ಶ್ರೀದೇವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
</big><big> ತೆಗೆದೆ.
No edit summary
೧೩ ನೇ ಸಾಲು:
}}
 
'''ಶ್ರೀದೇವಿ'''([[ಆಗಸ್ಟ್ ೧೩]], [[೧೯೬೩]] - [[ಫೆಬ್ರವರಿ ೨೪]], [[೨೦೧೮]]) ಭಾರತ ಚಲನಚಿತ್ರರಂಗದ ಜನಪ್ರಿಯ ನಟಿಯರಲ್ಲೊಬ್ಬರು.https://www.celebrityborn.com/biography/sridevi-kapoor/143 ೯೦ರ ದಶಕದಲ್ಲಿ ಬಹಳ ಬೇಡಿಕೆಯ ಹಾಗೂ ಜನಪ್ರಿಯ ನಟಿಯಾಗಿದ್ದವರು. ಕನ್ನಡ ಸಿನೆಮಾಗಳೂ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳ ಸಿನೆಮಾಗಳಲ್ಲಿ ಹಾಗೂ ಹಿಂದಿ ಸಿನೆಮಾಗಳಲ್ಲಿ ನಟಿಸಿದ್ದಾರೆ. ಅವರು ಹಲವು ಸಿನೆಮಾಗಳ ನಿರ್ಮಾಪಕರಾಗಿದ್ದಾರೆ.
 
==ಜೀವನ==
೨೧ ನೇ ಸಾಲು:
ನಾಲ್ಕು ವರ್ಷವಿದ್ದಾಗಲೇ ಅವರು ಚಿತ್ರರಂಗದಲ್ಲಿ ಬಾಲನಟಿಯಾಗಿ ಹೊರಹೊಮ್ಮಿದ್ದರು. ೧೯೭೫ರ ಸಮಯದಲ್ಲಿ ತೆರೆಕಂಡ ಪ್ರಖ್ಯಾತ ಹಿಂದಿ ಚಲನಚಿತ್ರ ‘ಜೂಲಿ’ಯಲ್ಲಿಯೂ ಅವರು ಬಾಲನಟಿಯಾಗಿ ಅಭಿನಯಿಸಿದ್ದರು. ಕನ್ನಡ ಚಿತ್ರರಂಗದಲ್ಲಿಯೂ ಅವರು ಬಾಲನಟಿಯಾಗಿ [[ಭಕ್ತ ಕುಂಬಾರ (೧೯೪೯)|ಭಕ್ತಕುಂಬಾರ]], ಬಾಲಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ ಚಿತ್ರಗಳಲ್ಲಿ ನಟಿಸಿದ್ದಲ್ಲದೆ [[ಹೆಣ್ಣು ಸಂಸಾರದ ಕಣ್ಣು]] ಎಂಬ ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ನಟಿಸಿದ್ದರು. [[ರಜನೀಕಾಂತ್]], [[ಅಂಬರೀಷ್]] ಮುಂತಾದವರು ನಟಿಸಿದ್ದ ‘ಪ್ರಿಯಾ’ ಎಂಬ ಕನ್ನಡ ಚಿತ್ರದಲ್ಲಿ ಅವರು ನಾಯಕಿಯಾಗಿಯೂ ಅಭಿನಯಿಸಿದ್ದರು.
 
ಮುಂದೆ ಶ್ರೀದೇವಿ ತಮಿಳು ಮತ್ತು ತೆಲುಗು ಚಿತ್ರರಂಗದ ಪ್ರಖ್ಯಾತ ಚಿತ್ರಗಳಾದ ಮೂಂಡ್ರು ಮುಡಿಚ್ಚು, ಪಡಿನಾರು ವಯದಿನಿಲೆ, ಸಿಗಪ್ಪು ರೋಜಾಕ್ಕಳ್, ಮೀನ್ಡುಂ ಕೋಕಿಲಾ, ಮೂನ್ರಾಂ ಪಿರೈ, ವರುಮಯಿನ್ ನಿರಂ ಸಿವಪ್ಪು, ಪ್ರೆಮಾಭಿಷೇಕಂ, ಆಖರೀ ಪೋರಾಟಂ, ಜಗದೇಕ ವೀರುಡು ಅತಿಲೋಕ ಸುಂದರಿ, ಕ್ಷಣಂ ಕ್ಷಣಂ ಮುಂತಾದ ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಪ್ರತಿಭೆ ಮತ್ತು ಜನಪ್ರಿಯತೆ ಎರಡರಲ್ಲೂ ತಾವೊಬ್ಬ ಮಹತ್ವದ ನಟಿ ಎಂದು ಸಾಬೀತು ಪಡಿಸಿದರು.https://en.wikipedia.org/wiki/Sridevi_filmography
 
ಹಿಂದಿ ಚಿತ್ರರಂಗದಲ್ಲಿ ಸೊಲ್ವ ಸಾವನ್, ಹಿಮ್ಮತ್ ವಾಲಾ, ಮಾವಾಲಿ, ತೋಹ್ಫ, ಮಾಸ್ಟರ್ಜಿ, ಕರ್ಮ, ಮಿಸ್ಟರ್ ಇಂಡಿಯಾ, ವಕ್ತ್ ಕಿ ಆವಾಜ್, ಚಾಂದನಿ, ಸದ್ಮಾ, ನಗೀನ, ಚಾಲ್ ಬಾಜ್, ಲಮ್ಹೆ, ಖುದಾ ಗವಾಹ್, ಗುಮ್ರಾಹ್, ಲಾಡ್ಲಾ, ಜುದಾಯಿ ಮುಂತಾದ ಪ್ರಸಿದ್ಧ ಚಿತ್ರಗಳಲ್ಲಿ ತಮ್ಮ ಪ್ರತಿಭೆ, ಯಶಸ್ಸುಗಳಿಂದ ರಾರಾಜಿಸಿದ್ದರು. ಹಿರಿಯ ನಿರ್ಮಾಪಕ ಬೋನಿ ಕಫೂರ್ ಅವರನ್ನು ವರಿಸಿದ ಶ್ರೀದೇವಿ ಅವರು 1997ರ ನಂತರದಲ್ಲಿ ಸುಮಾರು ಹದಿನೈದು ವರ್ಷಗಳ ನಂತರದಲ್ಲಿ ೨೦೧೨ರ ವರ್ಷದಲ್ಲಿ ‘ಇಂಗ್ಲಿಷ್ ವಿಂಗ್ಲಿಷ್’ ಎಂಬ ಯಶಸ್ವೀ ಚಿತ್ರದಲ್ಲಿ ತಮ್ಮ ಸುಂದರ ಅಭಿನಯದೊಂದಿಗೆ ಮೋಡಿ ಮಾಡಿ ಮತ್ತೊಮ್ಮೆ ತಾನೆಷ್ಟು ಪ್ರತಿಭಾವಂತೆ ಎಂದು ಸಾಬೀತುಪಡಿಸಿದ್ದಾರೆ.
೩೧ ನೇ ಸಾಲು:
 
==ಪ್ರಶಸ್ತಿ ಗೌರವಗಳು==
ಚಿತ್ರರಂಗದಲ್ಲಿ ಪ್ರಸಿದ್ಧಿಗೆ ದ್ಯೋತಕವಾಗಿರುವ ಹಲವಾರು ರೀತಿಯ ನೂರಾರು ಪ್ರಶಸ್ತಿಗಳನ್ನು ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ ಸ್ವೀಕರಿಸಿರುವ ಶ್ರೀದೇವಿ ಪ್ರಸಕ್ತ ವರ್ಷದಲ್ಲಿ [[ಪದ್ಮಶ್ರೀ|‘ಪದ್ಮಶ್ರೀ’ ಪ್ರಶಸ್ತಿಯನ್ನು]] ಸ್ವೀಕರಿಸಿದ್ದಾರೆ.https://www.imdb.com/name/nm0004437/awards
 
==ಉಲ್ಲೇಖಗಳು==
"https://kn.wikipedia.org/wiki/ಶ್ರೀದೇವಿ" ಇಂದ ಪಡೆಯಲ್ಪಟ್ಟಿದೆ