ಶಿವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
+++++
೧೯ ನೇ ಸಾಲು:
}}
{{Hinduism}}
==ಶಿವನ ವ್ಯಾಖ್ಯೆ==
 
ಮಂಗಳಕರನೋ ಅವನೇ '''ಶಿವ'''. ʽಹಿಂದೂʼ ಧರ್ಮದಲ್ಲಿ ಯಾವ ಯಾವಾಗ [[ನಿರಾಕಾರ ಉಪಾಸನೆ]] ಬರುತ್ತದೋ ಆಗ ಆ [[ಪರಬ್ರಹ್ಮ]]ವನ್ನು ಶಿವ ಎಂದೇ ಸಂಬೋಧಿಸುತ್ತಾರೆ. ಲಿಂಗಾಯತ ಮತದ ಪ್ರಕಾರ ಶಿವವೇ ಪರಬ್ರಹ್ಮ. ಕೆಲವರು [[ಹಿಂದೂ ಧರ್ಮ]]ದ ಪ್ರಕಾರ [[ತ್ರಿಮೂರ್ತಿ]]ಗಳಲ್ಲಿ ಒಬ್ಬನಾದ ಮಹೇಶ್ವರನೇ ಶಿವನೆಂದು ಭಾವಿಸುತ್ತಾರೆ.
 
೨೫ ನೇ ಸಾಲು:
 
ಋಗ್ವೇದದಲ್ಲಿ ಶಿವ ಎನ್ನುವ ದೇವತೆ ಇಲ್ಲ. ರುದ್ರ ಎನ್ನುವ ಹೆಸರಿನ ದೇವತೆ ಇದ್ದಾನೆ. ಈ ರುದ್ರನಿಗೆ ಶಿವ, ಈಶ್ವರ, ಶಂಭು, ಶಂಕರ, ಪಶುಪತಿ, ಮುಕ್ಕಣ್ಣ, ಶಶಿಧರ, ಚಂದ್ರಶೇಖರ, ನೀಲಕಂಠ, ನಂಜುಂಡ, ಮಹದೇಶ್ವರ, ಮಹೇಶ್ವರ, ನಾಗರಾಜ, ನಾಗೇಶ, ಕೈಲಾಸ ಪತಿ ಎನ್ನುವ ವಿಶೇಷಣವನ್ನು ಬಳಸಲಾಗಿದೆ.
==ಶಬ್ದ ವ್ಯಾಖ್ಯೆ==
 
ಶಿವ ಶಬ್ದಕ್ಕೆ ಸಂಸ್ಕೃತದಲ್ಲಿ 'ಮಂಗಳ'' ಎನ್ನುವ ಅರ್ಥವನ್ನು ಹೇಳುವರಾದರೂ, ಈ ಶಬ್ದಕ್ಕೆ ಸಂಸ್ಕೃತದಲ್ಲಿ ಸರಿಯಾದ ವ್ಯುತ್ಪತ್ತಿಯು ಇನ್ನೂ ನಿಶ್ಚಯವಾಗಿಲ್ಲ. ಶಿವ ಶಬ್ದವು ಮೂಲದಲ್ಲಿ ಸಂಸ್ಕೃತ ಭಾಷೆಯ ಶಬ್ದವೇ ಅಲ್ಲ. ಆದುದರಿಂದಲೇ ಈ ಶಬ್ದಕ್ಕೆ ನಿರುಕ್ತ ದೊರೆಯು ವುದಿಲ್ಲ ಎಂದು ದ್ರಾವಿಡ ಭಾಷಾತಜ್ಞರು ಹೇಳುತ್ತಾರೆ. ಶಿವ ಎಂದರೆ ಮಾಯಾ, ನಿರಹಂಕಾರ, ಬಂಧರಹಿತ ಎನ್ನಲಾಗಿದೆ.
 
ಮೂಲ ದ್ರಾವಿಡ ಭಾಷೆಯಲ್ಲಿ ಶೆನ್, ಶಿನ್ ಎಂಬ ಬೀಜ ಶಬ್ದಗಳು ಇವೆ ಹಾಗು ಈ ಶಬ್ದಗಳಿಗೆ ಕೆಂಪು ಎನ್ನುವ ಅರ್ಥ ಇದೆ. ಆದ್ದರಿಂದ ಶಿವ ಶಬ್ದವು ಶೆನ್, ಶಿನ್ ಶಬ್ದದಿಂದಲೇ ಹುಟ್ಟಿದೆ ಎಂದು ಅಭಿಪ್ರಾಯ ಪಡುತ್ತಾರೆ. ಶಿನ್ (ದಂತೆ ಇರುವ) ಅವನೇ ಶಿವನು ಎಂದು ಹೇಳಿ, ಶಿವನನ್ನು ಕೆಂಪಗೆ ಇರುವ ದೇವತೆ ಎನ್ನುತ್ತಾರೆ . ಋಗ್ವೇದ ಭಾಷ್ಯದಲ್ಲಿ ಸಾಯಣರು ರುದ್ರ ಶಬ್ದಕ್ಕೆ ಆರು ಬಗೆಯಿಂದ ಆರ್ಥ ಮಾಡಬಹುದೆಂದು ತೋರಿಸಿದ್ದಾರಾದರೂ, ರುದ್ರ ಶಬ್ದಕ್ಕೆ ಕೆಂಪು ಎಂದು ಆರ್ಥಮಾಡಿಲ್ಲ.
== ರುದ್ರ- ಕೆಂಪು==
 
ಪಿಶ್ಚಲ್ ಎಂಬ ವೇದ ವಿದ್ವಾಂಸ, ರುದ್ರ ಶಬ್ದಕ್ಕೆ ಕೆಂಪು ಎಂದು ಅರ್ಥಮಾಡಿದ್ದಾನೆ. ರುದ್ರ ಶಬ್ದ ಬಳಗದ 'ರುಧಿರ' ಶಬ್ದಕ್ಕೆ ಹೋಲಿಸಿದರೆ ರುದ್ರ ಶಬ್ದದಲ್ಲಿ ಅಡಗಿರುವ ಕೆಂಪು ಮನವರಿಕೆಯಾಗುತ್ತದೆ ಎನ್ನುತ್ತಾನೆ. ವೇದ ಋಷಿಗಳಿಗೆ ರುದ್ರ ದೇವತೆ ಕೆಂಪು ಮೂರ್ತಿಯಾಗಿ ಕಾಣಿಸಿದ್ದರೆ ಆಶ್ಚರ್ಯಪಡಬೇಕಾಗಿಲ್ಲ.
 
ವೇದ ಋಷಿಗಳೇ ಅವನನ್ನು 'ತಾಮ್ರವರ್ಣಿ' ಎಂದಿದ್ದಾರೆ. ಪ್ರಾಚೀನ ಕನ್ನಡ ಭಾಷೆಯಲ್ಲಿ ತಾಮ್ರಕ್ಕೆ 'ಶೆಮ್ಬೋನ್' = ಕೆಂಪು ಲೋಹ ಎನ್ನುವ ಹೆಸರಿದ್ದುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ವೈದಿಕ ಸಂದರ್ಭದಲ್ಲಿ ರುದ್ರನನ್ನು ಕೆಂಪನೆಯ ಸಾಯಂಕಾಲದ ಸೂರ್ಯನಲ್ಲಿ ಕಲ್ಪಿಸಿಕೊಳ್ಳಲಾಗಿದೆ ಮತ್ತು ಅವನು ಅಲ್ಲಿ ಚಂಡಮಾರುತದ ಪ್ರಭುವೆಂದು ಭಾವಿಸಲಾಗಿದೆ ಎಂದು ಋಗ್ವೇದದ ಕನ್ನಡಾನುವಾದದಲ್ಲಿ ಹೆಚ್.ಪಿ. ವೆಂಕಟರಾವ್ ಅವರು ತಿಳಿಸಿದ್ದಾರೆ .<ref>ಋಗ್ವೇದದ ಕನ್ನಡಾನುವಾದ ಹೆಚ್.ಪಿ. ವೆಂಕಟರಾವ್ </ref><ref>[https://kannada.oneindia.com/festivals/shivaratri/2003/010303shiva.html ಶಿವ’ನೆಂಬ ಅಂತಿಮ ನಿಲ್ದಾಣ By Staff Published: Saturday, March 1, 2003,]</ref>
==ಮೊಟ್ಟಮೊದಲ ಯೋಗಿ==
ಬೇರೊಂದು ದೃಷ್ಟಿಕೋನದಿಂದ ನೋಡಿದರೆ, ಶಿವ ಎಂದರೆ ಆದಿಯೋಗಿ, ಅರ್ಥಾತ್‌, ಎಲ್ಲ ಯೋಗಿಗಳಿಗೂ ಮೊದಲು ಬಂದವನು, ಯೋಗ ವಿದ್ಯೆಯ ಮೂಲಗುರು. ಇಂದು ಯೋಗವಿದ್ಯೆ ಅಂತ ನಾವು ಯಾವುದಕ್ಕೆ ಹೇಳುತ್ತೇವೋ ಆ ವಿದ್ಯೆಯನ್ನು ಮನುಕುಲಕ್ಕೆ ಪರಿಚಯ ಮಾಡಿಕೊಟ್ಟವನು. ಯೋಗ ಎಂದರೆ ತಲೆಕೆಳಗಾಗಿ ನಿಲ್ಲುವುದಲ್ಲ, ಅಥವಾ ಉಸಿರನ್ನು ಹಿಡಿಯುವುದಲ್ಲ. ಯಾವ ವಿಜ್ಞಾನ, ತಂತ್ರಜ್ಞಾನಗಳ ಮೂಲಕ ಮನುಷ್ಯಜೀವದ ಉಗಮವನ್ನು ತಿಳಿಯಬಹುದೋ, ಮನುಷ್ಯನು ಪರಮ ಚರಮ ಗುರಿಯನ್ನು ಸಾಧಿಸಬಹುದೋ, ಅದೇ ಯೋಗ.
ಕೇದಾರನಾಥದಿಂದ ಸ್ವಲ್ಪ ದೂರದಲ್ಲಿ ಕಾಂತಿ ಸರೋವರ ಅಂತ ಒಂದು ಹಿಮಗಟ್ಟಿದ ಸರೋವರ ಇದೆ. ಇದರ ದಡದಲ್ಲಿ ಕುಳಿತು ಆದಿಯೋಗಿಯು ಏಳು ಜನ ಶಿಷ್ಯಂದಿರಿಗೆ ಸಾಂಗವಾಗಿ, ಪೂರ್ವೋತ್ತರ ಕ್ರಮದಿಂದ ಯೋಗವಿದ್ಯೆಯ ಉಪದೇಶವನ್ನು ಮಾಡಿದನು. ಈ ಏಳು ಜನರೇ ನಂತರದ ಇತಿಹಾಸದಲ್ಲಿ, ಅಂದಿನಿಂದ ಇಂದಿನವರೆಗೆ ಸಪ್ತರ್ಷಿಗಳು ಎಂದು ಪ್ರಸಿದ್ಧರಾಗಿದ್ದಾರೆ. ಆ ಸಮಯದಲ್ಲಿ ಯಾವೊಂದು ಧಾರ್ಮಿಕ ಮತವು ಕೂಡ ಪ್ರಾರಂಭವಾಗಿರಲಿಲ್ಲ. ಮನುಕುಲವನ್ನು ಧಾರ್ಮಿಕ ಪಂಥಗಳ ಹೆಸರಿನಲ್ಲಿ ಸರಿಪಡಿಸಲು ಬಾರದೇನೋ ಅನ್ನಿಸುವಂತಹ ಕೇಡನ್ನು ಮಾಡಿದ ಧಾರ್ಮಿಕ ಪಂಥಗಳು ಹುಟ್ಟುವುದಕ್ಕೆ ಅದೆಷ್ಟೋ ಮುಂಚೆಯೇ ಮಾನವ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ವಿಧಿವಿಧಾನಗಳನ್ನು ತಿಳಿಯುವ, ತಿಳಿಸುವ, ಯೋಗವಿದ್ಯಾ ಪ್ರಸಾರದ ಕಾರ್ಯವು ಈ ಪ್ರಕಾರವಾಗಿ ಪ್ರಾರಂಭವಾಯಿತು.<ref>[https://vijaykarnataka.indiatimes.com/state/vk-special/sadguru-jaggi-vasudev-talk-about-god-shiva/articleshow/62889575.cms ಸದ್ಗುರು ಜಗ್ಗಿ ವಾಸುದೇವ್‌:: ಶಿವ ಎಂದರೆ ಯಾರು? ಮನುಷ್ಯನೇ? ದೇವರೇ? ಅಥವಾ ಕಟ್ಟುಕಥೆಯೆ? ಶಿವ ಎನ್ನುವ ಶಬ್ದವು ಎರಡು ಮೂಲತತ್ವಗಳನ್ನು ಪ್ರತಿನಿಧಿಸುತ್ತದೆ. ಶಿವ ಎನ್ನುವ ಶಬ್ದದ ಅಕ್ಷರಶಃ ಅರ್ಥವು ಯಾವುದು ಅಲ್ಲವೋ ಅದು ಎಂದು.:Feb 13, 2018,]</ref>
==ಉಲ್ಲೇಖ==
 
[[ವರ್ಗ:ಹಿಂದೂ ದೇವತೆಗಳು]]
"https://kn.wikipedia.org/wiki/ಶಿವ" ಇಂದ ಪಡೆಯಲ್ಪಟ್ಟಿದೆ