ಯದ ಸುಣ್ಣಕಲ್ಲನ್ನು ಉಪಯೋಗಿಸಲಾಗಿದೆ. ಶವಕೋಣೆಗೆ ಆಸ್ವಾನ್ ಪ್ರಾಂತ್ಯದ ಗ್ರಾನೈಟ್ ಕಲ್ಲಿನ ದೊಡ್ಡ ದಿಮ್ಮಿಗಳನ್ನು ಬಳಸಲಾಗಿದೆ. ಇದರ ನಿರ್ಮಾಣಕ್ಕೆ 2.3 ಮೆಟ್ರಿಕ್ ಟನ್ ತೂಕದ 23 ಲಕ್ಷ ಕಲ್ಲುಗಳನ್ನು ಬಳಸಲಾಗಿದೆ. ಅಷ್ಟು ಭಾರದ ಕಲ್ಲು ದಿಮ್ಮಿಗಳನ್ನು ಎತ್ತಲು (ಕೆಲವು ದಿಮ್ಮಿಗಳು 16.25 ಮೆಟ್ರಿಕ್ ಟನ್ ತೂಕದ್ದಾಗಿವೆ) ಇಳಿಜಾರಾದ ರಸ್ತೆಗಳನ್ನು ನಿರ್ಮಿಸಿದ್ದರೆಂದು ಊಹಿಸಲಾಗಿದೆ. ಅಷ್ಟು ದೊಡ್ಡ ದಿಮ್ಮಿಗಳನ್ನು ಕೂಡಿಸಿರುವ ಸಂಧಿಗಳು ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವಾಗಿವೆ. ಇದರ ಪಾರ್ಶ್ವಗಳೂ ಸು. 233 ಮೀ ಉದ್ದವಿದ್ದರೂ ವಕ್ರತೆ 1/2 ಡಿಗ್ರಿಗಳಷ್ಟೂ ಇಲ್ಲ. ಇದರ ನಾಲ್ಕು ಕೋನಗಳು ನಿರ್ದಿಷ್ಟ 90°ಗೆ ಸಮವಾಗಿವೆ. ಪಿರಿಮಿಡಿನೊಳಕ್ಕೆ ಹೋಗುವ ಮಾರ್ಗ ಇದರ ಉತ್ತರದಿಕ್ಕಿನಲ್ಲಿ ಭೂ ಮಟ್ಟದಿಂದ ಸು. 18ಮೀ ಎತ್ತರದಲ್ಲಿದೆ. ಕಟ್ಟಡದೊಳಗಿನ ಇಳಿಜಾರಾದ ಮಾರ್ಗ ಒಳಕೋಣೆಗೆ ಸಾಗುತ್ತದೆ. ಅಲ್ಲಿಂದ ಮುಂದೆ ಭೂ ಮಟ್ಟದಿಂದ ತಳಕ್ಕೆ ಒಂದು ಸುರಂಗ ಮಾರ್ಗ ಹೋಗಿ ಒಳಗಿನ ಶವಕೋಣೆಯನ್ನು ತಲುಪುತ್ತದೆ. ಮತ್ತೊಂದು ಮಾರ್ಗ ಹೆಚ್ಚು ಕಡಿಮೆ ಸಮಾನಾಂತರವಾಗಿ ಮುಂದೆ ಸಾಗಿ ರಾಣಿಯ ಕೋಣೆಯನ್ನು ತಲುಪುತ್ತದೆ. ಒಳಕೋಣೆಯಿಂದ ಮತ್ತೊಂದು ಮಾರ್ಗ ಮೇಲ್ಮುಖವಾಗಿ ಸಾಗಿ ಸು. 8.5 ಮೀಗಳೆತ್ತರ ಮತ್ತು ಸು. 47 ಮೀ ಗಳುದ್ದದ ಮೊಗಸಾಲೆಗೆ ಹೋಗುತ್ತದೆ. ಮೊಗಸಾಲೆಯ ತುದಿಯಲ್ಲಿ ರಾಜನ ಕೋಣೆ ಅಥವಾ ಮುಖ್ಯ ಶವಕೋಣೆ ಇದೆ. ಇದು ಸು. 10 ಮೀ ಘಿ 5ಮೀ ಘಿ 3ಮೀ ಪ್ರಮಾಣದಲ್ಲಿದೆ. ರಾಜನ ಕೋಣೆ ಭೂ ಮಟ್ಟದಿಂದ ಸು. 42 ಮೀ ಎತ್ತರದಲ್ಲಿದೆ. ಈ ಕೋಣೆಯಿಂದ ಪಿರಿಮಿಡಿನ ಹೊರಕ್ಕೆ ಎರಡು ಬೆಳಕಿನ ಕೊಳವೆಕಿಂಡಿಗಳಿವೆ. ರಾಜನ ಕೋಣೆಯಲ್ಲಿ ಬರಿದಾದ ಕೆಂಪು ಗ್ರಾನೈಟ್ ಶಿಲೆಯ ಶವತೊಟ್ಟಿಯಿದೆ. ಕೋಣೆಯ ಮೇಲೆ ಗ್ರಾನೈಟ್ ಚಪ್ಪಡಿಗಳಿಂದ ಪ್ರತ್ಯೇಕಿಸಲ್ಪಟ್ಟ 5 ಅಂತಸ್ತುಗಳಿವೆ. ಬಹುಶಃ ಬೃಹತ್ ಪಿರಮಿಡಿನ ಅಗ್ರಭಾಗದ ಭಾರವನ್ನು ವಹಿಸಲು ಇಂಥ ಖಾಲಿ ಅಂತಸ್ತುಗಳನ್ನು ನಿರ್ಮಿಸಿರಬಹುದು. ಪಿರಿಮಿಡಿನ ಪ್ರವೇಶ ಮಾರ್ಗದ ಬಾಯನ್ನು ಭಾರವಾದ ಆದರೆ, ನಿಖರವಾಗಿ ಹೊಂದುವ ಕಲ್ಲಿನ ದಿಮ್ಮಿಯಿಂದ ಮುಚ್ಚಲಾಗಿತ್ತು. ಬಾಗಿಲಿನ ಸ್ಥಳ ಗೊತ್ತಾಗದಂತೆ ಕಟ್ಟಡದ ಇಡೀ ಹೊರಭಾಗವನ್ನು ಚಪ್ಪಡಿಗಳಿಂದ ಆವರಿಸಲಾಗಿತ್ತು. 19ನೆಯ ಶತಮಾನದಲ್ಲಿ ಪಿರಿಮಿಡುಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದುದೇ ಅಲ್ಲದೆ, ಖುಫುವಿನ ಬೃಹತ್ ಪಿರಿಮಿಡಿನ ಯಂತ್ರ ಶಿಲ್ಪಿಕ ವಿವರಗಳನ್ನು ಒದಗಿಸಿದ ಕೀರ್ತಿ 1880-82 ನಡುವೆ ಸಂಶೋಧನೆ ಮಾಡಿದ ಸರ್ಫ್ಲಿಂಡರ್ಸ್ಪೆಟ್ರಿಗೆ ಸಲ್ಲುತ್ತದೆ.
 
 
ಪ್ರತಿಯೊಂದು ಪಿರಮಿಡೂ ಸಣ್ಣ ಪಿರಮಿಡ್ಗಳಿಂದ ಕೂಡಿದೆ. ಅಲ್ಲದೆ ತಾತ್ಕಾಲಿಕವಾಗಿ ಶವಗಳನ್ನಿಡುವ ಮನೆಗಳೂ ಇವೆ. ಇವೆಲ್ಲವೂ ಪೌಳಿಗೋಡೆಯಿಂದ ಸುತ್ತುವರಿಯಲ್ಪಟ್ಟಿದೆ. ಇವುಗಳಿಂದ ನೈಲ್ ನದಿಯ ದಂಡೆಯ ಮೇಲಿರುವ ಒಂದು ದೇವಾಲಯಕ್ಕೆ ಹೋಗಲು ಸುರಂಗ ಮಾರ್ಗವಿದೆ.
 
ಮೂರನೆಯ ರಾಜ ಖಾಫ್ರೆ (ಪ್ರ.ಶ.ಪು. 2552-2521). ಪಿರಮಿಡ್ಡು ಖಫುವಿನ ಪಿರಮಿಡ್ಡಿಗಿಂತ ಸ್ವಲ್ಪ ಸಣ್ಣ ಪ್ರಮಾಣದ್ದಾಗಿದೆ. ಇದರ ಉದ್ದಗಲ ಸು. 217 ಮೀ ಎತ್ತರ ಸು. 145 ಮೀ ಆದರೆ, ಖುಫುವಿನ ಪಿರಮಿಡ್ಡಿಗಿಂತಲೂ ಎತ್ತರ ಸ್ಥಾನದಲ್ಲಿರುವುದರಿಂದ ದೊಡ್ಡದಾಗಿ ಕಾಣುತ್ತದೆ. ಪಿರಮಿಡಿನ ಕೆಂಪು ಗ್ರಾನೈಟ್ ಕಲ್ಲಿನ ಮೇಲ್ಚಾವಣಿ ಕೆಳಗಿನ ಕಿಟಕಿಯಿಂದ ಬರುವ ಸೂರ್ಯನ ಬೆಳಕು ನೆಲಕ್ಕೆ ಹಾಸಿದ ಹೊಳಪಾದ ಹಾಲುಗಲ್ಲಿನ ಮೇಲೆ ಬಿದ್ದು, ಅಲ್ಲಿಂದ ಬೂದು ಜೇಡಿಮಣ್ಣು ಮತ್ತು ಹಸುರು ಡಯೊರೈಟ್ನಿಂದ ಮಾಡಿದ 23 ರಾಜರುಗಳ ಮೂರ್ತಿಗಳ ಮೇಲೆ ಸೌಮ್ಯವಾಗಿ ಪ್ರಸರಿಸಿ ಅವುಗಳ ಚೆಲುವನ್ನು ಹೆಚ್ಚಿಸಿದೆ.
 
 
 
ಮೆಂಕುರೆ ಪಿರಮಿಡ್ಡು ಖುಫುವಿನ ಪಿರಮಿಡ್ಡಿನಲ್ಲಿ ಅರ್ಧದಷ್ಟು ಮಾತ್ರವಿದೆ. ಆದರೆ, ಅತ್ಯಂತ ಗಟ್ಟಿಕಲ್ಲನ್ನು ಅಳತೆಗೆ ಸರಿಯಾಗಿ ಕಂಡರಿಸುವ ಕುಶಲತೆ ಸಾಕಷ್ಟು ಕರಗತವಾಗಿತ್ತೆಂದು ಇದರಲ್ಲಿ ಕಾಣುತ್ತದೆ. ಇದರ ಹೊದಿಕೆಗೆ ಕೆಂಪು ಗ್ರಾನೈಟನ್ನು ಉಪಯೋಗಿಸಿದೆ. ಈ ಪಿರಮಿಡ್ಡು ಮಾತ್ರ ಚಿತ್ರಿತ ದೃಶ್ಯಗಳಿಂದ ಅಲಂಕೃತವಾಗಿದೆ.
 
 
 
ನೈಲ್ ನದಿಯ ಆಚೀಚೆ, ಉತ್ತರದಲ್ಲಿರುವ ನೈಲ್ನದಿ ಶಾಖೆಯಾದ ರೊಸೆಟ್ಟದಿಂದ ಹಿಡಿದು ದಕ್ಷಿಣದ ಬನಿಸುವೇಫ್ ಆಡಳಿತ ವಿಭಾಗದವರೆಗೆ, ಇರುವ ಕಿರಿದಾದ ಪ್ರದೇಶ ಗೀಜ಼ ಆಡಳಿತ ವಿಭಾಗವಾಗಿದೆ. ಇದರ ವಿಸ್ತೀರ್ಣ 867.5 ಚ.ಕಿಮೀ ಸ್ಪಿಂಕ್ಸ್ ಮತ್ತು ಹಲವು ಪ್ರಸಿದ್ಧ ಪಿರಮಿಡ್ಗಳು ಇರುವುದು ಈ ಪ್ರದೇಶದಲ್ಲಿ. ಕಟ್ಟಡಗಳಿಗೆ ಉಪಯುಕ್ತವಾದ ಸುಣ್ಣದ ಕಲ್ಲುಗಳನ್ನು ತೆಗೆಯುತ್ತಿದ್ದ ಸ್ಥಳ ಟುರಾ. ಈಗಲೂ ಸಿಮೆಂಟ್ ಕೈಗಾರಿಕೆಗಳಿಗೆ ಇಲ್ಲಿಂದ ಸುಣ್ಣಕಲ್ಲುಗಳನ್ನು ಸಾಗಿಸಲಾಗುತ್ತಿದೆ. ಈ ಪ್ರದೇಶದ ಮುಖ್ಯ ಕಸಬು ಬೇಸಾಯ. ಉದ್ಯೋಗನಿರತರಾದ ಜನರಲ್ಲಿ ಶೇ.55 ಮಂದಿ ಬೇಸಾಯದಲ್ಲಿ ತೊಡಗಿದವರು. ನೀರಾವರಿ ಸೌಲಭ್ಯವಿದೆ. ಮುಸುಕಿನ ಜೋಳ, ಹತ್ತಿ, ಗೋದಿ ಮುಖ್ಯವಾದ ಬೆಳೆಗಳು. ಟುರಾಗೆ ದಕ್ಷಿಣದಲ್ಲಿ ಸಕ್ಕರೆ ಕಾರ್ಖಾನೆ ಇದೆ. ಮದ್ಯ ಇಲ್ಲಿಯ ಒಂದು ಉಪೋತ್ಪನ್ನ.
 
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೀಜ಼ }}
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
೯,೬೭೭

edits

"https://kn.wikipedia.org/wiki/ವಿಶೇಷ:MobileDiff/877640" ಇಂದ ಪಡೆಯಲ್ಪಟ್ಟಿದೆ