ಗೋಪಾಲಕೃಷ್ಣ ಗೋಖಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಮುಂಬೈ → ಮುಂಬಯಿ (2) using AWB
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೦ ನೇ ಸಾಲು:
 
==ಬ್ರಿಟಿಷರೊಂದಿಗೆ ಸೌಹಾರ್ಧ ನಡೆ==
ಗೋಖಲೆಯವರು ಭಾರತೀಯ ಸ್ವತಂತ್ರಸ್ವತಂತ ಚಳುವಳಿಯ ನಾಯಕರಾಗಿದ್ದಾಗಿಯೂ ಅವರ ಧ್ಯೇಯ ಸ್ವಾತಂತ್ರ್ಯಕ್ಕಿಂತ ಹೆಚ್ಚಿನದಾಗಿ ಸಮಾಜ ಸುಧಾರಣೆಯ ಕುರಿತಾಗಿತ್ತು. ಇಂಥಹ ಸಮಾಜ ಸುಧಾರಣೆಗಾಗಿ ಬ್ರಿಟಿಷ್ ಆಡಳಿತ ವ್ಯವಸ್ಥೆಯೊಂದಿಗೆ ಸೌಹಾರ್ಧಯುತವಾಗಿ ನಡೆಯುವುದೇ ಉತ್ತಮವಾದ ದಾರಿ ಎಂಬ ನಿಲುವು ಅವರದಾಗಿತ್ತು. ಈ ಕಾರಣದಿಂದಾಗಿ ಗೋಖಲೆ ಮತ್ತು ತಿಲಕ್ಕರಂತಹ ಸ್ವಾತಂತ್ರ್ಯಪರ ಚಿಂತಕರ ನಡುವೆ ತೀವ್ರ ಭಿನ್ನಾಭಿಪ್ರಾಯಗಳಿದ್ದವು. ಈ ವಿರೋಧಗಳ್ಯಾವುವನ್ನೂ ಲೆಖ್ಖಿಸದ ಗೋಖಲೆಯವರು ತಾವು ಬಯಸಿದ್ದ ಸಮಾಜಸುಧಾರಣೆಗಳನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ತಮ್ಮ ಕೊನೆಯವರೆಗೆ ಬ್ರಿಟಿಷ್ ಸರ್ಕಾರದ ಜೊತೆ ಜೊತೆಗೆ ಸೌಹಾರ್ಧಯುತವಾಗಿಯೇ ಕಾರ್ಯನಿರ್ವಹಿಸಿದರು.
 
೧೮೯೯ರ ವರ್ಷದಲ್ಲಿ ಗೋಖಲೆಯವರು ಬಾಂಬೆ ಲೆಜಿಸ್ಲೇಟಿವ್ ಕೌನ್ಸಿಲ್ಲಿಗೆ ಆಯ್ಕೆಗೊಂಡರು. ೧೯೦೩ರ ವರ್ಷದಲ್ಲಿ ಅವರು ಭಾರತದ ಗೌರ್ನರ್ ಜನರಲ್ ಅವರ ‘ಕೌನ್ಸಿಲ್ ಆಫ್ ಇಂಡಿಯಾ’ಗೆ ಮುಂಬಯಿ ಪ್ರಾಂತ್ಯದ ಪ್ರತಿನಿಧಿಯಾಗಿ ಆಯ್ಕೆಗೊಂಡರು. ೧೯೦೯ರ ವರ್ಷದಲ್ಲಿ ಅವರು ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ಲಿನಲ್ಲಿ ಸೇವೆ ಸಲ್ಲಿಸಿದರು. ಆ ಸಮಯದಲ್ಲಿ ಅವರು ಅತ್ಯಂತ ಮಹಾನ್ ಮೇಧಾವಿಗಳೆಂದು ಪ್ರಖ್ಯಾತಿ ಪಡೆದರು. ವಾರ್ಷಿಕ ಆಯವ್ಯಯಗಳ ಕುರಿತಾದ ಚರ್ಚೆಯಲ್ಲಿ ಅವರ ಪಾಂಡಿತ್ಯಕ್ಕೆ ಮಾರುಹೋದ ಬ್ರಿಟಿಷ್ ಅಧಿಕಾರಿಗಳು ಅವರಿಗೆ ಅಪಾರವಾದ ಗೌರವ ನೀಡತೊಡಗಿದರು. ಹೀಗಾಗಿ ಅವರನ್ನು ಬ್ರಿಟಿಷ್ ಸರ್ಕಾರದ ಕಾರ್ಯದರ್ಶಿಗಳಾದ ಲಾರ್ಡ್ ಜಾನ್ ಮಾರ್ಲೇ ಅವರು ಲಂಡನ್ನಿಗೆ ಆಹ್ವಾನಿಸಿದರು. ಮಾರ್ಲೇ ಅವರೊಂದಿಗೆ ಗೋಖಲೆಯವರು ಉತ್ತಮವಾದ ಬಾಂಧವ್ಯ ಹೊಂದಿದ್ದರು. ಈ ಸೌಹಾರ್ಧಯುತ ಸಂಬಂಧದಿಂದಾಗಿ ೧೯೦೯ರ ವರ್ಷದಲ್ಲಿ ಮಾರ್ಲೇ-ಮಿಂಟೋ ಸುಧಾರಣೆಗಳು ಜಾರಿಗೆ ಬರುವಂತಾದವು. ೧೯೦೪ರಲ್ಲಿ ಗೋಖಲೆಯವರನ್ನು ಬ್ರಿಟಿಷ್ ಸರ್ಕಾರವು ಸಿ ಐ ಇ ಅಂದರೆ ಕಂಪಾನಿಯನ್ ಆಫ್ ದಿ ಆರ್ಡರ್ ಆಫ್ ಇಂಡಿಯನ್ ಎಂಪೈರ್ ಎಂದು ನಿಯೋಜಿಸಿ ಅತ್ಯಂತ ಗೌರವಾನ್ವಿತ ಮಹನೀಯರ ಪಟ್ಟಿಯಲ್ಲಿ ಹೆಸರಿಸಿತು. ಇದು ಗೋಪಾಲಕೃಷ್ಣ ಗೋಖಲೆಯವರ ಪರಿಶ್ರಮ ಮತ್ತು ಕಾರ್ಯಗಳಿಗೆ ಸಂದ ಗೌರವವಾಗಿತ್ತು.
"https://kn.wikipedia.org/wiki/ಗೋಪಾಲಕೃಷ್ಣ_ಗೋಖಲೆ" ಇಂದ ಪಡೆಯಲ್ಪಟ್ಟಿದೆ