ತೀ. ನಂ. ಶ್ರೀಕಂಠಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೦ ನೇ ಸಾಲು:
 
==ವಿದೇಶ ಪ್ರವಾಸ==
ಅಮೇರಿಕಾದ ರಾಟ್ ಫೆಲಾರ್ ಪ್ರತಿಷ್ಠಾಬದ ವೇತನದ ಮೇಲೆ ಅಧ್ಯಯನಕ್ಕಾಗಿ ತೀ.ನಂ.ಶ್ರೀ ಅವರಿಗೆ ವಿದೇಶಕ್ಕೆ ಹೋಗುವ ಅವಕಾಶ ದೊರೆಯಿತು. 1955-56ರಲ್ಲಿ 8 ತಿಂಗಳ ಕಾಲ ಆಮೇರಿಕಾದ ಮಿಶಿಗನ್ ಮತ್ತು ಪೆನ್ಸಿಲ್ವೇನಿಯ ವಿವಿ ನಿಲಯಗಳಲ್ಲಿ ಅಧ್ಯಾಯನ ಮಾಡಿ ಬಿಡುವಿನ ವೇಳೆಯಲ್ಲಿ ಆಮೇರಿಕಾದ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದರು. ಒಂದು ತಿಂಗಳು ಇಂಗ್ಲೆಂಡಿನಲ್ಲಿ ಕಳೆದು, ಫ್ರಾನ್ಸ್, ಇಟಲಿ ಮೊದಲಾದ ಯುರೋಪಿನ ರಾಷ್ಟ್ರಗಳಲ್ಲಿ ಒಂದು ತಿಂಗಳು ಪ್ರವಾಸ ಮಾಡಿ ಸ್ವದೇಶಕ್ಕೆ ಮರಳಿದರು. ಧಾರವಾಡದಲ್ಲಿ ಅವರ ಸೇವೆಯ ಅವಧಿ ಮುಗಿದು 1957ರ ಜನವರಿಯಲ್ಲಿ ಶ್ರೀಕಂಠಯ್ಯ ನವರು ಮೈಸೂರಿನ ಮಹಾರಾಜ ಕಾಲೇಜಿಗೆ ಕನ್ನಡ ಪ್ರಾಧ್ಯಾಪಕರಾಗಿ ಹಿಂದಿರುಗಿದರು. ಅವರು ಮತ್ತೆ ಮಹಾರಾಜ ಕಾಲೇಜಿಗೆ ಬಂದಿದ್ದರಿಂದ ಅಲ್ಲಿನ ಅಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳ ಮೈಯಲ್ಲಿ ನವಚೈತನ್ಯ ಹರಿಯಿತು. ಆಗ ತಾನೆ ಡಾ. ಕೆ.ವಿ ಪುಟ್ಟಣ್ಣಪ್ಪನವರು ಮಹಾರಾಜ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆಯಿಂದ ಮೈಸೂರು ವಿವಿ ನಿಲಯದ ಉಪ ಕುಲಪತಿಯ ಸ್ಥಾನಕ್ಕೆರಿದರುಸ್ಥಾನಕ್ಕೇರಿದರು. ಕನ್ನಡದ ಮುಖ್ಯಸ್ಥರ ಸ್ಥಾನ ಶ್ರೀಕಂಠಯ್ಯವನರಿಗೆ ತೆರವಾಗುತ್ತುತೆರವಾಗಿತ್ತು. ತೀನಂಶ್ರೀ ಅವರು ವಿವಿ ನಿಲಯಕ್ಕೆ ಮರಳಿದುದರಿಂದ ಆದ ಸಂತೋಷವನ್ನು ಸ್ನೇಹಿತರು ಮತ್ತು ವಿದ್ಯಾರ್ಥಿಗಳು ಓಲಗದ ಸ್ವಾಗತದಲ್ಲಿ ವ್ಯಕ್ತಪಡಿಸಿದರು. ಕಾಲೇಜಿನಲ್ಲಿ ಪಾಠ ಹೇಳಿತ್ತಾಹೇಳುತ್ತಾ, ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಭಾಗವಹಿಸುತ್ತಾ ಮೂರು ವರ್ಷಗಳು ಕಳೆದು ಕನ್ನಡ ನಿಘಂಟಿನ ಮೊದಲ ಪುಟಗಳ ಮಾದರಿ ಈ ಅವಧಿಯಲ್ಲಿ ಪ್ರಕಟವಾಯಿತು. ಅಷ್ಟರಲ್ಲಿ ಪದವಿ ತರಗತಿಗಳಿಂದ ಸ್ನಾತಕೊತ್ತರ ಅಧ್ಯಯನ ಸಂಶೋಧನ ವಿಭಾಗಗಳನ್ನು ಪ್ರತ್ಯೇಕಿಸುವ ಯೋಜನೆಯ ಅನ್ವಯ ಮಾನಸ ಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮೊದಲ ಪ್ರಾಧ್ಯಾಪಕರಾಗಿ ತೀನಂಶ್ರೀ ಅವರು ಮಹಾರಾಜ ಕಾಲೇಜಿನಲ್ಲಿ ಇದ್ದ ಸ್ನಾತಕೋತ್ತರ ವಿಭಾಗವನ್ನು ಮಾನಸ ಗಂಗೋತ್ರಿಗೆ ಸಾಗಿಸಿಕೊಂಡು ಹೋದರು. ಅಲ್ಲಿ ಕನ್ನಡ ಅಧ್ಯಯನ ಕೇಂದ್ರದ ತಳಹದಿಯನ್ನು ಭದ್ರ ಮಾಡಿ 62ನೇ ಮಾರ್ಚ್ ತಿಂಗಳ ಅಂತ್ಯದಲ್ಲಿ, ಮೂವತ್ನಾಕುಮೂವತ್ನಾಲ್ಕು ವರ್ಷಗಳ ಸೇವೆಯ ನಂತರ ತೀನಂಶ್ರೀ ನಿವೃತ್ತರಾದರು. ಆದರೆ ಅವರಿಗೆ ಬಿಡುವು ಸಿಕ್ಕಲಿಲ್ಲ. ಯುಜಿಸಿ ಪ್ರಾಧ್ಯಾಪಕರಾಗಿ ಅಧ್ಯಯನ ಕೇಂದ್ರದಲ್ಲಿ ಕೆಲಸವನ್ನು ಮುದುವರೆಸುವುದರ ಜೊತೆಗೆ ಕನ್ನಡ ನಿಘಂಟಿನ ಕೆಲೆಸದಲ್ಲಿ ತಮ್ಮ ಬಹು ಮಟ್ಟಿನ ವೇಳೆಯನ್ನು ಕಳೆದರು. 1958ರಲ್ಲಿ ಅವರು ನಿಘಂಟು ಸಮಿತಿಯ ಅಧ್ಯಕ್ಷರೂ ಆಗಿದ್ದರು. 1962ರಲ್ಲಿ, ತಾವು ನಿವೃತ್ತಿ ಹೊಂದಿದ ವರ್ಷ ಮೈಸೂರಿನಲ್ಲಿ ಸಿಐಟಿಬಿ ಮೂಲಕ ಮನೆಯೊಂದನ್ನು ಕೊಂಡು ಕೊಂಡರು.
 
==ಮೈಸೂರಿನ, ಓರಿಯೆಂಟಲ್ ರಿಸರ್ಚ್ ಶಾಖೆಯಲ್ಲಿ==
"https://kn.wikipedia.org/wiki/ತೀ._ನಂ._ಶ್ರೀಕಂಠಯ್ಯ" ಇಂದ ಪಡೆಯಲ್ಪಟ್ಟಿದೆ