ಪಕ್ಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೩ ನೇ ಸಾಲು:
*ಎಲ್ಲ ಬಗೆಯ ಹಕ್ಕಿಧ್ವನಿಗಳನ್ನೂ ಎರಡು ಸ್ಪಷ್ಟ, ಪ್ರತ್ಯೇಕ ವಿಧಗಳಲ್ಲಿ ವರ್ಗೀಕರಿಸಲಾಗಿದೆ: ‘ಕರೆ’ (ಕಾಲ್) ಮತ್ತು ‘ಗಾನ’ (ಸಾಂಗ್).ಎಲ್ಲ ಹಕ್ಕಿಗಳೂ ಹಾಡುವುದಿಲ್ಲ. ಅಷ್ಟೇ ಅಲ್ಲ, ಹಕ್ಕಿಗಳ ಕಂಠದಿಂದ ಹೊಮ್ಮುವ ಧ್ವನಿ–ಶಬ್ದಗಳೆಲ್ಲವೂ ಹಾಡುಗಳೂ ಅಲ್ಲ. ವಾಸ್ತವ ಏನೆಂದರೆ, ಪ್ರಸ್ತುತ ಧರೆಯಲ್ಲಿರುವ ಸುಮಾರು ಹತ್ತು ಸಾವಿರ ಖಗಪ್ರಭೇದಗಳು ಎಲ್ಲವೂ ಉಲಿಯುತ್ತವೆ, ಚಿಲಿಪಿಲಿಗುಟ್ಟುತ್ತವೆ, ಕರೆಯುತ್ತವೆ, ಕೂಗುತ್ತವೆ. ಆದರೆ ಅರ್ಧದಷ್ಟು ಪ್ರಭೇದಗಳಲ್ಲಿ ಗಂಡುಹಕ್ಕಿಗಳು ಮಾತ್ರ ಹಾಡುತ್ತವೆ.
===ಹಕ್ಕಿಗಳ ಕಲರವ===
*ಎಲ್ಲ ಬಗೆಯ ಹಕ್ಕಿಧ್ವನಿಗಳನ್ನೂ ಎರಡು ಸ್ಪಷ್ಟ, ಪ್ರತ್ಯೇಕ ವಿಧಗಳಲ್ಲಿ ವರ್ಗೀಕರಿಸಲಾಗಿದೆ: ‘ಕರೆ’ (ಕಾಲ್) ಮತ್ತು ‘ಗಾನ’ (ಸಾಂಗ್). ತಮ್ಮದೇ ಪ್ರಭೇದದ ಇತರ ಹಕ್ಕಿಗಳನ್ನು ಗುರುತಿಸಿಕೊಳ್ಳಲು, ಒಂದೇ ಗುಂಪಿನ ಎಲ್ಲ ಹಕ್ಕಿಗಳೂ ಆಹಾರ ಹುಡುಕಲು ದೂರದೂರ ಚದುರಿ, ಒಂದರಿಂದ ಮತ್ತೊಂದು ಮರೆಯಾಗಿರುವಾಗಲೂ ಸಂಪರ್ಕದಲ್ಲಿರಲು, ಶತ್ರುಗಳ ಆಗಮನ–ನಿರ್ಗಮನಗಳನ್ನು ಪ್ರಚುರಪಡಿಸಲು, ದಿನದ ಅಂತ್ಯದಲ್ಲಿ ಮತ್ತೆ ಗುಂಪು ಸೇರಲು... ಹೀಗೆಲ್ಲ ನಾನಾ ಸ್ವರಕ್ಷಕ, ಜೀವನವಶ್ಯಕಜೀವನಾವಶ್ಯಕ ಉದ್ದೇಶಗಳಿಗೆ ಎಲ್ಲ ಹಕ್ಕಿಗಳೂ ‘ಕರೆ’ ಗಳನ್ನು ಬಳಸುತ್ತವೆ. ಹಕ್ಕಿಗಳ ಕಲರವ, ಚಿಲಿಪಿಲಿಗಳು ಇವೇ.
 
===ಗಾನ===
*ಹಕ್ಕಿ ಕಲರವ ಬೇರೆ, ಹಾಡುಗಳ ಉದ್ದೇಶ ಬೇರೆ. ಹಕ್ಕಿ ಹಾಡು ಅದ್ಭುತ ಧ್ವನಿಸಂಯೋಜನೆ. ಹಕ್ಕಿಗಳ ಪ್ರತಿ ಗಾನವೂ ಮಂದ್ರ – ಮಧ್ಯಮ – ಏರಿಳಿಕೆಗಳ, ಹ್ರಸ್ವ–ದೀರ್ಘ ಸ್ವರಗಳ, ಸುಶ್ರಾವ್ಯ ರಚನೆಯಿಂದ ಕೂಡಿದೆ. ಪ್ರತಿ ಪ್ರಭೇದದ ಎಲ್ಲ ಹಕ್ಕಿಗಳ ಹಾಡುಗಳದೂ ಸ್ಥೂಲವಾಗಿ ಒಂದೇ ಸ್ವರೂಪ. ಆದರೂ, ಪ್ರತಿ ಹಕ್ಕಿಯೂ ತನ್ನದೇ ‘ವಿಶೇಷತೆ’ ಬೆರೆಸಿ ತನ್ನ ಹಾಡನ್ನು ವಿಶಿಷ್ಟಗೊಳಿಸುತ್ತದೆ. ತನ್ನದೇ ಪ್ರಭೇದದ ಇತರ ಗಂಡುಗಳ ಹಾಡುಗಳಿಂದ ವಿಭಿನ್ನವಾಗಿರುವಂತೆ, ಹೆಚ್ಚು ಆಕರ್ಷಕವಾಗಿರುವಂತೆ, ಸ್ಪರ್ಧಾತ್ಮಕವಾಗಿರುವಂತೆ ಸಂಯೋಜಿಸಿ ಹಾಡುತ್ತದೆ.
"https://kn.wikipedia.org/wiki/ಪಕ್ಷಿ" ಇಂದ ಪಡೆಯಲ್ಪಟ್ಟಿದೆ