ವಲ್ಲಭ್‌ಭಾಯಿ ಪಟೇಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಉಲ್ಲೇಖ ನೀಡುರುವುದು
೪೨ ನೇ ಸಾಲು:
 
==ಜೀವನ==
*ನಂತರ ಪಟೇಲರು, ಹೇಂಡತಿಹೆ೦ಡತಿ ಝವೇರಬಾರೊಂದಿಗೆ, ಅವರಿಗೆ ಚಿಕ್ಕವಯಸ್ಸಿನಲ್ಲಿಯೇ ಮದುವೆಯಾಗಿತ್ತು, ಸಂಸಾರ ಹೂಡಿದರು. ಅವರಿಗೆ ಇಬ್ಬರು ಮಕ್ಕಳಾದರು. ೧೯೦೪ರಲ್ಲಿ [[ಮಣಿ ಬೇನ್|ಮಣಿ]] ಎಂಬ ಮಗಳು ಮತ್ತು ೧೯೦೬ರಲ್ಲಿ ದಹ್ಯಾ ಎಂಬ ಮಗ. ಬ್ಯುಬೋನಿಕ್ ಪ್ಲೇಗಿನಿಂದ ನರಳುತ್ತಿದ್ದ ಗೆಳೆಯನೊಬ್ಬನ ಆರೈಕೆ ಮಾಡುತ್ತ, ಪಟೇಲರು ಸ್ವತಃ ಆ ರೋಗಕ್ಕೆ ತುತ್ತಾದಾಗ, ತಮ್ಮ ಕುಟುಂಬವನ್ನು ಸುರಕ್ಷಿತ ಜಾಗಕ್ಕೆ ಕಳುಹಿಸಿ, ತಮ್ಮ ಮನೆಯನ್ನು ತ್ಯಜಿಸಿ, ನಡಿಯಾದಿನ ಮನೆಯೊಂದರಲ್ಲಿ ( ಪಾಳುಬಿದ್ದ ದೇವಸ್ಥಾನ ಎಂದೂ ಕೆಲವರು ಹೇಳುತ್ತಾರೆ) ಚೇತರಿಕೊಳ್ಳುವವರೆಗೆ ನೆಲೆಸಿದರು. ೧೯೦೯ರಲ್ಲಿ ಅವರ ಪತ್ನಿ ತೀರಿಕೊಂಡರು. ಪಟೇಲರ ಅಂತರ್ಮುಖಿ ಸ್ವಭಾವದಿಂದ ಅವರ ಹೆಂಡತಿಯ ಬಗ್ಯೆ ಸಾರ್ವಜನಿಕರಿಗೆ ತಿಳಿದಿರುವುದು ಅತ್ಯಲ್ಪ. ಪಟೇಲರು ಮರುಮದುವೆ ಮಾಡಿಕೊಳ್ಳಲಿಲ್ಲ.
*ತಮ್ಮ ಕುಟುಂಬದ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಲೇ , ಪಟೇಲರು [[ಇಂಗ್ಲೆಂಡ್]] ಪ್ರಯಾಣಕ್ಕೆ ಹಣ ಶೇಖರಿಸತೊಡಗಿದರು. ಮುಂದೆ ಇಂಗ್ಲೆಂಡ್ ಪ್ರಯಾಣದ ಅವಕಾಶ ಸಿಕ್ಕಿದಾಗ ಆ ಅವಕಾಶವನ್ನು ತಮ್ಮ ಅಣ್ಣ, ವಿಠ್ಠಲಭಾಯಿ ,ಗೆ ಬಿಟ್ಟುಕೊಟ್ಟದ್ದಷ್ಟೇ ಅಲ್ಲ, ಅದಕ್ಕೆ ತಾವು ಕೂಡಿಟ್ಟಿದ್ದ ಹಣವನ್ನೂ ನೀಡಿದರು. ಅದು ಆದದ್ದು ಹೀಗೆ: ಪರದೇಶ ಪ್ರಯಾಣದ ತಿಕೀಟುಗಳು ಮತ್ತು ಪಾಸು “ವಿ.ಜೆ.ಪಟೇಲ್” ( ಅಣ್ಣ , ತಮ್ಮ ಇಬ್ಬರ ಇನಿಷಿಯಲ್ಲುಗಳು ವಿ.ಜೆ. ಎಂದೇ ಇತ್ತು) ಎಂಬ ಹೆಸರಿಗೆ ಅವರ ಅಣ್ಣನ ಮನೆಯ ವಿಳಾಸಕ್ಕೆ ತಲುಪಿತು. ಅಣ್ಣನಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಡಲು ಹಿಂದೆಗೆಯದ ವಲ್ಲಭಭಾಯ್ ಅಣ್ಣನ ಪ್ರವಾಸದ ಖರ್ಚನ್ನೂ ನಿಭಾಯಿಸಿದರು.<ref>http://mhrd.gov.in/sites/upload_files/mhrd/files/Sardar%20Vallabbhai%20Patel.pdf</ref>