ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೧೮ ನೇ ಸಾಲು:
== ಜ್ಞಾನಮಾರ್ಗ ==
ಈ ಮಿಥ್ಯೆಯ ಅರಿವಾಗಿ ಸತ್ಯದ ಜ್ಞಾನವನ್ನು ಪಡೆಯುವುದೇ ಜೀವಿತದ ಉದ್ದೇಶವಾಗಿರತಕ್ಕದ್ದು. ವೇದಗಳ [[ಪೂರ್ವಕಾಂಡ|ಪೂರ್ವಕಾಂಡದಲ್ಲಿ]] ಉಲ್ಲೇಖವಿರುವ [[ಯಜ್ಞ]], [[ಯಾಗ]], [[ಹೋಮ]], [[ಆಹ್ನಿಕ]], [[ದೇವತೋಪಾಸನೆ]] ಮುಂತಾದ [[ಕರ್ಮ|ಕರ್ಮಗಳೆಲ್ಲವೂ]] ಸಹ ಈ [[ಜ್ಞಾನ]] ಪ್ರಾಪ್ತಿಯ ಮಾರ್ಗದಲ್ಲಿ ಸಾಧನಗಳಷ್ಟೆ. ಪರಮ ಸಾಧನೆಗೆ ಈ ಎಲ್ಲ ವಿಹಿತ ಕರ್ಮಗಳೂ ಮೆಟ್ಟಿಲುಗಳಾಗಬೇಕು. ಆದರೆ [[ಮೀಮಾಂಸಾ|ಪೂರ್ವಮೀಮಾಂಸ]]ಕರು ಪ್ರತಿಪಾದಿಸುವಂತೆ, ಇವೇ ಜೀವಿತದ ಉದ್ದೇಶವಲ್ಲ.
ಮಾಯೆಯನ್ನು ಕಳಚಿ ಬ್ರಹ್ಮ ವಸ್ತುವಿನೊಡನೆ ಇರುವ ತಾದಾತ್ಮ್ಯ ಸತ್ಯ ಜ್ಞಾನದ ಪ್ರಾಪ್ತಿಯೇ ಪರಮ ಪುರುಷಾರ್ಥವು. ಬ್ರಹ್ಮನೂ ತಾನೂ ಒಂದೇ ಎಂಬ ಜ್ಞಾನವುಂಟಾಗಿ ಸಚ್ಚಿದಾನಂದವನ್ನು ಅನುಭವಿಸುವ ಸ್ಥಿತಿಯೇ ವೇದಗಳು ಉಪದೇಶಿಸಿರುವ '[[ಮೋಕ್ಷ]] ಸ್ಥಿತಿ'. ಈ ಅಭೇದ ಜ್ಞಾನವುಂಟಾದ ಮೇಲೆ, ಆತ್ಮವೆಂದಿಗೂ ಸಂಸಾರದ ಬಂಧನದೊಳಗೆ ಮತ್ತೆ ಸುಳಿಯಲಾರದು. ಇನ್ನೆಂದಿಗೂ ಹಿಂದೆ ಮರಳಲಾರದಂತಹ ದಿವ್ಯ ಸ್ಥಿತಿಯಿದು. ಹಾಗಾಗಿ ಮೋಕ್ಷ ಹೊಂದುವುದಕ್ಕೆ ಈ ಅದ್ವೈತ ಜ್ಞಾನ ಪ್ರಾಪ್ತಿಯೊಂದೇ ಮಾರ್ಗ.<ref>ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್</ref><ref>ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & (ಪ್ರೊ.ಎಂ.ಎ.ಹೆಗಡೆ) ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.)</ref>.<ref>ಬ್ರಹ್ಮಸೂತ್ರ ಭಾಷ್ಯ ನತ್ತು ಭಗವದ್ಗೀತಾ ಭಾಷ್ಯ (ಕನ್ನಡ ಅನುವಾದದಲ್ಲಿ)ಲೇಖಕರು: ಶ್ರೀ ಸಚ್ಚದಾನಂದ ಸರಸ್ವಿತೀ ಸ್ವಾಮಿಯವರು ಮತ್ತು ಪೂರ್ವಾಶ್ರಮ ನಾಮ -ಯಲ್ಲಂಬಳಸೆ ಸುಬ್ರಾಯ ಶರ್ಮಾ;ಪ್ರಕಾಶಕರು:ಅಧ್ಯಾತ್ಮ ಪ್ರಕಾಶ ಕರ್ಯಾಲಯ ಹೊಳೆನರಸೀಪುರ, ಹಾಸನ ಜಿಲ್ಲೆ.</ref>
 
== ಮಹಾವಾಕ್ಯಗಳು ==
"https://kn.wikipedia.org/wiki/ಅದ್ವೈತ" ಇಂದ ಪಡೆಯಲ್ಪಟ್ಟಿದೆ