ಅರ್ಜೆಂಟೀನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಉಚ್ಛ → ಉಚ್ಚ using AWB
No edit summary
೫೬ ನೇ ಸಾಲು:
footnotes = ¤ Argentina also has a [[Sovereignty of the Falkland Islands|territorial dispute]] with the United Kingdom over an additional 1,000,000 km² of [[Antarctica]], the [[Falkland Islands]] and [[South Georgia and the South Sandwich Islands]], for a total of 3,761,274 km² (1,452,236 sq mi).
}}
'''ಅರ್ಜೆಂಟೀನ''' [[ದಕ್ಷಿಣ ಅಮೇರಿಕ]] ಖಂಡದಲ್ಲಿರುವ ೨ನೇ ದೊಡ್ಡ [[ದೇಶ]] ಹಾಗು ಪ್ರಪಂಚದ ೮ನೇ ದೊಡ್ಡ ದೇಶ.https://simple.wikipedia.org/wiki/Argentina ದಕ್ಷಿಣ ಅಮೆರಿಕದ ರಾಜ್ಯಗಳಲ್ಲಿ ಒಂದು (೩೫೦-೫೫೦ ದಕ್ಷಿಣ ಅಕ್ಷಾಂಶ, ೫೪೦೨೨°-೭೩೦೩೦° ಪಶ್ಚಿಮ ರೇಖಾಂಶ). ಉತ್ತರದಲ್ಲಿ [[ಬೊಲಿವಿಯ]], [[ಪರಗ್ವೆ]], ಪಶ್ಚಿಮದಲ್ಲಿ [[ಚಿಲಿ]], ಪೂರ್ವ ಮತ್ತು ಈಶಾನ್ಯದಲ್ಲಿ [[ಬ್ರೆಜಿಲ್]] ಮತ್ತು [[ಉರುಗ್ವೆ]] ದೇಶಗಳೂ ದಕ್ಷಿಣ ಮತ್ತು ಪೂರ್ವದಲ್ಲಿ ದಕ್ಷಿಣ [[ಅಂಟ್ಲಾಂಟಿಕ್ ಸಾಗರ]] ಸುತ್ತುವರೆದಿರುವ ಈ ದೇಶದ ವಿಸ್ತೀರ್ಣ ೨,೭೮೦,೪೦೦.ಚ.ಕಿಮೀ. ಜನಸಂಖ್ಯೆ ೪೦,೧೧೭,೦೯೬ (೨೦೧೦).http://www.worldometers.info/world-population/argentina-population/ ಉತ್ತರಕ್ಕೆ ಸ್ವಲ್ಪ ವಿಶಾಲವಾಗಿದ್ದು ದಕ್ಷಿಣಕ್ಕೆ ಹೋದಂತೆ ಇಕ್ಕಟ್ಟಾಗುತ್ತ ಹೋಗುತ್ತದೆ. ರಾಜಧಾನಿ [[ಬ್ಯೂನೆಸ್ ಐರಿಸ್]]. ಇದರ ಜನಸಂಖ್ಯೆ ೧೨,೪೩೧,೦೦೦. ಶೇ 89ರಷ್ಟು ಜನ ನಗರಗಳಲ್ಲಿ ವಾಸಿಸುತ್ತಾರೆ. ಉಳಿದ ಜನ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಪ್ರತಿ ಸಾವಿರಕ್ಕೆ ಜನನ ಮರಣ ದರಗಳು ಕ್ರಮವಾಗಿ ೨೯ ಮತ್ತು ೯ ಆಗಿವೆ. ಈ ದೇಶದ ಜನ ವಿದ್ಯಾವಂತರು. ಅಕ್ಷರಸ್ಥರ ಸಂಖ್ಯೆ ಶೇ ೮೭ರಷ್ಟಿದೆ. ಒಕ್ಕಲುತನದಲ್ಲಿ ತೊಡಗಿದವರ ಸಂಖ್ಯೆ ಶೇ ೨೫ ರಷ್ಟು ಮಾತ್ರ. ಆದರೂ ಇದು ಕೃಷಿ ಪ್ರಧಾನ ರಾಷ್ಟ್ರ. ಇಲ್ಲಿನ ನಾಣ್ಯ ಪೆಸೊ. ಮುಖ್ಯ ಬೆಳೆಗಳು ಗೋದಿ, ಮೆಕ್ಕೆಜೋಳ, ರೈ, ಓಟ್ಸ್ ಮತ್ತು ಅಗಸೆನಾರು.
ಈ ದೇಶದ ಪಶ್ಚಿಮ ಆಂಡೀಸ್ ಪರ್ವತ ಉತ್ತರ ದಕ್ಷಿಣವಾಗಿ ಹಬ್ಬಿದೆ. ಬಹಳ ಎತ್ತರವಾಗಿರುವುದರಿಂದ ಹಿಮಾವೃತವಾಗಿರುತ್ತದೆ. ಉತ್ತರ ಭಾಗದಲ್ಲಿ ಅರಣ್ಯ ಪ್ರದೇಶವಿದೆ. ನೈಋತ್ಯಕ್ಕೆ ಫಲವತ್ತಾದ ಪಂಪಾಸ್ ಹುಲ್ಲುಗಾವಲು, ದಕ್ಷಿಣಕ್ಕೆ ಮರುಭೂಮಿ. ೧೫೮೦ರಲ್ಲಿ ಸ್ಪೇನ್ ದೇಶದವರು ಇದನ್ನು ಆಕ್ರಮಿಸಿಕೊಂಡರು. ಈ ವಸಾಹತುಗಾರರು ಇಲ್ಲಿಗೆ ಬಂದಕೂಡಲೆ ಇಲ್ಲಿಯ ಜನ ಬೆಳ್ಳಿಯ ಆಭರಣಗಳನ್ನು ಧರಿಸುವುದನ್ನು ಕಂಡು ಇಲ್ಲಿ ಬೆಳ್ಳಿ ಸಿಗಬಹುದೆಂದು ತಿಳಿದು ಇದನ್ನು ಬೆಳ್ಳಿಯ ನಾಡೆಂದು ಕರೆದರು. ಸ್ವಲ್ಪ ಕಾಲಾನಂತರ, ಬೆಳ್ಳಿ ಹೊರದೇಶಗಳಿಂದ ಆಮದಾಗುತ್ತಿದೆ ಎಂಬುದು ತಿಳಿದುಬಂತು.
==ಬೌಗೋಳಿಕ==
೭೨ ನೇ ಸಾಲು:
ಈಗ ಆರ್ಜೆಂಟೀನ ತನ್ನ ಒಟ್ಟು ಗೋದಿ ಹುಟ್ಟುವಳಿಯ ¾ ಭಾಗವನ್ನು ರಫ್ತು ಮಾಡುತ್ತದೆ. ೧೮೭೦ರಿಂದ ಈ ಪ್ರದೇಶ ಭರದಿಂದ ಪ್ರಗತಿ ಹೊಂದುತ್ತಲಿದೆ. ಇದಕ್ಕೆ ಕಾರಣ ಪಶುಪಾಲನೆ, ಸಾಕುಪ್ರಾಣಿಗಳು. ಮೊದಲು ದನಗಳನ್ನು ತೊಗಲಿನ ಸಲುವಾಗಿ ಸಾಕುತ್ತಿದ್ದರು. ಆದರೆ ಈಗ ವೈಜ್ಞಾನಿಕ ಶೋಧನೆಗಳಿಂದ ಹಾಲು, ಬೆಣ್ಣೆ ಮತ್ತು ಮಾಂಸಗಳನ್ನು ತಯಾರಿಸಿ ಶಿತೀಕರಣ ಮಾಡಿ ಪರದೇಶಗಳಿಗೆ ರಫ್ತು ಮಾಡುತ್ತಾರೆ. ಒಕ್ಕಲುತನಕ್ಕಿಂತ ಈ ಉದ್ಯೋಗದಲ್ಲಿ ಹೆಚ್ಚು ಜನರಿದ್ದಾರೆ. ಇಲ್ಲಿಯ ಜನರು ಕುಟುಂಬ ಪ್ರಿಯರು. ಅವರದು ಅವಿಭಕ್ತಕುಟುಂಬಗಳು. ಒಂದೇ ಕುಟುಂಬದಲ್ಲಿ ಇನ್ನೂರು ಮುನ್ನೂರು ಜನ ವಾಸಿಸುತ್ತಾರೆ. ಇವರ ಮನೆಗಳು ದೊಡ್ಡ ರಾಜ ಮಹಲನ್ನು ಹೋಲುತ್ತವೆ. ಮನೆಯ ಸುತ್ತಲೂ ತೋಟಗಳು; ಅವುಗಳ ಆಚೆ ಸೇವಕರ ಮನೆಗಳು. ಇವರು ನಗರ ವಾಸಿಗಳು. ಮಹಿಳೆಯರು ಯುರೋಪಿನಲ್ಲಿ ಶಿಕ್ಷಣ ಪಡೆದು ಬರುತ್ತಾರೆ. ಆದರೂ ಹೆಚ್ಚಾಗಿ ಸಾರ್ವಜನಿಕ ರಂಗಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮಧ್ಯಮ ವರ್ಗದ ಹೆಣ್ಣು ಮಕ್ಕಳು ಶಿಕ್ಷಕಿಯರಾಗಿ ಅಥವಾ ಕಾರಕೂನರಾಗಿ ಕೆಲಸ ಮಾಡುತ್ತಾರೆ. ಪ್ರತಿಯೊಂದು ದೃಷ್ಟಿಯಿಂದ ಈ ಪ್ರದೇಶ ಇಡೀ ದೇಶದಲ್ಲೇ ಅತಿ ಪ್ರಗತಿಪರಭಾಗವೆಂದು ಹೇಳಬಹುದು.
==ಪೂರ್ವದ ಜಾಕೋ, ಪಂಪಾಸ್ ಮತ್ತು ಆಂಡೀಸ್ ಪರ್ವತಗಳ ಮಧ್ಯಭಾಗ==
ಬೆಟ್ಟಗಳಿಂದ ಹಾಗೂ ಕೊಳ್ಳಗಳಿಂದ ಕೂಡಿದೆ. ಇದೊಂದು ಬರಡು ಪ್ರದೇಶ : ಕಾರಣ, ಆಗ್ನೇಯದಿಂದ, ಬೀಸುವ ವಾಣಿಜ್ಯ ಮಾರುತಗಳು ಇಲ್ಲಿಗೆ ಬರುವುದರೊಳಗಾಗಿ ತಮ್ಮ ತೇವಾಂಶವನ್ನು ಕಳೆದುಕೊಂಡಿರುತ್ತವೆ. ಕೇವಲ ೧೨-೧೫ಸೆಂ.ಮೀ ವರೆಗೆ ಮಳೆಯಾಗುತ್ತದೆ. ಅದೂ ಕೇವಲ ೩೦೦ ಯಿಂದ ೪೦೦ ಅಕ್ಷಾಂಶದವರೆಗೆ ಮಾತ್ರ. ೪೫೦ ಅಕ್ಷಾಂಶದಿಂದ ದಕ್ಷಿಣಕ್ಕೆ ಮಳೆಯೇ ಇಲ್ಲ. ೩೦೦ ರಿಂದ ೪೦೦ ಅಕ್ಷಾಂಶದ ನಡುವೆ ಚಳಿಗಾಲದಲ್ಲಿ ಮಳೆಯಾಗುವುದರಿಂದ ಮೆಡಿಟರೇನಿಯನ್ ವಾಯುಗುಣವಿದೆ. ದ್ರಾಕ್ಷಿ, ಕಿತ್ತಳೆ ಮುಂತಾದ ಹಣ್ಣುಗಳು ಮತ್ತು ಗೋದಿ ಬೆಳೆಯುತ್ತದೆ.https://www.thepacker.com/article/argentina-fresh-fruit-production-exports-headed-higher ಈ ಪ್ರದೇಶದ ಉತ್ತರಕ್ಕೆ ಉಷ್ಣವಲಯದಲ್ಲಿ ಕಬ್ಬು ಬೆಳೆಯುತ್ತಾರೆ. ಕಡಿಮೆ ಮಳೆಯಾಗುವ ಭಾಗಗಳಲ್ಲಿ ಮತ್ತು ಕೊಳ್ಳಗಳಲ್ಲಿ ಹುಲ್ಲು ಬೆಳೆಯುತ್ತಾರೆ. ಕಡಿಮೆ ಮಳೆಯಾಗುವ ಭಾಗಗಳಲ್ಲಿ ಮತ್ತು ಕೊಳ್ಳಗಳಲ್ಲಿ ಹುಲ್ಲು ಬೆಳೆಯುವುದರಿಂದ ದನಗಳನ್ನು ಸಾಕುತ್ತಾರೆ. ಮಾಂಸದ ಉತ್ಪಾದನೆಯೇ ಮುಖ್ಯ ಉದ್ಯೋಗ. ಈ ಪ್ರದೇಶದ ಮುಖ್ಯ ನಗರವೆಂದರೆ ಮೆಂಡೋಸಾ, ಬ್ಯೂನೆಸ್ ಐರಿಸ್ ಇಲ್ಲಿಗೆ ಒಂದು ರೈಲು ಮಾರ್ಗವಿದೆ.
==ಪಟಗೋನಿಯದ ತಪ್ಪಲು ಪ್ರದೇಶ==
[[File:Spegazzini Glacier Parque Nacional Los Glaciares Patagonia Argentina Luca Galuzzi 2005.JPG|thumb|right|ಪಟಗೋನಿಯ]]
"https://kn.wikipedia.org/wiki/ಅರ್ಜೆಂಟೀನ" ಇಂದ ಪಡೆಯಲ್ಪಟ್ಟಿದೆ