ಶರಣಪ್ಪ ಕಂಚ್ಯಾಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ವಿಜಯಪುರ]] ಜಿಲ್ಲೆಯು ಮಕ್ಕಳ ಸಾಹಿತ್ಯದ ತೊಟ್ಟಿಲು. ಸಿಸು ಸಂಗಮೇಶ, ಶಂಗು ಬಿರಾದಾರ, ಈಶ್ವರ ಚಂದ್ರ ಚಿಂತಾಮಣಿ, ಹ.ಮ.ಪೂಜಾರ, ಜಂಬುನಾಥ ಕಂಚ್ಯಾಣಿ, ಹ.ಮ.ಅಂಬಿಗೇರ್, ಬಾ.ಇ.ಕುಮಟೆ ಮುಂತಾದ ಹಲವಾರು ಕವಿಗಳು ಮಕ್ಕಳ ಸಾಹಿತ್ಯದ ಬಗ್ಗೆ ಅಗಾಧವಾದ ಕೆಲಸವನ್ನು ಮಾಡಿದ್ದಾರೆ. ಹೀಗೆ ಸಾಹಿತ್ಯ ಕೃಷಿ ಮಾಡಿದವರಲ್ಲಿ ಪ್ರಮುಖರಲ್ಲೊಬ್ಬರಾದ ಹಿರಿಯ ಕವಿ ಕಂಚ್ಯಾಣಿ[[ಶರಣಪ್ಪ ಶರಣಪ್ಪನವರುಕಂಚ್ಯಾಣಿ]]ಯವರು.
{{ಉಲ್ಲೇಖ}}
 
[[ವಿಜಯಪುರ]] ಜಿಲ್ಲೆಯು ಮಕ್ಕಳ ಸಾಹಿತ್ಯದ ತೊಟ್ಟಿಲು. ಸಿಸು ಸಂಗಮೇಶ, ಶಂಗು ಬಿರಾದಾರ, ಈಶ್ವರ ಚಂದ್ರ ಚಿಂತಾಮಣಿ, ಹ.ಮ.ಪೂಜಾರ, ಜಂಬುನಾಥ ಕಂಚ್ಯಾಣಿ, ಹ.ಮ.ಅಂಬಿಗೇರ್, ಬಾ.ಇ.ಕುಮಟೆ ಮುಂತಾದ ಹಲವಾರು ಕವಿಗಳು ಮಕ್ಕಳ ಸಾಹಿತ್ಯದ ಬಗ್ಗೆ ಅಗಾಧವಾದ ಕೆಲಸವನ್ನು ಮಾಡಿದ್ದಾರೆ. ಹೀಗೆ ಸಾಹಿತ್ಯ ಕೃಷಿ ಮಾಡಿದವರಲ್ಲಿ ಪ್ರಮುಖರಲ್ಲೊಬ್ಬರಾದ ಹಿರಿಯ ಕವಿ ಕಂಚ್ಯಾಣಿ ಶರಣಪ್ಪನವರು.
 
==ಜನನ==
Line ೧೯ ⟶ ೧೭:
 
ಮಕ್ಕಳ ಬುದ್ಧಿ ಭಾವವಿಕಾಸಕ್ಕೆ ನೆರವಾಗುವಂತಹ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಾಗ ಕಂಚ್ಯಾಣಿ ಶರಣಪ್ಪನವರು ಮಗುವಿನೊಂದಿಗೆ ಮಗುವಾಗಿ ಹಾಡುತ್ತಾ, ಕುಣಿಯುತ್ತಾ, ಕಿಲಕಿಲನಗುತ್ತಾ ಕಾಲಕಳೆಯುವ ವಯಸ್ಸಿನವರಾಗಿಬಿಡುತ್ತಾರೆ.
 
ಸುಮಾರು 50 ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಕವಿಕೀರ್ತಿ, ಬಸವ ಪ್ರದೀಪ, ಅಜ್ಜನ ಹಾಡು ಎಂಬ ಮಕ್ಕಳ ಕವಿತೆಗಳು, ಮಕ್ಕಳ ಮನೆ, ಹುಟ್ಟು ಹಬ್ಬ, ತಮ್ಮನ ಶಾಲೆ, ತೋಟದ ಆಟ, ಗುಡು ಗುಡು ಗುಂಡ, ಆಯ್ದ ನೂರೊಂದು ಕವಿತೆಗಳು, ಚಲುವಿನ ಚಿಟ್ಟೆ, ತೊಟ್ಟಿಲು ಗುಬ್ಬಿ, ರಾಜಯೋಗಿ ಬೀಳೂರ ಅಜ್ಜನವರು, ಗಿಲ್​ಗಿಲ್ ಗಿಡ್ಡ, ಪುಟ್ಟಿಯ ತೋಟ, ತಿಪ್ಪನ ಕಥೆಗಳು, ತಿಪ್ಪನ ಮತ್ತಷ್ಟು ಕಥೆಗಳು, ಬೆದರು ಬೆಚ್ಚ, ಚತುರ ಚಿಣ್ಣರು, ಹಾಡುವ ಹಕ್ಕಿ, ಬೆಕ್ಕಿನ ಕೊರಳಿಗೆ ಗಂಟೆ, ಅಜ್ಜನ ಅಂದದ ಕಥೆಗಳು ಮುಂತಾದ ಪುಸ್ತಕಗಳನ್ನು ರಚಿಸಿ ಪ್ರಕಟಿಸಿದ್ದಾರೆ.
 
==ಪ್ರಶಸ್ತಿಗಳು ==
 
ಮಕ್ಕಳ ಸಾಹಿತಿ ಕಂಚ್ಯಾಣಿಯವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿಗಳು ಹಲವಾರು. ‘ಜಾಗೃತ ಭಾರತ’ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ (೧೯೮೮), ‘ಅಜ್ಜನ ಹಾಡು’ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಳಂ ಪ್ರಶಸ್ತಿ, ಧಾರವಾಡದ ಮಕ್ಕಳ ಮನೆ ಮಕ್ಕಳ ಸಾಹಿತ್ಯ ಪ್ರಶಸ್ತಿ (೧೯೮೯), ರಾಷ್ಟ್ರೀಯ ಬಾಲ ಸಾಹಿತ್ಯ ಪುರಸ್ಕಾರ (೧೯೯೦-೯೧), ‘ಗಿಲ್ ಗಿಲ್ ಗಿಡ್ಡ’ ಪುಸ್ತಕಕ್ಕೆ ಅತ್ತಿಮಬ್ಬೆ ಪ್ರತಿಷ್ಠಾನದ ರನ್ನ ಸಾಹಿತ್ಯ ಪ್ರಶಸ್ತಿ ಮುಂತಾದವುಗಳಲ್ಲದೆ ಹುಬ್ಬಳ್ಳಿಯ ಮೂರು ಸಾವಿರ ಮಠ ಸಾಹಿತ್ಯ ಪುರಸ್ಕಾರ, ಭಾಲ್ಕಿ ಸಂಸ್ಥಾನ ಮಠದ ಮಕ್ಕಳ ಸಾಹಿತ್ಯ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಮಕ್ಕಳ ಸಾಹಿತ್ಯ ಪ್ರಶಸ್ತಿ, ಬೆಳಗಾವಿ ನಾಗನೂರ ರುದ್ರಾಕ್ಷಿ ಮಠದ ಹರ್ಡೇಕರ್‌ಮಂಜಪ್ಪ ಮಕ್ಕಳ ಸಾಹಿತ್ಯ ಪ್ರಶಸ್ತಿಗಳ ಜೊತೆಗೆ ಬಾಗಲಕೋಟೆಯಲ್ಲಿ ನಡೆದ ಬಿಜಾಪುರ ಜಿಲ್ಲಾ ೫ನೆಯ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಿಜಾಪುರ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದಾರೆ. ಕಂಚ್ಯಾಣಿ ಶರಣಪ್ಪ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2018ರ ಸಾಲಿನ ಬಾಲ ಸಾಹಿತ್ಯ ಪುರಸ್ಕಾರ ನೀಡಲಾಗಿದೆ.<ref>http://vijayavani.net/%E0%B2%92%E0%B2%A1%E0%B2%A8%E0%B2%BE%E0%B2%9F%E0%B2%A6%E0%B2%BF%E0%B2%82%E0%B2%A6%E0%B2%B2%E0%B3%87-%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF-%E0%B2%B8%E0%B2%BE%E0%B2%A7%E0%B2%A8/</ref>
 
==ಉಲ್ಲೇಖಗಳು==
"https://kn.wikipedia.org/wiki/ಶರಣಪ್ಪ_ಕಂಚ್ಯಾಣಿ" ಇಂದ ಪಡೆಯಲ್ಪಟ್ಟಿದೆ