ಅಗ್ನಿ(ಹಿಂದೂ ದೇವತೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
|||
೧೯ ನೇ ಸಾಲು:
}}
'''ಅಗ್ನಿ''' ಒಬ್ಬ [[ಋಗ್ವೇದದ ದೇವತೆಗಳು|ಹಿಂದೂ ದೇವತೆ]], [[ವೈದಿಕ ನಾಗರಿಕತೆ|ವೈದಿಕ]] [[ದೇವರು|ದೇವತೆಗಳ]] ಅತ್ಯಂತ ಪ್ರಮುಖರ ಪೈಕಿ ಒಬ್ಬನು. ಅವನು [[ಬೆಂಕಿ|ಬೆಂಕಿಯ]] [[ದೇವರು]] ಮತ್ತು ಬಲಿಗಳ ಸ್ವೀಕಾರಕ. ಅಗ್ನಿಗೆ ಅರ್ಪಿಸಲಾದ ಬಲಿಗಳು [[ದೇವರು|ದೇವತೆಗಳಿಗೆ]] ಹೋಗುತ್ತವೆ ಏಕೆಂದರೆ ಅಗ್ನಿಯು ಇತರ ದೇವತೆಗಳಿಂದ ಮತ್ತು ಇತರ ದೇವತೆಗಳಿಗೆ ಸಂದೇಶವಾಹಕ.
ಅಗ್ನಿಯು ಪೃಥ್ವಿಗೆ ಅಧಿಪತಿಯಾದ ದೇವತೆ ಎಂದು ಪ್ರಸಿದ್ಧನಾಗಿದ್ದು ದ್ಯಾವಾಪೃಥಿವ್ಯಾದಿ ಸಕಲ ಲೋಕಗಳಲ್ಲೂ ವ್ಯಾಪಿಸಿರುವ ದಿವ್ಯಜ್ಯೋತಿ, ದಿವ್ಯಶಕ್ತಿ. ಸಕಲ ದೇವಮಾನವಾದಿಗಳೆಲ್ಲರ ವ್ಯವಹಾರಕ್ಕೂ ಮಾರ್ಗದರ್ಶಕನಾದ್ದರಿಂದ ಅಗ್ನಿ ಎಂಬ ಹೆಸರು ಅನ್ವರ್ಥವಾಗಿದೆ (ನಿರುಕ್ತ 7.14). ವಿಶ್ವವ್ಯಾಪಕನೂ ವಿಶ್ವಧಾರಕನೂ ಸಕಲದೇವತಾತ್ಮನೂ ಅಮರನೂ ಆದ ಅಗ್ನಿಯ ರೂಪಾಂತರಗಳು ವೈಶ್ವಾನರಾದಿ ಸಂಜ್ಞೆಗಳಿಂದ ಪ್ರಶಂಸಿತವಾಗಿದೆ. ಸಕಲ ಭೂತಗಳಲ್ಲೂ ಪ್ರವೇಶಿಸಿ ನೇತೃವಾಗಿರುವುದರಿಂದ ವೈಶ್ವಾನರ, ಧನ ಮತ್ತು ಶಕ್ತಿದಾತನಾದ್ದರಿಂದ ಪ್ರವಿಣೋದಾಃ, ಉತ್ಪನ್ನವಾದ ಸಕಲವನ್ನೂ ಅರಿತಿರುವುದರಿಂದ ಜಾತವೇದಸ್, ನರರಿಂದ ಪ್ರಶಂಸಿತನಾಗಿರುವುದರಿಂದ ನರಾಶಂಸ, ಉದಕಗಳಿಂದ ಓಷಧಿಗಳೂ ಓಷಧಿಗಳಿಂದ ಅಗ್ನಿಯೂ ಉತ್ಪನ್ನವಾಗುವುದರಿಂದ ಅಪಾಂನಪಾತ್, ತನ್ನಿಂದ ತಾನೇ
ಅಗ್ನಿಯ ಸ್ವರೂಪವೆರಡು ವಿಧ. ಒಂದು ನಿತ್ಯ-ನಿಣ್ಯ ಗುಹ್ಯ ಇತ್ಯಾದಿ ವಿಶೇಷಣಗಳಿಂದ ವರ್ಣಿತವಾದ ಮತ್ತು ಸಾಧಾರಣ ದೃಷ್ಟಿಗೆ ಗೋಚರವಾಗದ ದಿವ್ಯ ಸ್ವರೂಪವುಳ್ಳದ್ದು. ಇನ್ನೊಂದು ಉತ್ಪನ್ನ-ಲೌಕಿಕಸ್ವರೂಪವುಳ್ಳದ್ದಾದರೂ ಅಸಾಧಾರಣಶಕ್ತಿಯಿಂದ ಕೂಡಿದ್ದು. ಈ ಎರಡು ರೂಪಗಳಿಂದಲೂ ಅಗ್ನಿಯ ಪ್ರಸಾರ ಮತ್ತು ಆಧಿಪತ್ಯ ಮೂರು ಲೋಕಗಳಿಗೂ ಸಂಬಂಧಿಸಿದೆ. ಅಗ್ನಿ ಪ್ರಥಮತಃ ದ್ಯುಲೋಕದಲ್ಲಿ ಆದಿತ್ಯಾತ್ಮನಾಗಿ ಉತ್ಪನ್ನನಾದ. ಎರಡನೆಯದಾಗಿ ಪೃಥ್ವಿಯಲ್ಲಿ ಜಾತವೇದರೂಪವನ್ನು ಹೊಂದಿದ. ಮೂರನೆಯದಾಗಿ ಅಂತರಿಕ್ಷದಲ್ಲಿ ಮಿಂಚಿನ ರೂಪದಲ್ಲಿ ಜನಿಸಿದ. ಈತ ದ್ಯುಲೋಕಕ್ಕೆ ಶಿರಸ್ಸಿನಂತೆ ಪ್ರಧಾನ.
ಇವನು [[ಯಜ್ಞ|ಯಜ್ಞದಲ್ಲಿ]] ಅರ್ಪಿಸಿದ ಹವಿಸ್ಸನ್ನು ಎಲ್ಲ ದೇವತೆಗಳಿಗೂ ಮುಟ್ಟಿಸುವನು; ಆದ್ದರಿಂದ ಎಲ್ಲ
ಇಂಥ ಅಸಾಧಾರಣ ಪ್ರಭಾವವುಳ್ಳ ಅಗ್ನಿಯನ್ನು ಭೃಗು, ಅಂಗೀರಸ, ಅಥರ್ವ, ಇತ್ಯಾದಿ ಮಹರ್ಷಿಗಳು ಯಜ್ಞಾರ್ಥವಾಗಿ ಪೃಥ್ವಿಗೆ ಕರೆತಂದರು, ದೇವಮಾನವಾದಿಗಳಿಂದೆಲ್ಲ ಪ್ರಾರ್ಥಿತನಾದ ಅಗ್ನಿ ಸಕಲ ಯಜ್ಞಕರ್ಮಗಳನ್ನೂ ಸಮಸ್ತ ಋತ್ವಿಕ್ಕುಗಳ ರೂಪದಲ್ಲಿ ನಿರ್ವಹಿಸಲು ಶಕ್ತ. ಅತ್ಯುತ್ತಮವಾದ ಜ್ಞಾನವುಳ್ಳವ. ಕವಿಗಳಿಗೆಲ್ಲ ದಿವ್ಯಸ್ವರೂಪಿ. ಯಜ್ಞಸಾಧಕ, ಯಜ್ಞರಕ್ಷಕ. ಪ್ರತಿಯೊಂದು [[ಗೃಹ|ಗೃಹದಲ್ಲೂ]] ಪ್ರಭಾವಯುತನಾದ ಅತಿಥಿ. ಸಕಲರಿಗೂ ಕ್ಷೇಮಕಾರಿ.
ಸಕಲ [[ಮಾನವ|ಮಾನವರಿಗೂ]] ಪ್ರಭುವೂ ಪಾಲಕನೂ ಆದ ಎಲೈ ಅಗ್ನಿಯೇ, ನೀನು ಯಾಗಾರ್ಥವಾಗಿ ಉತ್ಪನ್ನನಾಗಿದ್ದೀಯೆ. ಸ್ವತಃ ತೇಜೋಮಯನಾಗಿದ್ದು ಸಕಲ ಜಗತ್ತಿಗೂ ಪ್ರಕಾಶವನ್ನು ಹರಡುತ್ತೀಯೆ. ನಿನ್ನ ಮಾಹಾತ್ಮ್ಯ ದ್ಯುಲೋಕಕ್ಕಿಂತಲೂ ಅಧಿಕವಾಗಿ ಬೆಳೆದಿದೆ. ಮಾನವರಿಗೆ ಪ್ರಭುವಾಗಿರುವಂತೆ ಸಕಲ ದೇವತೆಗಳಿಗೂ ನೀನು ಪ್ರಭು. ದ್ವಾವಾಪೃಥಿವಿಗಳು ವಿಸ್ತೃತವಾಗಿ ಪ್ರಸರಿಸಲು ನೀನೇ ಕಾರಣ. ಅವು ನಿನ್ನ ಶಕ್ತಿಯಿಂದಲೇ ಸ್ಥಿರವಾಗಿ ನಿಂತಿವೆ.
|