ಅಷ್ಟಾದಶ ಪುರಾಣಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಅಷ್ಟಾದಶ ಪುರಾಣಗಳು: +++ ಅಪ್‍ಡೇಟಿಂಗ್
೫೫ ನೇ ಸಾಲು:
| [[ಮತ್ಸ್ಯ ಪುರಾಣ]]
| ೧೪೦೦೦
|ಕ್ರಿ.ಶ. 550-650 ನಡುವೆ
|c.200–500 CE
|- bgcolor="#e4e8ff"
Line ೭೦ ⟶ ೭೧:
| [[ಭವಿಷ್ಯ ಪುರಾಣ]]
| ೧೪೫೦೦
| ಐದನೇ ಶತಮಾನ- CE
| ಐದನೇಶತಮಾನ- CE
|- bgcolor="#e4e8ff"
|೦೫
Line ೮೫ ⟶ ೮೬:
| [[ಬ್ರಹ್ಮವೈವರ್ತ ಪುರಾಣ]]
| ೧೮೦೦೦
|ಕ್ರಿ.ಶ.15 ನೇ or 16 ನೇ ಶತಮಾನ
|
|- bgcolor="#e4e8ff"
| ೦೮
| [[ವಿಷ್ಣು ಪುರಾಣ]]
| ೨೩೦೦೦
|ಕ್ರಿ.ಶ. 3ನೆಯ ಶತಮಾನ
|
|- bgcolor="#e4e8ff"
| ೦೯
| [[ವರಾಹ ಪುರಾಣ]]
| ೨೪೦೦೦
|ಕ್ರಿ.ಶ. 8ನೆಯ ಶತಮಾನ
|
|- bgcolor="#e4e8ff"
| ೧೦
| [[ವಾಮನ ಪುರಾಣ]]
| ೧೦೦೦೦
|ಸುಮಾರು 16ನೆಯ ಶತಮಾನ
|
|- bgcolor="#e4e8ff"
| ೧೧
| [[ವಾಯು ಪುರಾಣ]]
|೨೪೦೦೦
|ಕ್ರಿ.ಶ. 4ನೆಯ ಶತಮಾನದ
|
|- bgcolor="#e4e8ff"
| ೧೨
Line ೧೧೫ ⟶ ೧೧೬:
| [[ನಾರದ ಪುರಾಣ]]
| ೨೫೦೦೦
|ಕ್ರಿ.ಶ.1600 ಅಥವಾ 1700
|- bgcolor="#e4e8ff"
| ೧೪
| [[ಪದ್ಮ ಪುರಾಣ]]
| ೫೫೦೦೦
|ಸು. ಕ್ರಿ.ಶ. 12ನೆಯ ಶತಮಾನ
|
|- bgcolor="#e4e8ff"
| ೧೫
| [[ಲಿಂಗ ಪುರಾಣ]]
| ೧೧೦೦೦
|ಪ್ರಾಯಶಃ. ಕ್ರಿ.ಶ. 8ನೆಯ ಶತಮಾನ
|
|- bgcolor="#e4e8ff"
| ೧೬
| [[ಗರುಡ ಪುರಾಣ]]
| ೧೯೦೦೦
|ಕ್ರಿ.ಶ. 10ನೆಯ ಶತಮಾನ
|
|- bgcolor="#e4e8ff"
| ೧೭
| [[ಕೂರ್ಮ ಪುರಾಣ]]
| ೧೭೦೦೦
|ಕ್ರಿ.ಶ. 650ಕ್ಕೂ ಈಚಿನದು
|
|- bgcolor="#e4e8ff"
| ೧೮
| [[ಸ್ಕಂದ ಪುರಾಣ]]
| ೮೦೧೦೦
|ಕಾಲ 7ನೆಯ ಶತಮಾನ.
|
|}
*<ref>[https://ipfs.io/ipfs/QmXoypizjW3WknFiJnKLwHCnL72vedxjQkDDP1mXWo6uco/wiki/Timeline_of_Hindu_texts.html ಕಾಲಸೂಚಿ]</ref>
Line ೧೪೮ ⟶ ೧೪೯:
* ಆದಿತ್ಯೋತ್ಪತ್ತಿ, ಶಿವಪ್ರಿಯವನ, ಉಮಾಜನನ, ಉಮಾವಿವಾಹ, ಶಿವಸ್ತೋತ್ರ, ಕಂಡುಮಹರ್ಷಿಯ ಸ್ತ್ರೀಲೋಲುಪತೆ, ವಿರಾಗ, ಕೃಷ್ಣಲೀಲೆ, ಶ್ರಾದ್ಧನಿಯಮ, ಧಾರ್ಮಿಕ ಜೀವನದ ನೀತಿ, ವರ್ಣಾಶ್ರಮ ಧರ್ಮ, ಸ್ವರ್ಗ, ನರಕ, ವಿಷ್ಣುಪುಜಾದಿಗಳು-ಇವು ಇದರ ಸಾರ. ಯುಗ, ಪ್ರಲಯ, ಸಾಂಖ್ಯಯೋಗ, ಮೋಕ್ಷೋಪಾಯಗಳ ವಿವೇಚನೆಯೂ ಕೊನೆಯಲ್ಲಿವೆ. ಪ್ರಸ್ತುತ ಪುರಾಣದಲ್ಲಿ ಅತ್ಯಲ್ಪಭಾಗ ಪ್ರಾಚೀನ; ತೀರ್ಥಮಾಹಾತ್ಮ್ಯವಂತೂ ಪ್ರ.ಶ. 13ನೆಯ ಶತಮಾನಕ್ಕಿಂತ ಹಿಂದಿನದೆನ್ನಿಸದು.
===[[ಪದ್ಮ ಪುರಾಣ]]===
*ಇದಕ್ಕೆ ಸುಪ್ರಸಿದ್ಧವಾದ ಎರಡು ಪಾಠ ಸಂಪ್ರದಾಯಗಳಿವೆ. ಅವುಗಳಲ್ಲಿ ಆದಿ, ಭೂಮಿ, ಬ್ರಹ್ಮ, ಪಾತಾಳ, ಸೃಷ್ಟಿ, ಉತ್ತರಖಂಡಗಳೆಂಬ ಆರು ಭಾಗಗಳುಳ್ಳದ್ದು ಹೆಚ್ಚು ಅರ್ವಾಚೀನ; ಸೃಷ್ಟಿ, ಭೂಮಿ, ಸ್ವರ್ಗ, ಪಾತಾಳ, ಉತ್ತರ ಖಂಡಗಳೆಂಬ ಐದು ಭಾಗಗಳಿರುವ ಬಂಗಾಲಿ ಹಸ್ತಪ್ರತಿಯ ಪಾಠಸಂಪ್ರದಾಯ ಹೆಚ್ಚು ಪ್ರಾಚೀನ. ಈ ಖಂಡಗಳೆ ಲ್ಲವೂಖಂಡಗಳೆಲ್ಲವೂ ಬಹುಶಃ ಬೇರೆ ಬೇರೆ ಕಾಲಾವಧಿಗಳಲ್ಲಿ ಬರೆದ ಪ್ರತ್ಯೇಕ ಕೃತಿಗಳು. ಅನಂತರ ಯಾರೋ ಅವೆಲ್ಲವನ್ನೂ ಸಂಕಲಿಸಿ ಪದ್ಮಪುರಾಣವೆಂಬ ಹೆಸರನ್ನು ಕೊಟ್ಟಿರಬೇಕು.
* ಏಕೆಂದರೆ, ಅತ್ಯಂತ ಅರ್ವಾಚೀನವೆನ್ನಬಹುದಾದ ಭಾಗವತ ಪುರಾಣದಲ್ಲಿರುವ ಕೆಲ ಅಂಶಗಳಿಗೂ ಇತ್ತೀಚಿನವೆನ್ನಿಸುವ ಅಂಶಗಳಿದರಲ್ಲಿವೆ. ಸೃಷ್ಟಿಕ್ರಮ, ಸೂರ್ಯ ವಂಶದ ರಾಜರ ಅನುಚರಿತ, ಶ್ರಾದ್ಧವಿಚಾರ, ಚಂದ್ರವಂಶದ ರಾಜರ ವೃತ್ತಾಂತ, ದೇವಾಸುರಸಮರ, ಪುಷ್ಕರಸರಸ್ಸಿನ ವರ್ಣನೆ, ದುರ್ಗಾರಾಧನೆಯ ವ್ರತ ಮತ್ತು ಹಬ್ಬಗಳು, ಸೃಷ್ಟಿಯ ಪುನರ್ ವಿವರಣೆ, ವಿಷ್ಣು ಅಸುರಾಂತಕನಾದುದು, ಸ್ಕಂದನಜನನ ಮತ್ತು ಸ್ಕಂದವಿವಾಹ, ಸೋಮಶರ್ಮ ಪ್ರಹ್ಲಾದನಾಗಿ ಹುಟ್ಟಿದ ಕತೆ; ಪವಿತ್ರಸ್ಥಳಗಳಲ್ಲದೆ ತಂದೆ, ಗುರು, ಅಥವಾ ಹೆಂಡತಿಯರು ತೀರ್ಥ ಸ್ವರೂಪ ವಾದುದರ ನಿದರ್ಶನ; ದೇವಲೋಕದ ವರ್ಣನೆ, ಶಕುಂತಲಾವೃತ್ತಾಂತ, ಊರ್ವಶೀ ಪುರೂರವರ ಕಥೆ, ವರ್ಣಾಶ್ರಮಧರ್ಮ, ವಿಷ್ಣುಪೂಜೆ ನಾಗಲೋಕದ ವಿಸ್ತಾರ, ರಾಮೋಪಾಖ್ಯಾನ, ಋಷ್ಯಶೃಂಗಚರಿತ ತೀರ್ಥಮಾಹಾತ್ಮ್ಯ, ರಾಧಾಕೃಷ್ಣ ಲೀಲೆ, ಸಾಲಿಗ್ರಾಮಪಾವಿತ್ರ್ಯ, ವಿಷ್ಣುವ್ರತ, ವಿಷ್ಣುನಿಯಮ, ವಿಷ್ಣೋತ್ಸವಗಳು, ಭಗವದ್ಗೀತಾಪ್ರಾಶಸ್ತ್ಯ, ವಿಷ್ಣುಸಹಸ್ರನಾಮ ಮೊದಲಾದ ವಿಷಯಗಳಲ್ಲದೆ, ಉತ್ತರ ಖಂಡದ ಬಳಿಕ ಬರುವ ಕ್ರಿಯಾಯೋಗಸಾರವೆಂಬ ಅನುಬಂಧ ವಿಷ್ಣುವಿನ ನಿಜವಾದ ಆರಾಧನೆಗೆ ಧ್ಯಾನಯೋಗಕ್ಕಿಂತ ಕರ್ಮಯೋಗವೇ ಹೆಚ್ಚು ಪ್ರಶಸ್ತವೆಂದು ಬೋಧಿಸಿದೆ. ಇದರ ಪಂಚಖಂಡಗಳ ಒಟ್ಟು ಶ್ಲೋಕಸಂಖ್ಯೆ 48,452. ಇದರ ಇಂದಿನ ರೂಪದ ಕಾಲ ಸು. ಕ್ರಿ.ಶ. 12ನೆಯ ಶತಮಾನವೆನ್ನಬಹುದು.
===[[ವಿಷ್ಣು ಪುರಾಣ]]===
Line ೧೬೦ ⟶ ೧೬೧:
*ತೈಜಸಾಹಂಕಾರದಿಂದ ಕರ್ಮ, ಜ್ಞಾನೇಂದ್ರಿಯಗಳ ದಶಕವೂ ವೈಕಾರಿಕಾಹಂಕಾರದಿಂದ ಮನಸ್ಸೂ (ಮನ+ಬುದ್ಧಿ+ಅಹಂಕಾರ+ಚಿತ್ತ) ಉದಯಿಸುತ್ತವೆ. ಜಗತ್ತನ್ನು ಹೊರಗಿನಿಂದ ಜಲ, ಅಗ್ನಿ, ವಾಯು, ಆಕಾರ, ಭೂತಾದಿ ಮಹದವ್ಯಕ್ತಗಳು ಅನುಕ್ರಮವಾಗಿ ಸುತ್ತುವರಿದಿವೆ. ಜಗತ್ತು ಅಥವಾ ಪ್ರಪಂಚವೆಂದರೆ ತೈಜಸಾಹಂಕಾರದಿಂದ ಹುಟ್ಟಿದ ದಶೇಂದ್ರಿಯ, ಮನ, ಪಂಚತನ್ಮಾತ್ರ, ಅಹಂಕಾರ ಮತ್ತು ಮಹತ್ತುಗಳ ಏಕೀಕೃತವೂ ಸಮನ್ವಿತವೂ ಆದ ಚರಾಚರಾತ್ಮಕ ಮೊಟ್ಟೆ. ಈ ಮೊಟ್ಟೆಯ ವಿಕಸಿತರೂಪವೇ ವಿಷ್ಣುವಿನ ಶರೀರವೆನ್ನಿಸುವ ಬ್ರಹ್ಮ. ಬ್ರಹ್ಮ-ವಿಷ್ಣು-ರುದ್ರಾತ್ಮಕನಾಗಿ ವಿಷ್ಣು ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳನ್ನು ನಡೆಸುತ್ತಾನೆ. ಅಂದರೆ ಆತ ಆದಿಕಾರಣನಾದ ಪರಬ್ರಹ್ಮ. ಈ ಬಗೆಯ ಸಾಂಖ್ಯವಿಚಾರಗಳು ವಿಷ್ಣುಪುರಾಣದಲ್ಲಿವೆ.
===[[ವಾಯು ಪುರಾಣ]]===
*ಶ್ಲೋಕ ಸಂಖ್ಯೆ 24,000 ಎಂಬ ಹೇಳಿಕೆಯಿದ್ದರೂ ಮುದ್ರಿತಪ್ರತಿಯ ಸಂಖ್ಯೆ 12,000 ಮಾತ್ರ. ಇದು ಬಹುಶಃ ಪುರಾಣದ ಒಂದನೆಯ ಖಂಡದಷ್ಟೇ ಆಗಿರಬೇಕು. ಅನುಕ್ರಮಣಿಕೆಗಳ ಕಾಲದಲ್ಲಿ ದೇವಾದಿ ಮಾಹಾತ್ಮ್ಯಗಳು ಇದಕ್ಕೆ ಸೇರಿದ್ದವೆಂದು ತೋರುತ್ತದೆ. ಇದು ಎಲ್ಲ ಪುರಾಣಗಳಿಗಿಂತ ಹೆಚ್ಚು ಪ್ರಾಚೀನವೆಂದು ನಂಬಲಾಗಿದೆ. ವಾಯು ಬ್ರಹ್ಮಾಂಡಗಳೆರಡೂ ವಾಯುಪ್ರೋಕ್ತ ಪುರಾಣಗಳಾದುದರಿಂದ ಇವು ಮೊದಲು ಒಂದೇ ಕೃತಿಯಾಗಿದ್ದುವೆಂದು ಪಾರ್ಗಿಟರ್ನ ಮತ. ಮಹಾಭಾರತ, ಹರಿವಂಶಗಳು ವಾಯುಪುರಾಣವನ್ನು ಉಲ್ಲೇಖಿಸುತ್ತವೆ, ಶ್ಲೋಕಗಳನ್ನು ಉದ್ಧರಿಸುತ್ತವೆ. ಪ್ರಕ್ರಿ.ಶ. 4ನೆಯ ಶತಮಾನದ ಗುಪ್ತಚಕ್ರವರ್ತಿಗಳ ಆಳ್ವಿಕೆ ಇಲ್ಲಿ ವರ್ಣಿತವಾಗಿದೆ.
*ಆದುದರಿಂದ ಪ್ರಾಚೀನತಮವಾದ ಮೂಲವಾಯು ಪುರಾಣದ ಕಾಲ ಯಾವುದೇ ಆದರೂ ಅದರ ಇಂದಿನ ರೂಪದ ಬಹುಭಾಗ ಪ್ರ.ಶ. ಸು. 5ನೆಯ ಶತಮಾನದ್ದೆಂದು ವಿಂಟರ್ನಿಟ್ಜನ ಅಭಿಪ್ರಾಯ. ಜನತ್ಸೃಷ್ಟಿ ವಂಶವೃಕ್ಷ ಮುಂತಾದ ಪ್ರಾಚೀನ ಪೌರಾಣಿಕ ವಿಷಯಗಳೂ ಶಿವೋತ್ಕರ್ಷವನ್ನು ಸಾಧಿಸುವ ಕತೆಗಳೂ ಜಗತ್ಪ್ರಳಯವೂ ಯೋಗಮಾರ್ಗ ಪ್ರಶಂಸೆಯೂ ಶಿವಪುರ ವರ್ಣನ, ವಿಷ್ಣುಪ್ರಭಾವ, ಶ್ರಾದ್ಧ, ಗೀತಾಲಂಕಾರ, ಗಯಾ ಮಾಹಾತ್ಮ್ಯಗಳೂ ಈ ಪುರಾಣದ ಮುಖ್ಯಾಂಶಗಳು. ಇದಕ್ಕೆ ಸೇರಿದವೆಂದು ಹೇಳಲಾಗುವ ಇನ್ನೂ ಎಷ್ಟೋ ಸ್ತೋತ್ರಗಳೂ ಮಾಹಾತ್ಮ್ಯಗಳೂ ಕರ್ಮವಿಧಿಗ್ರಂಥಗಳೂ ದೊರಕುತ್ತವೆ. ಪ್ರಸ್ತುತ ವಾಯುಪುರಾಣದಲ್ಲಿರುವ ಪ್ರಾಚೀನ ಭಾಗಗಳ ಕಾಲ ಪ್ರ.ಶ. 200 ಅಥವಾ ಅದಕ್ಕೂ ಹಿಂದೆ ಹೋಗಬಹುದು.
*ವಾಯುಪುರಾಣ ದೇವರಲ್ಲಿಯ ಸೃಷ್ಟಿಮಾಡುವ ಪ್ರವೃತ್ತಿಯ ಮೂಲಕಾರಣವನ್ನು ಅಪ್ರಮೇಯವೆನ್ನುತ್ತದೆಯಲ್ಲದೆ, ಅದನ್ನು ಬ್ರಹ್ಮ, ಪ್ರಧಾನ, ಪ್ರಕೃತಿ, ಪ್ರಕೃತಿ-ಪ್ರಸೂತಿ, ಆತ್ಮ, ಗುಹ, ಯೋನಿ, ಚಕ್ಷುಸ್, ಕ್ಷೇತ್ರ, ಅಮೃತ, ಅಕ್ಷರ, ಶುಕ್ರ, ತಪಸ್, ಸತ್ಯ ಅಥವಾ ಅತಿಪ್ರಕಾಶ ಎಂದೂ ಕರೆಯುತ್ತದೆ, ಅದು ಲೋಕಪಿತಾಮಹನಾದ ಎರಡನೆಯ ಪುರುಷನನ್ನು ಸುತ್ತುವರಿದಿರುತ್ತದೆ. ಕಾಲಸಂಪರ್ಕ ಮತ್ತು ರಜಃ ಪ್ರಾಧಾನ್ಯಗಳಿಂದ ಕ್ಷೇತ್ರಜ್ಞನಿಗೆ ಸಂಬಂಧಿಸಿದ ಎಂಟು ಪರಿವರ್ತನಗಳಾಗುತ್ತವೆ.
Line ೨೧೭ ⟶ ೨೧೮:
===ವರಾಹ ಮಹಾಪುರಾಣ===
*ವಿಷ್ಣು ವರಾಹಾವತಾರವನ್ನು ತಾಳಿ ಭೂದೇವಿಯನ್ನು ಉದ್ಧರಿಸುವ ಅಂಶವನ್ನು ಹೇಳುತ್ತದೆ. ಇದರಲ್ಲಿ ಸೃಷ್ಟಿಕ್ರಮ, ವಂಶ ವೃಕ್ಷಗಳ ವಿಷಯಗಳು ಬಂದಿದ್ದರೂ ಒಟ್ಟಿನಲ್ಲಿ ಇದು ವಿಷ್ಣುವಿನ ಸ್ತೋತ್ರ, ಪ್ರಾರ್ಥನೆ, ಪೂಜೆ ಪುರಸ್ಕಾರಗಳ ಬಗೆಯನ್ನು ಹೇಳಲು ಮೀಸಲಾದ ಪುರಾಣ. ಹೀಗಿದ್ದರೂ ಇದರಲ್ಲಿ ಶಿವ, ದುರ್ಗೆಯರ ಕಥೆಗಳಿವೆ. ಮಾತೃದೇವತೆಗಳ ಹಾಗೂ ಇತರ ಸ್ತ್ರೀದೇವತೆಗಳ ವಿಸ್ತಾರವನ್ನು ಅನೇಕ ಅಧ್ಯಾಯಗಳಲ್ಲಿ ವಿಶದಪಡಿಸಲಾಗಿದೆ. ಗಣೇಶೋತ್ಪತ್ತಿ, ಗಣೇಶಸ್ತೋತ್ರಗಳೂ ಇಲ್ಲಿವೆ.
*ಇಷ್ಟೇ ಅಲ್ಲ, ಶ್ರಾದ್ಧ, ಪ್ರಾಯಶ್ಚಿತ್ತ, ದೇವತಾಮೂರ್ತಿ ಪ್ರತಿಷ್ಠೆ, ಮಥುರಾಮಾಹಾತ್ಮ್ಯಗಳೂ, [[ನಚಿಕೇತ]] ವೃತ್ತಾಂತ. ಸ್ವರ್ಗ, ನರಕವರ್ಣನೆ ಮುಂತಾದವೂ ಪುರಾಣಕಕ್ಷೆಯಲ್ಲಿ ಬಂದಿವೆ. ಶ್ಲೋಕಸಂಖ್ಯೆ 24000ವೆಂದು ಪ್ರಸಿದ್ಧಿಯಿದ್ದರೂ ವಾಸ್ತವಿಕವಾಗಿ ಇದರಲ್ಲಿ 10000ಕ್ಕಿಂತ ಬಹಳ ಹೆಚ್ಚಾಗಿಲ್ಲ. ಪ್ರಕ್ರಿ.ಶ. 8ನೆಯ ಶತಮಾನದಲ್ಲಿದ್ದ ಇದರ ಮೂಲ ಸ್ವರೂಪ ಅನುಪಲಬ್ಧ. ಸದ್ಯದ ಸ್ವರೂಪದ ಕಾಲ ಪ್ರ.ಶ. 12ನೆಯ ಶತಮಾನದ ಆದಿಭಾಗವೆನ್ನಬಹುದು. ಇದು ಮೂಲದ ಕೆಲ ಅಧ್ಯಾಯಗಳನ್ನೊಳಗೊಂಡಿದೆ.
===ಸ್ಕಂದಪುರಾಣ===
*ಸ್ಕಂದಪ್ರೋಕ್ತವಾದುದು. ಶೈವತತ್ತ್ವಗಳಿದರಲ್ಲಿವೆ. ಈ ಹೆಸರಿನ ಪ್ರಾಚೀನಪುರಾಣವೀಗ ಅನುಪಲಬ್ಧ. ಸ್ಕಂದಪುರಾಣದ ಸಂಹಿತೆಗಳೆಂದೂ ಖಂಡಗಳೆಂದೂ ಹೇಳಿಕೊಳ್ಳುವ ಅನೇಕ ಕೃತಿಗಳಿದ್ದರೂ ಸ್ಕಂದಪುರಾಣವೆಂಬ ಹೆಸರುಳ್ಳ ಉಪಲಬ್ಧ ಪ್ರಾಚೀನಪ್ರತಿಯಲ್ಲಿ ಅವುಗಳಲ್ಲಾವುದೂ ಅಡಕವಾಗಿಲ್ಲ. ಇದರ ಪ್ರಾಚೀನ ಮೂಲದಲ್ಲಿ 81800 ಶ್ಲೋಕಗಳಿದ್ದುವೆಂದು ಹೇಳಿಕೆ. ಅದರ ಅಭಾವದಲ್ಲಿ ಅದಕ್ಕೀ ಉಪಲಬ್ಧ ಪ್ರತಿ ಎಲ್ಲ ಅಂಶಗಳಲ್ಲೂ ಸರಿಯಾಗಿ ಹೊಂದುತ್ತದೆಂದು ಹೇಳಲು ಸಾಧ್ಯವಿಲ್ಲ.
Line ೨೩೧ ⟶ ೨೩೨:
*ಕಾಶೀ ಪ್ರಯಾಗ ಮಾಹಾತ್ಮ್ಯಗಳಲ್ಲದೆ, ಭಗವದ್ಗೀತೆಗೆ ಸರಿದೊರೆಯಾದ ಈಶ್ವರಗೀತೆಯೂ ಬಂದಿರುವುದು ಈ ಪುರಾಣದ ವೈಶಿಷ್ಟ್ಯ. ಅನಂತರ ವ್ಯಾಸಗೀತೆ, ಪ್ರಾಯಶ್ಚಿತ ವಿಧಿ, ಪಾತಿವ್ರತ್ಯಪ್ರಶಂಸೆ ಮುಂತಾದ ವಿಷಯಗಳು ಬರುತ್ತವೆ. ರಾಮಾಯಣದಲ್ಲಿಲ್ಲದ ಸೀತಾವೃತ್ತಾಂತವೊಂದಿಲ್ಲಿ ಪಾತಿವ್ರತ್ಯ ಮಾಹಾತ್ಮ್ಯವನ್ನು ನಿದರ್ಶಿಸುತ್ತದೆ. ಇಲ್ಲಿ ರಾವಣನ ಕೈಯಿಂದ ಸೀತೆಯನ್ನು ಅಗ್ನಿಯೇ ಬಿಡಿಸಿ ಕಾಪಾಡುತ್ತಾನೆ.
*ಇದರಲ್ಲಿ 17,000, ಶ್ಲೋಕಗಳಿದ್ದ ವೆಂದು ಪ್ರಸಿದ್ಧಿ; 6,000 ಶ್ಲೋಕಗಳನ್ನು ಮಾತ್ರ ಉಪಲಬ್ಧ ಪ್ರತಿಯಲ್ಲಿ ಕಾಣಬಹುದು. ಇದರ ಏಳನೆಯ ಅಧ್ಯಾಯದಲ್ಲಿ ಬರುವ ಸೃಷ್ಟಿ ವಿವರಣೆ ವ್ಯಾಹತವಾಗಿರುವುದರಿಂದ ಒಂದಕ್ಕಿಂತ ಹೆಚ್ಚು ಪೌರಾಣಿಕರ ಕೈವಾಡದಿಂದ ಇದು ರಚಿತವಾಯಿತೆಂಬುದನ್ನು ನಿರ್ಧರಿಸ ಬಹುದು.
*ಮಹಾಭಾರತದ ಸೃಷ್ಟಿ ವಿವರಣೆಯನ್ನು ಪ್ರಸ್ತುತ ಪುರಾಣ ಸ್ಪಷ್ಟವಾಗಿ ಅನುಸರಿಸಿರು ವುದರಿಂದಲೂಅನುಸರಿಸಿರುವುದರಿಂದಲೂ ಮತ್ಸ್ಯಪುರಾಣಕ್ಕೆ ಗೊತ್ತಿಲ್ಲದಿದ್ದ ಮಹಾಪುರಾಣಗಳ ಹದಿನೆಂಟನ್ನಿದು ಉಲ್ಲೇಖಿಸುವುದರಿಂದಲೂ ಇದರ ಪ್ರಸ್ತುತರೂಪದ ಕಾಲ ಪ್ರಕ್ರಿ.ಶ. 650ಕ್ಕೂ ಈಚಿನದೆನ್ನಬಹುದು. ಕೂರ್ಮಪುರಾಣದ ಪ್ರಕಾರ ದೇವರು ಅವ್ಯಕ್ತ, ಅಜ್ಞೇಯ, ನಿತ್ಯ, ಜಗತ್ಕಾರಣ, ಸದಸದಾತ್ಮಕ, ಪ್ರಕೃತಿಯಿಂದ ಅಭಿನ್ನ, ಸರ್ವನಿರ್ದೇಶಕ, ಗುಣತ್ರಯದ ಸಾಮ್ಯಾವಸ್ಥೆಯಲ್ಲದವ ಪರಬ್ರಹ್ಮ, ಪುರುಷಗರ್ಭ.
*ಇದು ಅವನ ಪ್ರಾಕೃತಪ್ರಲಯ ಸ್ಥಿತಿ. ಇಲ್ಲಿಂದ ಮುಂದೆ ಅವನು ಪ್ರಕೃತಿ, ಪುರುಷರಲ್ಲಿ ದೇವತ್ವಪ್ರಕಟಣೆಗಾಗಿ ಪ್ರವೇಶಿಸಿದಾಗ ಜಗತ್ಸೃಷ್ಟಿಗಾರಂಭ. ದೇವರು ಪ್ರಕೃತಿಯಾಗಿ ನಡೆದುಕೊಳ್ಳುವುದೆಂದರೆ ಸಂಕೋಚ ವಿಕಾಸಶೀಲನಾಗುವುದೆಂದರ್ಥ. ಪ್ರಧಾನ ಪುರುಷಾತ್ಮಕವಾದ ಮಹತ್ ಕಾರಣವೆಂಬುದು ಅವನ ಆದ್ಯಸೃಷ್ಟಿ.
*ಅದರಿಂದ ಮಹತ್, ಆತ್ಮ, ಮತಿ, ಬ್ರಹ್ಮ, ಪ್ರಬುದ್ಧಿ, ಖ್ಯಾತಿ, ಈಶ್ವರ, ಪ್ರಜ್ಞೆ, ಧೃತಿ, ಸ್ಮೃತಿ, ಅಥವಾ ಸಂವಿತ್ ಎಂಬ ಪದಾರ್ಥ ಹುಟ್ಟುತ್ತದೆ. ಹೀಗೆ ವಿವಿಧ ನಾಮಗಳುಳ್ಳ ಈ ಮಹತ್ತಿನಿಂದ ವೈಕಾರಿಕ, ತೈಜಸ ಮತ್ತು ಭೂತಾದಿ ಎಂಬ ಅಹಂಕಾರತ್ರಯ ಉದಯಿಸುತ್ತದೆ. ಈ ತ್ರಿವಿಧಾಹಂಕಾರಕ್ಕೆ ಅಭಿಮಾನ, ಕರ್ತ, ಮಂತ, ಆತ್ಮ, ಎಂಬ ಹೆಸರುಗಳಿವೆ.
===[[ಮತ್ಸ್ಯ ಪುರಾಣ]]===
*ಸಲಕ್ಷಣವಾದ ಪ್ರಾಚೀನ ಮಹಾಪುರಾಣ. ಮತ್ಸ್ಯಾವತಾರ ತಾಳಿ ವಿಷ್ಣು ಮನುವನ್ನು ಪ್ರಲಯಪ್ರವಾಹದಿಂದ ಉದ್ಧರಿಸುವ ವೃತ್ತಾಂತದಿಂದ ಪುರಾಣಾರಂಭ. ಮನುವಿನ ಹಡಗನ್ನು ಮತ್ಸ್ಯ ಎಳೆದೊಯ್ಯುವಾಗ ಅವನಿಗೂ ಮನುವಿಗೂ ನಡೆದ ಸಂವಾದವೇ ಮತ್ಸ್ಯಪುರಾಣ. ಸೃಷ್ಟಿ, ವಂಶವೃಕ್ಷ, ಶ್ರಾದ್ಧ, ಭೂ, ಖಗೋಲಗಳ ವಿಷಯ, ಆಂಧ್ರಾದಿ ವಿವಿಧ ದೇಶಗಳ ಅರಸರ ಆಳಿಕೆ. ಯಯಾತಿ ವೃತ್ತಾಂತ, ಸಾವಿತ್ರಿಯ ಕಥೆ ಮತ್ತು ವಿಷ್ಣುವಿನ ಅವತಾರಗಳು ಪ್ರಸ್ತುತ ಪುರಾಣದ ವಸ್ತು ಪ್ರಪಂಚದಲ್ಲಿ ಗಣ್ಯ.
*ಯಯಾತಿ ವೃತ್ತಾಂತ ಮುಂತಾದುವು ಮಹಾಭಾರತ ಹರಿವಂಶಗಳಲ್ಲಿರುವಂತೆಯೇ ಇವೆ. ವಿವಿಧವ್ರತಗಳು, ಪ್ರಯೋಗಮಾಹಾತ್ಮ್ಯ, ವಾರಾಣಸೀಮಾಹಾತ್ಮ್ಯ, ನರ್ಮದಾಮಾಹಾತ್ಮ್ಯ, ರಾಜಧರ್ಮ, ಶಕುನಶಾಸ್ತ್ರ, ಗೃಹಾರಂಭಕರ್ಮ, ವಿಗ್ರಹಪ್ರತಿಷ್ಠೆ, ದೇವಾಲಯ, ಅರಮನೆಗಳ ರಚನೆ, ಷೋಡಶದಾನ ಮುಂತಾದ ವಿಷಯಗಳು ಇದರಲ್ಲಿ ಆಮೇಲಾದ ಪ್ರಕ್ಷೇಪಗಳು. ವೈಷ್ಣವ, ಶೈವ ಸಮಪ್ರಾಧಾನ್ಯವನ್ನಿದರಲ್ಲಿ ಕಾಣಬಹುದು. ಶ್ಲೋಕಸಂಖ್ಯೆ 15,000; ಪ್ರಸ್ತುತರೂಪದ ಕಾಲ ಪ್ರಕ್ರಿ.ಶ. 550-650 ನಡುವೆ.
*ಈ ಪುರಾಣ ತನ್ನ ಅಲಭ್ಯವಾದ ಮೂಲಸ್ವರೂಪದಲ್ಲಿ ವಾಯು, ಬ್ರಹ್ಮಾಂಡ ಪುರಾಣಗಳಷ್ಟೇ ಪ್ರಾಚೀನ. ವಿಷ್ಣು ಹಾಗೂ ಪದ್ಮ ಪುರಾಣಗಳಿಗೂ ಇದಕ್ಕೂ ಸಾಧಾರಣವೆನ್ನಿಸುವ ಎಷ್ಟೋ ಅಧ್ಯಾಯಗಳಿವೆ. ಮೂಲದ ದೃಷ್ಟಿಯಿಂದ ಇದರ ಪ್ರಸ್ತುತ ರೂಪ ಉಕ್ತಪುರಾಣಗಳಿಗೆ ಋಣಿಯೋ ಅವೇ ಇದಕ್ಕೆ ಋಣಿಯೋ ಗೊತ್ತಿಲ್ಲ. ಕೂರ್ಮ, ಲಿಂಗ ಪುರಾಣಗಳಂತೆ ಇದು ಮತಾಚಾರಮಯವಾಗಿಲ್ಲ.
*ಬ್ರಹ್ಮಪುರಾಣವನ್ನು ಮೊದಲು ನೆನೆದು, ಅನಂತರ ವೇದಗಳನ್ನು ತನ್ನ ಬಾಯಿಯಿಂದ ಹೊರಗೆಡಹಿದ ಎನ್ನುತ್ತದೆ ಮತ್ಸ್ಯಮಹಾಪುರಾಣ. ಇದರ ಪ್ರಕಾರ ಸರ್ವಚರಾಚರಗಳ ರಕ್ಷಣೆಗಾಗಿ ದಂಡನೆಯನ್ನು ಕೈಗೊಳ್ಳಲೆಂದು ಸ್ವಯಂಭುವಾದ ಬ್ರಹ್ಮ ದೇವತೆಗಳ ಅಂಶಗಳಿಂದ ರಾಜನನ್ನು ಸೃಜಿಸಿದ. ಆದುದರಿಂದ ರಾಜನನ್ನು ಯಾರೂ ಎದುರು ನಿಂತು ನೋಡಲಾರರು. ಆತ ಮಾನವರಲ್ಲಿ ಸೂರ್ಯ. ಆತ ದುಷ್ಟನಾದರೆ ಪ್ರಜೆಗಳೆಲ್ಲರೂ ದುಷ್ಟರಾಗುತ್ತಾರೆ.
Line ೨೪೪ ⟶ ೨೪೫:
*ಇದರಲ್ಲಿ ರಾಮಾಯಣ, ಮಹಾಭಾರತ, ಹರಿವಂಶಗಳ ಕತೆಗಳಲ್ಲದೆ, ಸೃಷ್ಟಿವಿವರಣೆ, ಖಗೋಲವಿಚಾರ, ಜ್ಯೋತಿಶಾಸ್ತ್ರದ ಅಂಶ, ಶಕುನಶಾಸ್ತ್ರ, ಸಾಮುದ್ರಿಕ ಶಾಸ್ತ್ರ, ರತ್ನಪರೀಕ್ಷೆ, ರಾಜನೀತಿ, ಯಾಜ್ಞವಲ್ಕ್ಯ ಸ್ಮೃತಿಗನುಗುಣವಾದ ಧರ್ಮವಿವೇಕ ಮೊದಲಾದ ನಾನಾ ಜ್ಞಾನಾಂಗಗಳು ತುಂಬಿಕೊಂಡಿದೆ. ಈ ಪುರಾಣದ ಉತ್ತರಖಂಡವನ್ನು ಎರಡನೆಯ ಭಾಗ ಅಥವಾ ಪ್ರೇತಕಲ್ಪ ಎನ್ನುತ್ತಾರೆ.
*ಪ್ರೇತಕಲ್ಪದಲ್ಲಿ ಸತ್ತಮೇಲೆ ಜೀವಾತ್ಮನಿಗೊದಗುವ ಗತಿ, ಕರ್ಮ,ಪುನರ್ಜನ್ಮ, ಮೋಕ್ಷ, ಸಂಸಾರಬೀಜವಾಗಿರುವ ಆಸೆ, ಮರಣಶಕುನ ಯಮಲೋಕಮಾರ್ಗ, ಪ್ರೇತಗಳ ಗತಿ, ನರಕಹಿಂಸೆ, ಸ್ವಪ್ನ, ಅಪಶಕುನಗಳನ್ನುಂಟು ಮಾಡುವ ಪ್ರೇತಗಳು, ಮರಣಪೂರ್ವದ ಕರ್ಮ, ಸಾಯುತ್ತಿರುವ ಮತ್ತು ಸತ್ತವರ ಬಗ್ಗೆ ಮಾಡತಕ್ಕ ಕರ್ಮ, ಉತ್ತರಕ್ರಿಯೆ, ಪಿತೃಪೂಜೆ, ಸತೀವಿಧಿ, ಗಯಾಮಾಹಾತ್ಮ್ಯ ಇತ್ಯಾದಿ ವಿವಿಧ ವಿಷಯಗಳ ವಿವರಗಳಿವೆ.
*ಈ ಪುರಾಣದ ಪ್ರಾಚೀನ ಮೂಲದ ಕಾಲ ಪ್ರ.ಶ. 3-4ನೆಯ ಶತಮಾನವಾಗಿರಬಹುದಾದರೂ ಸದ್ಯದ ರೂಪದ ಅವಧಿ ಪ್ರಕ್ರಿ.ಶ. 10ನೆಯ ಶತಮಾನಕ್ಕಿಂತ ಹಿಂದಿನದಲ್ಲವೆಂದು ತರ್ಕಿಸಲಾಗಿದೆ. ಬ್ರಹ್ಮನ ಬಾಯಿಗಳಿಂದ ಹೊರಬಿದ್ದ ವೇದಗಳಲ್ಲಿ ಹೇಳಿದ ಕರ್ಮಗಳನ್ನು ಮಾಡಲಾರದವ ಸ್ಮೃತಿ ಹೇಳಿದ ಕರ್ಮಗಳನ್ನಾದರೂ ಮಾಡಬೇಕು. ಅದೂ ಆಗದವ ನಡೆದುಬಂದ ಸದಾಚಾರವನ್ನು ಹಿಡಿಯಬೇಕು. ರಾಜನಿಲ್ಲದ ರಾಜ್ಯದಲ್ಲಿ ಇರಬಾರದು. ರಾಜ ವಿಷ್ಣುವಿನ ಮಾನಸಪುತ್ರ. ಆತ ಪ್ರಜೆಗಳನ್ನು ಮಕ್ಕಳಂತೆ ಪಾಲಿಸಬೇಕು.
*ಅವನ ಆಳಿಕೆ ಸತ್ಯ, ನ್ಯಾಯಬದ್ಧವಾಗಿರಬೇಕು. ಇಂಥ ಶೀಲವುಳ್ಳ ದೊರೆ ಜಗತ್ತಿಗೆ ಭೂಷಣಪ್ರಾಯ, ದುರ್ಬಲನಿಗಿರುವ ಮಹಾಬಲ-ಎಂದು ಮುಂತಾಗಿ ಗರುಡಮಹಾಪುರಾಣ ಬೋಧಿಸುತ್ತದೆ. ಗರುಡ ಪುರಾಣದ ಸಾರವನ್ನು ಮಿಕ್ಕ ಪುರಾಣಗಳ ಅಂಶದೊಂದಿಗೆ ಸಾರೋದ್ಧಾರ ಎಂಬ ಹೆಸರಿನಲ್ಲಿ ನೌನಿಧಿರಾಮನೆಂಬಾತ ಸಂಗ್ರಹಿಸಿರುವುದಿಲ್ಲಿ ಸ್ಮರಣೀಯ.
 
"https://kn.wikipedia.org/wiki/ಅಷ್ಟಾದಶ_ಪುರಾಣಗಳು" ಇಂದ ಪಡೆಯಲ್ಪಟ್ಟಿದೆ