ಕೃಷ್ಣದೇವರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫೪ ನೇ ಸಾಲು:
==ಕಳಿಂಗ ಯುದ್ಧ==
*ಗಜಪತಿಗಳ ರಾಜ್ಯ ವಿಶಾಲವಾಗಿದ್ದು ಇಂದಿನ ಆಂಧ್ರ ಮತ್ತು ತೆಲಂಗಾಣ ಪ್ರದೇಶ ಹಾಗೂ ಸಂಪೂರ್ಣ ಒರಿಸ್ಸಾವನ್ನು ಒಳಗೊಂಡಿತ್ತು. ಉಮ್ಮತ್ತೂರಿನ ಯಶಸ್ಸಿನಿಂದ ಉತ್ತೇಜಿತನಾದ ಕೃಷ್ಣದೇವರಾಯನು ಗಜಪತಿ ಪ್ರತಾಪ ರುದ್ರದೇವನ ಸ್ವಾಧೀನದಲ್ಲಿದ್ದ ತೆಲಂಗಾಣ ಪ್ರದೇಶದತ್ತ ತನ್ನ ದೃಷ್ಟಿಯನ್ನು ತಿರುಗಿಸಿದನು. ವಿಜಯನಗರ ಸೈನ್ಯವು ೧೫೧೨ರಲ್ಲಿ ಉದಯಗಿರಿ ಕೋಟೆಗೆ ಮುತ್ತಿಗೆ ಹಾಕಿತು. ಒಂದು ವರ್ಷದವರೆಗೂ ನಡೆದ ಈ ಮುತ್ತಿಗೆಯಲ್ಲಿ ಕೊನೆಗೂ ಗಜಪತಿಯ ಸೈನ್ಯ ಹಸಿವಿನಿಂದ ಶಿಥಿಲವಾಗತೊಡಗಿತು.
*ಇದೇ ಸಮಯದಲ್ಲಿ ಕೃಷ್ಣದೇವರಾಯನು ಪತ್ನಿಯರಾದ ತಿರುಮಲಾ ದೇವಿ ಮತ್ತು ಚಿನ್ನಮ ದೇವಿಯರೊಂದಿಗೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿದನು. ಇದರ ನಂತರ ಗಜಪತಿಯ ಸೇನೆ ಕೊಂಡವೀಡುರಾಜು ಎಂಬಲ್ಲಿ ವಿಜಯನಗರ ಸೇನೆಗೆ ಎದುರಾಯಿತು. ಕೆಲವು ತಿಂಗಳುಗಳಿಂದ ಮುತ್ತಿಗೆ ಹಾಕಿದ್ದ್ದರೂಹಾಕಿದ್ದರೂ, ಕೆಲವು ಮೊದಮೊದಲ ಸೋಲುಗಳ ನಂತರ ವಿಜಯನಗರ ಸೇನೆ ರಣರಂಗದಿಂದ ಹಿಂದೆಗೆಯಲಾರಂಭಿಸಿತು.
*ಅದೇ ಸಮಯದಲ್ಲಿ ತಿಮ್ಮರಸು ಕಂಡುಹಿಡಿದ ಕಾವಲಿಲ್ಲದ ಪೂರ್ವದ ದ್ವಾರದ ರಹಸ್ಯಒಳದಾರಿಯ ಮೂಲಕ ಒಳನುಗ್ಗಿದ ವಿಜಯನಗರದ ಸೇನೆ ಕೋಟೆಯನ್ನು ಗೆದ್ದು, ಆಕಾಲದ ಅತಿಸಮರ್ಥ ಕತ್ತಿವರಸೆಗಾರ ಎಂದು ಹೆಸರಾಗಿದ್ದ , ಪ್ರತಾಪರುದ್ರದೇವನ ಮಗ, ಯುವರಾಜ ವೀರಭದ್ರನನ್ನು ಸೆರೆಹಿಡಿಯಿತು. ಈ ವಿಜಯದ ನಂತರ ತಿಮ್ಮರಸು ಕೊಂಡವೀಡು ಪ್ರಾಂತದ ಮಾಂಡಲೀಕನಾಗಿ ನೇಮಕಗೊಂಡ.
*ಮುಂದೆ ವಿಜಯನಗರ ಸೇನೆಯು ಕೊಂಡಪಲ್ಲಿ ಪ್ರದೇಶದಲ್ಲಿ ಗಜಪತಿ ಸೇನೆಯನ್ನು ಮತ್ತೊಮ್ಮೆ ಮುತ್ತಿತು. ಉತ್ಕಲ-ಕಳಿಂಗದ ಮೇಲೆ ನೇರ ದಾಳಿ ಮಾಡಿ ವಶಪಡಿಸಿಕೊಳ್ಳಬೇಕೆಂದಿದ್ದ ಕೃಷ್ಣದೇವರಾಯನ ರಣತಂತ್ರಕ್ಕೆ ಪ್ರತಿಯಾಗಿ ಪ್ರತಾಪರುದ್ರದೇವನು ಕೃಷ್ಣದೇವರಾಯನನ್ನು ಅವನ ಸೇನೆಯೊಂದಿಗೆ ಹೀನಾಯವಾಗಿ ಸೋಲಿಸುವ ಪ್ರತಿಯೋಜನೆ ಹಾಕಿದನು. ಈ ಯೋಜನೆಯ ಪ್ರಕಾರ ಇವೆರಡು ಸೇನೆಗಳು ಕಳಿಂಗನಗರದಲ್ಲಿ ಸಂಧಿಸಬೇಕಾಗಿತ್ತು.
"https://kn.wikipedia.org/wiki/ಕೃಷ್ಣದೇವರಾಯ" ಇಂದ ಪಡೆಯಲ್ಪಟ್ಟಿದೆ