ಗೋಪಾಲಕೃಷ್ಣ ಗೋಖಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 223.237.227.21 (talk) to last revision by Pavanaja
೨೯ ನೇ ಸಾಲು:
ಈ ಸಮಯದಲ್ಲಿ ಅವರು ತಮ್ಮ ಹೃದಯಕ್ಕೆ ಆಪ್ತವಾಗಿದ್ದ ಸಮಾಜ ಸುಧಾರಣಾ ಚಟುವಟಿಕೆಗಳಿಗಾಗಿ ‘ಸರ್ವೆಂಟ್ಸ್ ಆಫ್ ಇಂಡಿಯನ್ ಸೊಸೈಟಿ’ ಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲ ಉದ್ದೇಶ ಹೆಚ್ಚು ಹೆಚ್ಚು ಭಾರತೀಯರನ್ನು ವಿದ್ಯಾವಂತರನ್ನಾಗಿ ಮಾಡುವುದಾಗಿತ್ತು. “ಭಾರತದಲ್ಲಿ ಹೆಚ್ಚು ಹೆಚ್ಚು ಭಾರತೀಯರು ವಿದ್ಯಾವಂತರಾಗಿ ದೇಶಕ್ಕಾಗಿ, ಸಮಾಜಕ್ಕೆ ಮತ್ತು ಪಾರಸ್ಪರಿಕವಾಗಿ ದುಡಿಯುವಂತಾದ ಮಾತ್ರ ನಿಜವಾದ ರಾಜಕೀಯ ಬದಲಾವಣೆ ಸಾಧ್ಯ” ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು. ಅಂದಿನ ದಿನಗಳಲ್ಲಿ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಇಂಡಿಯನ್ ಸಿವಿಲ್ ಸರ್ವಿಸಸ್ ವ್ಯವಸ್ಥೆಯು ಹೆಚ್ಚು ಜನರಿಗೆ ವಿದ್ಯಾಭ್ಯಾಸದ ಸೌಲಭ್ಯಗಳನ್ನು ಒದಗಿಸಲು ಅಸಮರ್ಥವಾಗಿದ್ದ ಹಿನ್ನಲೆಯಲ್ಲಿ, ಆ ಕಾರ್ಯವನ್ನು ‘ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ’ ಮೂಲಕ ಸಾಧ್ಯವಾಗಿಸುವುದು ಅವರ ಧ್ಯೇಯವಾಗಿತ್ತು. ಈ ಧ್ಯೇಯ ಸಾಧನೆಗಾಗಿ ಅವರು ಅಹರ್ನಿಶಿ ದುಡಿದರು.
 
==ಬ್ರಿಟಿಷರೊಂದಿಗೆ ಸೌಹಾರ್ಧಸೌಹಾರ್ದ ನಡೆ==
ಗೋಖಲೆಯವರು ಭಾರತೀಯ ಸ್ವತಂತ್ರ ಚಳುವಳಿಯ ನಾಯಕರಾಗಿದ್ದಾಗಿಯೂ ಅವರ ಧ್ಯೇಯ ಸ್ವಾತಂತ್ರ್ಯಕ್ಕಿಂತ ಹೆಚ್ಚಿನದಾಗಿ ಸಮಾಜ ಸುಧಾರಣೆಯ ಕುರಿತಾಗಿತ್ತು. ಇಂಥಹ ಸಮಾಜ ಸುಧಾರಣೆಗಾಗಿ ಬ್ರಿಟಿಷ್ ಆಡಳಿತ ವ್ಯವಸ್ಥೆಯೊಂದಿಗೆ ಸೌಹಾರ್ಧಯುತವಾಗಿ ನಡೆಯುವುದೇ ಉತ್ತಮವಾದ ದಾರಿ ಎಂಬ ನಿಲುವು ಅವರದಾಗಿತ್ತು. ಈ ಕಾರಣದಿಂದಾಗಿ ಗೋಖಲೆ ಮತ್ತು ತಿಲಕ್ಕರಂತಹ ಸ್ವಾತಂತ್ರ್ಯಪರ ಚಿಂತಕರ ನಡುವೆ ತೀವ್ರ ಭಿನ್ನಾಭಿಪ್ರಾಯಗಳಿದ್ದವು. ಈ ವಿರೋಧಗಳ್ಯಾವುವನ್ನೂ ಲೆಖ್ಖಿಸದ ಗೋಖಲೆಯವರು ತಾವು ಬಯಸಿದ್ದ ಸಮಾಜಸುಧಾರಣೆಗಳನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ತಮ್ಮ ಕೊನೆಯವರೆಗೆ ಬ್ರಿಟಿಷ್ ಸರ್ಕಾರದ ಜೊತೆ ಜೊತೆಗೆ ಸೌಹಾರ್ಧಯುತವಾಗಿಯೇ ಕಾರ್ಯನಿರ್ವಹಿಸಿದರು.
 
"https://kn.wikipedia.org/wiki/ಗೋಪಾಲಕೃಷ್ಣ_ಗೋಖಲೆ" ಇಂದ ಪಡೆಯಲ್ಪಟ್ಟಿದೆ