ಉಪನಯನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
 
೫ ನೇ ಸಾಲು:
[[File:Upanayanam.jpg|thumb|240px|right|ಉಪನಯನ ಸಂಸ್ಕಾರದ ವೇಳೆ ತುಳು ಶಿವಳ್ಳಿ ಬ್ರಾಹ್ಮಣ ವಟು.ತೆಳುವಾದ [[ಹಳದಿ]] ಬಣ್ಣದ ಯಜ್ಞೋಪವೀತ,[[ಸೊಂಟ]]ದಲ್ಲಿ [[ದರ್ಭೆ]]ಯ ದಾರ ಮತ್ತು ಕೈಯಲ್ಲಿ [[ಅಶ್ವತ್ಥಮರ]]ದ ರೆಂಬೆಯ ಕೋಲುಗಳನ್ನು ಗಮನಿಸಿ.ಇದು ಅವನು ಬ್ರಹ್ಮಚರ್ಯಕ್ಕೆ ಕಾಲಿಟ್ಟುದುದನ್ನು ಸಂಕೇತಿಸುತ್ತದೆ.]]
ಉಪನಯನ ಸಂಸ್ಕಾರವನ್ನು ಆಪಸ್ತಂಬ ಗೃಹ್ಯ ಸೂತ್ರದಲ್ಲಿ ವಿವರವಾಗಿ ಹೇಳಿದೆ. ಧರ್ಮಸೂತ್ರಗಳ ಆಧಾರದ ಮೇಲೆ ಸ್ಮೃತಿಚಂದ್ರಿಕೆಯಲ್ಲಿ ಸ್ತ್ರೀಯರಿಗೂ ಉಪನಯನವಿತ್ತೆಂದು ಹೇಳಲಾಗಿದೆ. ಉಪನಯನಕ್ಕೂ ಮುಂಚೆ ಅಕ್ಷರಾಭ್ಯಾಸದೊಂದಿಗೆ ವಿದ್ಯಾರಂಭ ಸಂಸ್ಕಾರ ನಡೆದಿರಬೇಕು. ಉಪನಯನದಿಂದ ಪ್ರೌಢ ವಿದ್ಯಾಭ್ಯಾಸವನ್ನು ಪ್ರಾರಂಭಿಸಲಾಗುತ್ತದೆ. ಇತರ [[ಸಂಸ್ಕೃತಿ]]ಗಳಲ್ಲೂ ಉಪನಯನದಂತೆಯೇ ದೀಕ್ಷಾಪದ್ಧತಿ ಇದೆ. ಸಾಮಾಜಿಕವಾಗಿ ತನ್ನ ಕರ್ತವ್ಯಗಳನ್ನು ಅರಿಯಬೇಕಾದ ಆವಶ್ಯಕತೆಯನ್ನು ವಿದ್ಯಾರ್ಥಿಗೆ ಆಗ ತಿಳಿಸಲಾಗುತ್ತದೆ. ಉಪನಯನದ ಅನಂತರ ಅತಿ ಕಠಿಣವಾದ ಶಿಕ್ಷಣವನ್ನು ಕೊಡಲಾಗುವುದು. ಸಾಮಾಜಿಕ ಜೀವನ ಸುಗಮವಾಗುವುದಕ್ಕೆ ವಿದ್ಯಾಭ್ಯಾಸ ಕ್ರಮ ಎಷ್ಟು ಮಹತ್ತರವಾಗಿರಬೇಕೆಂಬುದನ್ನು ಭಾರತೀಯರು ಚೆನ್ನಾಗಿ ಅರಿತಿದ್ದರು. ಮಾನವಜೀವನ, ಪ್ರಾಣಿಜೀವನದ ಮಟ್ಟಕ್ಕೆ ಇಳಿಯದಿರಬೇಕಾದರೆ ಮಾನವನ ಬೌದ್ಧಿಕ ಬೆಳೆವಣಿಗೆಯೇ ಕಾರಣ. ಮಾನಸಿಕ ಶಿಕ್ಷಣದೊಂದಿಗೆ ಆತ್ಮಬಲ ಮತ್ತು ದೈಹಿಕಬಲಗಳ ಶಿಕ್ಷಣಕ್ಕೂ ಅಷ್ಟೇ ಗಮನಕೊಟ್ಟು ಗುರು ವಿದ್ಯಾರ್ಥಿಯನ್ನು ತರಬೇತು ಮಾಡಬೇಕು. ಇದಕ್ಕಾಗಿ ಗುರುವಿನ ಲಕ್ಷಣಗಳು ಹೇಗಿರಬೇಕೆಂಬ ನಿಬಂಧನೆಗಳನ್ನೂ ಉಪನಯನ ಸಂಸ್ಕಾರದಲ್ಲಿ ತಿಳಿಸಲಾಗಿದೆ. ತನ್ನ ಮಹತ್ತರವಾದ ಹೊಣೆಯನ್ನು ಉಪಾಧ್ಯಾಯ ನಿರ್ವಹಿಸಲೇಬೇಕು. ಉಪನಯನದಿಂದ ಎರಡನೆಯ ಜನ್ಮ ಪ್ರಾಪ್ತವಾಗುವುದೆಂಬ, ಅಂದರೆ ಬಾಲಕ ದ್ವಿಜನಾಗುವನೆಂಬ ಅಭಿಪ್ರಾಯವಿದೆ. ಶಿಷ್ಯನ ಶೀಲವನ್ನು ರೂಪಿಸುವ ಗುರು ಶೀಲವಂತನಾಗಿರಬೇಕು; ಶಿಷ್ಯನ ಮೇಲೆ ಪ್ರಭಾವ ಬೀರುವಷ್ಟು ಯೋಗ್ಯನಾಗಿರಬೇಕು.
ಬ್ರಾಹ್ಮಣನಿಗೆ [[ವಸಂತ ಋತು]]ವಿನಲ್ಲೂ ಕ್ಷತ್ರಿಯನಿಗೆ [[ಗ್ರೀಷ್ಮ ಋತು]]ವಿನಲ್ಲೂ ವೈಶ್ಯನಿಗೆ [[ವರ್ಷ ಋತು]]ವಿನಲ್ಲೂ ಅವರ ಸಾತ್ತ್ವಿಕ, ರಾಜಸ ಗುಣಗಳಿಗನುಸಾರವಾಗಿ ಉಪನಯನವನ್ನು ಮಾಡಬೇಕೆಂದು ನಿಯಮವಿದೆ. ಬ್ರಾಹ್ಮಣರು ಶಮದಮಗಳಿಂದ ತೇಜೋವಂತನಾಗಿ ಬಾಳಬೇಕೆಂಬುದು ಒಟ್ಟು ಅಭಿಪ್ರಾಯ.<ref>ಬೋಧಾಯನೀಯ ನಿತ್ಯ ಕರ್ಮ ಪ್ರದೀಪಃ : ಹವ್ಯಕ ಸಂಪದಭಿವೃದ್ಧಿ ಸಮಾಜ ಕೇಡಲೇಸರ , ಭೀಮನಕೋಣೆ : ಮುದ್ರಣ :೧೯೮೦: ಸಂಗ್ರಹ ಕಾರರು ವೇ.ಬ್ರ. ಬರಿಗೆ ಗಣೇಶಭಟ್ಟರು.</ref> <ref>ಗಾಯತ್ರೀ ಜಪ - ಲೇ. ಮತ್ತು ಪ್ರಕಾಶಕ: ಕೋಟ ವಾಸುದೇವ ಕಾರಂತ, ನಿ. ಛೀಫ್ ಇಲೆಕ್ತ್ರಿಕಲ್ ಇಂಜನೀರ್, ಮಂಗಳೂರು</ref> <ref>ಧರ್ಮಸಿಂಧು</ref>
 
==ಉಲ್ಲೇಖ==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಪನಯನ}}
"https://kn.wikipedia.org/wiki/ಉಪನಯನ" ಇಂದ ಪಡೆಯಲ್ಪಟ್ಟಿದೆ