ಈನಿಯಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಮಹತ್ವ: ಆಧಾರ:[https://kn.wikisource.org/s/qe6 ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಈನಿಯಡ್]
೧೭ ನೇ ಸಾಲು:
 
ಮಹಾಕಾವ್ಯಗಳಲ್ಲಿ ಎರಡು ಬಗೆಯುಂಟು. ಆನತೆಯಿಂದ ಮೂಡಿಬಂದ ಕಾವ್ಯ ಒಂದು, ಕವಿಯೊಬ್ಬನು ಸೃಷ್ಟಿಸಿದ ಕಾವ್ಯ ಇನ್ನೊಂದು. ಸಾಮಾನ್ಯವಾಗಿ ಮೊದಲನೆಯ ವರ್ಗದ ಕಾವ್ಯ ಇಂಥದೇ ನಿಷ್ಕ್ರಷ್ಟವಾಗಿ ಹೇಳುವುದು ಕಷ್ಟ. ಎರಡನೆಯ ಜಾತಿಯ ಕಾವ್ಯ ಚಾರಿತ್ರಿಕ ಅವಿಯೊಬ್ಬನಿಂದ ಯಾವುದೋ ಒಂದು ಯುಗದಲ್ಲಿ ಯಾವುದೋ ಒಂದು ಉದ್ದೇಶದಿಂದ ರಚಿತವಾಗಿರುತ್ತz. ಮೊದಲನೆಯ ತರದ ಕಾವ್ಯದಲ್ಲಿರುವಂತೆ ಇದರಲ್ಲಿ ಒಂದು ಯುದ್ಧದ ಮತ್ತು ಆ ಯುದ್ಧದಲ್ಲಿ ಪ್ರಸಿದ್ಧರಾದ ವೀರರ ವರ್ಣನೆಯಷ್ಟೇ ಇರುವುದಿಲ್ಲ. ಅವಿಯ ಮನೋಧರ್ಮ, ಆಲೋಚನೆಗಳು ಇದರಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿರುತ್ತದೆ. ಈನಿಯಡ್ ಈ ಎರಡನೆಯ ವರ್ಗಕ್ಕೆ ಸೇರಿದ ಮಹಾಕಾವ್ಯ. ಇದರ ರಚನೆಯಲ್ಲಿ ಉದ್ದೇಶ ರೋಮಿನ ಹಿರಿಮೆಯನ್ನು ಎತ್ತಿ ಹಿಡಿಯುವುದಾಗಿತ್ತು. ಹಿಂದಿನಿಂದಲೂ ದೇವಾದಿಗಳು ರೋಮಿನ ಔನ್ನತ್ಯ ಸಾಧನೆಯಲ್ಲಿ ಆಸಕ್ತರಾಗಿದ್ದರೆಂಬುದನ್ನೂ ರೋಮನ್ ಸಮ್ರಾಜ್ಯದ ಹೆಮ್ಮರ ಬಹುಕಾಲದ ಬೆಳೆವಣಿಗೆಯ ಫಲವೆಂಬುದನ್ನೂ ತೋರಿಸುವುದಾಗಿತ್ತು. ಅದನ್ನು ಬರೆಯುವಾಗ ಅವನು ಹೋಮರನ ಮಹಾಕಾವ್ಯದ ಸಂಗತಿಗಳನ್ನೂ ಲಕ್ಷಣಗಳನ್ನೂ ಬಲಸಿಕೊಂಡದ್ದಲ್ಲದೆ ಜನರಲ್ಲಿ ಪ್ರಚಾರದಲ್ಲಿದ್ದ ಎಷ್ಟೋ ಕಥೆಗಳನ್ನೂ ಐತಿಹ್ಯಗಳನ್ನೂ ವಾಸ್ತವವಾಗಿ ನಡೆದಿದ್ದ ಚಾರಿತ್ರಿಕ ಘಟನೆಗಳನ್ನೂ ಉಪಯೋಗಿಸಿಕೊಂಡಿದ್ದಾನೆ. ಹಿದೆ ನಡೆದಿದ್ದುದನ್ನೂ ನಡೆದಿದ್ದಿತೆಂದು ಹೇಳಲಾಗುತ್ತಿದ್ದುದನ್ನೂ ವರ್ಣಿಸಿರುವಿದಲ್ಲದೆ ಮುಂದೆ ನಡೆಯಬಹುದಾದುದನ್ನೂ ತನ್ನ ಪಾತ್ರಗಳ ಬಾಯಲ್ಲಿ ಹೇಳಿಸಿದ್ದಾನೆ.ಗ್ರೀಸಿನ ಚರಿತ್ರೆ ಮತ್ತು ಐತಿಹ್ಯಗಳ ಜೊತೆಗೆ ರೋಮಿನ ಜನತೆಯ ಸ್ಮøತಿ ಭಂಡಾರದಲ್ಲಿದ್ದ ಕಥೆಗಳನ್ನೂ ನಂಬಿಕೆಗಳನ್ನೂ ಸೇರಿಸಿ ಹೆಣೆದಿದ್ದಾನೆ. ಶಂಪ್ರದಾಯದ ನಂಬಿಕೆಗಳು ನೂತನ ಆಲೋಚನೆಗಳು; ತಲೆತಲಾಂತರವಾಗಿ ಬಂದಿದ್ದ ಮತಧರ್ಮ. ಹೊಸ ತತ್ತ್ವದೃಷ್ಟಿ, ಪ್ರಾಚೀನತೆ, ನವ್ಯತೆ, ರಾಷ್ಟ್ರಚರಿತೆಯ ವೈಭವದ ವರ್ಣನೆ, ವೈಯಕ್ತಿಕ ರಾಗಭಾವಗಳ ನಿರೂಪಣೆ — ಇವಲ್ಲವೂ ಅವನ ಕಾವ್ಯದಲ್ಲಿ ಹಾಸುಹೊಕ್ಕಾಗಿ ಬೆರೆತಿವೆ. ಇದರ ಪರಿಣಮವಾಗಿ ಅದು ಬಣ್ಣಬಣ್ಣದ ಚಿತ್ರಬಾಹುಳ್ಯದಿಂದ ಶೋಭಿಸುವ ಸುಂದರ ಕೃತಿಯಾಗಿದೆ; ಭಿನ್ನ ಆಸಕ್ತಿಗಳ, ಭಿನ್ನ ದೃಷ್ಟಿಗಳ ಓದುಗರೆಲ್ಲರಿಗೂ ಆಕರ್ಷಕವಾಗಿದೆ. ಅದರ ಕಥನ ಕಲಾವ್ಯಖರಿ, ಚಿತ್ರಣಕೌಶಲ, ವರ್ಣನಾನೈಪುಣ್ಯ, ನಾದಮಾಧುರ್ಯ — ಈ ಆಕರ್ಷಣೆಗೆ ಮುಖ್ಯ ಕಾರಣಗಳು.
*ಆಧಾರ:[https://kn.wikisource.org/s/qe6 ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಈನಿಯಡ್]
 
 
==ಉಲ್ಲೇಖಗಳು==
"https://kn.wikipedia.org/wiki/ಈನಿಯಡ್" ಇಂದ ಪಡೆಯಲ್ಪಟ್ಟಿದೆ