ಇಲಿಯಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೨ ನೇ ಸಾಲು:
 
ಹೋಮರ್ ಎಂಬ ವ್ಯಕ್ತಿಯೇ ಇರಲಿಲ್ಲವೆಂಬ ವಾದವೂ ಇದೆ. ಗ್ರೀಕ್ ಭಾಷೆಯಲ್ಲಿ ಆ ಮಾತಿಗೆ ಸಂಗ್ರಾಹಕ ಎಂದು ಅರ್ಥ. ಆದಕಾರಣ ಹಲವರು ರಚಿಸಿದ ಕವಿತೆಗಳನ್ನು ಯಾರೋ ಸಂಗ್ರಹಿಸಿ ಸಂಪಾದಿಸಬೇಕು. ಅವನಿಗೆ ಹೋಮರ್ ಎಂಬ ಅನ್ವರ್ಥನಾಮ ಬಂದಿರಬೇಕು ಎಂದು ಕೆಲವರು ವಿದ್ವಾಂಸರು ಹೇಳುತ್ತಾರೆ. ಆದರೆ ಹೋಮರ್ ಕವಿ ತಮ್ಮವನು, ತಮ್ಮ ಮಡಿಲಲ್ಲಿ ಹುಟ್ಟಿ ಬೆಳೆದವನು ಎಂದು ಈಗಲೂ ಗ್ರೀಕ್ ಪಟ್ಟಣಗಳು ಹೇಳಿಕೊಳ್ಳುತ್ತಿದ್ದುದನ್ನೂ ಈ ಸಂದರ್ಭದಲ್ಲಿ ನೆನಪಿನಲ್ಲಿಟ್ಟುಕೊಂಡಿರಬೇಕು. ಒಬ್ಬನೇ ರಚಿಸಿರಲಿ ಅನೇಕರ ಕೈವಾಡ ಅದರಲ್ಲಿರಲಿ, ಈ ಕಾವ್ಯದಲ್ಲಿ ಎದ್ದು ಕಾಣುವ ಕಲ್ಪನೆಯ ಐಕ್ಯತೆಯನ್ನು ಮಾತ್ರ ಅಲ್ಲಗಳೆಯುವಂತಿಲ್ಲ. ಇದರ ಸರಳತೆ, ನೇರವಾದ ಕಥಾನಿರೂಪಣೆ, ಯುದ್ಧ ಪ್ರಸಂಗಗಳ ವರ್ಣನೆಗಳು, ಪ್ರಾಚೀನ ಗ್ರೀಕರ ಜನಜೀವನದ ಚಿತ್ರಗಳು, ಬಗೆಬಗೆಯ ಪಾತ್ರಗಳು, ಅಲ್ಲಲ್ಲಿ ಬರುವ ತಿಳಿ ಹಾಸ್ಯ, ಮನಕರಗಿಸುವ ದೃಶ್ಯಗಳು, ಮಾನವಸ್ವಭಾವದ ಅರಿವು, ಎಲ್ಲಕ್ಕಿಂತಲೂ ಹೆಚ್ಚಾಗಿ ಮನುಷ್ಯನ ಕ್ರೋಧದ ದುಷ್ಪರಿಣಾಮದ ಸೂಚನೆ-ಇವೇ ಮೊದಲಾದ ಅಂಶಗಳಿಗೆ ಈ ಕೃತಿ ಹೆಸರಾಂತಿದೆ. ಇಲಿಯಡ್ ಕಾವ್ಯ ಗ್ರೀಕ್ ಮಹಾರುದ್ರ ನಾಟಕಗಳಿಗೆ ವಸ್ತುವನ್ನೊದಗಿಸಿತಲ್ಲದೆ ಯೂರೋಪಿನ ಸಾಹಿತ್ಯದಲ್ಲಿ ಮುಂದೆ ಬಂದ ವರ್ಜಿಲ್, ಡಾಂಟೆ, ಟ್ಯಾಸೊ, ಮಿಲ್ಟನ್ ಮೊದಲಾದ ಕವಿಗಳ ಮಹಾಕಾವ್ಯಗಳಿಗೆ ಮಾದರಿಯಾಯಿತು. ಇದರ ರೂಪಲಕ್ಷಣಗಳನೇಕವನ್ನು ಆ ಕವಿಗಳು ಅನುಕರಿಸಿದ್ದಾರೆ. ಅದರ ಛಂದಸ್ಸು ಕೂಡ (ಅಲ್ಪ ಸ್ವಲ್ಪ ಬದಲಾವಣೆಗಳೊಡನೆ) ಐರೋಪ್ಯ ಮಹಾಕಾವ್ಯಗಳ ಕವಿಪ್ರಿಯ ಛಂದಸ್ಸಾಗಿ ಉಳಿದುಬಂದಿದೆ. <ref>Homer's Iliad, Classical Technology Center.</ref><ref>ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಇಲಿಯಡ್</ref>
==ನೋಡಿ==
*[[ಹೋಮರ್]]
*[[ಒಡಿಸ್ಸಿ]]
==ಉಲ್ಲೇಖ==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಇಲಿಯಡ್}}[[ವರ್ಗ:ಸಾಹಿತ್ಯ]]
"https://kn.wikipedia.org/wiki/ಇಲಿಯಡ್" ಇಂದ ಪಡೆಯಲ್ಪಟ್ಟಿದೆ