ಶಿವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೩ ನೇ ಸಾಲು:
==ಮೊಟ್ಟಮೊದಲ ಯೋಗಿ==
ಶಿವ ಎಂದರೆ ಆದಿಯೋಗಿ, ಅರ್ಥಾತ್‌, ಎಲ್ಲ ಯೋಗಿಗಳಿಗೂ ಮೊದಲು ಬಂದವನು, ಯೋಗ ವಿದ್ಯೆಯ ಮೂಲಗುರು. ಇಂದು ಯೋಗವಿದ್ಯೆ ಎಂದು ನಾವು ಯಾವುದಕ್ಕೆ ಹೇಳುತ್ತೇವೋ ಆ ವಿದ್ಯೆಯನ್ನು ಮನುಕುಲಕ್ಕೆ ಪರಿಚಯ ಮಾಡಿಕೊಟ್ಟವನು. ಯೋಗ ಎಂದರೆ ತಲೆಕೆಳಗಾಗಿ ನಿಲ್ಲುವುದಲ್ಲ, ಅಥವಾ ಉಸಿರನ್ನು ಹಿಡಿಯುವುದಲ್ಲ. ಯಾವ ವಿಜ್ಞಾನ, ತಂತ್ರಜ್ಞಾನಗಳ ಮೂಲಕ ಮನುಷ್ಯಜೀವದ ಉಗಮವನ್ನು ತಿಳಿಯಬಹುದೋ, ಮನುಷ್ಯನು ಪರಮ ಚರಮ ಗುರಿಯನ್ನು ಸಾಧಿಸಬಹುದೋ, ಅದೇ ಯೋಗ.
ಕೇದಾರನಾಥದಿಂದ ಸ್ವಲ್ಪ ದೂರದಲ್ಲಿ ಕಾಂತಿ ಸರೋವರ ಎಂಬ ಒಂದು ಹಿಮಗಟ್ಟಿದ ಸರೋವರ ಇದೆ. ಇದರ ದಡದಲ್ಲಿ ಕುಳಿತು ಆದಿಯೋಗಿಯು ಏಳು ಜನ ಶಿಷ್ಯಂದಿರಿಗೆ ಸಾಂಗವಾಗಿ, ಪೂರ್ವೋತ್ತರ ಕ್ರಮದಿಂದ ಯೋಗವಿದ್ಯೆಯ ಉಪದೇಶವನ್ನು ಮಾಡಿದನು. ಈ ಏಳು ಜನರೇ ನಂತರದ ಇತಿಹಾಸದಲ್ಲಿ, ಅಂದಿನಿಂದ ಇಂದಿನವರೆಗೆ ಸಪ್ತರ್ಷಿಗಳು ಎಂದು ಪ್ರಸಿದ್ಧರಾಗಿದ್ದಾರೆ. ಆ ಸಮಯದಲ್ಲಿ ಯಾವೊಂದು ಧಾರ್ಮಿಕ ಮತವು ಕೂಡ ಪ್ರಾರಂಭವಾಗಿರಲಿಲ್ಲ. ಮನುಕುಲವನ್ನು ಧಾರ್ಮಿಕ ಪಂಥಗಳ ಹೆಸರಿನಲ್ಲಿ ಸರಿಪಡಿಸಲು ಬಾರದೇನೋ ಅನ್ನಿಸುವಂತಹ ಕೇಡನ್ನು ಮಾಡಿದ ಧಾರ್ಮಿಕ ಪಂಥಗಳು ಹುಟ್ಟುವುದಕ್ಕೆ ಅದೆಷ್ಟೋ ಮುಂಚೆಯೇ ಮಾನವ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ವಿಧಿವಿಧಾನಗಳನ್ನು ತಿಳಿಯುವ, ತಿಳಿಸುವ, ಯೋಗವಿದ್ಯಾ ಪ್ರಸಾರದ ಕಾರ್ಯವು ಈ ಪ್ರಕಾರವಾಗಿ ಪ್ರಾರಂಭವಾಯಿತು.(ಜಗ್ಗಿ ವಾಸುದೇವ್‌ ಅವರ ಲೇಖನ;ಇದಕ್ಕೆ ಯಾವುದೇ ಪುರಾಣದ ಆಧಾರ ಸಿಕ್ಕಿಲ್ಲ. ಶಿವ ಎಂದರೆ ಶೂನ್ಯವೆಂದು ಹೇಳಿ ಅವನು ಸಪ್ತ ಋಷಿಗಳಿಗೆ ಯೋಗ ಭೋಧಿಸಿದೆಂದುಭೋಧಿಸಿದನೆಂದು ಹೇಳಿರುವುದು ವಿಚಿತ್ರವಾಗಿದೆ.)
===ಶಿವ ಪದದ ಅರ್ಥ: ಜಗ್ಗಿ===
ಶಿವ ಎನ್ನುವ ಶಬ್ದವು ಎರಡು ಮೂಲತತ್ವಗಳನ್ನು ಪ್ರತಿನಿಧಿಸುತ್ತದೆ. ಶಿವ ಎನ್ನುವ ಶಬ್ದದ ಅಕ್ಷರಶಃ ಅರ್ಥವು ಯಾವುದು ಅಲ್ಲವೋ ಅದು ಎಂದು. ಇಂದು ಆಧುನಿಕ ವಿಜ್ಞಾನವೂ ಕೂಡ ಹೇಳುವುದೇನೆಂದರೆ, ವಿಶ್ವವು ಶೂನ್ಯದಿಂದ ಉತ್ಪತ್ತಿಯಾಗಿದೆ, ಮತ್ತು ಶೂನ್ಯಕ್ಕೇ ಹಿಂದಿರುಗುತ್ತದೆ. ಈ ಮೇರೆಯಿಲ್ಲದ ಶೂನ್ಯವೇ ಸಮಸ್ತ ವಿಶ್ವದ ಅಸ್ತಿತ್ವಕ್ಕೆ ಮೂಲವಾಗಿ, ವಿಶ್ವದ ಮುಖ್ಯವಾದ ಗುಣವೇ ಆಗಿದೆ. ಎಲ್ಲ ಗ್ಯಾಲಕ್ಸಿಗಳನ್ನು ಒಟ್ಟು ಸೇರಿಸಿದರೂ ಅವುಗಳು ಈ ಶೂನ್ಯದ ಒಂದು ಸ್ವಲ್ಪ ಭಾಗವನ್ನು ಮಾತ್ರವೇ ಆವರಿಸಿಕೊಂಡಿವೆ. ಉಳಿದದ್ದೆಲ್ಲ ಈ ಅಪಾರವಾದ, ಕೊನೆಯಿಲ್ಲದ ಶೂನ್ಯವೇ ಆಗಿದೆ. ಹೀಗೆ, ಸಮಸ್ತ ವಿಶ್ವಕ್ಕೂ ಆಧಾರವಾಗಿರುವ, ಕೊನೆಯಿಲ್ಲದ ಈ ಶೂನ್ಯವೇ ಶಿವ. ಯಾವುದರಿಂದ ವಿಶ್ವದ ಉತ್ಪತ್ತಿಯಾಗಿದೆಯೋ ಯಾವುದರಲ್ಲಿ ವಿಶ್ವವು ಲಯವಾಗುವುದೋ ಅದಕ್ಕೆ ಶಿವ ಎಂದು ಹೇಳುತ್ತಾರೆ. ಹೀಗಾಗಿ, ಶಿವ ಎನ್ನುವುದು, ಎಲ್ಲ ಲಕ್ಷ ಣಗಳಿಗೂ ಅತೀತವಾದ ಒಂದು ತತ್ವವೇ ಹೊರತು ಒಂದು (ಮಾನುಷ ಅಥವಾ ಅತಿಮಾನುಷ) ಜೀವವಲ್ಲ. (ಈ ಅರ್ಥವನ್ನು ಯಾವ ವ್ಯಾಖ್ಯಾನಕಾರರೂ ಹೇಳಿದಂತೆ ತೋರುವುದಿಲ್ಲ. ವಿಜ್ಞಾನವು ವಿಶ್ವವು ಶೂನ್ಯದಿಂದ ಉತ್ಪತ್ತಿಯಾಗಿದೆ ಎಂದು ಹೇಳಿಲ್ಲ. ಫೋಟಾನ್ ಎಂಬ ಸೂಕ್ಷ್ಮ ಕಣದಿಂದ ಉತ್ಪತ್ತಿಯಾಗಿದೆ ಎನ್ನುತ್ತದೆ. ವಿಶ್ವದಲ್ಲಿ ತುಂಬಿರುವ ೯೦% ಭಾಗ ಕೃಷ್ಣದ್ರವ್ಯವನ್ನು ಶೂನ್ಯವೆಂದು ಹೇಳಿಲ್ಲ. ವಿಶಾಲವಾದ ಶೂನ್ಯ ಪ್ರದೇಶದಲ್ಲಿ ದ್ರವ್ಯ ಇದ್ದೇ ಇದೆ. ನೋಡಿ. [[ಮಹಾ ಸ್ಪೋಟ]]). '''ಶಿವನು ಅತಿ ಮಾನುಷ ಜೀವವಲ್ಲ ಎಂದರೆ ಶಿವನು ಚೈತನ್ಯಸ್ವರೂನಲ್ಲ ಎಂದಂತೆ ಆಯಿತು'''.)<ref>[https://vijaykarnataka.indiatimes.com/state/vk-special/sadguru-jaggi-vasudev-talk-about-god-shiva/articleshow/62889575.cms ಸದ್ಗುರು ಜಗ್ಗಿ ವಾಸುದೇವ್‌:: ಶಿವ ಎಂದರೆ ಯಾರು? ಮನುಷ್ಯನೇ? ದೇವರೇ? ಅಥವಾ ಕಟ್ಟುಕಥೆಯೆ? ಶಿವ ಎನ್ನುವ ಶಬ್ದವು ಎರಡು ಮೂಲತತ್ವಗಳನ್ನು ಪ್ರತಿನಿಧಿಸುತ್ತದೆ. ಶಿವ ಎನ್ನುವ ಶಬ್ದದ ಅಕ್ಷರಶಃ ಅರ್ಥವು ಯಾವುದು ಅಲ್ಲವೋ ಅದು ಎಂದು.:Feb 13, 2018,]</ref>
 
==ಪುರಾಣಗಳಲ್ಲಿ ಶಿವ==
"https://kn.wikipedia.org/wiki/ಶಿವ" ಇಂದ ಪಡೆಯಲ್ಪಟ್ಟಿದೆ