ಬೆಳಗಾವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೩ ನೇ ಸಾಲು:
 
== ಚರಿತ್ರೆ ==
[[ಚಿತ್ರ:Vishwa kannada sammelana 2011 at belgavi01.jpg|thumb]]
ಬೆಳಗಾವಿಯ ಪುರಾತನ ಹೆಸರು '''ವೇಣುಗ್ರಾಮ'''. ಆದರೆ ಈಗಿರುವ ಹೆಸರು ಬಂದದ್ದು "ಬೆಳ್ಳಗೆ+ಆವಿ" ಎಂದರೆ ಇಲ್ಲಿನ ವಾತಾವರಣದಲ್ಲಿ ಬೆಳಗಿನ ಜಾವ ಮಂಜು ಬೀಳುತ್ತಿರುತ್ತದೆ. ಅದರಿಂದ "ಬೆಳ್ಳಗಾವಿ" ಹೆಸರು ಬಂದಿದೆ. ಈ ಜಿಲ್ಲೆಯ ಅತಿ ಪ್ರಾಚೀನ ಸ್ಥಳ ಎಂದರೆ '''ಹಲಸಿ''' - ಉಪಲಬ್ಧವಾಗಿರುವ ತಾಮ್ರಶಾಸನಗಳ ಆಧಾರದ ಮೇಲೆ ಹಲಸಿ ಕೆಲವು [[ಕದಂಬ]] ವಂಶದ ಅರಸರ ರಾಜಧಾನಿಯಾಗಿದ್ದಿತೆಂದು ಊಹಿಸಲಾಗಿದೆ. ೬ ನೇ ಶತಮಾನದಿಂದ ಸುಮಾರು ಕ್ರಿ.ಶ. ೭೬೦ ರ ವರೆಗೆ ಈ ಸ್ಥಳ [[ಚಾಲುಕ್ಯ]] ಸಾಮ್ರಾಜ್ಯದ ಭಾಗವಾಗಿದ್ದು, ನಂತರ [[ರಾಷ್ಟ್ರಕೂಟ|ರಾಷ್ಟ್ರಕೂಟರ]] ನಿಯಂತ್ರಣಕ್ಕೆ ಸಾಗಿತು. ರಾಷ್ಟ್ರಕೂಟರ ಶಕ್ತಿ ಕಡಿಮೆಯಾದ ನಂತರ ರತ್ತ ವಂಶದ (೮೭೫ - ೧೨೫೦)ಕೈಯಲ್ಲಿದ್ದ ವೇಣುಗ್ರಾಮ, ೧೨೧೦ ರ ನಂತರ ರಾಜಧಾನಿಯಾಯಿತು. ೧೨೫೦ ರ ನಂತರ ದೇವಗಿರಿಯ [[ಯಾದವ|ಯಾದವರು]] ಈ ಪ್ರದೇಶವನ್ನು ಸ್ವಲ್ಪ ಕಾಲ ಆಳಿದರು. ೧೩೨೦ ರಲ್ಲಿ ದೆಹಲಿಯ ಸುಲ್ತಾನೇಟ್ ಗಳ ಕೈಯಲ್ಲಿ ಯಾದವರು ಸೋಲನುಭವಿಸಿದ ನಂತರ ಸ್ವಲ್ಪ ಕಾಲ ದೆಹಲಿಯ ಆಡಳಿತದಲ್ಲಿ ಬೆಳಗಾವಿ ಜಿಲ್ಲೆ ಇತ್ತು. ಆದರೆ ಕೆಲವೇ ವರ್ಷಗಳ ನಂತರ [[ವಿಜಯನಗರ]] ಸಾಮ್ರಾಜ್ಯ ಈ ಪ್ರದೇಶವನ್ನು ತನ್ನದಾಗಿಸಿಕೊಂಡಿತು. ಬೆಳಗಾವಿ ಜಿಲ್ಲೆಯ ಉತ್ತರದ ಭಾಗಗಳು ೧೩೪೭ ರಲ್ಲಿ ಬಹಮನಿ ಸುಲ್ತಾನರ ಕೈ ಸೇರಿದವು. ೧೪೭೩ ರಲ್ಲಿ ಬೆಳಗಾವಿ ಪಟ್ಟಣ ಮತ್ತು ಜಿಲ್ಲೆಯ ಉಳಿದ ಭಾಗಗಳನ್ನು ಸಹ ಬಹಮನಿ ಸುಲ್ತಾನರು ಗೆದ್ದರು. ಬಿಜಾಪುರದ ಸುಲ್ತಾನರನ್ನು ಔರಂಗಜೇಬ್ ೧೬೮೬ ರಲ್ಲಿ ಸೋಲಿಸಿದ ಮೇಲೆ ಸ್ವಲ್ಪ ಕಾಲ ಬೆಳಗಾವಿ [[ಮುಘಲ್]] ಸಾಮ್ರಾಜ್ಯದ ಭಾಗವಾಯಿತು. ೧೭೭೬ ರಲ್ಲಿ [[ಹೈದರ್ ಅಲಿ]] ಈ ಪ್ರದೇಶವನು ಗೆದ್ದರೂ ಬ್ರಿಟಿಷರ ಸಹಾಯದಿಂದ ಮರಾಠಾ [[ಪೇಶ್ವೆ|ಪೇಶ್ವೆಗಳು]] ಈ ಪ್ರದೇಶವನ್ನು ಗೆದ್ದರು. ೧೮೧೮ ರಲ್ಲಿ ಬ್ರಿಟಿಷರ ಆಡಳಿತಕ್ಕೆ ಸಾಗಿದ ಬೆಳಗಾವಿ [[ಧಾರವಾಡ]] ಜಿಲ್ಲೆಯ ಭಾಗವಾಗಿತ್ತು. ೧೮೩೬ ರಲ್ಲಿ ಈ ಜಿಲ್ಲೆಯನ್ನು ಎರಡು ಭಾಗವಾಗಿ ಮಾಡಿ ಉತ್ತರ ಭಾಗವನ್ನು ಬೆಳಗಾವಿ ಜಿಲ್ಲೆಯಾಗಿ ಮಾಡಲಾಯಿತು.೧೯೪೭ ರಲ್ಲೆ ಭಾರತ ಸ್ವಾಂತಂತ್ರ್ಯಪಡೆದ ನಂತರ ಬೆಳಗಾವಿ ಮುಂಬಯಿ ರಾಜ್ಯದ ಭಾಗವಯಿತು ಆದರೆ ೧೯೫೬ ರಲ್ಲಿ ನಡೆದ ರಾಜ್ಯಗಳ ಮರುವಿಂಗಡನಾ ಕಾಯ್ದೆಯ ಪ್ರಕಾರ ಬೆಳಗಾವಿಯನ್ನ ಆಗಿನ ಮೈಸೂರು ರಾಜ್ಯಕ್ಕೆ ಸೆರಿಸಲಾಯಿತು ನಂತರ ೧೯೭೨ ರಲ್ಲಿ ಮೈಸೂರು ಕರ್ನಾಟಕ ರಾಜ್ಯವಾದ ನಂತರ ಬೆಳಗಾವಿ ಕರ್ನಾಟಕದ ಭಾಗವಾಗಿ ಮುಂದುವರಿಯಿತು.
 
"https://kn.wikipedia.org/wiki/ಬೆಳಗಾವಿ" ಇಂದ ಪಡೆಯಲ್ಪಟ್ಟಿದೆ