ದಿಕ್ಸೂಚಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:Kompas Sofia.JPG|thumb|ಒಂದು ಸರಳ ದಿಕ್ಶೂಚಿ]]
'''ದಿಕ್ಸೂಚಿ''' (copasscompass)ದಿಕ್ಕನ್ನು ಸೂಚಿಸುವ ಉಪಕರಣ.ಪ್ರಾಚೀನ ಕಾಲದಿಂದಲೂ[[ಕಾಲ]]ದಿಂದಲೂ ನಾವಿಕರ ಸಂಗಾತಿಯಾದ ಸರಳ ಉಪಕರಣ.[[ಭಾರತ]]ದಲ್ಲಿ 'ಮತ್ಸ್ಯಯಂತ್ರ'ವೆಂದು ಉಪಯೋಗದಲ್ಲಿತ್ತು.ಹಿಂದಿನ ಕಾಲದಲ್ಲಿ [[ನೀರು]] ಅಥವಾ [[ಎಣ್ಣೆ]]ಯಲ್ಲಿ ಲೋಹದ ಮೀನನ್ನು ತೇಲಿ ಬಿಟ್ಟು ದಿಕ್ಕನ್ನು ಗುರುತಿಸುತ್ತಿದ್ದರು.ಹಲವಾರು ಬಾರಿ ರೂಪಾಂತರ ಹಾಗೂ ಅಭಿವೃದ್ಧಿಹೊಂದಿ ಈಗಿನ ರೂಪಕ್ಕೆ ಬಂದಿರುತ್ತದೆ.ಇದನ್ನು ''ಉತ್ತರಮುಖಿ'' ಎಂದೂ ಕರೆಯುತ್ತಾರೆ.
==ಇತಿಹಾಸ==
ಉತ್ತರಮುಖಿಯನ್ನು ನಿರ್ಮಿಸಿ ಅದನ್ನು ಸಮುದ್ರಯಾನದಲ್ಲಿ ಮೊದಲು ಉಪಯೋಗಿಸಿದವರು ತಾವೆಂದು [[ಚೀನ]], [[ಅರೇಬಿಯ]], [[ಗ್ರೀಸ್]], [[ಫಿನ್ಲೆಂಡ್]] ಮತ್ತು [[ಇಟಲಿ]] ದೇಶಗಳ[[ದೇಶ]]ಗಳ [[ಜನ]] ಹೇಳಿಕೊಳ್ಳುತ್ತಾರೆ. ಈ ಯಾದಿಯಲ್ಲಿ [[ಈಜಿಪ್ಟ್‌]] ಮತ್ತು [[ಭಾರತ]] ದೇಶಗಳ ಜನ ಏಕೆ ಸೇರಲಿಲ್ಲವೋ ತಿಳಿಯದು. ಇದರ ಉಪಯೋಗ ತಿಳಿಯುವ ಮೊದಲೇ ಪ್ರಪಂಚದ ನಾನಾ ಭಾಗದ ಜನ ಸಮುದ್ರಯಾನ ಮಾಡುತ್ತಿದ್ದರು. ಆಗ ಅವರಿಗೆ ದಿಕ್ಕನ್ನು ತಿಳಿಯಲು ಸಹಾಯಕವಾಗುತ್ತಿದ್ದ ವಸ್ತುಗಳೆಂದರೆ [[ಸೂರ್ಯ]], [[ಧ್ರುವನಕ್ಷತ್ರ]] ಮತ್ತು ತಾರಾಗುಚ್ಛಗಳು. ಉತ್ತರಮುಖಿಯನ್ನು ಮೊದಲು ಬಳಸಿದಾಗ ನೌಕೆ ಯಾವ ದಿಕ್ಕಿನಲ್ಲಿ ಚಲಿಸುತ್ತಿದೆ ಎಂಬುದನ್ನು ತಿಳಿಯಲು ಮಾತ್ರ ಅದು ನೆರವಾಗುತ್ತಿತ್ತು. ಅಂದು ಗಾಳಿ ಬೀಸಿದ ದಿಕ್ಕಿನಲ್ಲಿ ನಾವೆ ಚಲಿಸಬೇಕಾಗಿದ್ದುದರಿಂದ ಚಲನದಿಕ್ಕನ್ನು ಬದಲಾಯಿಸಲು ಪ್ರಾಯಶಃ ಸಾಧ್ಯವಾಗುತ್ತಿರಲಿಲ್ಲ.
 
ಚೀನೀಯರೇ ಉತ್ತರಮುಖಿಯನ್ನು ನಿರ್ಮಿಸಿ ಮೊದಲು ಉಪಯೋಗಿಸಿದರೆಂಬುದಕ್ಕೆ ಆಧಾರ ದಂತಕಥೆಗಳು. ಈ ಕಥೆಗಳಲ್ಲಿ ಒಂದು ಹೀಗಿದೆ: ಪ್ರ.ಶ.ಪು. 2634ರಲ್ಲಿ ಬಂಡಾಯವೆದ್ದ ಅರಸುಕುಮಾರ ಚ್ ಇ-ಯುವನ್ನು ಹತ್ತಿಕ್ಕಲು ಚಕ್ರವರ್ತಿ ಹುವಾಂಗ್ ಟಿ ದಂಡು ಕಳುಹಿಸಿದ. ಅದರ ದಿಕ್ಕುಗೆಡಿಸಲು ಅರಸುಕುಮಾರ ಮಾಯೆಯಿಂದ ಕಾವಳವನ್ನು ಏಳಿಸಿದ. ಆಗ ಚಕ್ರವರ್ತಿ ತನ್ನ ದಂಡನಾಯಕನ ನೆರವಿಗೆ ದಕ್ಷಿಣ ದಿಕ್ಕನ್ನು ಸೂಚಿಸುವ ಮಾನವಾಕೃತಿಯುಳ್ಳ ಒಂದು ರಥವನ್ನು ಕಳುಹಿಸಿದ. ಇದರಿಂದ ಕಾವಳದಲ್ಲಿ ಸೈನ್ಯವನ್ನು ನಡೆಸುವುದು ಸುಲಭವಾಯಿತು. ಯುದ್ಧದಲ್ಲಿ ಅರಸುಕುಮಾರ ಸೆರೆಸಿಕ್ಕಿ ಮರಣದಂಡನೆಗೆ ಗುರಿಯಾದ. ಈ ರಥದಲ್ಲಾಗಲಿ ಇಲ್ಲ ಇಂಥದೇ ಮಾನವಾಕೃತಿಯನ್ನು ಹೊಂದಿದ್ದ ಬೇರೆ ರಥಗಳಲ್ಲಾಗಲಿ ಕಾಂತಸ್ವಭಾವವುಳ್ಳ ದಿಕ್ಸೂಚಿಗಳು ಇದ್ದುವೆಂಬುದಕ್ಕೆ ಸ್ಪಷ್ಟ ಆಧಾರವಿಲ್ಲದಿದ್ದರೂ ಹಾಗೆ ಊಹೆಮಾಡಲು ಪ್ರಬಲ ಕಾರಣವಿದೆ. ಚೀನೀಯರ ಹಡಗುಗಳು ಪ್ರ.ಶ. [[9ನೆಯ[[ ಶತಮಾನದಲ್ಲಿ]] ಪರ್ಷಿಯ ಆಖಾತ ಮತ್ತು [[ಕೆಂಪುಸಮುದ್ರ]]ಗಳ ಬಂದರುಗಳಿಗೆ ಹೋಗುತ್ತಿದ್ದುವು. ಆದರೆ ಅವುಗಳಲ್ಲಿ ಉತ್ತರಮುಖಿಗಳು ಇದ್ದುವೆಂದು ನಂಬುವಂತಿಲ್ಲ. ಇವರು ಉತ್ತರಮುಖಿಯ ಉಪಯೋಗವನ್ನು ಬಲ್ಲವರಾಗಿದ್ದರೆಂಬ ಅಂಶವನ್ನು ಖಚಿತವಾಗಿ ತಿಳಿಸುವ ಪಿಂಗ್ ಚೊ ಕೊ ಟಾನ್ ಎಂಬ ಗ್ರಂಥ ರಚಿತವಾದದ್ದು (11ನೆಯ ಶತಮಾನದಲ್ಲಿ). ಯುರೋಪಿನ ನಾವಿಕರು ಪೂರ್ವ ಸಮುದ್ರವನ್ನು ಪ್ರವೇಶಿಸಿ ಚೀನೀ ನಾವಿಕರನ್ನು ಕಂಡಾಗ ಅವರಲ್ಲಿದ್ದ ಉತ್ತರಮುಖಿಗಳು ತೀರಾ ಕೀಳುದರ್ಜೆಯವಾಗಿದ್ದುವೆಂದು ಹೇಳಿದ್ದಾರೆ.
 
ಅರಬರು ಸಮುದ್ರಯಾನದಲ್ಲಿ ಮುಂದಾಳುಗಳೇ. ಆದ್ದರಿಂದ ಅವರೇ ಉತ್ತರಮುಖಿಯನ್ನು ಮೊದಲು ನಿರ್ಮಿಸಿ ಉಪಯೋಗಿಸಿದವರೆಂಬ ನಂಬಿಕೆ ಬೆಳೆದಿದೆ. ಆದರೆ ಈ ಉಪಕರಣಕ್ಕೆ ಅವರು ತಮ್ಮದೇ ಆದ ಹೆಸರು ಕೊಡದೆ [[ಇಟಲಿ]] ಭಾಷೆಯ ಬೊಸ್ಸೋಲ ಎಂಬ ಪದವನ್ನು ಬಳಸುತ್ತಿದ್ದರು. ಇದರಿಂದ ಅವರು ಉತ್ತರಮುಖಿಯ ಮೊದಲ ನಿರ್ಮಾತೃಗಳೆಂಬ ನಂಬಿಕೆ ಶಿಥಿಲಗೊಂಡಿದೆ. ಅವರು ಉತ್ತರಮುಖಿಯನ್ನು ಉಪಯೋಗಿಸುತ್ತಿದ್ದರೆಂಬುದಕ್ಕೆ ಒಂದು ಪರ್ಷಿಯನ್ ಆಖ್ಯಾನಕದಲ್ಲಿ (1232ರಲ್ಲಿ ಪ್ರಕಟಿತ). ಆಧಾರ ದೊರೆತಿದೆ. 1282ರಲ್ಲಿ ಪ್ರಕಟವಾದ ಬೈಲಾಕ್ ಕಿಬ್ಡ್‌ ಜಾಕಿ ಬರೆದ ಮರ್ಚೆಂಟ್ಸ್‌ ಟ್ರೆಷರ್ ಪುಸ್ತಕದಲ್ಲಿ[[ಪುಸ್ತ]]ಕದಲ್ಲಿ [[ಸಿರಿಯನ್ ಸಮುದ್ರ]]ದ ನಾವಿಕರು ಉಪಯೋಗಿಸುತ್ತಿದ್ದ ಉತ್ತರಮುಖಿಯ ಸ್ಥೂಲಪರಿಚಯವಿದೆ. ಮರದ[[ಮರ]]ದ ತುಂಡಿಗೋ ಅಥವಾ ದಬ್ಬೆಗೋ ಒಂದು ಕಾಂತಸೂಚಿಯನ್ನು ಸಿಕ್ಕಿಸಿ ಅದನ್ನು ನೀರಿನ ಮೇಲೆ ತೇಲಿಬಿಟ್ಟು ಆ ನಾವಿಕರು ದಿಕ್ಕನ್ನು ಗೊತ್ತುಮಾಡಿಕೊಳ್ಳುತ್ತಿದ್ದರು.
 
[[ಪಶ್ಚಿಮ]] ಯುರೋಪಿನ ನಾವಿಕರು ಉತ್ತರಮುಖಿಯನ್ನು ಉಪಯೋಗಿಸುತ್ತಿದ್ದರೆಂಬ ವಿಷಯ ತಿಳಿದಿರುವುದು ಅಲೆಕ್ಸಾಂಡರ್ ನೆಕಮ್ (1187) ಎಂಬ ಬರೆಹಗಾರನ ಗ್ರಂಥದ ಮೂಲಕ. ಆಕಾಶದಲ್ಲಿ ಮೋಡಗಳು ಕವಿದು ದಿಕ್ಕುತಪ್ಪಿದಾಗ ನಾವಿಕರು ಕಾಂತದಂಡದಿಂದ ಒಂದು ಸೂಜಿಯನ್ನು ಮುಟ್ಟುತ್ತಾರೆ. ಅದು ತಿರುಗಿ ಸ್ಥಿರಸ್ಥಿತಿಗೆ ಬಂದಾಗ ಉತ್ತರ-ದಕ್ಷಿಣಕ್ಕೆ ನಿಲ್ಲುತ್ತದೆ ಎಂದು ಆತ ಬಣ್ಣಿಸಿದ್ದಾನೆ. 13ನೆಯ ಶತಮಾನದ ಕೊನೆಯಲ್ಲಿ ಸ್ಕ್ಯಾಂಡಿನೇವಿಯದ ನಾವಿಕರು ಉತ್ತರಮುಖಿಯನ್ನು ಉಪಯೋಗಿಸುತ್ತಿದ್ದರು.
 
ಮೊದಲು ನಾವಿಕರು ಒಂದು ಸೂಜಿಗಲ್ಲನ್ನು ಮರದ ತುಂಡಿಗೆ ಸಿಕ್ಕಿಸಿ ಅದನ್ನು ನೀರು ತುಂಬಿದ ಬೋಗುಣಿಗಳಲ್ಲಿ ತೇಲಿಬಿಟ್ಟು ದಿಕ್ಸೂಚಿಯಂತೆ ಉಪಯೋಗಿಸಿರಬೇಕು. ತೇಲುವ ಮರದ ತುಂಡು ಸೂಜಿಗಲ್ಲಿನ ಗುಣದಿಂದ ಯಾವಾಗಲೂ ಉತ್ತರ-ದಕ್ಷಿಣ ದಿಕ್ಕಿಗೆ ನಿಲ್ಲುತ್ತದೆ. [[ಉತ್ತರ]]-[[ದಕ್ಷಿಣ]] ದಿಕ್ಕನ್ನು ಸೂಚಿಸಲು ಒಂದು ಬಣ್ಣದ ಪ್ರಮಾಣರೇಖೆಯನ್ನು ತಳದಲ್ಲಿ ಎಳೆದು ಬೋಗುಣಿಯನ್ನು ಬೇಕಾದ ಹಾಗೆ ತಿರುಗಿಸಿ ನಾವೆ ಚಲಿಸುವ ದಿಕ್ಕನ್ನು ತಿಳಿಯಬಹುದು. ಎರಡನೆಯ ಹಂತದಲ್ಲಿ ದಿಕ್ಕುಗಳನ್ನು ಗುರುತುಮಾಡಿದ ದುಂಡಾದ ರಟ್ಟುಬಿಲ್ಲೆಯ ಹಿಂಭಾಗಕ್ಕೆ ಕಾಂತ ಸೂಚಿಗಳನ್ನು ಅಂಟಿಸಿ ಅದನ್ನು ನೀರಿನಲ್ಲಿ ತೇಲಿಬಿಟ್ಟು ಉಪಯೋಗಿಸಿರಬೇಕು. ತಿರುಗಣೆಯ ಉಪಯೋಗ ಬಹಳ ಕಾಲ ಕಳೆದ ಮೇಲೆ ಬಂದಿರಬೇಕು.
 
ಅಮಾಲ್ಫಿ ಬಂದರಿನಿಂದ ನಾವಿಕರು ಮೊದಲು [[ಮೆಡಿಟರೇನಿಯನ್ ಸಮುದ್ರ]]ಕ್ಕೆ ಉತ್ತರಮುಖಿಯನ್ನು ತಂದರೆಂಬ ಪರಂಪರಾಗತ ಐತಿಹ್ಯವೂ ಉಂಟು. ಇದರ ಜೊತೆಗೆ ಅಮಾಲ್ಫಿಯ ಫ್ಲಾವಿವೊ ಗಿವೋಯಿಯ ಎಂಬ ನಾವಿಕನೇ ಉತ್ತರಮುಖಿಯ ನಿರ್ಮಾತೃವೆಂಬ ಕಥೆಯೂ ಬೆರೆತುಕೊಂಡಿದೆ.
"https://kn.wikipedia.org/wiki/ದಿಕ್ಸೂಚಿ" ಇಂದ ಪಡೆಯಲ್ಪಟ್ಟಿದೆ