ಇಲಿಯಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
{{cn}}
[[ಚಿತ್ರ:Iliad.jpg|thumb|ಇಲಿಯಡ್ ಮಹಾಕಾವ್ಯದ ಒಂದು ದೃಶ್ಯ]]
 
'''ಇಲಿಯಡ್''' ಪ್ರಾಚೀನ [[ಗ್ರೀಕ್ ಭಾಷೆ|ಗ್ರೀಕ್]] ಮಹಾಕಾವ್ಯಗಳಲ್ಲೊಂದು. ಕಾಲ ಸು. ಕ್ರಿ. ಪೂ. 8ನೆಯ ಶತಮಾನ. ರಚಿಸಿದವ [[ಹೋಮರ್]] ಕವಿ ಎಂದು ಪ್ರತೀತಿಯಿದೆ. ಗ್ರೀಕರಿಗೂ [[ಟ್ರಾಯ್]] ನಗರದವರಿಗೂ ನಡೆದ ಯುದ್ಧದ ವರ್ಣನೆ ಇದರ ವಸ್ತು. ಆ ಯುದ್ಧದ ಕಡೆಯ ದಿನಗಳ ಘಟನೆಗಳು ಇದರಲ್ಲಿ ನಿರೂಪಿತವಾಗಿವೆ. ಗ್ರೀಕರ ಅಗ್ರವೀರ ಅಕಿಲೀಸ್ ತಾನು ಯುದ್ಧ ಮಾಡುವುದಿಲ್ಲವೆಂದು ಹೇಳಿ ಬೇರೆಯಾಗಿ ನಿಂತುದರ ಪರಿಣಾಮವಾಗಿ ಗ್ರೀಕರಿಗಾದ ಅನಾಹುತಗಳಲ್ಲೂ ಇದರ ಬಹುಭಾಗವನ್ನು ತೆಗೆದುಕೊಂಡಿವೆ. ಇದರಲ್ಲಿರುವುದು ಒಟ್ಟು ಇಪ್ಪತ್ತನಾಲ್ಕು ಕಾಂಡಗಳು.
[[File:Akhilleus Patroklos Antikensammlung Berlin F2278.jpg|thumb|ಅಕಿಲಿಯಸ್ ಬಾಣದಿಂದ ಗಾಯಗೊಂಡ ಪ್ಯಾಟ್ರೊಕ್ಲಸ್ ಅನ್ನು ಉಪಚರಿಸುತ್ತರುವುದು.(ಹೂದಾನಿಗಳ ಮೇಲ್ಭಾಗದ ಶಾಸನಗಳಿಂದ ತೆಗೆದುಕೊಂಡಿದೆ. ca. 500 ಕ್ರಿ.ಪೂ. ವಲ್ಸಿಯಿಂದ.F2278]]
 
ಇಲಿಯಡ್ [[ಷಟ್ಪದಿ]]ಯಲ್ಲಿ ರಚಿಸಲ್ಪಟ್ಟಿದ್ದು ಸುಮಾರು ೧೬,೦೦೦ ಸಾಲುಗಳನ್ನು ಒಳಗೊಂಡಿದೆ. ನಂತರದ ಗ್ರೀಕರು ಇದನ್ನು ೨೪ ಅಧ್ಯಾಯಗಳಾಗಿ ವಿಂಗಡಿಸಿದರು.
 
Line ೨೮ ⟶ ೨೭:
 
ಹನ್ನೆರಡರಿಂದ ಹದಿನಾರನೆ ಕಾಂಡಗಳವರೆಗೂ ಯುದ್ಧದಲ್ಲಿ ಒಮ್ಮೆ ಆ ಕಡೆ ಒಮ್ಮೆ ಈ ಕಡೆ ಜಯ ಲಭಿಸುತ್ತದೆ. ಜ್ಯೂಸನ ಆಜ್ಞೆಗೆ ವಿರೋಧವಾಗಿಯೇ ದೇವತೆಗಳು ತಮತಮಗೆ ಬೇಕಾದವರಿಗೆ ಸಹಾಯವೆಸಗುತ್ತಾರೆ. ಕೊನೆಗೆ ಹೆಕ್ಟರ್ ನುಗ್ಗಿ ಬಂದು ಗ್ರೀಕರ ನಾವೆಗಳಿಗೆ ಬೆಂಕಿಯಿಡಲು ಯತ್ನಿಸುತ್ತಾನೆ. ಪೆಟ್ರಾಕಿಸ್ ಅಕಿಲೀಸನನ್ನು ಯುದ್ಧಕ್ಕೆ ಬರಬೇಕೆಂದು ಬೇಡಿಕೊಳ್ಳುತ್ತಾನೆ. ಅಕಿಲೀಸ್ ತಾನು ಹೋಗಲು ಈಗಲು ಇಷ್ಟಪಡುವುದಿಲ್ಲ. ತನ್ನ ಯುದ್ಧ ಕವಚವನ್ನು ಗೆಳೆಯನಿಗೆ ಕೊಟ್ಟು ಅದನ್ನು ಧರಿಸಿಹೋಗಿ ಟ್ರೋಜನರನ್ನು ಹಿಂದಕ್ಕೆ ಬರಬೇಕೆಂದು; ಪೆಟ್ರಾಕ್ಲಿಸನಿಗೆ ಹೇಳುತ್ತಾನೆ. ಅಕಿಲೀಸನ ಕವಚವನ್ನು ಧರಿಸಿ ಹೋಗುವ ಪೆಟ್ರಾಕ್ಲಿಸ್ ಟ್ರೋಜನರನ್ನು ಟ್ರಾಯ್ ಕೋಟಿಯವರೆಗೂ ಅಟ್ಟಿಸಿಕೊಂಡು ಹೋಗುತ್ತಾನೆ. ಅಲ್ಲಿ ಅವನು ಹೆಕ್ಟರಿನಿಂದ ಹತನಾಗುತ್ತಾನೆ. (16ನೆಯ ಕಾಂಡ).
[[File:Nikolay Ge 002.jpeg|thumb|ಅಕಿಲೀಸ್ ಪ್ಯಾಟ್ರೋಕ್ಲಸ್ನ ಮರಣವನ್ನು ನೋಡಿ ದುಃಖಿಸುತ್ತಿರುವುದು;(1855) ರಷ್ಯಾದ ವಾಸ್ತವವಾದಿ ನಿಕೊಲಾಯ್ ಜಿ--Nikolay Ge 002]]
 
ಹದಿನೇಳನೆಯ ಕಾಂಡದಲ್ಲಿ ಹೆಕ್ಟರ್ ಅಕಿಲೀಸನ ಕವಚವನ್ನು ಕಿತ್ತಿಟ್ಟುಕೊಳ್ಳುತ್ತಾನೆ. ಅವನ ಮೃತ ದೇಹವನ್ನು ಮೆನೆಲಾಸ್ ಮೊದಲಾದವರು ಕಷ್ಟಪಟ್ಟು ಉಳಿಸಿಕೊಂಡು ಹೋಗುತ್ತಾರೆ. ಗೆಳೆಯನಿಗಾದ ದುರಂತವನ್ನು ಕಂಡು ಕೋಪೋದ್ರಕ್ತನಾಗುವ ಅಕಿಲೀಸ್ ಸೇಡು ತೀರಿಸಿಕೊಳ್ಳಲೆಂದು ಸಮರಕ್ಕಿಳಿಯುತ್ತಾನೆ. ಈಗ ಹೆಕ್ಟರನ ವಶವಾಗಿರುವ ಅವನ ಕವಚಕ್ಕೆ ಬದಲಾಗಿ ದೇವತೆಗಳ ಕಮ್ಮಾರ ಹೆಫೀಸ್ಟ್ಸ್ ಅವನಿಗೊಂದು ಹೊಸ ಗುರಾಣಿಯನ್ನೂ ಇತರ ಆಯುಧಗಳನ್ನೂ ಮಾಡಿಕೊಡುತ್ತಾನೆ. ಆ ಗುರಾಣಿಯ ಮೇಲೆಲ್ಲ ಗ್ರೀಕರ ಜೀವನದ ಚಿತ್ರಗಳು ವಿಪುಲವಾಗಿ ಚಿತ್ರಿತವಾಗಿರುತ್ತದೆ. ಅವನ್ನು ಧರಿಸಿ ಅಕಿಲೀಸ್ (ತಾನು ಅಲ್ಪಾಯು ಎಂಬ ಭವಿಷ್ಯವಾಣಿಯಿದ್ದರೂ ಲೆಕ್ಕಿಸದೆ) ಮುಂದೆ ನುಗ್ಗಿ ಯುದ್ಧದ ಕಣವನ್ನು ಹೊಕ್ಕು ಹೋರಾಡತೊಡಗುತ್ತಾನೆ. ಅವನಿಲ್ಲದೆ ಗ್ರೀಕರಿಗೆ ಜಯ ದೊರೆಯಕೂಡದೆಂದು ಜ್ಯೂಸ್ ಥೆಟಿಸಳಿಗಿತ್ತಿದ್ದ ಮಾತು ಈಗ ಸತ್ಯವಾಗುತ್ತದೆ. ಜ್ಯೂಸ್ ದೇವನೆ ಈಗ ಒಂದು ಪಕ್ಷ ವಹಿಸುವುದರಿಂದ ಇತರ ಸ್ತ್ರೀಪುರುಷ ದೇವತೆಗಳೆಲ್ಲ ತಮಗೆ ಬೇಕಾದ ಕಡೆ ಸೇರಿ ಬೇಕಾದವರಿಗೆ ಸಹಾಯ ಮಾಡುತ್ತಾರೆ (21ನೆಯ ಕಾಂಡ).
 
"https://kn.wikipedia.org/wiki/ಇಲಿಯಡ್" ಇಂದ ಪಡೆಯಲ್ಪಟ್ಟಿದೆ