"ಭಾರತದ ರಾಷ್ಟ್ರಪತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
<br clear="all">
*ರಾಷ್ಟ್ರಪತಿಗಳ ವೇತನ:ರೂ.500000/-<ref>[http://www.prajavani.net/news/article/2016/10/26/447784.html]</ref>
 
==ರಾಷ್ಟ್ರಪತಿ ಚುನಾವಣೆಯ ಹೆಜ್ಜೆಗುರುತುಗಳು==
 
;ಬಾಬು ರಾಜೇಂದ್ರ ಪ್ರಸಾದ್ (1950-1962):
 
1950ರ ಚುನಾವಣೆಯಲ್ಲಿ ‘ತಾಂತ್ರಿಕ’ ಸೆಣಸಾಟವೇನೂ ಇರಲಿಲ್ಲವಾದರೂ, ಅಂದು ಉಪ ಪ್ರಧಾನಮಂತ್ರಿಯಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲರು ಪ್ರಧಾನಿ ಜವಾಹರಲಾಲ್ ನೆಹರುರ ಪ್ರಭಾವ ತಗ್ಗಿಸಲು ಹೆಣೆದಿದ್ದ ಪೂರ್ವನಿಯೋಜಿತ ಕುಶಲ ಕಾರ್ಯಾಚರಣೆಗೆ ಇದು ಸಾಕ್ಷಿಯಾಯಿತೆನ್ನಬೇಕು. ಆಗ ಗವರ್ನರ್ ಜನರಲ್ ಆಗಿದ್ದ ಸಿ. ರಾಜಗೋಪಾಲಚಾರಿ (ರಾಜಾಜಿ) ಅವರೊಂದಿಗೆ ನಿರಾತಂಕವಾಗಿ ಕಾರ್ಯನಿರ್ವಹಿಸಬಹುದು ಎಂಬ ಗ್ರಹಿಕೆ ಹೊಂದಿದ್ದ ನೆಹರು ಅವರೇ ರಾಷ್ಟ್ರಪತಿಯಾಗಿ ಮುಂದುವರಿಯಲೆಂದು ಬಯಸಿದ್ದರು. ಇದು ಮಹಾತ್ಮ ಗಾಂಧೀಜಿಯವರ ಆಶಯವೂ ಆಗಿತ್ತು. ಆದರೆ ತಮ್ಮಂತೆಯೇ ಓರ್ವ ಬಲಪಂಥೀಯ ಸಂಪ್ರದಾಯವಾದಿಯಾದ ರಾಜೇಂದ್ರ ಪ್ರಸಾದರೆಡೆಗೆ ಪಟೇಲರ ಒಲವಿತ್ತು. ಪಟೇಲರಿಂದ ಹುರಿದುಂಬಿಸಲ್ಪಟ್ಟ ಪ್ರಸಾದರು, ರಾಜಗೋಪಾಲಾಚಾರಿಯವರ ಉಮೇದುವಾರಿಕೆಯನ್ನು ಸ್ವೀಕರಿಸಲೊಲ್ಲದ (ಕ್ವಿಟ್ ಇಂಡಿಯಾ ಆಂದೋಲನವನ್ನು ರಾಜಾಜಿ ವಿರೋಧಿಸಿದ್ದರು ಎಂಬುದೇ ಇದಕ್ಕೆ ಕಾರಣ) ಕಾಂಗ್ರೆಸ್ ಸಂಸದರ ಬೆಂಬಲವನ್ನು ಒಗ್ಗೂಡಿಸಿದರು. ಪಟೇಲರ ತಂತ್ರದ ಅರಿವಿರದಿದ್ದ ನೆಹರು 1949ರ ಅಕ್ಟೋಬರ್ 5ರಂದು, ರಾಜಾಜಿ ಹೆಸರನ್ನು ಮುಂಚೂಣಿಗೆ ತಂದು ಅಂಗೀಕಾರದ ಮುದ್ರೆ ದಕ್ಕಿಸಿಕೊಳ್ಳುವ ಉದ್ದೇಶದೊಂದಿಗೆ ಕಾಂಗ್ರೆಸ್ ಸಂಸದರ ಸಭೆ ಕರೆದರು. ಆದರೆ ಅವರ ಪ್ರಸ್ತಾವನೆಗೆ ದಕ್ಕಿದ್ದು ಪ್ರತಿಕೂಲ ಪ್ರತಿಕ್ರಿಯೆ! ನೆಹರು ಕೈಚೆಲ್ಲಬೇಕಾಯಿತು ಹಾಗೂ ರಾಜೇಂದ್ರ ಪ್ರಸಾದರ ಹೆಸರು ಅನುಮೋದನೆಗೊಂಡಿತು. ಈ ಬೆಳವಣಿಗೆಯಿಂದ ನೆಹರುರಿಗೆ ಇರಿಸುಮುರಿಸು ಆದರೂ, 1950ರ ಜನವರಿ 23ರಂದು ಸ್ವತಃ ಪ್ರಸಾದರ ಹೆಸರನ್ನು ಸೂಚಿಸಿದರು, ಪಟೇಲ್ ಇದನ್ನು ಅನುಮೋದಿಸಿದರು. ಚುನಾವಣೆಯ ಹಂಗಿಲ್ಲದೆ ಪ್ರಸಾದರು ಅವಿರೋಧವಾಗಿ ಆಯ್ಕೆಯಾದರು.
 
ಆದರೆ ಮುಂದಿನ ಎರಡು ಸನ್ನಿವೇಶ ಅಥವಾ ಅವಧಿಗಳಲ್ಲಿ ಇದೇ ಪರಿಸ್ಥಿತಿ ಇರಲಿಲ್ಲ; 1952ರ ಚುನಾವಣೆಯಲ್ಲಿ, ಸಂವಿಧಾನ ರಚನಾಮಂಡಲಿಯ ಓರ್ವ ಸದಸ್ಯರಾಗಿದ್ದ ಕೆ.ಟಿ. ಷಾ ಅವರಿಂದ ಪ್ರಸಾದರು ಪೈಪೋಟಿ ಎದುರಿಸಬೇಕಾಗಿ ಬಂತು. ಆದರೆ ಷಾ ಮಡಿಲಿಗೆ ಬಿದ್ದಿದ್ದು 93,000 ಮತಗಳು. 5 ಲಕ್ಷಕ್ಕೂ ಹೆಚ್ಚು ಮತ ಗಳಿಸಿದ ಪ್ರಸಾದರು ವಿಜಯಿಯಾದರು. 1957ರಲ್ಲಿ ನಡೆದ ‘ಸಾಂಕೇತಿಕ’ ಅಥವಾ ‘ನಾಮಮಾತ್ರದ’ ಚುನಾವಣೆಯಲ್ಲಿ 4.6 ಲಕ್ಷ ಮತಗಳನ್ನು ಗಳಿಸಿದ ರಾಜೇಂದ್ರ ಪ್ರಸಾದರು ಎದುರಾಳಿ ಹರಿ ರಾಮ್ (2,672 ಮತಗಳು) ಅವರನ್ನು ಸೋಲಿಸಿದರು. ಇದುವರೆಗೆ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದವರ ಪೈಕಿ ಇವರದ್ದೇ ಸುದೀರ್ಘ ಕಾಲಾವಧಿ (12 ವರ್ಷಗಳು) ಎಂಬುದು ಗಮನಿಸಬೇಕಾದ ಸಂಗತಿ.
 
;ಝಾಕೀರ್ ಹುಸೇನ್ (1967-1969):
 
ಇವರು ದೇಶದ ಮೊಟ್ಟಮೊದಲ ಮುಸ್ಲಿಂ ರಾಷ್ಟ್ರಪತಿಯೂ ಹೌದು. 1967ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೊಂಚ ಹಿನ್ನಡೆ (283 ಸ್ಥಾನಗಳು) ಅನುಭವಿಸಬೇಕಾಗಿ ಬಂದ ವಾತಾವರಣದ ಹಿನ್ನೆಲೆಯಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿತು ಎನ್ನಬೇಕು. ಈ ಚುನಾವಣೆಯಲ್ಲಿ, ವಿಪಕ್ಷಗಳು ಸೂಚಿಸಿದ್ದ ಅಭ್ಯರ್ಥಿಯಾಗಿದ್ದ ಸುಪ್ರೀಂಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ಕೊಕಾ ಸುಬ್ಬರಾವ್ 3.64 ಲಕ್ಷ ಮತ ಗಳಿಸಿದರೆ, 4.71 ಲಕ್ಷ ಮತ ಗಿಟ್ಟಿಸಿಕೊಂಡ ಝಾಕೀರ್ ಹುಸೇನ್ ವಿಜಯಶಾಲಿಯಾದರು.
 
;ಸರ್ವೆಪಲ್ಲಿ ರಾಧಾಕೃಷ್ಣನ್ (1962-1967):
 
ಬಾಬು ರಾಜೇಂದ್ರ ಪ್ರಸಾದರ ತರುವಾಯ ಈ ಸ್ಥಾನ ಅಲಂಕರಿಸಿದ್ದು ಶ್ರೇಷ್ಠ ವಿದ್ವಾಂಸ ಎಂದೇ ವ್ಯಾಪಕ ಮೆಚ್ಚುಗೆ ಪಡೆದಿದ್ದ ಸರ್ವೆಪಲ್ಲಿ ರಾಧಾಕೃಷ್ಣನ್. ಬರೋಬ್ಬರಿ 10 ವರ್ಷಗಳ ಕಾಲ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ, ಅದನ್ನು ರಾಷ್ಟ್ರಪತಿ ಚುನಾವಣೆಗೆ ಚಿಮ್ಮುಹಲಗೆಯಾಗಿಸಿಕೊಂಡ ಇವರು, ಐದೂವರೆ ಲಕ್ಷ ಮತಗಳನ್ನು ಗಳಿಸುವ ಮೂಲಕ ಸಮೀಪದ ಪ್ರತಿಸ್ಪರ್ಧಿ ಹರಿ ರಾಮ್ (6,341 ಮತಗಳು) ಅವರನ್ನು ಸೋಲಿಸಿ, 1962ರಿಂದ 67ರವರೆಗೆ ರಾಷ್ಟ್ರಪತಿ ಹುದ್ದೆಯಲ್ಲಿದ್ದರು.
 
;ವಿ.ವಿ. ಗಿರಿ (1969-1974):
 
ರಾಷ್ಟ್ರಪತಿ ಹುದ್ದೆಯಲ್ಲಿರುವಾಗಲೇ ನಿಧನರಾದ ಝಾಕೀರ್ ಹುಸೇನ್ ಸ್ಥಾನವನ್ನು ‘ಹಂಗಾಮಿಯಾಗಿ’ ತುಂಬಿದ ವಿ.ವಿ. ಗಿರಿ, ತರುವಾಯದಲ್ಲಿ ಚುನಾವಣೆಗೂ ಸ್ಪರ್ಧಿಸಿದ್ದು ಸ್ವಾರಸ್ಯಕರ ಬೆಳವಣಿಗೆ. ಅಷ್ಟು ಹೊತ್ತಿಗಾಗಲೇ ಕಾಂಗ್ರೆಸ್​ನಲ್ಲಿ ‘ಬಣ ರಾಜಕೀಯ’ ತೀವ್ರಗೊಂಡಿತ್ತು. ಪಕ್ಷಾಧ್ಯಕ್ಷ ಎಸ್. ನಿಜಲಿಂಗಪ್ಪ ನೇತೃತ್ವದ ‘ಸಿಂಡಿಕೇಟ್ ಬಣ’ ನೀಲಂ ಸಂಜೀವರೆಡ್ಡಿ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿತು. ಆದರೆ ಇದಕ್ಕೆ ತಕರಾರೆತ್ತಿದ ಪ್ರಧಾನಿ ಇಂದಿರಾ ಗಾಂಧಿ, ದಲಿತ ನಾಯಕ ಜಗಜೀವನ್ ರಾಮ್ ಹೆಸರನ್ನು ಸೂಚಿಸಿದರು. ಈ ಚರ್ಚಾವಿಷಯವನ್ನು ಮತಕ್ಕೆ ಹಾಕಿದಾಗ, ರೆಡ್ಡಿ ಪರವಾಗಿ ನಾಲ್ಕು, ವಿರುದ್ಧವಾಗಿ ಎರಡು ಮತಗಳು ಬಂದವು. ಆಗ ಅಖಾಡ ಪ್ರವೇಶಿಸಿದವರೇ ವಿ.ವಿ. ಗಿರಿ!
 
ಆಗ ಹಂಗಾಮಿ ರಾಷ್ಟ್ರಪತಿಯಾಗಿದ್ದ ಗಿರಿ, ಓರ್ವ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರವನ್ನು ಪ್ರಕಟಿಸಿದರು. ಈ ಮಧ್ಯೆ, ಪಕ್ಷದ ಹಿರಿತಲೆಗಳಿಗೆ ಚಾಣಾಕ್ಷೆ ಇಂದಿರಾ ಹಮ್ಮಿಕೊಂಡಿದ್ದ ಕಾರ್ಯತಂತ್ರಗಳ ಸುಳಿವೂ ದಕ್ಕಿರಲಿಲ್ಲ. ಆದರೆ ಜಾಗರೂಕ ಸ್ವಭಾವದ ನಿಜಲಿಂಗಪ್ಪನವರು, ಮಾಜಿ ಹಣಕಾಸು ಸಚಿವ ಸಿ.ಡಿ. ದೇಶಮುಖ್​ರನ್ನು ಕಣಕ್ಕಿಳಿಸಿದ್ದ ಸ್ವತಂತ್ರ ಪಾರ್ಟಿ ಮತ್ತು ಜನಸಂಘ ಪಕ್ಷಗಳನ್ನು ಎಡತಾಕಿ, ಎರಡನೇ ಆದ್ಯತೆಯ ಮತಗಳನ್ನು ರೆಡ್ಡಿಯವರಿಗೆ ನೀಡುವಂತೆ ಕೋರಿದರು. ಮತದಾನಕ್ಕೆ ಕೆಲ ದಿನಗಳಿರುವಾಗಲೇ, ‘ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುವಂತೆ’ ಇಂದಿರಾ ಕಾಂಗ್ರೆಸ್ ನಾಯಕರಿಗೆ ಕರೆಯಿತ್ತರು. ಪೈಪೋಟಿ ಅದೆಷ್ಟು ನಿಕಟವಾಗಿತ್ತೆಂದರೆ, ಮೊದಲ ಸುತ್ತಿನಲ್ಲಿ ಅಗತ್ಯವಿದ್ದ ‘ಕಟ್-ಆಫ್’ ಪ್ರಮಾಣದ ಮತಗಳು ಯಾರಿಗೂ ದಕ್ಕಿರಲಿಲ್ಲ. ಎರಡನೇ ಆದ್ಯತೆಯ ಮತಗಳ ಎಣಿಕೆಯ ನಂತರವಷ್ಟೇ ವಿ.ವಿ. ಗಿರಿ ಗೆಲುವಿನ ನಗೆ ಬೀರಿದರು. ಅಗತ್ಯವಿದ್ದ 4,18,169 ಮತಗಳಿಗೆ ಪ್ರತಿಯಾಗಿ ಗಿರಿಯವರಿಗೆ ದಕ್ಕಿದ್ದು ಬರೋಬ್ಬರಿ 4.20 ಲಕ್ಷ ಮತಗಳು. ರೆಡ್ಡಿ ಮತ್ತು ದೇಶಮುಖ್ ಕ್ರಮವಾಗಿ 4.05 ಲಕ್ಷ ಮತ್ತು 1.13 ಲಕ್ಷ ಮತಗಳನ್ನು ಗಳಿಸಿದರು. ಕಾಂಗ್ರೆಸ್​ನಲ್ಲಿ ಒಡಕು ಉಂಟಾಗುವುದಕ್ಕೆ ಈ ಚುನಾವಣೆ ಪೀಠಿಕೆ ಹಾಕಿತೆನ್ನಬೇಕು.
 
;ಫಕ್ರುದ್ದೀನ್ ಅಲಿ ಅಹ್ಮದ್ (1974-1977):
 
ವಿ.ವಿ. ಗಿರಿ ಅಧಿಕಾರಾವಧಿಯ ನಂತರ ರಾಷ್ಟ್ರಪತಿ ಗಾದಿಗೇರಿದ ಇವರು, ಝಾಕೀರ್ ಹುಸೇನರ ನಂತರ ಈ ಉನ್ನತ ಹುದ್ದೆಗೇರಿದ ಎರಡನೇ ಮುಸ್ಲಿಂ ನಾಯಕ. ಅಷ್ಟು ಹೊತ್ತಿಗಾಗಲೇ, ಕಾಂಗ್ರೆಸ್ ಪಕ್ಷದ ನೆಲೆಗಟ್ಟು ಮತ್ತು ಬಲದಲ್ಲಿ ಗಣನೀಯ ಸುಧಾರಣೆಯಾಗಿತ್ತು. ಇದಕ್ಕೆ ಕಾರಣವಾಗಿದ್ದು ಇಂದಿರಾರ ಸಮರ್ಥ ನೇತೃತ್ವ. 7.66 ಲಕ್ಷ ಮತಗಳೊಡನೆ ಫಕ್ರುದ್ದೀನ್ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದರೆ, ವಿಪಕ್ಷಗಳ ಅಭ್ಯರ್ಥಿ ತ್ರಿದಿಬ್ ಚೌಧುರಿ 1.89 ಲಕ್ಷ ಮತಗಳಿಗೆ ತೃಪ್ತರಾಗಬೇಕಾಯಿತು. ಇಂದಿರಾ ಗಾಂಧಿಯವರ ಇಶಾರೆಯಂತೆ ತುರ್ತು ಪರಿಸ್ಥಿತಿಯ ಘೊಷಣೆ ಮಾಡಿದ ರಾಷ್ಟ್ರಪತಿಯೂ ಇವರೇ. ಝಾಕೀರ್ ಹುಸೇನರಂತೆ ಇವರು ಕೂಡ ಅಧಿಕಾರದಲ್ಲಿರುವಾಗಲೇ ಅಸುನೀಗಿದರು.
 
;ನೀಲಂ ಸಂಜೀವರೆಡ್ಡಿ (1977-1982):
 
ರಾಷ್ಟ್ರಪತಿಯಾಗುವ ರೆಡ್ಡಿಯವರ ಕನಸಿಗೆ ಅಥವಾ ಸಂಭಾವ್ಯತೆಗೆ ಇಂದಿರಾ ಗಾಂಧಿಯವರು 1969ರಲ್ಲೇ ತಣ್ಣೀರೆರಚಿದ್ದರು. ಇದನ್ನೊಂದು ಅಸ್ತ್ರವಾಗಿಸಿಕೊಂಡ ಮತ್ತು ಅಷ್ಟು ಹೊತ್ತಿಗಾಗಲೇ ಅಧಿಕಾರ ಗದ್ದುಗೆಯಲ್ಲಿದ್ದ ಇಂದಿರಾ ಎದುರಾಳಿಗಳು, 1977ರ ರಾಷ್ಟ್ರಪತಿ ಚುನಾವಣಾ ಕಣಕ್ಕೆ ರೆಡ್ಡಿಯವರನ್ನು ಇಳಿಸುವ ಮೂಲಕ ಪ್ರತೀಕಾರಕ್ಕೆ ಮುಂದಾದರು. ಖ್ಯಾತ ನರ್ತಕಿ ರುಕ್ಮಿಣಿ ದೇವಿ ಅರುಂಡೇಲ್​ರನ್ನು ಕಣಕ್ಕಿಳಿಸಬೇಕೆಂಬುದು ಪ್ರಧಾನಿ ಮೊರಾರ್ಜಿ ದೇಸಾಯಿಯವರ ಬಯಕೆಯಾಗಿತ್ತು. ಆದರೆ ಆಕೆ ನಿರಾಕರಿಸಿದ ಕಾರಣ ರೆಡ್ಡಿ ಅವಿರೋಧವಾಗಿ ಆಯ್ಕೆಯಾದರು.
 
;ಜೈಲ್ ಸಿಂಗ್ (1982-1987):
 
1982ರ ರಾಷ್ಟ್ರಪತಿ ಚುನಾವಣೆ ವೇಳೆಗೆ ಇಂದಿರಾ ಗಾಂಧಿ ಮತ್ತೊಮ್ಮೆ ಗದ್ದುಗೆಗೇರಿ ಗರಿಗೆದರಿದ್ದರು. ಇಂದಿರಾ ಕೃಪಾಪೋಷಿತ ಜೈಲ್ ಸಿಂಗ್ 7.54 ಲಕ್ಷ ಮತ ಗಳಿಸಿದರೆ, ವಿಪಕ್ಷಗಳ ಅಭ್ಯರ್ಥಿ ಮತ್ತು ಸುಪ್ರೀಂಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಬುಟ್ಟಿಗೆ 2.83 ಲಕ್ಷ ಮತಗಳು ಬಿದ್ದವು. ರಾಷ್ಟ್ರಪತಿಯಾಗಿದ್ದಾಗಿನ ಅವಧಿಯಲ್ಲಿ ಜೈಲ್ ಸಿಂಗ್, ‘ನನ್ನ ನಾಯಕಿ ಹೇಳಿದರೆ, ಕಸಪೊರಕೆ ಎತ್ತಿಕೊಂಡು ಕಸ ಹೊಡೆಯಲೂ ನಾನು ಸಿದ್ಧ’ ಎಂಬುದಾಗಿ ವಿವೇಚನಾರಹಿತವಾಗಿ ಆಡಿದ ಮಾತು, ‘ರಾಷ್ಟ್ರಪತಿ ಎಂದರೆ ರಬ್ಬರ್​ಸ್ಟಾಂಪ್​ನಂತೆ ಕಾರ್ಯನಿರ್ವಹಿಸುವವರು’ ಎಂಬ ಟೀಕಾಕಾರರ ಮಾತಿಗೆ ಪುಷ್ಟಿಯೊದಗಿಸಿತು! ಆದರೆ ಇಂದಿರಾ ಮನದಲ್ಲಿ ಗಿರಕಿ ಹೊಡೆಯುತ್ತಿದ್ದ ಚಿಂತನೆಗಳೇ ಬೇರೆ. ಜೈಲ್ ಸಿಂಗ್ ಆಯ್ಕೆಯಿಂದಾಗಿ ಸಿಖ್ ಸಮುದಾಯ ಸಂತುಷ್ಟಗೊಳ್ಳುತ್ತದೆ ಮತ್ತು ಖಲಿಸ್ತಾನ್ ಆಂದೋಲನವನ್ನು ತಹಬಂದಿಗೆ ತರಲು ಈ ನಡೆ ತಮಗೆ ನೆರವಾಗುತ್ತದೆ ಎಂಬುದು ಇಂದಿರಾ ಎಣಿಕೆಯಾಗಿತ್ತು; ಆದರೆ ಆದದ್ದೇ ಬೇರೆ. ಖಲಿಸ್ತಾನ್ ಆಂದೋಲನ ತೀವ್ರಗೊಂಡು, ‘ಆಪರೇಷನ್ ಬ್ಲೂಸ್ಟಾರ್’ ಕಾರ್ಯಾಚರಣೆಗೂ ಆಸ್ಪದ ಕಲ್ಪಿಸಿತು, ಸಿಖ್ ಅಂಗರಕ್ಷಕರಿಂದಲೇ ಇಂದಿರಾ ಹತರಾಗುವಂತಾಯಿತು.
 
;ಆರ್. ವೆಂಕಟರಾಮನ್ (1987-1992):
 
ಇಂದಿರಾ ಗಾಂಧಿ ಮರಣಾನಂತರ ಪ್ರಧಾನಿ ಗದ್ದುಗೆಗೇರಿದ ಅವರ ಮಗ ರಾಜೀವ್ ಗಾಂಧಿ, 1987ರ ರಾಷ್ಟ್ರಪತಿ ಚುನಾವಣೆ ವೇಳೆ ಉಪರಾಷ್ಟ್ರಪತಿ ಆರ್. ವೆಂಕಟರಾಮನ್​ರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಸೂಚಿಸಿದರು. ಇಂದಿರಾ ಹತ್ಯೆಯ ತರುವಾಯದ ಅನುಕಂಪದ ಅಲೆಯಲ್ಲಿ ದಕ್ಕಿದ ಭರಪೂರ ಸಂಸದೀಯ ಬಹುಮತದ ಬಲದಿಂದಾಗಿ ವೆಂಕಟರಾಮನ್​ರಿಗೆ 7.40 ಲಕ್ಷ ಮತಗಳನ್ನು ಗಳಿಸಿಕೊಡುವಲ್ಲಿ ರಾಜೀವ್ ಯಶಸ್ವಿಯಾದರು. ವಿಪಕ್ಷಗಳ ಅಭ್ಯರ್ಥಿ ಹಾಗೂ ಮಾಜಿ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್​ಗೆ ದಕ್ಕಿದ್ದು 2.82 ಲಕ್ಷ ಮತಗಳು.
 
;ಶಂಕರ ದಯಾಳ್ ಶರ್ಮಾ (1992-1997):
 
ವೆಂಕಟರಾಮನ್ ನಂತರ ರಾಷ್ಟ್ರಪತಿ ಗದ್ದುಗೆಗೇರಿದವರು ನೆಹರು-ಗಾಂಧಿ ಕುಟುಂಬದ ನಿಷ್ಠಾವಂತ ಅನುಯಾಯಿಯಾಗಿದ್ದ ಶಂಕರ ದಯಾಳ್ ಶರ್ವ. ಚುನಾವಣೆಯಲ್ಲಿ ಇವರಿಗೆ ಎದುರಾಳಿಯಾಗಿದ್ದವರು ಅನುಭವಿ ಸಂಸದ ಜಾರ್ಜ್ ಗಿಲ್ಬರ್ಟ್ ಸ್ವೆಲ್. ಶರ್ಮಾ ಮತ್ತು ಸ್ವೆಲ್ ಮಡಿಲಿಗೆ ಕ್ರಮವಾಗಿ ಬಿದ್ದ ಮತಗಳು- 6.76 ಲಕ್ಷ ಮತ್ತು 3.46 ಲಕ್ಷ.
 
;ಕೆ.ಆರ್. ನಾರಾಯಣನ್(1997-2002):
 
ಅದು ಕೇಂದ್ರದಲ್ಲಿ ಜನತಾದಳದ ಇಂದ್ರಕುಮಾರ್ ಗುಜ್ರಾಲ್ ನೇತೃತ್ವದ ಅಲ್ಪಮತದ ಸರ್ಕಾರವಿದ್ದ ಕಾಲಾವಧಿ. ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ದಲಿತ ಸಮುದಾಯದ ಕೆ.ಆರ್. ನಾರಾಯಣ್​ರನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ಇವರಿಗೆ ಎದುರಾಗಿ ಸೆಡ್ಡು ಹೊಡೆದವರು ಟಿ.ಎನ್. ಶೇಷನ್; ದೇಶದ ಚುನಾವಣಾ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಚೊಕ್ಕಗೊಳಿಸಲು ಮಾಡಿದ ದೃಢಯತ್ನಗಳಿಂದಾಗಿ ಜನಮೆಚ್ಚುಗೆ ಗಳಿಸಿ, ನಿವೃತ್ತರೂ ಆಗಿದ್ದ ಶೇಷನ್ ಅಖಾಡಕ್ಕಿಳಿದಾಗ ಸಹಜವಾಗಿಯೇ ಹಲವರ ಹುಬ್ಬೇರಿದವು. ಶೇಷನ್​ಗೆ ಒತ್ತಾಸೆಯಾಗಿದ್ದ ಶಿವಸೇನಾ ಪಕ್ಷದ ಬೆಂಬಲ ಮತ್ತು ಮುಖ್ಯ ಚುನಾವಣಾಧಿಕಾರಿಯಾಗಿ ಅವರಿಗೆ ಅಷ್ಟು ಹೊತ್ತಿಗಾಗಲೇ ದಕ್ಕಿದ್ದ ಜನಪ್ರಿಯತೆ ಮತಗಳಾಗಿ ಪರಿವರ್ತನೆಯಾಗುವುದೇ ಎಂಬ ಕುತೂಹಲ ಹರಳುಗಟ್ಟಿತ್ತು. ಆದರೆ 9.56 ಲಕ್ಷ ಮತಗಳನ್ನು ಗಳಿಸುವ ಮೂಲಕ ನಾರಾಯಣನ್ ಗೆಲುವಿನ ನಗೆ ಬೀರಿದರು. ಮಣಿದ ಶೇಷನ್​ಗೆ ದಕ್ಕಿದ್ದು 50,631 ಮತಗಳು ಮಾತ್ರ.
 
;ಪ್ರತಿಭಾ ಪಾಟೀಲ್ (2007-2012):
 
ಅಬ್ದುಲ್ ಕಲಾಂರನ್ನು ಎರಡನೇ ಅವಧಿಗೂ ರಾಷ್ಟ್ರಪತಿಯಾಗಿ ಮುಂದುವರಿಸುವ ಇರಾದೆ ಬಿಜೆಪಿಯದಾಗಿತ್ತು; ಆದರೆ ಇತರ ಪಕ್ಷಗಳಿಂದ ಯಾವುದೇ ಬೆಂಬಲ ದಕ್ಕುವ ಸಾಧ್ಯತೆ ಕಂಡುಬರಲಿಲ್ಲ. ಹೀಗಾಗಿ ಉಪ ರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್​ರನ್ನು ಕಣಕ್ಕಿಳಿಸುವುದು ಅನಿವಾರ್ಯವಾಯಿತು. ಕಾಂಗ್ರೆಸ್, ಮೈತ್ರಿಸರ್ಕಾರದ ಸಹಭಾಗಿಗಳು ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ ಕಣಕ್ಕಿಳಿದ ಪ್ರತಿಭಾ 6.38 ಲಕ್ಷ ಮತಗಳನ್ನು ಗಳಿಸಿ ಚುನಾಯಿತರಾಗಿ, ಮೊಟ್ಟಮೊದಲ ಮಹಿಳಾ ರಾಷ್ಟ್ರಪತಿ ಎನಿಸಿಕೊಂಡರು. ಕೊಲೆ ಪ್ರಕರಣವೊಂದರಲ್ಲಿ ತಮ್ಮ ಸೋದರನನ್ನು ರಕ್ಷಿಸಲು ಪ್ರತಿಭಾ ಯತ್ನಿಸಿದ್ದಾರೆ ಎಂಬುದೂ ಸೇರಿದಂತೆ ಹಲವು ಆರೋಪಗಳು ಈ ಚುನಾವಣಾ ಸಂದರ್ಭದಲ್ಲಿ ಕೇಳಿ ಬಂದರೂ 3ನೇ ಎರಡರಷ್ಟು ಮತ ದಕ್ಕಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಶೇಖಾವತ್​ರಿಗೆ ದಕ್ಕಿದ್ದು 3.31 ಲಕ್ಷ ಮತಗಳು ಮಾತ್ರ.
 
;ಡಾ. ಎಪಿಜೆ ಅಬ್ದುಲ್ ಕಲಾಂ(2002-2007):
 
ಅದು ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಒಕ್ಕೂಟವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಲಾವಧಿ. ಹಲವು ಪಕ್ಷಗಳ ಮೈತ್ರಿ ನೆಚ್ಚಿದ್ದ ‘ಖಿಚಡಿ ಸರ್ಕಾರ’ ಅವರದಾಗಿತ್ತು. 2ನೇ ಅವಧಿಗೂ ರಾಷ್ಟ್ರಪತಿಯಾಗಿ ಮುಂದುವರಿಯುವ ಕನಸು ಕಾಣುತ್ತಿದ್ದರು ಕೆ.ಆರ್. ನಾರಾಯಣನ್. ಕಾಂಗ್ರೆಸ್, ಎಡಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ಬೆಂಬಲ ಅವರಿಗಿದ್ದುದೇ ಇದಕ್ಕೆ ಕಾರಣ. ಆದರೆ ವಾಜಪೇಯಿ ಇದಕ್ಕೊಪ್ಪಲಿಲ್ಲ. ಆಗ, ಉಪರಾಷ್ಟ್ರಪತಿ ಕೃಷ್ಣಕಾಂತ ಹೆಸರು ಚಲಾವಣೆಗೆ ಬಂದಿತಾದರೂ, ಶಿವಸೇನೆ ಮತ್ತು ಕೆಲ ಬಿಜೆಪಿ ನಾಯಕರು ಪ್ರಸ್ತಾಪಿಸಿದ್ದು ಮಾಜಿ ರಾಜ್ಯಪಾಲ ಪಿ.ಸಿ. ಅಲೆಕ್ಸಾಂಡರ್ ಹೆಸರನ್ನು. ಆದರೆ ವಿಪಕ್ಷಗಳು ಇದನ್ನು ತಿರಸ್ಕರಿಸಿದವು. ಆಗ ವಾಜಪೇಯಿ ‘ಕ್ಷಿಪಣಿ ವಿಜ್ಞಾನಿ’ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಹೆಸರನ್ನು ಸೂಚಿಸಿದರು. ಈ ಪ್ರಸ್ತಾವಕ್ಕೆ ಸಮಾಜವಾದಿ ಪಕ್ಷ, ತೆಲುಗು ದೇಶಂ, ಎಐಎಡಿಎಂಕೆ ಮತ್ತು ಬಿಎಸ್​ಪಿ ಹಸಿರು ನಿಶಾನೆ ತೋರಿದವು. ತರುವಾಯದಲ್ಲಿ ಕಾಂಗ್ರೆಸ್ ಕೂಡ ಸಮ್ಮತಿಸಿತು. ಎಡಪಕ್ಷಗಳು ಲಕ್ಷ್ಮಿ ಸೆಹಗಲ್​ರನ್ನು ಕಣಕ್ಕಿಳಿಸಿದರೂ, ಅವರಿಗೆ ದಕ್ಕಿದ್ದು 1.07 ಲಕ್ಷ ಮತಗಳು. 9.23 ಲಕ್ಷ ಮತಗಳನ್ನು ದಕ್ಕಿಸಿಕೊಂಡ ಕಲಾಂ ವಿಜಯದ ನಗೆ ಬೀರಿದರು.
 
;ಪ್ರಣಬ್ ಮುಖರ್ಜಿ (2012-2017):
 
2012ರ ರಾಷ್ಟ್ರಪತಿ ಚುನಾವಣಾ ಸಂದರ್ಭದಲ್ಲಿ ಪಕ್ಷದ ಆಂತರಿಕ ನೆಲೆಗಟ್ಟಿನಲ್ಲಿ ಪ್ರಣಬ್ ಮುಖರ್ಜಿ ಅದೆಷ್ಟು ಪರಿಣಾಮಕಾರಿಯಾಗಿ ತಮ್ಮ ಕುರಿತಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೆಂದರೆ, ಅವರನ್ನು ತಡೆಯುವವರು ಯಾರೂ ಇರಲಿಲ್ಲ. ಅಭ್ಯರ್ಥಿಯಾಗಿ ಅವರ ಹೆಸರನ್ನು ಕಾಂಗ್ರೆಸ್ ಪಕ್ಷ ಘೊಷಿಸುತ್ತಿದ್ದಂತೆ, ಎನ್​ಡಿಎ ಸಹಯೋಗಿಗಳಾದ ಜೆಡಿ (ಯು) ಮತ್ತು ಶಿವಸೇನೆ ಅವರನ್ನು ಬೆಂಬಲಿಸಿದವು. ಬಿಜೆಪಿ ಬೆಂಬಲಿಸಿದ್ದು ಪಿ.ಎ. ಸಂಗ್ಮಾರನ್ನು. 7.14 ಲಕ್ಷ ಮತಗಳೊಂದಿಗೆ ಪ್ರಣಬ್ ಗೆದ್ದರೆ, 3.16 ಲಕ್ಷ ಮತಗಳಿಗೆ ಸಂಗ್ಮಾ ತೃಪ್ತರಾಗಬೇಕಾಯಿತು.
 
==ಬಾಹ್ಯ ಸಂಪರ್ಕಗಳು==
೩೫೩

edits

"https://kn.wikipedia.org/wiki/ವಿಶೇಷ:MobileDiff/867769" ಇಂದ ಪಡೆಯಲ್ಪಟ್ಟಿದೆ