ಕೃಷ್ಣದೇವರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬೨ ನೇ ಸಾಲು:
==ಅಂತಿಮ ಸಂಘರ್ಷ==
 
* ಐವರು ದಖ್ಖನ್ ಸುಲ್ತಾನರೊಂದಿಗೆ ವಿಜಯನಗರ ಸಾಮ್ರಾಜ್ಯಕ್ಕಿದ್ದ ಸಂಬಂಧ ದಿನಗಳೆದಂತೆ ಹಳಸಲು ಶುರುವಾದ ಕಾರಣ ವಿಜಯನಗರ ಸಾಮ್ರಾಜ್ಯ ದಖ್ಖನ್ ಸುಲ್ತಾನರ ವಿರುದ್ಧ ಸಿಟ್ಟಿಗೆದ್ದು ನಿಂತಿತು. ಇದೆಇದೇ ಸಂಧರ್ಭದಲ್ಲಿ ಕೃಷ್ಣದೇವರಾಯನು ಗೋಲ್ಕೊಂಡವನ್ನು ಗೆದ್ದು ಅದರ ಸಾಮಂತನಾಗಿದ್ದ ಮುದುರುಲ್-ಮುಲ್ಕ್ ನನ್ನು ಸೆರೆ ಹಿಡಿದನು. ಇನ್ನೂ ಮುಂದುವರೆದು ಬಹಮನಿ ಸುಲ್ತಾನರ ಪರವಾಗಿ ಬಿಜಾಪುರದ ಮೇಲೆ ದಾಳಿ ನಡೆಸಿ ಅಲ್ಲಿ ರಾಜ್ಯವಾಳುತ್ತಿದ್ದ ಸುಲ್ತಾನ್ ಇಸ್ಮಾಯಿಲ್ ಆದಿಲ್ ಷಾ ನನ್ನು ಸೋಲಿಸಿ ಗೆದ್ದ ರಾಜ್ಯವನ್ನು ಬಹಮನಿ ಸುಲ್ತಾನ ಮುಹಮ್ಮದ್ ಷಾ ನಿಗೆ ವಹಿಸಿ ತಾನು ವಿಜಯನಗರಕ್ಕೆ ಹಿಂದಿರುಗುತ್ತಾನೆ.
* ದಖ್ಖನ್ ಸುಲ್ತಾನರೊಂದಿಗಿನ ಕಾಳಗದಲ್ಲಿ ಮುಖ್ಯವೆನಿಸುವ ಘಟನೆಯೆಂದರೆ ೧೫೨೦ರ ಮೇ ೧೯ ರಂದು ಬಿಜಾಪುರವನ್ನು ಆಳುತ್ತಿದ್ದ ಇಸ್ಮಾಯಿಲ್ ಆದಿಲ್ ಷಾ ನಿಂದ ರಾಯಚೂರು ಕೋಟೆಯನ್ನು ವಶಪಡಿಸಿಕೊಂಡಿದ್ದು. ಅತಿ ಪ್ರಯಾಸದಿಂದ ನಡೆದ ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ತನ್ನ ೧೬,೦೦೦ ಸೈನಿಕರನ್ನು ಕಳೆದುಕೊಂಡು ರಾಯಚೂರು ಕೋಟೆ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಯುದ್ಧದಲ್ಲಿ ಚತುರತೆ ಮೆರೆದು ಗೆಲುವಿಗೆ ಕಾರಣನಾದ ವಿಜಯನಗರದ ಮುಖ್ಯ ಸೇನಾಧಿಕಾರಿ [[ಪೆಮ್ಮಸಾನಿ ರಾಮಲಿಂಗ ನಾಯ್ಡು]] ಅರಸರ ಪ್ರೀತ್ಯಾದರಗಳನ್ನು ಗಳಿಸಿದ, ಶ್ರೀ ಕೃಷ್ಣದೇವರಾಯರು ಆತನನ್ನು ಸೂಕ್ತ ಸನ್ಮಾನದೊಂದಿಗೆ ಗೌರವಿಸಿದರು.
* ಒಂದು ಅಂದಾಜಿನ ಪ್ರಕಾರ ರಾಯಚೂರಿಗಾಗಿ ನಡೆದ ಕಾಳಗದಲ್ಲಿ ಸುಮಾರು ೭೦೩,೦೦೦ ಪದಾತಿ ದಳದ ಸೈನಿಕರು, ೩೨,೬೦೦ ಅಶ್ವದಳದ ಸೈನಿಕರು ಹಾಗು ೫೫೧ ಗಜ ಪಡೆಯ ಸೈನಿಕರು ಆಹುತಿಯಾದರೆಂದು ತಿಳಿದುಬರುತ್ತಿದೆ(ರಾಯಚೂರು ಯುದ್ಧದ ಬಗ್ಗೆ ನೋಡಿ). ಕಟ್ಟ ಕಡೆಯದಾಗಿ ತನ್ನ ಕೊನೆಯ ಯುದ್ಧದಲ್ಲಿ ಕೃಷ್ಣದೇವರಾಯನು ಹಿಂದೆ ಬಹಮನಿ ಸುಲ್ತಾನರ ಕೇಂದ್ರ ಸ್ಥಾನವಾಗಿದ್ದ ಗುಲ್ಬರ್ಗಾ ಕೋಟೆಯನ್ನು ವಶಪಡಿಸಿಕೊಳ್ಳುವ ಮೂಲಕ ದಕ್ಷಿಣ ಭಾರತದಾದ್ಯಂತ ತನ್ನ ವಿಜಯ ಪತಾಕೆ ಹಾರಿಸಿ ಇಡೀ ದಕ್ಷಿಣ ಭಾರತವನ್ನು ತನ್ನ ಸಾಮ್ರಾಜ್ಯದ ಅಡಿಯಲ್ಲಿ ತಂದನು.
* ೧೫೨೪ರಲ್ಲಿ ಶ್ರೀ ಕೃಷ್ಣದೇವರಾಯನು ತನ್ನ ಪುತ್ರ ತಿರುಮಲರಾಯನಿಗೆ ಪಟ್ಟ ಕಟ್ಟುವ ಮೂಲಕ ಅರಸನ ಪಟ್ಟಕ್ಕೇರಿಸಿದನು. ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ತಿರುಮಲರಾಯನಿಗೆ ಪಿತೂರಿ ನಡೆಸಿ ದುಷ್ಕರ್ಮಿಗಳು ವಿಷ ಪ್ರಾಶನ ಮಾಡಿಸಿ ಕೊಂದುಬಿಟ್ಟರು. ಆದ ಕಾರಣ ಕೃಷ್ಣದೇವರಾಯನ ಪುತ್ರ ಸಿಂಹಾಸನದಲ್ಲಿ ಹೆಚ್ಚು ದಿನ ಉಳಿಯಲಾಗಲಿಲ್ಲ. ತನ್ನ ಪುತ್ರನ ಅಕಾಲಿಕ ಮರಣದಿಂದ ಆಘಾತಕ್ಕೊಳಗಾದ ಕೃಷ್ಣದೇವರಾಯನು ಬಹಳ ಕುಸಿದು ಹೋದನು ಹಾಗು ದಿನೇ ದಿನೇ ಕೃಶವಾಗುತ್ತಾ ಹೋದನು. ತಿರುಮಲರಾಯನ ಕಗ್ಗೊಲೆಯ ವಿಚಾರವಾಗಿಈವಿಚಾರವಾಗಿ ಈ ನ್ಯಾಯಸ್ಥಾನದಲ್ಲಿ ವಿಚಾರಣೆ ನಡೆಸಿ ವಿಜಯನಗರದ ಪ್ರಧಾನಮಂತ್ರಿ ತಿಮ್ಮರಸುವಿಗೆ ತಪ್ಪಾಗಿ ಕಣ್ಣು ಕೀಳಿಸುವ ಶಿಕ್ಷೆ ವಿಧಿಸಲಾಯಿತು. ಇದನ್ನು ತಡೆಯಲು ಶ್ರೀ ಕೃಷ್ಣದೇವರಾಯರು ಬಹಳ ಪ್ರಯತ್ನ ಪಟ್ಟರಾದರೂ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಶ್ರೀ ಕೃಷ್ಣ ದೇವರಾಯನನ್ನು ಸಿಂಹಾಸನದಲ್ಲಿ ಕುಳ್ಳಿರಿಸಲು ಅವಿರತ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದ ತಿಮ್ಮರಸು ವಿಜಯನಗರ ಸಾಮ್ರಾಜ್ಯದ ಹಿತೈಷಿಯಾಗಿದ್ದರೆಹಿತೈಷಿಯಾಗಿದ್ದರೇ ಹೊರತು ದ್ವೇಷಿಯಾಗಿರಲಿಲ್ಲ. ತಿಮ್ಮರಸುವಿನ ಕಣ್ಣುಗಳನ್ನು ಕಿತ್ತ ಸುದ್ದಿ ತಿಳಿದಂತೆಯೇ ಶ್ರೀ ಕೃಷ್ಣದೇವಾರಾಯರು ಕುಸಿದು ಹೋದರು.ಅದೇ ಸಮಯದಲ್ಲಿ ಬಹಮನಿ ಸುಲ್ತಾನರ ವಶದಲ್ಲಿದ್ದ ಬೆಳಗಾವಿಯನ್ನು ವಶಪಡಿಸಿಕೊಳ್ಳುವ ಕನಸು ಕೃಷ್ಣದೇವರಾಯರಿಗಿದ್ದರೂ ಅದು ಸಾಧ್ಯವಾಗದೆ ಆಘಾತಗಳ ಮೇಲೆ ಆಘಾತ ಬಂದೆರಗಿ ಅನಾರೋಗ್ಯಕ್ಕೆ ತುತ್ತಾದರು. ಆದರೆ ಕೃಷ್ಣ ದೇವರಾಯರು ಅನಾರೋಗ್ಯದಿಂದ ಹೊರಬರಲಾಗದೆ ೧೫೨೯ರಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಸಿದರು.
* ಸಾವಿಗೆ ಮುನ್ನವೇ ಕೃಷ್ಣದೇವರಾಯ ತನ್ನ ಸಹೋದರ ಅಚ್ಯುತ ರಾಯನಿಗೆ ತನ್ನ ಸಾಮ್ರಾಜ್ಯಾಧಿಕಾರಗಳನ್ನು ವಹಿಸಿಕೊಟ್ಟನು ಹಾಗು ವಿಜಯನಗರದ ಇತಿಹಾಸದ ಪುಟದಲ್ಲಿ ಕೃಷ್ಣದೇವಾರಾಯನು ತನ್ನ ಸುಭೀಕ್ಷ ಆಳ್ವಿಕೆಯಿಂದಲೇ ಅಜರಾಮರನಾದನು.ಇಂದಿಗೂ ಕರ್ನಾಟಕದ ಹಂಪಿಯಲ್ಲಿರುವ ಅವಶೇಷಗಳು ವಿಜಯನಗರದ ಗತ ವೈಭವವನ್ನು ಸಾರಿ ಹೇಳುತ್ತಿವೆ.
 
"https://kn.wikipedia.org/wiki/ಕೃಷ್ಣದೇವರಾಯ" ಇಂದ ಪಡೆಯಲ್ಪಟ್ಟಿದೆ