ಆತ್ಮಹತ್ಯೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
'''ಆತ್ಮಹತ್ಯೆ''' ಎಂದರೆ ಸ್ವ ಪ್ರೇರಣೆಯಿಂದ ಪ್ರಾಣವನ್ನು ನೀಗುವುದು. <ref>http://www.heretohelp.bc.ca/factsheet/what-is-suicide</ref> ಹಲವು ಬಗೆಗಳಲ್ಲಿ ಅತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. ಸಾಯಲು ತವಕಿಸಿ, ಆತ್ಮಹತ್ಯೆಗೆ ಮಾರ್ಗಗಳನ್ನು ಹುಡುಕುತ್ತಾರೆ.<ref>https://www.psychologytoday.com/us/basics/suicide</ref>
 
==ಇತಿವೃತ್ತ==
* ಹದಿನೇಳು ಹದಿನೆಂಟನೆಯ ಶತಮಾನಗಳಲ್ಲಿ, ಇಂಗ್ಲೆಂಡಿನ ಡಾನ್ ಮತ್ತು ಹ್ಯೂಮ್, [[ಫ್ರಾನ್ಸ್]] ದೇಶದ [[ವಾಲ್ಟೇರ್|ಮಾಂಟೇನ್ ಮಾಂಟೇಸ್ಕೂ ವೋಲ್ಟೇರ್]] ಮತ್ತು [[ರೂಸೊ]], ಇಟಲಿ ದೇಶದ ಬೆಕ್ಕಾರಿಯ ಮುಂತಾದವರು, ಆತ್ಮಹತ್ಯೆಯನ್ನು ಮತ ಮತ್ತು ರಾಜ್ಯ ಸರ್ಕಾರಗಳು ಪ್ರತಿಷೇಧಿಸಕೂಡದೆಂದು ವಾದ ಮಾಡಿದರು. ಈಗಲೂ ಅನೇಕರು ಇವರ ಅಭಿಪ್ರಾಯವನ್ನು ಎತ್ತಿ ಹಿಡಿದಿದ್ದಾರೆ.
* ಕಾಯಿದೆಯ ರೀತ್ಯ ವಿವೇಚನೆಯ ವಯಸ್ಸು, ನ್ಯಾಯ ಮತ್ತು ಬುದ್ಧಿಸ್ವಾಸ್ಥ್ಯ ಉಳ್ಳ ವ್ಯಕ್ತಿ ಉದ್ದೇಶಪೂರ್ವಕವಾಗಿ ತನ್ನ ಕ್ರಿಯೆ ಅಥವಾ ನಿಷ್ಕ್ರಿಯೆಯಿಂದ ಅಪಕೃತ್ಯವೆಸಗಿ ಅದರಿಂದ ಸ್ವನಾಶಮಾಡಿಕೊಳ್ಳುವುದೇ ಆತ್ಮಹತ್ಯೆ. ಆತ್ಮಹತ್ಯೆ ನೈತಿಕ ಮತ್ತು ಧಾರ್ಮಿಕ ದೃಷ್ಟಿಗಳಿಂದ ಮಾತ್ರವೇ ಅಪರಾಧವಲ್ಲ. ಸಾಮಾಜಿಕ ಮತ್ತು ಶಾಸನ ದೃಷ್ಟಿಗಳಿಂದಲೂ ದೋಷಾರ್ಹವಾದುದು.
* ಸಮಾಜದಲ್ಲಿ ವ್ಯಕ್ತಿಯ ಬೌದ್ಧಿಕ ಮತ್ತು ಶಾರೀರಿಕ ಜೀವನದ ಮೌಲ್ಯ ಕೇವಲ ಅವನ ವೃಷ್ಟಿಸಿದ್ಧಿಗೆ ಸೀಮಿತವಾಗದೇ ಸಮಷ್ಟಿಸಿದ್ಧಿಗೂ ಲಭ್ಯವಾಗಬೇಕೆಂಬ ಲೋಕಹಿತ ದೃಷ್ಟಿಯಿಂದ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಕೊಲೆ ಮಾಡಿದರೆ ಹೇಗೆ ಅವನು ಶಿಕ್ಷಾರ್ಹನಾಗುತ್ತಾನೆಯೋ, ಅದೇ ಪ್ರಕಾರವೇ ತನ್ನನ್ನು ತಾನೇ ಕೊಲೆ ಮಾಡಿಕೊಂಡರೂ ಅವನು ದೋಷಿಯಾಗುತ್ತಾನೆ.
* ಮಾನಸಿಕ ದೌರ್ಬಲ್ಯ, ಆಶಾಭಂಗ, ದ್ವೇಷ, ಮಾತ್ಸರ್ಯ, ಸೇಡು, ಹತಾಶೆ, ಬೇರೆಯವರ ಒತ್ತಡ ಇತ್ಯಾದಿ ಯಾವ ಕಾರಣದಿಂದಲೇ ಆಗಲಿ ಆತ್ಮಹತ್ಯೆ ಮಾಡಿಕೊಂಡರೆ ಅದು ಶಾಸನೋಲ್ಲಂಘನವಾಗುತ್ತದೆ. ಆತ್ಮಹತ್ಯೆ ಮಹಾಪಾಪವೆಂದು ಹೇಳುತ್ತಾ, 'ಮಾನವ ಜನ್ಮ ಬಲು ದೊಡ್ಡದು ಅದ ಹಾನಿ ಮಾಡಿಕೊಳ್ಳಬೇಡಿರೊ ಹುಚ್ಚಪ್ಪಗಳಿರಾ' ಎಂದು ಪುರಂದರ ದಾಸರು ಹೇಳಿದ್ದಾರೆ<ref>https://projectsemicolon.com/what-is-suicide/</ref>.
 
==ಆತ್ಮಹತ್ಯೆಯ ವಿಧಗಳು==
ಮನಸ್ಸು ತುಂಬಾ ಸೂಕ್ಷ್ಮವಾದುದು.<ref>http://www.who.int/mental_health/prevention/suicide/suicideprevent/en/</ref> ಅದಕ್ಕೆ ಸ್ವಲ್ಪ ಘಾಸಿಯಾದರೂ ಅದು ಸಹಿಸಿ ಕೊಳ್ಳುವುದಿಲ್ಲ. ದುರ್ಬಲಗೊಂಡ ಮನಸ್ಸು ಸದಾ ಸಾವಿನ ಕಡೆಯೇ ಆಲೋಚಿಸುತ್ತಿರುತ್ತದೆ. ಸಾಯಲು ಇಂತಹದೇ ಕಾರಣಗಳು ಬೇಕಿಲ್ಲ. ಎಷ್ಟೋ ಸಲ ಕ್ಷುಲ್ಲಕವೆನಿಸಬಹುದಾದ ಘಟನೆಗಳು ಸಾವಿಗೆ ಕಾರಣವಾಗಿರುವುದನ್ನು ಗಮನಿಸಬಹುದಾಗಿದೆ. ಹಲವರು ಹಲವಾರು ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕಾಣಬಹುದಾಗಿದೆ.
# ನೇಣು ಬಿಗಿದುಕೊಂಡು ಸಾಯುವುದು.
# ಬೆಂಕಿಯಲ್ಲಿ ಸುಟ್ಟುಕೊಂಡು ಸಾಯುವುದು.
Line ೩೮ ⟶ ೩೭:
==ಉಲ್ಲೇಖಗಳು ==
{{reflist}}
 
<ref>https://www.psychologytoday.com/us/basics/suicide</ref>
<ref>https://projectsemicolon.com/what-is-suicide/</ref>
<ref>http://www.who.int/mental_health/prevention/suicide/suicideprevent/en/</ref>
[[ವರ್ಗ:ಸಾವಿನ ಕಾರಣಗಳು]]
[[ವರ್ಗ:ಜೀವನ]]
"https://kn.wikipedia.org/wiki/ಆತ್ಮಹತ್ಯೆ" ಇಂದ ಪಡೆಯಲ್ಪಟ್ಟಿದೆ