ಚೀನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯೦ ನೇ ಸಾಲು:
[[ಚಿತ್ರ:ChineseCrossbow.JPG|thumb|ಪ್ರಾಚೀನ ಚೀನಾದ ಹಸ್ತ ಚಾಲಿತ ಅಡ್ಡಬಿಲ್ಲಿನ ಉಳಿಕೆಗಳು, ಕ್ರಿ. ಪೂ. 2ನೇ ಶತಮಾನ .]]
[[ಪ್ರಾಚೀನ ಚೀನಾ]] ದ ತಾಂತ್ರಿಕ ಸಾಧನೆಗಳೆಂದರೆ [[ಕಾಗದ]] ([[ಪೇಪಿರಸ್‌]] ಅಲ್ಲ) ಮತ್ತು [[ಕಾಗದ ತಯಾರಿಕೆ]], [[ಮರದ ಅಚ್ಚಿನ ಮುದ್ರಣ]] ಮತ್ತು [[ಚಲಿಸಬಲ್ಲ ಅಚ್ಚು]] [[ಪೂರ್ವ ಏಷ್ಯಾದಲ್ಲಿನ ಮುದ್ರಣ ಇತಿಹಾಸ|ಮುದ್ರಣ]], ಪ್ರಾಚೀನ ಸೂಜಿಗಲ್ಲು ಮತ್ತು ಸೂಜಿ [[ದಿಕ್ಸೂಚಿ]], [[ಗನ್‌ಪೌಡರ್‌|ಗನ್‌ ಪೌಡರ್‌]], [[ಶೌಚ ಕಾಗದ]], ಪ್ರಾಚೀನ [[ಭೂಕಂಪನ ಶೋಧಕ|ಭೂಕಂಪನ]] ಶೋಧಕಗಳು, [[ಬೆಂಕಿಕಡ್ಡಿ|ಬೆಂಕಿ ಪೊಟ್ಟಣ]], [[ಪ್ರಾಣಿ ದೊಡ್ಡಿಗಳು|ಪ್ರಾಣಿ ದೊಡ್ಡಿ]]ಗಳು, ಡಬಲ್‌ ಆಕ್ಷನ್‌ [[ಪಿಸ್ಟನ್‌ ಪಂಪ್‌]], [[ಬ್ಲಾಸ್ಟ್‌ ಫರ್ನೇಸ್‌]] ಮತ್ತು [[ಕಬ್ಬಿಣದ ಎರಕ]], [[ಕಬ್ಬಿಣ]] [[ನೇಗಿಲು]], ಬಹು-ಕೊಳವೆಯ [[ನೇಗಿಲ ಸಾಲು]], [[ತೂಗು ಸೇತುವೆ]] , ಇಂಧನವಾಗಿ [[ನೈಸರ್ಗಿಕ ಅನಿಲ]], [[ದಕ್ಷಿಣ ಮುಖೀಯ ಸಾರೋಟು|ದಕ್ಷಿಣ ಮುಖೀಯ ಸಾರೋಟು/ರಥ]] ಕ್ಕಾಗಿ [[ವ್ಯತ್ಯಾಸಕ (ಯಾಂತ್ರಿಕ ಸಾಧನ)|ವ್ಯತ್ಯಾಸಕ ಗೇರು]], [[ಹೈಡ್ರಾಲಿಕ್‌]] ಶಕ್ತಿಚಾಲಿತ [[ಖಗೋಳ ವಲಯ ಗೋಳ]], ಹೈಡ್ರಾಲಿಕ್‌-ಶಕ್ತಿ ಚಾಲಿತ [[ಹಗುರ ಸುತ್ತಿಗೆ]], ಯಾಂತ್ರಿಕ [[ಸರಪಣಿ ಚಾಲನೆ]] , ಯಾಂತ್ರಿಕ [[ಬೆಲ್ಟ್‌‌ (ಯಾಂತ್ರಿಕ)|ಬೆಲ್ಟ್‌ ಡ್ರೈವ್‌]], ಉಬ್ಬು ಛಾಯಾ ಭೂಪಟ‌, [[ಪ್ರೊಪೆಲ್ಲರ್‌]], [[ಅಡ್ಡಬಿಲ್ಲು]] , [[ಫಿರಂಗಿ]], [[ರಾಕೆಟ್‌]], [[ಬಹುಹಂತದ ರಾಕೆಟ್‌|ಬಹು ಹಂತದ ರಾಕೆಟ್‌]] ಇತ್ಯಾದಿ. ಚೀನೀ [[ಖಗೋಳಶಾಸ್ತ್ರ|ಖಗೋಳಶಾಸ್ತ್ರಜ್ಞರು]] [[ಮಹಾನವ್ಯ]](ಸೂಪರ್‌ನೋವಾ)ವನ್ನು ದಾಖಲಿಸಿದವರಲ್ಲಿ ಮೊದಲಿಗರು. ಖಗೋಳಶಾಸ್ತ್ರಜ್ಞ [[ಶೆನ್‌ ಕುವೋ|ಶೆನ್‌ ಕುವೋನ]] (೧೦೩೧–೧೦೯೫) ಏಕಾಂಗಿ ಸಾಧನೆಯೇ ಪ್ರಭಾವ ಬೀರುವಂತಹದ್ದು, ಸೂರ್ಯ ಮತ್ತು ಚಂದ್ರರಿರುವುದು ವರ್ತುಲಾಕಾರದಲ್ಲಿ ಎಂಬ ಸಿದ್ಧಾಂತ ಮಂಡಿಸಿ , ತನ್ನ ಉತ್ತಮಪಡಿಸಿದ ದೂರದರ್ಶಕ ನಳಿಕೆಯ ಸಹಾಯದಿಂದ [[ಧೃವ|ಧೃವ ನಕ್ಷತ್ರ]]ದ ಸ್ಥಾನವನ್ನು ಸರಿಪಡಿಸಿದುದಲ್ಲದೇ , [[ವಾಸ್ತವವಾದ ಉತ್ತರ|ವಾಸ್ತವವಾದ ಉತ್ತರದಿಕ್ಕು]] ಎಂಬ ಕಲ್ಪನೆಯನ್ನು ಕಂಡುಹಿಡಿದು, [[ಗ್ರಹಗಳ ಚಲನೆ|ಗ್ರಹಗಳ ಚಲನೆಗಳ]] ಬಗ್ಗೆ ಹಿಮ್ಮುಖ ಚಲನೆಯಂತಹಾ ಗ್ರಂಥ ಬರೆದು, ಹಾಗೂ [[ಕಕ್ಷೆ|ಕಕ್ಷೆಗಳಲ್ಲಿ]] ನಡೆಯುವ ಗ್ರಹಗಳ ಪಥವನ್ನು ತಿರುಗುತ್ತಿರುವ [[ವಿಲ್ಲೋ]] ಎಲೆಯ ಆಕೃತಿಯಲ್ಲಿರುವ ಬಿಂದುಗಳೊಂದಿಗೆ ಹೋಲಿಕೆ ಮಾಡಿದ್ದನು. ಪುರಾವೆಗಳೊಂದಿಗೆ [[ಭೂರೂಪಶಾಸ್ತ್ರ|ಭೂರೂಪಶಾಸ್ತ್ರದಲ್ಲಿ]] ಭೂರಚನೆಯಾಗುವುದನ್ನು ಮತ್ತು [[ಭೂಹವಾಗುಣ ಇತಿಹಾಸ ಶಾಸ್ತ್ರ|ಭೂಹವಾಗುಣ ಇತಿಹಾಸಶಾಸ್ತ್ರ]]ದಲ್ಲಿ [[ಹವಾಗುಣ ಬದಲಾವಣೆ|ಹವಾಗುಣ ಬದಲಾವಣೆಯನ್ನು]] ಕುರಿತು ತನ್ನದೇ ಆದ [[ಭೂವೈಜ್ಞಾನಿಕ|ಭೂರಚನಾ ಶಾಸ್ತ್ರದ]] ಸಿದ್ಧಾಂತಗಳನ್ನು ಮಂಡಿಸಿದನು. ಇನ್ನಿತರ ಪ್ರಮುಖ ಖಗೋಳಶಾಸ್ತ್ರಜ್ಞರೆಂದರೆ [[ಗ್ಯಾನ್‌ ಡೆ|ಗಾನ್‌ ಡೇ]], [[ಷಿ ಷೆನ್|ಷಿ ಷೆನ್‌]], [[ಝ್ಯಾಂಗ್‌ ಹೆಂಗ್‌]], [[ಯಿ ಕ್ಸಿಂಗ್‌]], [[ಝ್ಯಾಂಗ್‌ ಸಿಕ್ಸುನ್‌|ಝ್ಯಾಂಗ್‌ ಸಿಕ್ಸಂ]], [[ಸು ಸಾಂಗ್‌]], [[ಗುವೋ ಷೌಜಿಂಗ್‌|ಗುವೋ ಶೌಜಿಂಗ್‌]], ಮತ್ತು [[ಕ್ಸು ಗುವಾಂಗ್‌ಕ್ವಿ]]. [[ಚೀನಾದ ಗಣಿತಶಾಸ್ತ್ರ|ಚೀನೀಯ ಗಣಿತಶಾಸ್ತ್ರವು]] [[ಗ್ರೀಕರ ಗಣಿತಶಾಸ್ತ್ರ|ಗ್ರೀಕ್‌ ಗಣಿತಶಾಸ್ತ್ರ]]ದಿಂದ ಪ್ರತ್ಯೇಕವಾಗಿ ವಿಕಸನಗೊಂಡಿರುವುದರಿಂದ [[ಗಣಿತಶಾಸ್ತ್ರದ ಇತಿಹಾಸ|ಗಣಿತಶಾಸ್ತ್ರದ ಇತಿಹಾಸದಲ್ಲಿ]] ಬಹಳ ಆಸಕ್ತಿದಾಯಕವಾಗಿದೆ. [[ಸಾಂಗ್‌ ಯಿಂಗ್‌‌ಕ್ಸಿಂಗ್‌|ಸಾಂಗ್‌ ಯಿಂಗ್‌ಕ್ಸಿಂಗ್‌]] (೧೫೮೭–೧೬೬೬) ರಚಿತ ''ಟಿಯಾಗಾಂಗ್‌ ಕಯ್‌ವು'' [[ವಿಶ್ವಕೋಶ|ವಿಶ್ವಕೋಶದಂತೆ]] ಚೀನೀಯರು ತಮ್ಮ ತಾಂತ್ರಿಕ ಸಾಧನೆಗಳೆಲ್ಲವನ್ನೂ ದಾಖಲಿಸುವಲ್ಲಿ ತುಂಬ ಉತ್ಸುಕತೆ ಹೊಂದಿದ್ದರು.
೧೭ನೇ ಶತಮಾನದ ವೇಳೆಗೆ ಚೀನಾದ [[ವಿಜ್ಞಾನ]] ಮತ್ತು [[ತಂತ್ರಜ್ಞಾನ]] [[ಯೂರೋಪ್‌|ಯೂರೋಪ್‌ಗಿಂತ]] ಹಿಂದುಳಿದಿತ್ತು. ಈ ಹಿನ್ನಡೆಗೆ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳನ್ನು ಕೊಡಲಾಗುತ್ತಿದೆಯಾದರೂ, ಇತ್ತೀಚಿನ ಇತಿಹಾಸಶಾಸ್ತ್ರಜ್ಞರು [[ಮೇಲ್ಮಟ್ಟದ ಆರ್ಥಿಕ ಅಸಮತೋಲನ|ಮೇಲ್ಮಟ್ಟದ ಆರ್ಥಿಕ ಅಸಮತೋಲನದಂತಹಾ]] ಆರ್ಥಿಕ ಕಾರಣ ಗಳೆಡೆ ಗಮನ ಹರಿಸುತ್ತಿದ್ದಾರೆ. PRCಯ ವ್ಯಾವಹಾರಿಕ ಸುಧಾರಣೆಗಳೊಂದಿಗೆ ಚೀನಾವು ಜಾಗತಿಕ ಆರ್ಥಿಕತೆಗೆ ಇನ್ನೂ ಉತ್ತಮ ರೀತಿಯಲ್ಲಿ ಸಂಪರ್ಕ ಹೊಂದಿದ್ದು ವಿಜ್ಞಾನ ಹಾಗೂ ತಂತ್ರಜ್ಞಾನದ ಕಡೆ ಹೆಚ್ಚಿನ ಗಮನ ಕೊಡುತ್ತಿದೆ.
==ಹಾಂಗ್ಕಾಂಗ್ ಝುಹೈ ಮಕಾವು ಸೇತುವೆ==
[[File:West section of Hong Kong-Zhuhai-Macau Bridge (20180902174105).jpg|thumb|ಹಾಂಗ್ಕಾಂಗ್-ಝುಹೈ-ಮಕಾವು ಸೇತುವೆಯ ಪಶ್ಚಿಮ ವಿಭಾಗ ]]
*[[ಹಾಂಗ್ಕಾಂಗ್-ಝುಹೈ-ಮಕಾವು ಸೇತುವೆ]] ಚೀನಾದಲ್ಲಿ ಜಗತ್ತಿನ ಅತಿ ಉದ್ದದ ಸೇತುವೆ.
*ಚೀನಾದಲ್ಲಿ ನಿರ್ಮಾಣವಾದ ಜಗತ್ತಿನ ಅತಿ ಉದ್ದದ ಸಮುದ್ರ ಮೇಲ್ಸೇತುವೆ ಸೇತುವೆ ದಿ.೨೩-೧೦-೨೦೧೮ರಂದು ಬಳಕೆಗೆ ಮುಕ್ತವಾಯಿತು. ಆ ಸೇತುವೆಯ ಉದ್ದ (ನೀರಿನಡಿ ಸುರಂಗ ಸೇರಿ) 55 ಕಿ.ಮೀ. ಕೋಟಿ. ಆ ಸೇತುವೆ ನಿರ್ಮಾಣ ವೆಚ್ಚರೂ.1.5 ಲಕ್ಷಕೋಟಿ ರೂ. ಅದಕ್ಕೆ ತೆಗೆದುಕೊಳ್ಳುವ ಸಮಯ (ಈ ಮೊದಲು 3 ಗಂಟೆ ಸಮಯ ಬೇಕಿತ್ತು) ಈಗ 30 ನಿಮಿಷ. ಅದು ಮೂರು ಭೂ ಪ್ರದೇಶಗಳನ್ನು ಸಂಪರ್ಕಿಸುವುದು.
ಕೃತಕವಾಗಿ ನಿರ್ಮಿಸಿರುವ ಅದರ ಎರಡು ಭೂಭಾಗಗಳ ವಿಸ್ತೀರ್ಣ 10 ಲಕ್ಷ ಚದರ ಅಡಿ. ಅದು ಹಾಂಕಾಂಗ್– ಮಕಾವ್–ಚೀನಾದ ಜುಹೈಗಳನ್ನು ಸಂಪರ್ಕಿಸುತ್ತದೆ.
*ಈ ನದಿಯು ಪರ್ಲ್ ನದಿಯ ನೀರಿನ ಮೇಲೆ ನಿರ್ಮಾಣಗೊಂಡಿದೆ. ಆ ಸೇತುವೆಯುದ್ದಕ್ಕೂ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆಯಾಗಿದೆ. ಸೇತುವೆ ನಿಗಾಕ್ಕೆ, ಭಯೋತ್ಪಾದನಾ ತಡೆಗೆ ಪೊಲೀಸ್ ಪಡೆಯಿಂದ ಸದಾ ನೆಡೆಯುವುದು. ಅದು 2009ರಲ್ಲಿ ಆರಂಭವಾಗಿತ್ತು ಯೋಜನೆಯಂತೆ 2016ರಲ್ಲಿ ಮುಗಿಯಬೇಕಿತ್ತು.
===ನಿರ್ಮಾಣ===
*ನಿರ್ಮಾಣದ ಅವಧಿಯಲ್ಲಿ 18 ಕಾರ್ಮಿಕರ ಸಾವು ಸಂಭವಿಸಿತು. ಸೇತುವೆಯ ನಿರ್ಮಾಣಕ್ಕೆ 4 ಲಕ್ಷ ಟನ್ ಉಕ್ಕನ್ನು ಬಳಸಲಾಗಿದೆ. (60 ಐಫೆಲ್ ಟವರ್ ಪ್ರಮಾಣ). ಈ ಸೇತುವೆಗೆ ಭೂಕಂಪ ಮತ್ತು ಚಂಡಮಾರುತಗಳ ಹೊಡೆತ ತಾಳಿಕೊಳ್ಳುವ ಸಾಮರ್ಥ್ಯ ಇದೆ. ಈ ಸೇತುವೆಯನ್ನು 2030 ರ ಹೊತ್ತಿಗೆ ನಿತ್ಯವೂ 29 ಸಾವಿರ ವಾಹನಗಳು ಹಾಗೂ 1.26 ಲಕ್ಷ ಜನರು ಬಳಕೆ ಮಾಡಬಹುದೆಂದು ಅಂದಾಜು ಮಾಡಲಾಗಿದೆ. ಹಾಂಕಾಂಗ್‌, ಮಕಾವ್ ಜತೆ ಚೀನಾದ 9 ನಗರಗಳನ್ನು ಸಂಪರ್ಕಿಸುವ ಮೂಲಕ ‘ಗ್ರೇಟರ್ ಬೇ ಏರಿಯಾ’ ನಿರ್ಮಾಣ ಚೀನಾದ ಉದ್ದೇಶ.<ref>[https://www.prajavani.net/worlds-longest-bridge-583114.html ಚೀನಾ: ಅತಿ ಉದ್ದದ ಸೇತುವೆ ಬಳಕೆಗೆ ಮುಕ್ತ;: 23 ಅಕ್ಟೋಬರ್ 2018,] </ref>
 
 
೧೭ನೇ ಶತಮಾನದ ವೇಳೆಗೆ ಚೀನಾದ [[ವಿಜ್ಞಾನ]] ಮತ್ತು [[ತಂತ್ರಜ್ಞಾನ]] [[ಯೂರೋಪ್‌|ಯೂರೋಪ್‌ಗಿಂತ]] ಹಿಂದುಳಿದಿತ್ತು. ಈ ಹಿನ್ನಡೆಗೆ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳನ್ನು ಕೊಡಲಾಗುತ್ತಿದೆಯಾದರೂ, ಇತ್ತೀಚಿನ ಇತಿಹಾಸಶಾಸ್ತ್ರಜ್ಞರು [[ಮೇಲ್ಮಟ್ಟದ ಆರ್ಥಿಕ ಅಸಮತೋಲನ|ಮೇಲ್ಮಟ್ಟದ ಆರ್ಥಿಕ ಅಸಮತೋಲನದಂತಹಾ]] ಆರ್ಥಿಕ ಕಾರಣ ಗಳೆಡೆ ಗಮನ ಹರಿಸುತ್ತಿದ್ದಾರೆ. PRCಯ ವ್ಯಾವಹಾರಿಕ ಸುಧಾರಣೆಗಳೊಂದಿಗೆ ಚೀನಾವು ಜಾಗತಿಕ ಆರ್ಥಿಕತೆಗೆ ಇನ್ನೂ ಉತ್ತಮ ರೀತಿಯಲ್ಲಿ ಸಂಪರ್ಕ ಹೊಂದಿದ್ದು ವಿಜ್ಞಾನ ಹಾಗೂ ತಂತ್ರಜ್ಞಾನದ ಕಡೆ ಹೆಚ್ಚಿನ ಗಮನ ಕೊಡುತ್ತಿದೆ.
==ನೋಡಿ==
*ಚೀನಾದ [[ವೈ-20 ವಿಮಾನ]]
"https://kn.wikipedia.org/wiki/ಚೀನಾ" ಇಂದ ಪಡೆಯಲ್ಪಟ್ಟಿದೆ